Site icon Vistara News

IPL 2024 : ಚೆನ್ನೈ ವಿರುದ್ಧ ಗುಜರಾತ್​ಗೆ 35 ರನ್ ವಿಜಯ, ಆರ್​​ಸಿಬಿ ಪ್ಲೇಆಫ್​ ಪ್ರವೇಶಕ್ಕೆ ಮತ್ತೊಂದು ಸವಾಲು

IPL 2024

ಅಹಮದಾಬಾದ್​: ಆರಂಭಿಕ ಜೋಡಿ ಸಾಯಿ ಸುದರ್ಶನ್​​ (103 ರನ್​, 5 ಫೋರ್​, 7 ಸಿಕ್ಸರ್​) ಶುಭ್​ಮನ್​ ಗಿಲ್​​ (104 ರನ್​, 9 ಪೋರ್​, 6 ಸಿಕ್ಸರ್​) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಮಿಂಚಿದ ಗುಜರಾತ್ ಜೈಂಟ್ಸ್​ ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ 35 ರನ್​ಗಳ ಗೆಲುವು ಸಾಧಿಸಿದೆ. ಇದರೊಂದಿಗೆ ಆರ್​ಸಿಬಿಯ ಪ್ಲೇಆಫ್​ ಪ್ರವೇಶಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಗುಜರಾತ್​ ಜೈಂಟ್ಸ್ ಕೂಡ 10 ಅಂಕಗಳನ್ನು ಪಡೆದಿದ್ದು ಆರ್​ಸಿಬಿಯ ಸಮಾನವಾಗಿ ನಿಂತಿದೆ. ಹೀಗಾಗಿ ಪ್ಲೇಆಫ್​ಗೆ ಪೈಪೋಟಿ ಅಧಿಕವಾಗಿದೆ. ಈ ಗೆಲುವಿನೊಂದಿಗೆ ಗುಜರಾತ್ ತಂಡ ಎರಡು ಸ್ಥಾನ ಮೇಲಕ್ಕೇರಿ 8ನೇ ಸ್ಥಾನಕ್ಕೆ ಬಂದಿದೆ. ಮುಂಬಯಿ 9 ರಲ್ಲಿ ಇದ್ದರೆ ಪಂಜಾಬ್​ 10ರಲ್ಲಿದೆ. ಚೆನ್ನೈ ನಾಲ್ಕನೇ ಸ್ಥಾನದಲ್ಲಿಯೇ ಇದೆ.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಗುಜರಾತ್ ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗೆ 231 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​​ಗೆ 196 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ಅಬ್ಬರ ಪ್ರದರ್ಶನ ನೀಡಿತು. ಆರಂಭಿಕರಾದ ಸಾಯಿ ಸುದರ್ಶನ್​ ಹಾಗೂ ನಾಯಕ ಗಿಲ್ ಭರ್ಜರಿ ಪ್ರದರ್ಶ ನೀಡಿದರು. ಅವರಿಬ್ಬರೂ ಶತಕ ಬಾರಿಸುವ ಮೂಲಕ ಭರ್ಜರಿ ಪ್ರದರ್ಶನ ನೀಡಿದರು. ಗಿಲ್ ಹಾಗೂ ಸಾಯಿ ಸುದರ್ಶನ್​ ತಲಾ 50 ಎಸೆತಗಳಲ್ಲಿ ಶತಕ ಬಾರಿಸಿದರು. ಹೀಗಾಗಿ ಮೊದಲ ವಿಕೆಟ್​ಗೆ ಚೆನ್ನೈ ತಂಡ 210 ರನ್ ಬಾರಿಸಿತು. ಬಳಿಕ ಡೇವಿಲ್​ ಮಿಲ್ಲರ್ 16 ರನ್ ಬಾರಿಸಿದರೆ ಶಾರುಖ್ ಖಾನ್ 3 ರನ್ ಗಳಿಸಿದರು.

ಇದನ್ನೂ ಓದಿ: Mr. & Mrs. Mahi : ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್​ ನಟನೆಯ ಮಿಸ್ಟರ್& ಮಿಸೆಸ್​ ಮಹಿ’ ಬಿಡುಗಡೆ ದಿನಾಂಕ ಪ್ರಕಟ

ಬ್ಯಾಟಿಂಗ್ ವೈಫಲ್ಯ

ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಚೆನ್ನೈ ತಂಡ ಆರಂಭದಲ್ಲೇ ಸತತವಾಗಿ ವಿಕೆಟ್​ಗಳನ್ನು ಕಳೆದುಕೊಂಡಿತು. ಅಜಿಂಕ್ಯ ರಹಾನೆ 1 ರನ್​ಗೆ ಔಟಾದರೆ, ರಚಿನ್ ರವೀಂದ್ರ ಕೂಡ ಅದೇ ಮೊತ್ತಕ್ಕೆ ಔಟಾದರು. ಅವರು ಡೇವಿಡ್​ ಮಿಲ್ಲರ್ ಮಾಡಿರುವ ಅಮೋಘ ರನ್​ಔಟ್​ಗೆ ಬಲಿಯಾದರು. ನಾಯ್ಕ ಋತುರಾಜ್ ಕೊಡುಗೆ ಕೂಡ ಶೂನ್ಯ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಡ್ಯಾರಿಲ್​ ಮಿಚೆಲ್ (34 ಎಸೆತಕ್ಕೆ 63 ರನ್ ) ಅರ್ಧ ಶತಕ ಬಾರಿಸಿದರೆ ಮೊಯಿಲ್ ಅಲಿ ಕೂಡ 56 ರನ್ ಬಾರಿಸಿದರು. ಇವರಿಬ್ಬರೂ ನಾಲ್ಕನೇ ವಿಕೆಟ್​ಗೆ 109 ರನ್ ಬಾರಿಸಿದರು. ಆದರೆ ಇವರ ಜತೆಯಾಟ ಮುರಿದ ಬಳಿಕ ಒಂದೊಂದೆ ವಿಕೆಟ್​ಗಳು ಉರುಳಿದವು. ಶಿವಂ ದುಬೆ 21 ರನ್ ಹೊಡೆದರೆ, ರವೀಂದ್ರ ಜಡೇಜಾ 18 ರನ್​ಗೆ ಸೀಮಿತಗೊಂಡರು. ಕೊನೆಯಲ್ಲಿ ಧೋನಿ 11 ಎಸೆತಕ್ಕೆ 26 ರನ್ ಬಾರಿಸಿದರೂ ತಂಡಕ್ಕೆ ಅದರಿಂದ ಗೆಲವು ಪಡೆಯಲು ಸಾಧ್ಯವಾಗಲಿಲ್ಲ.

ಮೋಹಿತ್ ಶರ್ಮಾ 31 ರನ್​ ಗೆ 3 ವಿಕೆಟ್ ಪಡೆದರೆ ರಶೀದ್ ಖಾನ್​ 3 ರನ್ ನೀಡಿ 2 ವಿಕೆಟ್ ಪಡೆದರು.

Exit mobile version