Site icon Vistara News

IPL 2024: ಹಾರ್ದಿಕ್ ಪಾಂಡ್ಯ ಅತಿರೇಕದ ವರ್ತನೆ ಸರಿ ಎನಿಸಿರಲಿಲ್ಲ ಎಂದ ಶಮಿ

hardik-Shami

ಲಕ್ನೋ: ಗುಜರಾತ್ ಟೈಟಾನ್ಸ್(gujarat titans)​ ಪರ​ ಐಪಿಎಲ್(IPL 2024)​ ಆಡುವ ವೇಳೆ ನಡೆದ ಘಟನೆಯೊಂದನ್ನು ಹಿರಿಯ ಆಟಗಾರ ಮೊಹಮ್ಮದ್​ ಶಮಿ(Mohammed Shami) ಮೆಲುಕು ಹಾಕಿದ್ದಾರೆ. ತಂಡದ ನಾಯಕನಾಗಿದ್ದ ಹಾರ್ದಿಕ್​ ಪಾಂಡ್ಯ(hardik pandya) ಅವರ ಅತಿರೇಕದ ವರ್ತನೆಯಿಂದ ತುಂಬಾ ಬೇಸರವಾಗಿತ್ತು ಎಂದು ಹೇಳಿದ್ದಾರೆ. ಈ ವಿಡಿಯೊ ವೈರಲ್​(viral cricket video) ಆಗಿದೆ.

ಗೌರವ್​ ಕಪೂರ್​ ಜತೆಗಿನ ಪಾಡ್​ಕಾಸ್ಟ್​ನಲ್ಲಿ ಮಾತನಾಡಿದ ಶಮಿ, ಹಾರ್ದಿಕ್ ತನ್ನ ಮೇಲೆ ವಾಗ್ದಾಳಿ ನಡೆಸಿದ್ದನ್ನು ನೋಡಿದಾಗ ನನಗೆ ಸರಿ ಎನಿಸಲಿಲ್ಲ. ಮೈದಾನದಲ್ಲಿ ಯಾವುದೇ ಆಟಗಾರನ ಮೇಲೆ ಕ್ಯಾಮೆರಾ ಮುಂದೆ ರೇಗುವುದು ನನಗೆ ಇಷ್ಟವಿಲ್ಲ. ಪಂದ್ಯ ಮುಕ್ತಾಯದ ಬಳಿಕ ನಾನು ಹಾರ್ದಿಕ್ ಮತ್ತು ತಂಡದ ಮ್ಯಾನೇಜ್‌ಮೆಂಟ್‌ಗೆ ಈ ಬಗ್ಗೆ ತೀಕ್ಷ್ಣ ಮಾತುಗಳಿಂದಲೇ ಉತ್ತರಿಸಿದೆ ಎಂದು ಶಮಿ ಹೇಳಿದರು.

ಅಂದಿನ ಪಂದ್ಯದಲ್ಲಿ ಶಮಿ ಅವರು ಮಿಸ್​ ಫೀಲ್ಡಿಂಗ್​ ನಡೆಸಿದ್ದರು. ಇದೇ ವೇಳೆ ಕೋಪಗೊಂಡ ಹಾರ್ದಿಕ್​ ಪಾಂಡ್ಯ ಅವರು ಶಮಿ ಅವರ ಮೇಲೆ ರೇಗಾಡಿದ್ದರು. ಇದು ಫೀಲ್ಡ್​ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಫಿಟ್​ನೆಸ್​ ರಹಸ್ಯ ತಿಳಿಸಿದ ಶಮಿ

