Site icon Vistara News

IPL 2024: ಆರ್​ಸಿಬಿ ಪಂದ್ಯಕ್ಕೆ ಭೂಕಂಪದ ಭೀತಿ; ತಡರಾತ್ರಿ ರಾಜಸ್ಥಾನದಲ್ಲಿ ಕಂಪಿಸಿದ ಭೂಮಿ

IPL 2024

ಜೈಪುರ: ರಾಜಸ್ಥಾನದಲ್ಲಿ ಶನಿವಾರ ತಡರಾತ್ರಿ 1 ಗಂಟೆ ಸುಮಾರಿಗೆ ಭೂಕಂಪನದ(Earthquake) ಅನುಭವವಾಗಿದೆ. ರಾಜಸ್ಥಾನದ(rajasthan earthquake) ಪಾಲಿಯಲ್ಲಿ 3.7 ತೀವ್ರತೆಯ ಭೂಕಂಪನ ಸಂಭವಿಸಿದೆ. ಇದೀಗ ಇಂದು ಜೈಪುರದಲ್ಲಿ ನಡೆಯಲಿರುವ ರಾಜಸ್ಥಾನ್​ ರಾಯಲ್ಸ್​ ಮತ್ತು(IPL 2024) ಆರ್​ಸಿಬಿ(RCB vs RR) ನಡುವಣ ಪಂದ್ಯಕ್ಕೂ ಭೂಕಂಪದ ಭೀತಿ ಎದುರಾಗಿದೆ.

ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ರಾತ್ರಿ 1.29 ಕ್ಕೆ ಈ ಭೂಕಂಪನದ ಅನುಭವವಾಗಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಇದಕ್ಕೂ ಕೆಲವೇ ಗಂಟೆಗಳ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪನ ಸಂಭವಿಸಿತ್ತು. ನ್ಯೂಜೆರ್ಸಿಯಲ್ಲಿಯೂ 4.8 ತೀವ್ರತೆಯ ಭೂಕಂಪನ ಸಂಭವಿಸಿದ್ದು ನ್ಯೂಯಾರ್ಕ್ ನಗರದ ನಿವಾಸಿಗಳನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಇದೀಗ ಭಾರತದ ಕೆಲ ರಾಜ್ಯಗಳಲ್ಲಿಯೂ ಭೂಕಂಪನ ಸಂಭವಿಸುತ್ತಿದೆ.

ಪಂದ್ಯಕ್ಕೆ ಮಳೆ ಭೀತಿ


ರಾಜಸ್ಥಾನದ ಪಾಲಿಯಲ್ಲಿ ಸಂಭವಿಸಿದ ಭೂಕಂಪನದ ಭೀತಿ ಮಧ್ಯೆ ಪಂದ್ಯಕ್ಕೆ ಮಳೆಯ ಸಾಧ್ಯತೆಯೂ ಎದುರಾಗಿದೆ. ಶುಕ್ರವಾರ ಪಂದ್ಯ ನಡೆಯುವ ಜೈಪುರದಲ್ಲಿ ಭಾರೀ ಗುಡುಗು ಮತ್ತು ಮಿಂಚು ಕಂಡುಬಂದಿತ್ತು. ಮಿಂಚಿನ ಫೋಟೊವನ್ನು ಆರ್​ಸಿಬಿ ಫ್ರಾಂಚೈಸಿ ತಮ್ಮ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಹೀಗಾಗಿ ಇಂದಿನ ಪಂದ್ಯಕ್ಕೆ ಮಳೆಯ ಭೀತಿ ಕೂಡ ಕಾಡಿದೆ. ಈಗಾಗಲೇ ಆರ್​ಸಿಬಿ ಆಡಿದ 4 ಪಂದ್ಯಗಳ ಪೈಕಿ ಮೂರು ಪಂದ್ಯ ಸೋತಿದೆ. ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೆ ತಂಡಕ್ಕೆ ಮತ್ತೆ ಹಿನ್ನಡೆಯಾಗಲಿದೆ.

