Site icon Vistara News

IPL 2024: ರೋಹಿತ್​ ಶರ್ಮಗೆ ಹಾರ್ದಿಕ್​ ಆರ್ಡರ್​; ನಾಯಿಗೆ ಹೋಲಿಸಿದ ಫ್ಯಾನ್ಸ್

Gujarat Titans vs Mumbai Indians

ಅಹಮದಾಬಾದ್​: ಭಾನುವಾರ ನಡೆದ ಐಪಿಎಲ್(IPL 2024)​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್​ ಟೈಟಾನ್ಸ್​ ವಿರುದ್ಧ ಸೋಲು ಕಂಡಿತು. ಇದೇ ಪಂದ್ಯದಲ್ಲಿ ಮುಂಬೈಯ ನೂತನ ನಾಯಕ ಹಾರ್ದಿಕ್​ ಪಾಂಡ್ಯ(Hardik Pandya) ಅವರು ಮಾಜಿ ನಾಯಕ ರೋಹಿತ್​ ಶರ್ಮ(Rohit Sharma) ಅವರನ್ನು ನಡೆಸಿಕೊಂಡ ರೀತಿಗೆ ಕ್ರಿಕೆಟ್​ ಅಭಿಮಾನಿಗಳು ಪಾಂಡ್ಯ ವಿರುದ್ಧ ಕಿಡಿ ಕಾರಿದ್ದಾರೆ.

ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಅವರು ಗುಜರಾತ್​ ಬ್ಯಾಟಿಂಗ್​ ವೇಳೆ ರೋಹಿತ್​ ಅವರನ್ನು ಹಲವು ಬಾರಿ ಫೀಲ್ಡಿಂಗ್​ ಬದಲಿಸಿದರು. ಒಮ್ಮೆ ಸ್ಲಿಪ್, ಮತ್ತೊಮ್ಮೆ ಲಾಂಗ್ ಆನ್​, ಇನ್ನೊಮ್ಮೆ ಲೆಗ್​ ಸೈಡ್, ಮಿಡ್ ವಿಕೆಟ್​ನತ್ತ ಹೀಗೆ ಮೈದಾನದ ಮೂಲೆ ಮೂಲೆಗೂ ಓಡಿಸಿದರು.

ಇನಿಂಗ್ಸ್​ನ ಅಂತಿಮ ಓವರ್​ನಲ್ಲಿ 30 ಯಾರ್ಡ್​ ಸರ್ಕಲ್​ನಲ್ಲಿ ಫೀಲ್ಡಿಂಗ್​ ಮಾಡುತ್ತಿದ್ದ ರೋಹಿತ್​ ಅವರನ್ನು ಪಾಂಡ್ಯ ಏಕಾಏಕಿ ಲಾಂಗ್​ ಆನ್​ನಲ್ಲಿ ಫೀಲ್ಡಿಂಗ್​ ಮಾಡುವಂತೆ ಸೂಚನೆ ನೀಡಿದರು. ಒಮ್ಮ ಗೊಂದಲಕ್ಕೆ ಒಳಗಾದ ರೋಹಿತ್​ ಕೈ ಸನ್ನೆಯ ಮೂಲಕ ನನಗೆ ಹೇಳಿದ್ದ ಎಂದು ಕೇಳಿದರು. ಈ ವೇಳೆ ಪಾಂಡ್ಯ ಹೌದು ನೀವೇ ಎಂದು ಕೈ ಬೆರಳು ತೋರಿಸಿದರು. ನಾಯಕನ ಸೂಚನೆಯಂತೆ ರೋಹಿತ್​ ಬೌಂಡರಿ ಲೈನ್​ಗೆ ಹೋದ ಬಳಿಕವೂ ಕೂಡ ಪಾಂಡ್ಯ ಮತ್ತೆ ಅಲ್ಲಿಂದ ಬೇರೆ ಕಡೆ ಹೋಗುವಂತೆ ಹೇಳಿದರು. ಈ ವಿಡಿಯೊ ವೈರಲ್​ ಆಗಿದ್ದು ಇದು ಪಾಂಡ್ಯ ಉದ್ದೇಶ ಪೂರ್ವಕವಾಗಿಯೇ ಹೀಗೆ ಮಾಡಿದ್ದು ಎಂದು ರೋಹಿತ್​ ಅವರ ಅಭಿಮಾನಿಗಳು ಪಾಂಡ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಹಿತ್​ ಮತ್ತು ಜಸ್​ಪ್ರೀತ್​ ಬುಮ್ರಾ ಅವರು ನೀಡಿದ ಸಲಹೆಯನ್ನು ಕೂಡ ಪಾಂಡ್ಯ ಕ್ಯಾರೆ ಎನ್ನದೆ ದರ್ಪ ತೋರಿದ ಘಟನೆಯೂ ಈ ಪಂದ್ಯದಲ್ಲಿ ಕಂಡುಬಂದಿತು. ಹಲವು ಪ್ರಯೋಗಗಳನ್ನು ಮಾಡಿದ ಪಾಂಡ್ಯ ಸೋಲಿನಿಂದ ಕೈ ಸುಟ್ಟುಕೊಂಡರು. ಪ್ರಧಾನ ಬೌಲರ್​ ಜಸ್​ಪ್ರೀತ್​ ಬುಮ್ರಾಗೆ ಇನಿಂಗ್ಸ್​ನ ಮೊದಲ ಓವರ್ ನೀಡುವ ಬದಲು ತಾನೆ ದೊಡ್ಡ ಹೀರೊ ಎನ್ನುವ ರೀತಿಯಲ್ಲಿ ಪಾಂಡ್ಯ ಮೊದಲ ಓವರ್​ ಎಸೆದು ವೃದ್ಧಿಮಾನ್​ ಸಾಹಾ ಅವರಿಂದ ಸರಿಯಾಗಿ ರನ್​ ಹೊಡೆಸಿಕೊಂಡರು.

ಇದನ್ನೂ ಓದಿ IPL 2024: ಈ ಲೆಕ್ಕಾಚಾರದಲ್ಲಿ ಇಂದು ಆರ್​ಸಿಬಿಗೆ ಗೆಲುವು ಖಚಿತ!

ನಾಯಿಗೆ ಪಾಂಡ್ಯ ಎಂದು ಕರೆದ ಪ್ರೇಕ್ಷಕರು


ಇದೇ ಪಂದ್ಯದಲ್ಲಿ ನಾಯಿಯೊಂದು ಮೈದಾನಕ್ಕೆ ನುಗ್ಗಿತು. ಈ ವೇಳೆ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ನಾಯಿ ಓಡುತ್ತಿರುವುದನ್ನು ಕಂಡು ಹಾರ್ದಿಕ್​…ಹಾರ್ದಿಕ್​ ಎಂದು ಜೋರಾಗಿ ಕೂಗುವ ಮೂಲಕ ಪಾಂಡ್ಯ ಅವರನ್ನು ನಾಯಿಗೆ ಹೋಲಿಸಿದ್ದಾರೆ. ಈ ವಿಡಿಯೊ ಕೂಡ ವೈರಲ್​ ಆಗಿದೆ.

Exit mobile version