Site icon Vistara News

IPL 2024 : ಧೋನಿಯನ್ನು ಬೌಲ್ಡ್​ ಮಾಡಿ ಸಂಭ್ರಮಿಸದ ಹರ್ಷಲ್​ ಪಟೇಲ್​; ಕಾರಣ ನೀಡಿದ ಬೌಲರ್​

IPL 2024

ಧರ್ಮಶಾಲಾ: ಇಲ್ಲಿ ನಡೆದ ಐಪಿಎಲ್ 2024ರ (IPL 2024) 53 ನೇ ಪಂದ್ಯದಲ್ಲಿ ಸಿಎಸ್​​ಕೆ ಇನ್ನಿಂಗ್ಸ್​​ನ ಡೆತ್ ಓವರ್​ಗಳಲ್ಲಿ ಹರ್ಷಲ್ ಪಟೇಲ್ ಮಿಂಚಿದ್ದರು. ಅವರು ಸಿಎಸ್​ಕೆ ಮಾಜಿ ನಾಯಕ ಎಂಎಸ್ ಧೋನಿಯನ್ನು ನಿಧಾನಗತಿಯ ಯಾರ್ಕರ್ನಿಂದ ಔಟ್​ ಮಾಡಿದರು. ಅದೇ ರೀತಿ ಪಂಜಾಬ್ ಕಿಂಗ್ಸ್ ತಂಡದ ಡ್ಯಾರಿಲ್ ಮಿಚೆಲ್ ಮತ್ತು ಶಾರ್ದೂಲ್ ಠಾಕೂರ್ ಅವರ ವಿಕೆಟ್ಗಳನ್ನು ಪಡೆದು ‘ಯೆಲ್ಲೋ ಬ್ರಿಗೇಡ್’ ಅನ್ನು 167 ರನ್​ಗಳಿಗೆ ನಿಯಂತ್ರಿಸಲು ನೆರವಾದರು. ಕುತೂಹಲಕಾರಿ ಸಂಗತಿಯೆಂದರೆ, ಡೇಂಜರ್ ಮ್ಯಾನ್ ಎಂಎಸ್ ಧೋನಿಯನ್ನು ಔಟ್ ಮಾಡಿದ ನಂತರವೂ ಪಟೇಲ್ ಹೆಚ್ಚು ಸಂಭ್ರಮಾಚರಣೆ ಮಾಡಲಿಲ್ಲ. ಅದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ.

ಇನ್ನಿಂಗ್ಸ್ ಮಧ್ಯದ ವಿರಾಮದ ಸಮಯದಲ್ಲಿ, 33 ವರ್ಷದ ಆಟಗಾರ ವೀಕ್ಷಕವಿವರಣೆಗಾರರು ಈ ಬಗ್ಗೆ ಕೇಳಿದಾಗ ತಮ್ಮ ನಿಧಾನ ಸಂಭ್ರಮಾಚರಣೆಯ ಕುರಿತು ಮಾತನಾಡಿದ್ದಾರೆ. ಭಾರತ ತಂಡದ ಮಾಜಿ ನಾಯಕನ ಬಗ್ಗೆ “ತುಂಬಾ ಗೌರವ” ಇದೆ, ಅದಕ್ಕಾಗಿ ಹೆಚ್ಚು ಸಂಭ್ರಮಿಸಲಿಲ್ಲ ಎಂದು ಹೇಳಿದರು. ಪಂಜಾಬ್ ಕಿಂಗ್ಸ್ ವೇಗದ ಬೌಲರ್ ಸಿಎಸ್​ಕೆ ದಂತಕಥೆಯ ಮೇಲಿನ ಅಭಿಮಾನವನ್ನು ಅವರು ಮೃದು ಆಚರಣೆಯ ಮೂಲಕ ಪ್ರಸ್ತುತಪಡಿಸಿದರು.

ಇದಕ್ಕೂ ಮುನ್ನ ಹರ್ಷಲ್ ಪಟೇಲ್ ನ್ಯೂಜಿಲೆಂಡ್ ಮೂಲದ ಸಿಎಸ್​​ಕೆ ತಂಡದ ಮೂರನೇ ಕ್ರಮಾಂಕದ ಬ್ಯಾಟರ್​ ಡ್ಯಾರಿಲ್ ಮಿಚೆಲ್ ಅವರನ್ನು ಲೆಂಗ್ತ್ ಎಸೆತದಲ್ಲಿ ಬಲೆಗೆ ಬೀಳಿಸಿದ್ದರು. ಇದಲ್ಲದೆ, ಪಟೇಲ್ ತಮ್ಮ ಸ್ಪೆಲ್​​ನ ಅಂತಿಮ ಓವರ್ ಮತ್ತು ಸಿಎಸ್​​ಕೆ ಇನ್ನಿಂಗ್ಸ್​​ನ ಕೊನೆಯ ಓವರ್​ನಲ್ಲಿ ಶಾರ್ದೂಲ್ ಠಾಕೂರ್ ಮತ್ತು ಎಂಎಸ್ ಧೋನಿ ಅವರನ್ನು ಸತತ ಎಸೆತಗಳಲ್ಲಿ ಔಟ್​ ಮಾಡಿದರು.

