ಚೆನ್ನೈ: ಬಹುನಿರೀಕ್ಷಿತ 17ನೇ ಆವೃತ್ತಿಯ ಐಪಿಎಲ್(IPL 2024) ಕ್ರಿಕೆಟ್ ಜಾತ್ರೆಗೆ ಕ್ಷಣಗಣನೆ ಶರುವಾಗಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ಇಂದು ನಡೆಯುವ ಹೈವೋಲ್ಟೇಜ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ನಡುವಿನ ಹೋರಟದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದೆ. ಈ ಬಾರಿ ಹಲವು ನಿಯಮಗಳೊಂದಿಗೆ ಕೂಟ ನಡೆಯಲಿದೆ.
ನಿಯಮಗಳು
ಈ ಬಾರಿಯ ಟೂರ್ನಿಯಲ್ಲಿIPL 2024) ಜಾರಿಯಾಗಿರುವ ಪ್ರಮುಖ ನಿಯಮವೆಂದರೆ ವೇಗದ ಬೌಲರ್‌ಗೆ ಒಂದೇ ಒವರ್‌ನಲ್ಲಿ 2 ಬೌನ್ಸರ್ ಎಸೆಯಲು ಅವಕಾಶವಿದೆ. ಬೌನ್ಸರ್ ಎಸೆತ ಬ್ಯಾಟರ್‌ನ ತಲೆ ಮೇಲಿನಿಂದ ಹೋದರೆ ವೈಡ್ ಎಂದು ನಿರ್ಧಾರ. 3ನೇ ಬೌನ್ಸರ್ ಎಸೆದರೆ ನೋ ಬಾಲ್ ಆಗಲಿದೆ. ಒಂದೇ ಪಂದ್ಯದಲ್ಲಿ ಬೌಲರ್ ಒಬ್ಬ 2ನೇ ಬಾರಿ, 3 ಬೌನ್ಸರ್ ಎಸೆದರೆ ಬೌಲರನ್ನು ಪಂದ್ಯದಿಂದ ಅನರ್ಹಗೊಳಿಸಬಹುದಾಗಿದೆ. ಈ ಬಾರಿಯೂ ಒಟ್ಟು 74 ಪಂದ್ಯಗಳು ನಡೆಯಲಿವೆ.
The battle for the 🏆 begins today in Chennai!
— IndianPremierLeague (@IPL) March 22, 2024
The Points Table hits reset as the teams gear up for a fresh challenge in #TATAIPL 2024 😎 pic.twitter.com/KatYjiEVaM
ಟೂರ್ನಿಯ ಮಾದರಿ
ಕಳೆದ ಬಾರಿಯಂತೆ ಈ ಬಾರಿಯೂ ಕೂಟದಲ್ಲಿ ಭಾಗವಹಿಸುವ ಒಟ್ಟು 10 ತಂಡಗಳನ್ನು ತಲಾ 5 ತಂಡಗಳಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಗುಂಪಿನಲ್ಲಿರುವ ಪ್ರತಿ ತಂಡವೂ, ಮತ್ತೂಂದು ಗುಂಪಿನಲ್ಲಿರುವ ತಂಡಗಳ ಜತೆ ತಲಾ ಎರಡು ಪಂದ್ಯಗಳನ್ನು ಆಡಲಿದೆ. ಈ ಪೈಕಿ ಒಂದು ಪಂದ್ಯವನ್ನು ತವರಿನಲ್ಲಿ , ಮತ್ತೂಂದು ಪಂದ್ಯವನ್ನು ಎದುರಾಳಿ ತಂಡದ ತವರಿನಲ್ಲಿ ಆಡಲಿದೆ. ಇದು ಮಾತ್ರವಲ್ಲಿದೆ ಪ್ರತಿ ತಂಡವು ತಮ್ಮ ಗುಂಪಿನಲ್ಲಿರುವ ಇತರ 4 ತಂಡಗಳ ಜತೆ ತಲಾ 1 ಪಂದ್ಯ ಆಡಲಿದೆ.
𝐈𝐭'𝐬 𝐒𝐡𝐨𝐰𝐓𝐢𝐦𝐞!
— IndianPremierLeague (@IPL) March 21, 2024
The #TATAIPL is here and WE are ready to ROCK & ROLL 🎉🥳🥁
Presenting the 9 captains with PBKS being represented by vice-captain Jitesh Sharma. pic.twitter.com/v3fyo95cWI
ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇ ಆಫ್ ಟಿಕೆಟ್ ಪಡೆಯಲಿದೆ. ಮೊದಲ 2 ಸ್ಥಾನದಲ್ಲಿರುವ ತಂಡಗಳು ಮೊದಲ ಕ್ವಾಲಿಫೈಯರ್ ಆಡಿ ಇಲ್ಲಿ ಗೆದ್ದ ತಂಡ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. 3 ಮತ್ತು 4ನೇ ಸ್ಥಾನಗಳಲ್ಲಿರುವ ತಂಡಗಳು ಎಲಿಮಿನೇಟರ್‌ನಲ್ಲಿ ಆಡಲಿದೆ. ಇಲ್ಲಿ ಗೆದ್ದ ತಂಡ, ಮೊದಲ ಪ್ಲೇ ಆಫ್ನಲ್ಲಿ ಸೋತ ತಂಡದೊಂದಿಗೆ 2ನೇ ಕ್ವಾಲಿಫೈಯರ್ ಪಂದ್ಯ ಆಡಲಿದೆ. 2ನೇ ಪ್ಲೇ ಆಫ್ನಲ್ಲಿ ಗೆದ್ದ ತಂಡ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. ಲೀಗ್ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಕ್ಕೆ ಹೆಚ್ಚಿನ ಲಾಭ ಸಿಗಲಿದೆ.
ಇದನ್ನೂ ಓದಿ IPL Match Preview : ಮೊದಲ ಹಣಾಹಣಿ ಗೆದ್ದು ಟ್ರೋಫಿಯೆಡೆಗೆ ದಾಪುಗಾಲು ಇಡುವುದೇ ಆರ್ಸಿಬಿ?
ಅದ್ಧೂರಿ ಉದ್ಘಾಟನ ಸಮಾರಂಭ
ಟೂರ್ನಿಯ ಉದ್ಘಾಟನ ಸಮಾರಂಭದಲ್ಲಿ(IPL 2024 opening ceremony) ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಸಂಗೀತ ನಿರ್ದೇಶಕ. ಆರು ರಾಷ್ಟ್ರ ಪ್ರಶಸ್ತಿ ವಿಜೇತ ಎ.ಆರ್ ರೆಹಮಾನ್(AR Rahman), ಸೋನು ನಿಗಮ್(Sonu Nigam), ಟೈಗರ್ ಶ್ರಾಫ್(Tiger Shroff), ಅಕ್ಷಯ್ ಕುಮಾರ್(Akshay Kumar) ಪ್ರದರ್ಶನ ನೀಡಲಿದ್ದಾರೆ. ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ.ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಗೊಂಡಿದೆ. ಉಳಿದ ಪಂದ್ಯಗಳು ಯಾವಾಗಿನಿಂದ ಹಾಗೂ ಎಲ್ಲಿ ನಡೆಯುತ್ತದೆ ಎನ್ನುವ ಮಾಹಿತಿ ಇದುವರೆಗೆ ರಿವೀಲ್ ಆಗಿಲ್ಲ.