ಮುಂಬಯಿ: ಮಹಾರಾಷ್ಟ್ರ ಕೊಲ್ಹಾಪುರದ ಹನುಮಂತವಾಡಿ ಪ್ರದೇಶದಲ್ಲಿ ಐಪಿಎಲ್ ಪಂದ್ಯದ ವೇಳೆ ನಡೆದ ಗಲಾಟೆಯಲ್ಲಿ ಒಬ್ಬನ್ನು ಹೊಡೆದು ಕೊಲೆ ಮಾಡಲಾಗಿದೆ. ಅದೂ ಸಣ್ಣ ವಿಚಾರಕ್ಕೆ. ಐಪಿಎಲ್ 2024ರ (IPL 2024) ಪಂದ್ಯವೊಂದರ ವೇಳೆ ರೋಹಿತ್ ಶರ್ಮಾ ಔಟ್ ಆದಾಗ ಸಂಭ್ರಮಿಸಿದ ಎಂಬ ಕಾರಣಕ್ಕೆ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಬಂಡುಪಂತ್ ಟಿಬಿಲೆ ಎಂದು ಗುರುತಿಸಲಾಗಿದೆ. ಏಟು ತಿಂದು ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬಲ್ವಂತ್ ಝಂಜ ಮತ್ತು ಸಾಗರ್ ಝಂಜ ಕೊಲೆ ಮಾಡಿದವರು. ಎಸ್ಆರ್ಎಚ್ ಹಾಗೂ ಮುಂಬಯಿ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆ ರೋಹಿತ್ ಶರ್ಮಾ ಅವರ ವಿಕೆಟ್ ಉರುಳಿದಾಗ ಸಂಭ್ರಮಿಸಿದ್ದಕ್ಕೆ ಕೊಲೆ ಮಾಡಲಾಗಿದೆ. ರೋಹಿತ್ ಔಟ್ ಆದಾಗ ಸಂಭ್ರಮಿಸಿದ ತಕ್ಷಣ ಅವರನ್ನು ಕೋಲಿನಿಂದ ಥಳಿಸಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ : IPL 2024 : ಹೈದರಾಬಾದ್ ವಿರುದ್ಧ ಗುಜರಾತ್ ತಂಡಕ್ಕೆ7 ವಿಕೆಟ್ ಜಯ
ಆರೋಪಿಗಳು ಅಧಿಕಾರಿಗಳು ಬಂಧಿಸಿದ್ದಾರೆ. ಕೊಲ್ಹಾಪುರ ಜಿಲ್ಲೆಯ ಕರ್ವೀರ್ ತಾಲೂಕಿನಲ್ಲಿರುವ ಹನಮಂತವಾಡಿಯ ಬುಧವಾರ ಐಪಿಎಲ್ ಪಂದ್ಯದ ನಂತರ ಈ ಘಟನೆ ನಡೆದಿದ್ದು, ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ವಾಗ್ವಾದದ ಸಮಯದಲ್ಲಿ ಬಲ್ವಂತ್ ಯಂಜ್ಗೆ ಮತ್ತು ಅವರ ಸೋದರಳಿಯ ಸಾಗರ್ ಝಂಜಗೆ ಮರದ ಹಲಗೆ ಮತ್ತು ಕೋಲಿನಿಂದ ಮೇಲೆ ಟಿಬಿಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ತಮಾಷೆಗಾಗಿ ನಡೆದ ಗಲಾಟೆ
ಬುಧವಾರ ರಾತ್ರಿ ಪಂದ್ಯ ವೀಕ್ಷಣೆಯ ಸಮಯದಲ್ಲಿ ಟಿಬಿಲ್ ಮತ್ತು ಬಲ್ವಂತ್ ಝಾಂಜ್ ನಡುವೆ ವಾಗ್ವಾದವು ನಡೆದಿತ್ತು. ಅಂತಿಮವಾಗಿ ದೈಹಿಕ ಘರ್ಷಣೆಗೆ ಕಾರಣವಾಯಿತು. ಪರಿಣಾಮವಾಗಿ, ಬಲ್ವಂತ್ ಝಂಜಗೆ ಮತ್ತು ಸಾಗರ್ ಝಂಜಗೆ ಇಬ್ಬರಿಗೂ ತೀವ್ರ ಗಾಯಗಳಾಗಿದ್ದು ಅವರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಂದ್ಯದಲ್ಲಿ ಮುಂಬಯಿ ತಂಡಕ್ಕೆ ಜಯ
20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 31 ರನ್ ಗಳಿಂದ ಮಣಿಸಿತು. ಹೆನ್ರಿಕ್ ಕ್ಲಾಸೆನ್ (ಅಜೇಯ 80), ಅಭಿಷೇಕ್ ಶರ್ಮಾ (63) ಮತ್ತು ಟ್ರಾವಿಸ್ ಹೆಡ್ (62) ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ 2016 ರ ಚಾಂಪಿಯನ್ಸ್ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತವನ್ನು ದಾಖಲಿಸಿದರು. ತಿಲಕ್ ವರ್ಮಾ 64 ರನ್ ಗಳಿಸಿದರೆ, ಟಿಮ್ ಡೇವಿಡ್ ಅಜೇಯ 42 ರನ್ ಗಳಿಸಿದರು.