Site icon Vistara News

IPL 2024: ಹೆಡ್​, ಅಭಿಷೇಕ್​ ತೂಫಾನ್ ಬ್ಯಾಟಿಂಗ್​; ದಾಖಲೆಗಳ ಸುರಿಮಳೆ

Abhishek Sharma

ಹೈದರಾಬಾದ್​: ಬುಧವಾರದ ಐಪಿಎಲ್(IPL 2024)​ ಮುಂಬೈ ಇಂಡಿಯನ್ಸ್​(Mumbai Indians) ಮತ್ತು ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ನಡುವಣ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣಗೊಂಡಿದೆ. ಹೈದರಾಬಾದ್​ ತಂಡದ ಆಟಗಾರರಾದ ಅಭಿಷೇಕ್​ ಶರ್ಮ ಮತ್ತು ಟ್ರಾವಿಸ್​ ಹೆಡ್​ ಬಾರಿಸಿದ ವಿಸ್ಫೋಟಕ ಅರ್ಧಶತಕದಿಂದ ಈ ದಾಖಲೆಗಳು ನಿರ್ಮಾಣಗೊಂಡವು. ದಾಖಲೆಗಳ ಪಟ್ಟಿ ಇಲ್ಲಿದೆ.

10 ಓವರ್​ನಲ್ಲಿ ಗರಿಷ್ಠ ಮೊತ್ತ


ಹೈದರಾಬಾದ್​ ತಂಡ 10 ಓವರ್​ಗಳಲ್ಲಿ ಕೇವಲ 2 ವಿಕೆಟ್​ಗೆ 148 ರನ್​ ಬಾರಿಸುವ ಮೂಲಕ ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿಯೇ 10 ಓವರ್​ಗೆ ಅ್ಯಧಿಕ ಮೊತ್ತ ಗಳಿಸಿದ ಮೊದಲ ತಂಡ ಹೆಗ್ಗಳಿಕೆಗೆ ಪಾತ್ರವಾಯಿತು. ಇದುವರೆಗೂ ಈ ದಾಖಲೆ ಮುಂಬೈ ತಂಡದ ಪರವಾಗಿತ್ತು. ಮುಂಬೈ 2021 ರಲ್ಲಿ ಹೈದರಾಬಾದ್​ ವಿರುದ್ಧವೇ 131/3 ಬಾರಿಸಿತ್ತು. ಇದೀಗ ಹೈದರಾಬಾದ್​ ಈ ದಾಖಲೆಯನ್ನು ಮುಂಬೈ ವಿರುದ್ಧವೇ ಆಡಿ ಸೇಡು ತೀರಿಸಿಕೊಂಡಿದೆ.

ಹೈದರಾಬಾದ್​ ಪರ ಅತಿ ವೇಗದ ಅರ್ಧಶತಕ


ಆರಂಭಿಕ ಆಟಗಾರ ಟ್ರಾವಿಸ್​ ಹೆಟ್​ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರೆ, ಅಭಿಷೇಕ್​ ಶರ್ಮ 16 ಎಸೆತಗಳಲ್ಲಿ 50 ರನ್​ ಬಾರಿಸಿ ಮಿಂಚಿದರು. ಉಭಯ ಆಟಗಾರರ ಈ ಬ್ಯಾಟಿಂಗ್​ ಆರ್ಭಟದ ಮುಂದೆ ಮುಂಬೈ ತಂಡದ ಬೌಲಿಂಗ್​ ಸಂಪೂರ್ಣ ಹಳಿ ತಪ್ಪಿತು. ಈ ಅರ್ಧಶತಕದ ಮೂಲಕ ಉಭಯ ಆಟಗಾರರು ಕೂಡ ಹೈದರಾಬಾದ್​ ಪರ ಅತಿ ಕಡಿಮೆ ಎಸೆತದಲ್ಲಿ ದಾಖಲೆ ಬರೆದ ಆಟಗಾರರ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆಡರು ಸ್ಥಾನ ಪಡೆದರು.