ಪಂದ್ಯದಲ್ಲಿ ಏನಾಯಿತು?

ಧರ್ಮಶಾಲಾ: ಚೆನ್ನೈ ಸೂಪರ್ ಕಿಂಗ್ಸ್​ ತಂಡ ತನ್ನ ಹಿಂದಿನ ಪಂದ್ಯದ ಸೋಲಿಗೆ ಪ್ರತಿಕಾರ ತೀರಿಸಿಕೊಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್​ (IPL 2024) ಪಂದ್ಯದಲ್ಲಿ 28 ರನ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ ಹಿಂದಿನ ಪಂದ್ಯದಲ್ಲಿ ಅದೇ ತಂಡದ ವಿರುದ್ಧ ಅನುಭವಿಸಿದ್ದ 7 ವಿಕೆಟ್ ಸೋಲಿಗೆ ಉತ್ತರ ಹೇಳಿದೆ. ಇದರೊಂದಿಗೆ ಐಪಿಎಲ್‌ 2024ರ ಆವೃತ್ತಿಯಲ್ಲಿ ಪ್ಲೇ ಆಫ್‌ ಆಸೆಯನ್ನು ಇನ್ನೂ ಜೀವಂತವಾಗಿ ಇರಿಸಿಕೊಂಡಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಅತ್ತ ಸತತ ಎರಡು ಪಂದ್ಯಗಳಲ್ಲಿ ಗೆದ್ದು ಪ್ಲೇ ಆಫ್‌ ಹಂತಕ್ಕೇರುವ ಕನಸು ಹೊತ್ತಿದ್ದ ಸ್ಯಾಮ್‌ ಕರನ್‌ ಪಡೆ, ಸಿಎಸ್‌ಕೆ ವಿರುದ್ಧ ಸೋಲಿನೊಂದಿಗೆ ಮತ್ತೆ ಹಿನ್ನಡೆ ಅನುಭವಿಸಿದೆ.

ಇದನ್ನೂ ಓದಿ: IPL 2024 : ಚೆನ್ನೈ ತಂಡದ ಮಾರಕ ಬೌಲರ್ ಮಹೀಶ್​ ಪತಿರಾನಾ​ ಐಪಿಎಲ್​ನಿಂದ ಹೊರಕ್ಕೆ

ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯಲ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್‌ ಬೀಸಿದ ರುತುರಾಜ್‌ ಪಡೆಯುವ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 167 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌, ಸತತವಾಗಿ ವಿಕೆಟ್‌ ಕಳೆದುಕೊಂಡು ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಲಷ್ಟೇ ಶಕ್ತವಾಯ್ತು.

ಬ್ಯಾಟಿಂಗ್‌ ಆಹ್ವಾನ ಪಡೆದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಗಲಲ್ಲ. ಅಜಿಂಕ್ಯ ರಹಾನೆ 9 ರನ್‌ ಗಳಿಸಿ ಔಟಾದರು. ಈ ವೇಳೆ ಒಂದಾದ ನಾಯಕ ಋತುರಾಜ್‌ ಹಾಗೂ ಡ್ಯಾರಿಲ್​ ಮಿಚೆಲ್‌ ಅರ್ಧಶತಕದ ಜೊತೆಯಾಟ ನೀಡಿದರು. 21 ಎಸೆತಗಳಲ್ಲಿ 32 ರನ್‌ ಗಳಿಸಿ ಗಾಯಕ್ವಾಡ್‌ ಔಟಾದರೆ, ಅವರ ಬೆನ್ನಲ್ಲೇ ಶಿವಂ ದುಬೆ ಗೋಲ್ಡನ್‌ ಡಕ್‌ ಆದರು. ಈ ವೇಳೆ ಚೆನ್ನೈ ತಂಡಕ್ಕೆ ಆಘಾತವಾಯಿತು. ಅಲ್ಲದೆ ದುಬೆ ಸತತ ಎರಡು ಪಂದ್ಯಗಳಲ್ಲಿ ಮೊದಲ ಎಸೆತದಲ್ಲೇ ಔಟಾದರು. ಮಿಚೆಲ್‌ ಇನಿಂಗ್ಸ್​​ ರನ್‌ಗೆ ಅಂತ್ಯವಾದರೆ, ಮೊಯೀನ್‌ ಅಲಿ 17 ರನ್ ಗಳಿಸಿದರು.

Exit mobile version