Site icon Vistara News

IPL 2024 : ಸಂಕ್ರಾತಿ ಹಿನ್ನೆಲೆಯಲ್ಲಿ ಐಪಿಎಲ್​ ತಂಡಗಳ ಗಾಳಿಪಟ ಸಮರ, ಇಲ್ಲಿದೆ ನೋಡಿ ವಿಡಿಯೊ

Kite Festival

ಬೆಂಗಳೂರು: ಮುಂಬರುವ ಐಪಿಎಲ್ 2024 ಋತುವಿನ (IPL 2024) ನಿಕಟ ಸ್ಪರ್ಧೆ ಹಾಗೂ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಪ್ರದರ್ಶಿಸಲು ಐಪಿಎಲ್ ತಂಡಗಳು ಜನವರಿ 13ರಂದು ಗಾಳಿಪಟಗಳೊಂದಿಗೆ ಪರಸ್ಪರ ಸ್ಪರ್ಧೆಗೆ ಇಳಿದಿದ್ದವು. ಐಪಿಎಲ್ 2024 ಪ್ರಸಾರಕರ ಅಧಿಕೃತ ಯೂಟ್ಯೂಬ್ ಚಾನೆಲ್​ನಲ್ಲಿ ಪ್ರಸಾರವಾದ “ಇಂಟೆನ್ಸ್​ ಕೈಟ್​ ಫ್ಲಯಿಂಗ್​ ” ಕಾರ್ಯಕ್ರಮದಲ್ಲಿ ಬಹುತೇಕ ಎಲ್ಲಾ ತಂಡಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಐಪಿಎಲ್ 2024 ರ ಬಹುತೇಕ ಎಲ್ಲಾ ತಂಡಗಳ ಪ್ರತಿನಿಧಿಗಳು ಜನವರಿ 13 ರಂದು, ಅಂದರೆ ಮಕರ ಸಂಕ್ರಾಂತಿ ಹಬ್ಬದ ಒಂದು ದಿನ ಮೊದಲು ಗಾಳಿಪಟ ಹಾರಿಸುವ ಸ್ಪರ್ಧೆಗಾಗಿ ಒಟ್ಟುಗೂಡಿದರು. ಪ್ರತಿ ಗಾಳಿಪಟವನ್ನು ನಕ್ಷತ್ರ ಆಕಾರದಲ್ಲಿ, ಆಕರ್ಷಕ ಚಿತ್ರಗಳೊಂದಿಗೆ ಹಾಗೂ ತಂಡದ ಜರ್ಸಿಗಳ ಬಣ್ಣಗಳೊಂದಿಗೆ ಸಿದ್ಧಪಡಿಸಲಾಗಿತ್ತು.

ಸಿಎಸ್​ಕೆ ನಾಯಕ ಎಂಎಸ್ ಧೋನಿ, ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್, ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮತ್ತು ಪಂಜಾಬ್ ಕಿಂಗ್ಸ್​​ ತಂಡ ನಾಯಕ ಶಿಖರ್ ಧವನ್ ಅವರ ಮುಖಗಳನ್ನು ಗಾಳಿಪಟದಲ್ಲಿ ಚಿತ್ರಿಸಲಾಗಿತ್ತು. ಕುತೂಹಲಕಾರಿ ಸಂಗತಿಯೆಂದರೆ, ಫಾಫ್ ಡು ಪ್ಲೆಸಿಸ್ ಪ್ರಸ್ತುತ ಆರ್​​ಸಿಬಿ ಫ್ರಾಂಚೈಸಿಯ ನಾಯಕರಾಗಿದ್ದರೂ, ಆ ತಂಡವು ಮಾಜಿ ನಾಯಕ ಮತ್ತು ದಂತಕಥೆ ಬ್ಯಾಟರ್​ ವಿರಾಟ್ ಕೊಹ್ಲಿ ಅವರ ಮುಖವನ್ನು ಗಾಳಿಪಟಕ್ಕೆ ಅಂಟಿಸಿತ್ತು.

ನೇರ ಪ್ರಸಾರ

ಐಪಿಎಲ್ 2024 ಋತುವಿನ ಪ್ರಸಾರಕರು ವಿವರಿಸಿದಂತೆ ಗಾಳಿಪಟ ಹಾರಾಟವನ್ನು ಜನವರಿ 13ರಂದು ಮಧ್ಯಾಹ್ನ 3:30 ರಿಂದ ಸ್ಟಾರ್ ಸ್ಪೋರ್ಟ್ಸ್​​ ಅಧಿಕೃತ ಯೂಟ್ಯೂಬ್ ಚಾನೆಲ್​ನಲ್ಲಿ ನೇರ ಪ್ರಸಾರ ಮಾಡಲಾಯಿತು.

ಐಪಿಎಲ್ 2024 ಮಾರ್ಚ್29 ರಿಂದ ಪ್ರಾರಂಭವಾಗಲಿದೆ. ಟೂರ್ನಿಗೂ ಮುನ್ನ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಡಿಸೆಂಬರ್​ನಲ್ಲಿ ಯುಎಇಯಲ್ಲಿ ನಡೆದ ಹರಾಜು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹತ್ತು ಫ್ರಾಂಚೈಸಿಗಳು ತಮ್ಮ ಐಪಿಎಲ್ 2024 ತಂಡಗಳನ್ನು ಹೆಚ್ಚಿಸಿದವು ಮತ್ತು ರೂಪಿಸಿದವು.

