ಚೆನ್ನೈ: ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ (IPL 2024 Final) ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ 113 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ನಲ್ಲಿ ಅತ್ಯಂತ ಕಡಿಮೆ ಸ್ಕೋರ್ ಗಳಿಸಿದ ಕಳಪೆ ದಾಖಲೆಯನ್ನು ಬರೆಯಿತು. ಅಲ್ಲದೆ 11 ವರ್ಷಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ನಲ್ಲಿ 125ರನ್ಗಳಿಗೆ 9 ಕಳೆದುಕೊಂಡ ಕಳಪೆ ದಾಖಲೆಯನ್ನು ಮುರಿಯಿತು.
Mitchell Starc doesn't miss out this time around 😎
— IndianPremierLeague (@IPL) May 26, 2024
Andre Russell with the final breakthrough of the innings as Pat Cummins departs for 24
Watch the match LIVE on @JioCinema and @StarSportsIndia 💻📱#TATAIPL | #KKRvSRH | #Final | #TheFinalCall pic.twitter.com/oJCJGBVknX
ಬೆಂಗಳೂರು ವಿರುದ್ಧದ ಲೀಗ್ ಪಂದ್ಯದಲ್ಲಿ 3 ವಿಕೆಟ್ಗೆ 287 ಸ್ಕೋರ್ ಮಾಡುವ ಮೂಲಕ ಐಪಿಎಲ್ನಲ್ಲಿ ಅತ್ಯಧಿಕ ಮೊತ್ತವನ್ನು ಗಳಿಸಿದ ಎಸ್ಆರ್ಎಚ್ ಬ್ಯಾಟರ್ಗಳು ಈ ಋತುವಿನ ಅತಿದೊಡ್ಡ ವೇದಿಕೆಯಲ್ಲಿ ಪ್ರದರ್ಶನ ನೀಡಲು ವಿಫಲರಾದರು ಮತ್ತು ಕಡಿಮೆ ಮೊತ್ತಕ್ಕೆ ಔಟಾದರು. ಕೆಕೆಆರ್ ಪರ ಮಿಚೆಲ್ ಸ್ಟಾರ್ಕ್, ಆಂಡ್ರೆ ರಸೆಲ್ ಹಾಗೂ ಹರ್ಷಿತ್ ರಾಣಾ ಭರ್ಜರಿ ಬೌಲಿಂಗ್ ಮಾಡಿದರು. ಕುತೂಹಲಕಾರಿ ಸಂಗತಿಯೆಂದರೆ, ಐಪಿಎಲ್ 2024 ಫೈನಲ್ನಲ್ಲಿ ಕೆಕೆಆರ್ ತಂಡ ಎಲ್ಲ ಬೌಲರ್ಗಳು ವಿಕೆಟ್ ಪಡೆದರು.
ಐಪಿಎಲ್ ಫೈನಲ್ನಲ್ಲಿ ಕನಿಷ್ಠ ಮೊತ್ತ
113/10 – ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ – 2024
125/9 – ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ – 2013
128/6 – ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ – 2016
129/8 – ಮುಂಬೈ ಇಂಡಿಯನ್ಸ್ ವಿರುದ್ಧ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ – 2017
130/9 – ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ – 2022
2013ರ ಐಪಿಎಲ್ ಫೈನಲ್ನಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 148 ರನ್ಗಳ ಗುರಿ ಬೆನ್ನಟ್ಟುವ ಹಾದಿಯಲ್ಲಿ ಚೆನ್ನೈ 23 ಸೋತಿತ್ತು. ಅದೇನೇ ಇದ್ದರೂ, ಕೋಲ್ಕತಾ ತನ್ನ ಮೂರನೇ ಪ್ರಶಸ್ತಿಯನ್ನು ಗೆಲ್ಲಲು 114 ರನ್ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಬೇಕಾಗಿದೆ. ಮತ್ತೊಂದೆಡೆ, ಹೈದರಾಬಾದ್ ತಂಡವು ಭಾನುವಾರ ಚೆನ್ನೈನಲ್ಲಿ ಇತಿಹಾಸವನ್ನು ಬರೆಯಲು ಬಯಸಿದರೆ ಪವಾಡದ ಅಗತ್ಯವಿದೆ.
ಇದನ್ನೂ ಓದಿ: Hardik Pandya : ಡೈವೋರ್ಸ್ ಗಾಸಿಪ್ ನಡುವೆ ಹಾರ್ದಿಕ್ ಪಾಂಡ್ಯ ನಾಪತ್ತೆ!
ಪಂದ್ಯದಲ್ಲಿ ಏನಾಯಿತು?
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ದೊಡ್ಡ ಸ್ಕೋರ್ ಬಾರಿಸಬೇಕೆನ್ನುವ ಎಸ್ಆರ್ಎಚ್ ತಂಡದ ಆಸೆ ಕಮರಿ ಹೋಯಿತು. ಮಿಚೆಲ್ ಸ್ಟಾರ್ಕ್ ಅವರ ಮೊದಲ ಓವರ್ನಲ್ಲಿಯೇ ಅಭಿಷೇಕ್ ಶರ್ಮಾ 2 ರನ್ ಬಾರಿಸಿ ಔಟಾದರು. ಟ್ರಾವಿಸ್ ಹೆಡ್ ಮತ್ತೊಂದು ಬಾರಿ ವಿಫಲಗೊಂಡು ಶೂನ್ಯಕ್ಕೆ ಔಟಾದರು. ಅವರು ವೈಭವ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಬಳಿಕಬಂದ ರಾಹುಲ್ ತ್ರಿಪಾಠಿ ಸ್ಟಾರ್ಕ್ ಎಸೆತಕ್ಕೆ ಕ್ಯಾಚ್ ನೀಡಿ ಔಟಾಗುವ ಮೊದಲು 9 ರನ್ ಬಾರಿಸಿದ್ದರು. 21 ರನ್ಗೆ 3 ವಿಕೆಟ್ ಕಳೆದುಕೊಂಡ ಎಸ್ಆರ್ಎಚ್ ಸಮಸ್ಯೆಗೆ ಸಿಲುಕಿತು. ಬಳಿಕ ಬಂದ ಮಾರ್ಕ್ರಮ್ 20 ರನ್ ಬಾರಿಸಿದರೆ ಕ್ಲಾಸೆನ್ 16 ರನ್ಗೆ ಸೀಮಿತಗೊಂಡರು.
ಸತತವಾಗಿ ವಿಕೆಟ್ ಕಳೆದುಕೊಂಡ ಕಾರಣ ಎಸ್ಆರ್ಎಚ್ ತಂಡಕ್ಕೆ ಚೇತರಿಸಿಕೊಳ್ಳುವುದಕ್ಕೆ ಅವಕಾಶವೇ ಸಿಗಲಿಲ್ಲ. ಶಹಬಾಜ್ ಅಹಮದ್ 8 ರನ್ಗೆ ಸೀಮಿತಗೊಂಡರೆ ಇಂಪ್ಯಾಕ್ಟ್ ಪ್ಲೇಯರ್ ಸಮದ್ 4 ರನ್ಗೆ ಔಟಾದರು. ಅಂತಿಮವಾಗಿ ನಾಯಕ ಪ್ಯಾಟ್ ಕಮಿನ್ಸ್ 19 ಎಸೆತಕ್ಕೆ 24 ರನ್ ಬಾರಿಸಿ ತಂಡದ ಮೊತ್ತ 100ರ ಗಡಿ ದಾಟಲು ನೆರವಾದರು.