ಟೀಮ್ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ ಅವರು ತಮ್ಮ ಫಿಟ್​ನೆಸ್​ ರಹಸ್ಯವನ್ನು ಬಹಿರಂಗಪಡಿಸಿದ್ದರು. ಜಿಮ್‌ನಲ್ಲಿ ನನಗಿಂತ ಹೆಚ್ಚಿನ ತೂಕವನ್ನು ಬೇರೆ ಯಾವ ಕ್ರಿಕೆಟಿಗನೂ ಎತ್ತುವುದಿಲ್ಲ ಎಂದು ಹೇಳಿದ್ದರು. ಆಜ್​ ತಕ್​ ಸಂದರ್ಶನದಲ್ಲಿ ಬೌಲಿಂಗ್​ ಯಶಸ್ಸಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಶಮಿ,​” ನಾನು 750 ಕೆಜಿ ಲೆಗ್ ಪ್ರೆಸ್ ಮಾಡಬಲ್ಲೆ. ಜಿಮ್‌ನಲ್ಲಿ ನನಗಿಂತ ಹೆಚ್ಚಿನ ತೂಕವನ್ನು ಬೇರೆ ಯಾವುದೇ ಕ್ರಿಕೆಟಿಗರು ಎತ್ತುದಿಲ್ಲ. ಈ ವಿಚಾರವನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಇಷ್ಟಪಡುವುದಿಲ್ಲ. ಆದ್ದರಿಂದ ಜನರಿಗೆ ಇದು ತಿಳಿಯುವುದಿಲ್ಲ” ಎಂದು ಹೇಳಿದ್ದರು.

ಇದನ್ನೂ ಒದಿ IPL 2024: ಹರಾಜಿನಲ್ಲಿ ಮಾರಾಟವಾಗದ ಟಿ20 ಕ್ರಿಕೆಟ್​ನ ನಂಬರ್ 1 ಬೌಲರ್

ವಿರಾಟ್​ ಕೊಹ್ಲಿಯಂತೆ ತಾನು ಕೂಟ ಫಿಟ್​ ಆಗಿದ್ದೇನೆ. ಅವರಿಗೂ ಕೂಡ ಲೆಗ್ ಪ್ರೆಸ್​ನಲ್ಲಿ ನನಗಿಂತ ಹೆಚ್ಚು ಭಾರ ಎತ್ತಲಾಗುದಿಲ್ಲ. ಸದ್ಯಕ್ಕೆ ಭಾರತ ತಂಡದಲ್ಲಿ ಕಾಲಿನ ಮೂಲಕ ಅತಿ ಹೆಚ್ಚು ಭಾರತದ ಲೆಗ್ ಪ್ರೆಸ್ ಮಾಡುವ ಆಟಗಾರ ನಾನಾಗಿದ್ದೇನೆ. ಹೀಗಾಗಿ ನನಗೆ ವೇಗವಾಗಿ ಓಡಿ ಬಂದು ಉತ್ತಮ ಲಯದಲ್ಲಿ ಬೌಲಿಂಗ್​ ನಡೆಸಲು ಸಾಧ್ಯವಾಗುತ್ತದೆ ಎಂದು ಶಮಿ ತಮ್ಮ ಬೌಲಿಂಗ್​ ಸಾಮರ್ಥ್ಯದ ಹಿಂದಿನ ಗುಟ್ಟನ್ನು ರಟ್ಟು ಮಾಡಿದ್ದರು.

ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ಕೇವಲ 7 ಪಂದ್ಯಗಳನ್ನು ಆಡಿ 24 ವಿಕೆಟ್‌ಗಳನ್ನು ಕಬಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ ಎನಿಸಿಕೊಂಡಿದ್ದರು. ಎರಡು ಬಾರಿ ಐದು ವಿಕೆಟ್‌ಗಳು ಮತ್ತು ಒಂದು ಬಾರಿ ಏಳು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು. ಶಮಿಯ ಘಾತಕ ಬೌಲಿಂಗ್​ ಮುಂದೆ ಎದುರಾಳಿ ತಂಡದ ಬ್ಯಾಟರ್​ಗಳು ರನ್​ ಗಳಿಸಲು ಪರದಾಟ ನಡೆಸಿದ್ದರು.​ ನ್ಯೂಜಿಲ್ಯಾಂಡ್​ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಬರೋಬ್ಬರಿ 7 ವಿಕೆಟ್​ ಉರುಳಿಸಿದ್ದರು.

Exit mobile version