Site icon Vistara News

Rishabh Pant:​ ಫಿಟ್​ನೆಸ್​ ಪಾಸ್​ ಆದ ರಿಷಭ್​ ಪಂತ್; ಐಪಿಎಲ್​ನಲ್ಲಿ ಕೀಪರ್​ ಆಗಿ ಕಣಕ್ಕೆ ​

Rishabh Pant

ಬೆಂಗಳೂರು: ಕಾರು ಅಪಘಾತದಿಂದ ಚೇತರಿಕೆ ಕಂಡು ಕ್ರಿಕೆಟ್‌ಗೆ ಮರಳುವ ಸಿದ್ಧತೆಯಲ್ಲಿದ್ದ ರಿಷಭ್​ ಪಂತ್​(Rishabh Pant) ಅವರು ಫಿಟ್​ನೆಸ್ ಪಾಸ್​ ಆಗಿದ್ದಾರೆ. ಬಿಸಿಸಿಐ ಮಂಗಳವಾರ ಅಧಿಕೃತ ಪ್ರಕಟನೆ ಮೂಲಕ ಪಂತ್​ ಫಿಟ್​ನೆಸ್​ ವರದಿಯನ್ನು ಪ್ರಕಟಿಸಿದೆ. ​ಕ್ರಿಕೆಟ್​ ಆಡಲು ಪಂತ್​ ಫಿಟ್​ ಆಗಿದ್ದಾರೆ ಎಂದು ಖಚಿತಪಡಿಸಿದೆ.

ಫಿಟ್​ನೆಸ್​ ಪಾಸ್​ ಆದ ಕಾರಣ ಪಂತ್​ ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಜತೆಗೆ ವಿಕೆಟ್ ಕೀಪಿಂಗ್ ಕೂಡ ನಡೆಸಲಿದ್ದಾರೆ. ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಪ್ರಸಿದ್ಧ್ ಕೃಷ್ಣ ಇಬ್ಬರೂ ಟೂರ್ನಿಯಿಂದ ಹೊರಗುಳಿದಿದ್ದಾರೆ. 14-ತಿಂಗಳ ಪುನರ್ವಸತಿ ಮತ್ತು ಚೇತರಿಕೆಯ ಪ್ರಕ್ರಿಯೆಗೆ ಒಳಗಾದ ನಂತರ ಪಂತ್​ ಅವರು ಕ್ರಿಕೆಟ್​ಗೆ ಮರಳುತ್ತಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಪಂತ್​ ಫಿಟ್ ಎಂದು ಬಿಸಿಸಿಐ ಘೋಷಿಸಿದೆ.

2022ರ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್​ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.

ಕಳೆದ ವಾರ ಪಂತ್​ ಅವರು ಎನ್​ಸಿಎಯಲ್ಲಿ ಐಪಿಎಲ್​ಗಾಗಿ ಸಿದ್ಧತೆ ನಡೆಸುವ ವೇಳೆ ತಮ್ಮ ಸಿಗ್ನೇಚರ್‌ ಶೈಲಿಯಾದ ಒಂದೇ ಕೈಯಲ್ಲಿ ಸಿಕ್ಸರ್​ ಬಾರಿಸಿ ಗಮನಸೆಳೆದಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು. ಇದೀಗ ಫಿಟ್​ನೆಸ್​ ಕೂಡ ಪಾಸ್​ ಆಗಿ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಿಷಭ್​ ಪಂತ್​ ಅವರು 2024ರ ಐಪಿಎಲ್​ ಟೂರ್ನಿಯಲ್ಲಿ(IPL 2024 season) ಆಡಲಿದ್ದಾರೆ ಎಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ವೇಳೆಯೇ ತಿಳಿದುಬಂದಿತ್ತು. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಕೂಡ ಪಂತ್​ ಕಮ್​ಬ್ಯಾಕ್​ ಮಾಡಲಿದ್ದಾರೆ ಎಂದು ಹೇಳಿತ್ತು. ಇದು ಮತ್ರವಲ್ಲದೆ ಕೋಚ್​ ಪಾಂಟಿಂಗ್​ ಕೂಡ ರಿಷಭ್ ಪಂತ್​ ಅವರು ಈ ಬಾರಿಯ ಐಪಿಎಲ್​ ಆಡಲು ತುಂಬಾ ಉತ್ಸುಕರಾಗಿದ್ದಾರೆ. ಜತೆಗೆ ಆತ್ಮವಿಶ್ವಾಸ ಕೂಡ ಹೆಚ್ಚಿಸಿಕೊಂಡಿದ್ದಾರೆ. ಕ್ರಿಕೆಟ್​ ಆಡುವ ಎಲ್ಲ ಸಾಮರ್ಥ್ಯ ಅವರಲ್ಲಿದೆ. ಅವರು ಈ ಬಾರಿ ಸಂಪೂರ್ಣವಾಗಿ ಟೂರ್ನಿಯಲ್ಲಿ ಆಡುವುದು ಖಚಿತ ಎಂದು ಹೇಳಿದ್ದರು. ಎಲ್ಲರು ಹೇಳಿದಂತೆ ಪಂತ್​ ಐಪಿಎಲ್​ ಆಡಲು ರೆಡಿಯಾಗಿದ್ದಾರೆ.

Exit mobile version