ಪಿಂಕ್​ ಜೆರ್ಸಿಯಲ್ಲಿ ಕಣಕ್ಕೆ


ರಾಜಸ್ಥಾನ್​ ರಾಯಲ್ಸ್​ ಇಂದಿನ ಪಂದ್ಯದಲ್ಲಿ ಪೂರ್ಣ ಪ್ರಮಾಣದ ಪಿಂಕ್​ ಜೆರ್ಸಿಯಲ್ಲಿ(Rajasthan Royals Jersey) ಕಣಕ್ಕಿಳಿಯಲಿದೆ. ಈ ಮೂಲಕ ಪಂದ್ಯವನ್ನು ಮಹಿಳೆಯರಿಗೆ ಅರ್ಪಣೆ ಮಾಡಲಿದೆ. PinkPromise ಮಿಷನ್ ಅಡಿಯಲ್ಲಿ ಮಹಿಳೆಯರನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ IPL 2024: ಗಾಯಾಳು ಕುಲ್​ದೀಪ್​ ಯಾದವ್​ಗೆ ವಿಶ್ರಾಂತಿ; ಡೆಲ್ಲಿ ತಂಡಕ್ಕೆ ಹಿನ್ನಡೆ

ಈ ಪಂದ್ಯದಲ್ಲಿ ಮಾರಾಟವಾಗುವ ಪ್ರತಿ ಟಿಕೆಟ್‌ನಿಂದ 100 ರೂ.ಗಳನ್ನು ಮಹಿಳೆಯರ ಅಭಿವೃದ್ಧಿಗೆ ನೀಡಲಾಗುವುದು. ಪಂದ್ಯದ ವೇಳೆ ದಾಖಲಾಗುವ ಪ್ರತೀ ಸಿಕ್ಸರ್​ಗೆ ರಾಜಸ್ಥಾನದಲ್ಲಿರುವ 6 ಮನೆಗಳಿಗೆ ಉಚಿತ ಸೌರವಿದ್ಯುತ್‌ ಸಂಪರ್ಕವನ್ನು ಫ್ರಾಂಚೈಸಿ ನೀಡಲಿದೆ. ರಾಜಸ್ಥಾನದ ಮಹಿಳೆಯರನ್ನು ಸಶಕ್ತಗೊಳಿಸಲು ಪಂದ್ಯದ ದಿನದ ಸಂಪೂರ್ಣ ಆದಾಯವನ್ನು ಫ್ರಾಂಚೈಸಿ ಮೀಸಲಾಗಿಟ್ಟಿದೆ. ಈ ಕಾರ್ಯವನ್ನು ನಡೆಸಲೆಂದೇ ರಾಜಸ್ಥಾನ್‌ ರಾಯಲ್ಸ್‌ ಫೌಂಡೇಶನ್‌ ಎಂಬ ಸಂಸ್ಥೆ ಸ್ಥಾಪನೆಯಾಗಿದೆ. ಈಗಾಗಲೇ ಫ್ರಾಂಚೈಸಿ ಪಿಂಕ್​ ಜೆರ್ಸಿಯನ್ನು ಮತ್ತು ಈ ದಿನದ ವಿಶೇಷ ಯೋಜನೆಗಳನ್ನು ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ವಿಡಿಯೊ ಮೂಲಕ ಮಾಹಿತಿ ನೀಡಿದೆ. ಸಂಪೂರ್ಣವಾಗಿ ಈ ಪಂದ್ಯವನ್ನು ಮಹಿಳೆಯರ ಏಳಿಗೆಗೆ ಮೀಸಲಿಟ್ಟಿದೆ.

ಸಂಭಾವ್ಯ ತಂಡ

ರಾಜಸ್ಥಾನ್​: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ನಾಂದ್ರೆ ಬರ್ಗರ್, ಯುಜ್ವೇಂದ್ರ ಚಹಾಲ್.

ಆರ್​ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಲಾಕಿ ಫರ್ಗುಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್​ ಲೋಮ್ರೋರ್​, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿಕೆಟ್​ ಕೀಪರ್​), ಮಯಾಂಕ್ ಡಾಗರ್, ರೀಸ್ ಟೋಪ್ಲಿ, ಮೊಹಮ್ಮದ್ ಸಿರಾಜ್, ವಿಜಯಕುಮಾರ್ ವೈಶಾಕ್.

Exit mobile version