Site icon Vistara News

Hardik Pandya: ಐಪಿಎಲ್ ಹೈಡ್ರಾಮಾ; ಮುಂಬೈಗೆ ಹಾರಿದ ಹಾರ್ದಿಕ್‌ ಪಾಂಡ್ಯ, ಭಾರಿ ‌’ಡೀಲ್’

hardik pandya

IPL 2024: Hardik Pandya traded to Mumbai Indians in all-cash deal

ಮುಂಬೈ: ಚುಟುಕು ಕ್ರಿಕೆಟ್‌ ಟೂರ್ನಿ, ಬಿಸಿಸಿಐನ ಬಿಲಿಯನ್‌ ಡಾಲರ್‌ ಬೇಬಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2024) ಆರಂಭವಾಗುವ ಮೊದಲೇ ಹೈಡ್ರಾಮಾ ಶುರುವಾಗಿದೆ. ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ (Hardik Pandya) ಅವರನ್ನು ಗುಜರಾತ್‌ ಟೈಟಾನ್ಸ್‌ (Gujarat Titans) ತಂಡವು ಉಳಿಸಿಕೊಂಡರೂ ಅವರು ಮುಂಬೈ ಇಂಡಿಯನ್ಸ್‌ (Mumbai Indians) ತಂಡಕ್ಕೆ ಹಾರಿದ್ದಾರೆ. ಒಂದಷ್ಟು ಪೇಪರ್‌ವರ್ಕ್‌ ಇರುವುದರಿಂದ ಹಾರ್ದಿಕ್‌ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ ತಂಡ ಸೇರಿರುವ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂದು ಮೂಲಗಳು ತಿಳಿಸಿವೆ.

ಗುಜರಾತ್‌ ಟೈಟಾನ್ಸ್‌ ತಂಡವು ಹಾರ್ದಿಕ್‌ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ ಪಾಲಾಗಿರುವುದನ್ನು ದೃಢಪಡಿಸಿದೆ. “ಮುಂಬೈ ಇಂಡಿಯನ್ಸ್‌ ಸೇರಿದ ಹಾರ್ದಿಕ್‌ ಪಾಂಡ್ಯ ಅವರಿಗೆ ಅಭಿನಂದನೆಗಳು. ತಂಡವು ನಿಮ್ಮನ್ನು ಮಿಸ್‌ ಮಾಡಿಕೊಳ್ಳಲಿದೆ” ಎಂದು ಪೋಸ್ಟ್‌ ಮಾಡಿದೆ. ಡಿಸೆಂಬರ್‌ 11ರವರೆಗೆ ಟ್ರೇಡಿಂಗ್‌ ವಿಂಡೋ ತೆರೆದಿರುವ ಕಾರಣ ಇನ್ನಷ್ಟು ಅಚ್ಚರಿಗಳು ಕಾದಿವೆ ಎಂದು ಹೇಳಲಾಗುತ್ತಿದೆ.

ಹಾರ್ದಿಕ್‌ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ ತಂಡ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಟ್ರೇಡಿಂಗ್‌ ವಿಂಡೋ ಮೂಲಕ ಮುಂಬೈ ಇಂಡಿಯನ್ಸ್‌ ತಂಡವು ಹಾರ್ದಿಕ್‌ ಪಾಂಡ್ಯ ಅವರನ್ನು ಖರೀದಿಸುತ್ತದೆ ಎಂದೇ ಹೇಳಲಾಗಿತ್ತು. ಆದರೆ, ಗುಜರಾತ್‌ ಟೈಟನ್ಸ್‌ ತಂಡವು ಏಕಾಏಕಿ ರಿಟೇನ್‌ ಆದ ಆಟಗಾರರ ಪಟ್ಟಿ ಬಿಡುಗಡೆ ಮಾಡಿತ್ತು. ಹಾರ್ದಿಕ್‌ ಪಾಂಡ್ಯ ಅವರನ್ನೇ ನಾಯಕ ಎಂದು ಘೋಷಿಸಿತ್ತು. ಆದರೆ, ದಿಢೀರ್‌ ಬೆಳವಣಿಗೆಯಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಹಾರ್ದಿಕ್‌ ಪಾಂಡ್ಯ ಅವರನ್ನು ಖರೀದಿಸಿದೆ.

ಹಾರ್ದಿಕ್‌ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ ತಂಡವನ್ನು ಸೇರುವುದು ಬಹುತೇಕ ಖಚಿತವಾದ ಕಾರಣ ಕ್ಯಾಮೆರೂನ್ ಗ್ರೀನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಮಾರಾಟ ಮಾಡಲು ಮುಂಬೈ ಇಂಡಿಯನ್ಸ್ ಮುಂದಾಗಿದೆ ಎನ್ನಲಾಗಿದೆ. ಇದರಿಂದ ಅವರಿಗೆ ಹೆಚ್ಚುವರಿ 17.5 ಕೋಟಿ ರೂಪಾಯಿ ಉಳಿತಾಯವಾಗುತ್ತದೆ. 

ಹಾರ್ದಿಕ್ ಪಾಂಡ್ಯ 2015 ರಲ್ಲಿ ಮುಂಬೈ ಇಂಡಿಯನ್ಸ್ ಪರ ಪದಾರ್ಪಣೆ ಮಾಡಿದ್ದರು. ಐಪಿಎಲ್ 2021ರವರೆಗೆ ಫ್ರಾಂಚೈಸಿಯೊಂದಿಗೆ ಇದ್ದರು. ಆದರೆ ಐಪಿಎಲ್ 2022 ಮೆಗಾ ಹರಾಜಿಗೆ ಮುಂಚಿತವಾಗಿ, ಮುಂಬೈ ಬರೋಡಾ ಕ್ರಿಕೆಟಿಗನನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತ್ತು. ಎರಡು ಹೊಸ ಫ್ರಾಂಚೈಸಿಗಳಲ್ಲಿ ಒಂದಾದ ಗುಜರಾತ್ ಟೈಟಾನ್ಸ್‌ ಹರಾಜಿಗೆ ಮುಂಚಿತವಾಗಿ ಅವರನ್ನು ಆಯ್ಕೆ ಮಾಡಿತ್ತು ಮತ್ತು ಅವರನ್ನು ಅವರ ನಾಯಕನನ್ನಾಗಿ ಹೆಸರಿಸಿತ್ತು.

ಇದನ್ನೂ ಓದಿ: Hardik Pandya: ಸದ್ಯಕ್ಕಿಲ್ಲ ಹಾರ್ದಿಕ್​ ಪಾಂಡ್ಯ ಕ್ರಿಕೆಟ್​ ಕಮ್​ಬ್ಯಾಕ್​; ಈ ಟೂರ್ನಿಯಲ್ಲಿ ಕಣಕ್ಕೆ!

ಹಾರ್ದಿಕ್ ಉತ್ತಮ ನಾಯಕತ್ವ ವಹಿಸಿ. ಜಿಟಿಯನ್ನು ತಮ್ಮ ಚೊಚ್ಚಲ ಋತುವಿನಲ್ಲಿ ಐಪಿಎಲ್ ಪ್ರಶಸ್ತಿ ಕಡೆಗೆ ಕೊಂಡೊಯ್ದರು .ನಂತರ ಗುಜರಾತ್ ಐಪಿಎಲ್ 2023 ರ ಫೈನಲ್​ಗೆ ಪ್ರವೇಶಿಸಿ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ ಸೋತು ಈ ಸಾಧನೆಯನ್ನು ರನ್ನರ್​ಅಪ್​ ಆಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version