Site icon Vistara News

IPL 2024: ಮೈದಾನದಲ್ಲೇ ಕಾರ್ತಿಕ್​​ಗೆ ಬಿಗ್​ ಆಫರ್​ ನೀಡಿದ ರೋಹಿತ್​; ವಿಡಿಯೊ ವೈರಲ್​

IPL 2024

ಮುಂಬಯಿ: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ(IPL 2024) ಪ್ರಚಂಡ ಬ್ಯಾಟಿಂಗ್​ ನಡೆಸಿದ ಆರ್​ಸಿಬಿ(RCB) ಬ್ಯಾಟರ್​ ದಿನೇಶ್​ ಕಾರ್ತಿಕ್​(Dinesh Karthik) ಅವರಿಗೆ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಅವರು ಮೈದಾನದಲ್ಲೇ ಟಿ20 ವಿಶ್ವಕಪ್​ ತಂಡದಲ್ಲಿ ಆಡುವಂತೆ ಓಪನ್​ ಆಫರ್​ ನೀಡಿದ್ದಾರೆ. ರೋಹಿತ್​ ಅವರ ಈ ಆಫರ್​ನ ವಿಡಿಯೊ ವೈರಲ್​ ಆಗಿದೆ.

ದಿನೇಶ್​ ಕಾರ್ತಿಕ್​ ಈ ಬಾರಿಯ ಐಪಿಎಲ್​ನಲ್ಲಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಗಮನಸೆಳೆಯುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು ಕಡಿಮೆ ಎಸೆತಗಳಿಂದ ದೊಡ್ಡ ಮೊತ್ತ ಪೇರಿಸುವಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಆಡಿದ 5 ಇನಿಂಗ್ಸ್​ನಿಂದ 143 ರನ್​ ಬಾರಿಸಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿಯೂ ಕೇವಲ 23 ಎಸೆತಗಳಿಂದ 5 ಬೌಂಡರಿ ಮತ್ತು 4 ಬಿಗ್​ ಹಿಟ್ಟಿಂಗ್​ ಸಿಕ್ಸರ್​ ನೆರವಿನಿಂದ ಅಜೇಯ 53 ರನ್​ ಚಚ್ಚಿದ್ದರು.

ಕಾರ್ತಿಕ್​ ಸ್ಫೋಟಕ ಬ್ಯಾಟಿಂಗ್​ ಇನಿಂಗ್ಸ್​ ಕಂಡು ಸ್ಲಿಪ್​​ನಲ್ಲಿ ನಿಂತಿದ್ದ ರೋಹಿತ್ ಶರ್ಮ ಚಪ್ಪಾಳೆ ತಟ್ಟುತಾ ಟಿ20 ವಿಶ್ವಕಪ್​ನಲ್ಲಿ ಆಡುವಂತೆ ಆಫರ್​ ನೀಡಿದ್ದಾರೆ. ಇದು ಸ್ಟಂಪ್​ ಮೈಕ್​ನಲ್ಲಿ ರೆಕಾರ್ಡ್ ಆಗಿದೆ. ಜತೆಗೆ ಇದರ ವಿಡಿಯೊ ಕೂಡ ವೈರಲ್​ ಆಗಿದೆ. 2022ರ ಹರಾಜಿನಲ್ಲಿ ಕಾರ್ತಿಕ್​ ಅವರು ಬರೋಬ್ಬರಿ 5.5 ಕೋಟಿ ರೂ. ಪಡೆದು ಆರ್​ಸಿಬಿ ಕ್ಯಾಂಪ್ ಸೇರಿದ್ದರು. ಆ ಆವೃತ್ತಿಯಲ್ಲಿ ಕಾರ್ತಿಕ್ 14 ಇನ್ನಿಂಗ್ಸ್ ಗಳಲ್ಲಿ 287 ರನ್ ಬಾರಿಸಿದ್ದರು. ಜತೆಗೆ ತಂಡದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಿದ್ದರು. ಇದೇ ಪ್ರದರ್ಶನ ಕಂಡು ಆಸ್ಟ್ರೇಲಿಯಾದಲ್ಲಿ ನಡೆದ ಕಂಡು ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಆಡಿಸಲಾಗಿತ್ತು. ಆದರೆ ಇಲ್ಲಿ ಕಾರ್ತಿಕ್​ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಜತೆಗೆ ಕಳೆದ ಐಪಿಎಲ್​ ಟೂರ್ನಿಯಲ್ಲಿ ಘೋರ ವೈಫಲ್ಯ ಎದುರಿಸಿದ್ದರು. ಇದೀಗ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿರುವ ಅವರು ಈ ಬಾರಿಯ ಟಿ20 ವಿಶ್ವಕಪ್​ ತಂಡಕ್ಕೆ ಆಯ್ಕೆಯಾದರೂ ಕೂಡ ಅಚ್ಚರಿಯಿಲ್ಲ.

ಇದನ್ನೂ ಓದಿ IPL 2024: ಆರ್​ಸಿಬಿ ಸೋಲಿಗೆ ನೈಜ ಕಾರಣ ತಿಳಿಸಿದ ನಾಯಕ ಡು ಪ್ಲೆಸಿಸ್‌

2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ಕಾರ್ತಿಕ್​ ಭಾರತ ಪರ 26 ಟೆಸ್ಟ್‌ಗಳನ್ನು ಆಡಿ 1025 ರನ್ ಗಳಿಸಿದ್ದಾರೆ. 57 ಕ್ಯಾಚ್‌ಗಳು ಮತ್ತು 6 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಅವರು ತಮ್ಮ ಕೊನೆಯ ಟೆಸ್ಟ್ ಆಡಿದ್ದು 2018 ರಲ್ಲಿ. ಏಕದಿನದಲ್ಲಿ 94 ಪಂದ್ಯಗಳನ್ನು ಆಡಿ 1752 ರನ್ ಗಳಿಸಿದ್ದಾರೆ. 64 ಕ್ಯಾಚ್‌ಗಳು ಮತ್ತು 7 ಸ್ಟಂಪಿಂಗ್‌ಗಳನ್ನು ನಿರ್ವಹಿಸಿದ್ದಾರೆ. 60 ಟಿ20 ಪಂದ್ಯಗಳಿಂದ 686 ರನ್ ಗಳಿಸಿ, 30 ಕ್ಯಾಚ್‌ಗಳು ಮತ್ತು 8 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.

ಐಪಿಎಲ್​ ಟೂರ್ನಿಯಲ್ಲಿ 248* ಪಂದ್ಯಗಳನ್ನು ಆಡಿರುವ ದಿನೇಶ್​ ಕಾರ್ತಿಕ್​, ಅತ್ಯಧಿಕ ಐಪಿಎಲ್​ ಪಂದ್ಯಗಳ್ನಾಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್​ನಲ್ಲಿ 4659 ರನ್​ ಬಾರಿಸಿದ್ದಾರೆ. ಈ ಬಾರಿಯ ಐಪಿಎಲ್​ ಬಳಿಕ ಅವರು ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಟಿ20 ವಿಶ್ವಕಪ್​ನಲ್ಲಿ ಅವಕಾಶ ಸಿಕ್ಕರೆ ತಮ್ಮ ನಿವೃತ್ತಿಯನ್ನು ವಿಶ್ವಕಪ್​ ಟೂರ್ನಿಯಲ್ಲಿ ಘೋಷಿಸಬಹುದು.

Exit mobile version