ಚೆನ್ನೈ: ಐಪಿಎಲ್(IPL 2024) ಪಂದ್ಯ ನೋಡಲು ಟಿಕೆಟ್ಗಳಿಗಾಗಿ ಅಭಿಮಾನಿಗಳು ಹರ ಸಾಹಸ ಪಡುತ್ತಾರೆ. ಎಷ್ಟೇ ಲಕ್ಷ ಮೊತ್ತವನ್ನಾದರೂ ನೀಡಿ ಪಂದ್ಯವನ್ನು ನೋಡ ಬಯಸುತ್ತಾರೆ. ಆದರೆ, ಇಲ್ಲೊಂದು ಕಡೆ ಕೇವಲ 5 ರೂ. ನೀಡಿ ಯಾವುದೇ ಪಂದ್ಯವನ್ನು ಕೂಡ ವೀಕ್ಷಿಸಬಹುದು. ಅರೆ, ಇದು ಹೇಗೆ ಸಾಧ್ಯ ಎಂದುಕೊಂಡಿದ್ದೀರಾ ಈ ಇನ್ಟ್ರೆಸ್ಟಿಂಗ್ ಸೋರಿಯ ಮಾಹಿತಿ ಇಲ್ಲಿದೆ.
ಹೌದು, ಚೆನ್ನೈಯ ಎಂ.ಎ ಚಿದಂಬರಂ ಸ್ಟೇಡಿಯಂ ಬಳಿ ರೈಲ್ವೇ ನಿಲ್ದಾಣವಿದೆ(Chepauk Railway Station ). ಈ ನಿಲ್ದಾಣದ ಕಿಟಕಿಯಿಂದ ಇಣುಕಿದರೆ ನೇರವಾಗಿ ಸ್ಟೇಡಿಯಂ ಕಾಣಿಸುತ್ತದೆ. ಹೀಗಾಗಿ ಪಂದ್ಯಗಳನ್ನು ಸುಲಭವಾಗಿ ವೀಕ್ಷಿಸಬಹುದಾಗಿ. ಇದಕ್ಕೆ ಸಾಕ್ಷಿ ಎಂಬಂತೆ ಮಾರ್ಚ್ 22ರಂದು ನಡೆದ ಐಪಿಎಲ್ನ ಉದ್ಘಾಟನ ಪಂದ್ಯವಾದ ಆರ್ಸಿಬಿ(RCB vs CSK) ಮತ್ತು ಚೆನ್ನೈ ನಡುವಣ ಪಂದ್ಯವೇ ಸಾಕ್ಷಿ. ಚೆನ್ನೈ ಅಭಿಮಾನಿಗಳು ರೈಲ್ವೇ ನಿಲ್ದಾಣದ ಪ್ಲಾಟ್ ಫಾರ್ಮ್ ಟಿಕೆಟ್ 5 ರೂ. ನೀಡಿ ಇಡೀ ಪಂದ್ಯವನ್ನು ವೀಕ್ಷಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ. ಪಂದ್ಯದ ಟಿಕೆಟ್ ಬೆಲೆ 15 ಸಾವಿರ ಇದ್ದರೂ ಕೂಡ ಈ ಅಭಿಮಾನಿಗಳು 5 ರೂ. ನೀಡಿ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ.
ಇದನ್ನೂ ಓದಿ IPL 2024: ಐಪಿಎಲ್ನಲ್ಲಿ ಮತ್ತೊಂದು ಹೊಸ ಪ್ರಯೋಗ ನಡೆಸಲು ಮುಂದಾದ ಬಿಸಿಸಿಐ
ಗುಜರಾತ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಚೆನ್ನೈ
ಚೆಪಾಕ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಚೆನ್ನೈ63 ರನ್ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಭರ್ಜರಿಯಾಗಿ ಬ್ಯಾಟ್ ಬೀಸಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 206 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಗುಜರಾತ್ ತಂಡ ತನ್ನೆಲ್ಲಾ ಓವರ್ಗಳು ಮುಕ್ತಾಯಗೊಂಡಾಗ 8 ವಿಕೆಟ್ಗೆ 143 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ದೊಡ್ಡ ಮೊತ್ತವನ್ನು ಪೇರಿಸಲು ಹೊರಟ ಗುಜರಾತ್ ತಂಡ ಹೆಚ್ಚು ದಿಟ್ಟತನ ತೋರಲಿಲ್ಲ. ಚೆನ್ನೈನ ಸಂಘಟಿತ ಬೌಲಿಂಗ್ ಸಾಮರ್ಥ್ಯಕ್ಕೆ ಬೆದರಿ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ವೃದ್ಧಿಮಾನ್ ಸಾಹ 21 ರನ್ ಬಾರಿಸಿದರೆ, ಶುಬ್ಮನ್ ಗಿಲ್ ಮತ್ತೊಮ್ಮೆ ವೈಫಲ್ ಎದುರಿಸಿ 8 ರನ್ಗೆ ಔಟಾದರು. ಸಾಯಿ ಸುದರ್ಶನ್ 37 ರನ್ ಬಾರಿಸಿದರು. ವಿಜಯ ಶಂಕರ್ 12 ರನ್ ಬಾರಿಸಿ ಧೋನಿ ಹಿಡಿದ ಅದ್ಬುತ ಕ್ಯಾಚ್ಗೆ ಬಲಿಯಾದರು.
CHEPAUK STADIUM
— 𝗙𝗶𝗹𝗺 𝗙𝗼𝗼𝗱 𝗙𝘂𝗻 & 𝗙𝗮𝗰𝘁 (@FilmFoodFunFact) March 26, 2024
TICKET = Rs. 15,000
CHEPAUK STATION
PLATFORM TICKET = Rs.10#CSKvsGT pic.twitter.com/2zDMDfSDKF
ಚೆನ್ನೈ ಪರ ಎಡಗೈ ಬ್ಯಾಟರ್ ಶಿವಂ ದುಬೆ ಮತ್ತೊಮ್ಮೆ ಮಿಂಚಿದರು. ಚೆನ್ನೈ ಸ್ಟೇಡಿಯಮ್ನ ಎಲ್ಲ ಕಡೆಗೆ ಬೌಂಡರಿ ಸಿಕ್ಸರ್ಗಳನ್ನು ಬಾರಿಸುವ ಮೂಲಕ ಗಮನ ಸೆಳದರು. ಅವರು ಔಟಾಗುವ ಮೊದಲು 23 ಎಸೆತಗಳಿಗೆ 51 ರನ್ ಬಾರಿಸಿದರು. ಅವರ ಅಬ್ಬರದಿಂದಾಗಿ ಚೆನ್ನೈ ಸ್ಕೋರ್ ಬೋರ್ಡ್ ಬೆಳೆಯಿತು. ಇದು ಹಾಲಿ ಆವೃತ್ತಿಯ ದುಬೆ ಪಾಲಿನ ಸತತ ಎರಡು ಅರ್ಧ ಶತಕ. ಈ ಮೂಲಕ ಅವರು ಮುಂಬರುವ ಟಿ20 ವಿಶ್ವ ಕಪ್ ತಂಡದ ಬಾಗಿಲು ಬಡಿದರು. ಡ್ಯಾರಿಲ್ ಮಿಚೆಲ್ 20 ಎಸೆತಕ್ಕೆ 24 ರನ್ ಬಾರಿಸಿದರೆ, ಯುವ ಬ್ಯಾಟರ್ ಸಮೀರ್ ರಿಜ್ವಿ 6 ಎಸೆತಕ್ಕೆ 14 ರನ್ ಬಾರಿಸಿ ಗಮನ ಸೆಳೆದರು.