ಇದನ್ನೂ ಓದಿ IPL 2024: ಮುಂಬೈ ಪರ 200ನೇ ಪಂದ್ಯವನ್ನಾಡಿದ ರೋಹಿತ್​ಗೆ ಸ್ಮರಣೀಯ ಉಡುಗೊರೆ ನೀಡಿದ ಸಚಿನ್​

ಅಭಿಷೇಕ್​ ಶರ್ಮ-16 ಎಸೆತ, (2024) ಮುಂಬೈ ವಿರುದ್ಧ

ಟ್ರಾವಿಸ್​ ಹೆಡ್​-18 ಎಸೆತ, (2024) ಮುಂಬೈ ವಿರುದ್ಧ

ಡೇವಿಡ್​ ವಾರ್ನರ್​-20 ಎಸೆತ,(2015) ಚೆನ್ನೈ ವಿರುದ್ಧ

ಡೇವಿಡ್​ ವಾರ್ನರ್​-20 ಎಸೆತ,(2017) ಕೆಕೆಆರ್​ ವಿರುದ್ಧ

ಮೋಸೆಸ್ ಹೆನ್ರಿಕ್ಸ್-20 ಎಸೆತ,(2015) ಆರ್​ಸಿಬಿ ವಿರುದ್ಧ

ಡೇವಿಡ್​ ವಾರ್ನರ್​-21 ಎಸೆತ,(2016) ಆರ್​ಸಿಬಿ ವಿರುದ್ಧ

ಅತಿ ಕಡಿಮೆ ಓವರ್​ನಲ್ಲಿ 100 ರನ್​​


7 ಓವರ್​ನಲ್ಲಿ 100 ರನ್​ ಗಡಿ ದಾಟುವ ಮೂಲಕ ಐಪಿಎಲ್​ ಇತಿಹಾಸದ ಅತಿ ಕಡಿಮೆ ಓವರ್​ನಲ್ಲಿ 100 ರನ್​ ಬಾರಿಸಿದ ತಂಡಗಳ ದಾಖಲೆಪಟ್ಟಿಯಲ್ಲಿ ಹೈದರಾಬಾದ್​ 4ನೇ ಸ್ಥಾನ ಪಡೆದುಕೊಂಡಿತು. ದಾಖಲೆ ಮುಂಬೈ ತಂಡದ ಹೆಸರಿನಲ್ಲಿದೆ. 2014ರಲ್ಲಿ ಪಂಜಾಬ್​ ವಿರುದ್ಧ ಮುಂಬೈ ಕೇವಲ 6 ಓವರ್​ನಲ್ಲಿ ಈ ಸಾಧನೆ ಮಾಡಿತ್ತು. ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಗಳಿಸಿದ ಮೊದಲ ತಂಡ ಎಂಬ ದಾಖಲೆ ಕೂಡ ಮುಂಬೈ ಪರವೇ ಇದೆ.

ಐಪಿಎಲ್​ನಲ್ಲಿ ಅತಿ ವೇಗದ ಅರ್ಧಶತಕ


ಅಭಿಷೇಕ್​ ಶರ್ಮ ಅವರು 16 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಐಪಿಎಲ್​ ಟೂರ್ನಿಯಲ್ಲಿ ಅತಿ ವೇಗವಾಗಿ ಅರ್ಧಶತಕ ಬಾರಿಸಿದ ದ್ವಿತೀಯ ಆಟಗಾರನಾಗಿ ಮೂಡಿಬಂದರು. 14 ಎಸೆತಗಳಲ್ಲಿ 50 ರನ್​ ಬಾರಿಸಿದ ಪ್ಯಾಟ್​ ಕಮಿನ್ಸ್​ ಅಗ್ರಸ್ಥಾನದಲ್ಲಿದ್ದಾರೆ. ಇದೇ ಪಂದ್ಯದಲ್ಲಿ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಹೆಡ್​ ಅಜಿಂಕ್ಯಾ ರಹಾನೆ ಹಿಂದಿಕ್ಕಿ ಜಂಟಿ ಮೂರನೇ ಸ್ಥಾನಕ್ಕೇರಿದರು. ಪಂತ್​ ಕೂಡ 18 ಎಸೆತಗಳಲ್ಲಿ ಅಧರ್ಶತಕ ಬಾರಿಸಿದ್ದಾರೆ.

Exit mobile version