ಭಾರತದಲ್ಲೇ ನಡೆಯಲಿದೆ ಐಪಿಎಲ್ ಫೈನಲ್​

ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024)ರ ಆಟಗಾರರ ಮಿನಿ ಹರಾಜು(IPL Auction 2024) ಡಿಸೆಂಬರ್ 19 ರಂದು ದುಬೈನಲ್ಲಿ ನಡೆದಿತ್ತು. ಆದರೆ ಟೂರ್ನಿ ಯಾವಾಗ ಆರಂಭವಾಗಲಿದೆ ಎನ್ನುವುದು ಕ್ರಿಕೆಟ್​ ಅಭಿಮಾನಗಳ ಚಿಂತೆಯಾಗಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಂತಿದೆ. ಟೂರ್ನಿ ಮಾರ್ಚ್​ 22ರಿಂದ ಆರಂಭಗೊಳ್ಳಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಎಎನ್​ಐ ವರದಿ ಮಾಡಿದೆ. ಆದರೆ, ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇದನ್ನೂ ಓದಿ : Ram Mandir: ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಕ್ರಿಕೆಟ್ ದಿಗ್ಗಜ ಸಚಿನ್‌!

ಪ್ರತಿ ವರ್ಷ ಐಪಿಎಲ್​ ಆರಂಭವಾಗುವುದು ಮಾರ್ಚ್​ ಅಂತಿಮ ವಾರದಲ್ಲಿ. ಮೇ ತನಕ ಪಂದ್ಯಾವಳಿಗಳು ಸಾಗುತ್ತದೆ. ಆದರೆ ಈ ಬಾರಿ 2024 ಲೋಕಸಭಾ ಚುನಾವಣೆ ಇದೇ ಸಮಯದಲ್ಲಿ ಇರುವುದರಿಂದ ಟೂರ್ನಿಯನ್ನು ಭಾರತದಲ್ಲಿ ನಡೆಸುವುದು ಕಷ್ಟ. ಹೀಗಾಗಿ ಐಪಿಎಲ್​ ಅಭಿಮಾನಿಗಳಿಗೆ ಟೂರ್ನಿ ಆರಂಭದ ಬಗ್ಗೆ ಹಲವು ಗೊಂದಲ ಕಾಡಿತ್ತು. ಇದೀಗ ಬಂದ ವರದಿಯ ಪ್ರಕಾರ ಮಾರ್ಚ್ 22ಕ್ಕೆ ಐಪಿಎಲ್ ಪ್ರಾರಂಭವಾಗುವ ಸಾಧ್ಯತೆ ಇದೆ ತಿಳಿದುಬಂದಿದೆ.

ಬಿಸಿಸಿಐ ಮೂಲಗಳ ಪ್ರಕಾರ ದೇಶದಲ್ಲಿ ಚುನಾವಣೆ ನಡೆದರೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಭಾರತದಲ್ಲಿ ನಡೆಯಲಿದೆ ಎಂದು ತಿಳಿಸಿರುವುದಾಗಿ ಎಎನ್​ಐ ತನ್ನ ವರದಿಯಲ್ಲಿ ತಿಳಿಸಿದೆ. “ಪಂದ್ಯಾವಳಿಯನ್ನು ದೇಶದ ಹೊರಗೆ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ. ಸಾರ್ವತ್ರಿಕ ಚುನಾವಣೆ ಇದೇ ಸಮಯದಲ್ಲಿ ನಡೆಯಲಿದೆ. ಒಂದೊಮ್ಮೆ ಕೆಲ ರಾಜ್ಯ ಪಂದ್ಯವನ್ನು ಆಯೋಜಿಸಲು ಬಯಸದಿದ್ದರೆ, ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಬಿಸಿಸಿಐ ಮೂಲವೊಂದು ಎಎನ್‌ಐಗೆ ತಿಳಿಸಿದೆ.

2 ಬಾರಿ ಚುನಾವಣ ಕಾರಣದಿಂದ ವಿದೇಶದಲ್ಲಿ ನಡೆದಿತ್ತು ಐಪಿಎಲ್​

2009ರಲ್ಲಿ ಮಹಾಚುನಾವಣೆಯ ಕಾರಣದಿಂದ ಇಡೀ ಕೂಟವನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಹಾಗೆಯೇ 2014ರಲ್ಲಿಯೂ ಒಂದು ಹಂತದ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು. ಆದರೆ ಈ ಬಾರಿ ಬಿಸಿಸಿಐ ಸಂಪೂರ್ಣವಾಗಿ ಟೂರ್ನಿಯನ್ನು ವಿದೇಶದಲ್ಲಿ ನಡೆಸುವುದು ಕಷ್ಟ ಸಾಧ್ಯ. ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಪಂದ್ಯಗಳನ್ನು ವಿದೇಶದಲ್ಲಿ ನಡೆಸ ಬೇಕೇ ಅಥವಾ ದೇಶದಲ್ಲಿ ನಡೆಸಬೇಕೆ ಎನ್ನುವುದು ಅಧಿಕೃತಗೊಳ್ಳಲಿದೆ. ಎಲ್ಲವೂ ಚುನಾವಣ ಸಮಿತಿಯ ನಿರ್ಧಾರದ ಮೇಲೆ ಅವಲಂಬಿತ.

Exit mobile version