Site icon Vistara News

IPL 2024 : ಆರ್​ಸಿಬಿಯ ಪ್ಲೇಆಫ್​ ಚಾನ್ಸ್​ ಇದೆಯೇ? ಇಲ್ಲಿದೆ ನೋಡಿ ಲೆಕ್ಕಾಚಾರ

IPL 2024

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ (IPL 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Banglore ) ತಂಡದ ಪ್ಲೇಆಫ್​ ಆಸೆ ಜೀವಂತವಾಗಿದೆ. ಟೂರ್ನಿಯ 58 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧದ 60 ರನ್​ಗಳ ಭರ್ಜರಿ ಗೆಲುವು ಅಭಿಮಾನಿಗಳ ಭರವಸೆ ಪುನರುಜ್ಜೀವನಗೊಳಿಸಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ಎರಡೂ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಆದರೆ, ಆರ್​ಸಿಬಿಗೆ ಗೆದ್ದು ಬೀಗಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟ್​ ಮಾಡಲು ಪಂಜಾಬ್ ಆಹ್ವಾನಿಸಿತು. ಫಾಫ್ ಡು ಪ್ಲೆಸಿಸ್ (9) ಮತ್ತು ವಿಲ್ ಜಾಕ್ಸ್ (12) ಬೇಗನೆ ವಿಕೆಟ್ ಕಳೆದುಕೊಂಡರೂ, ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದರು. ರಜತ್ ಪಾಟಿದಾರ್ (55) ಅರ್ಧಶತಕ ಬಾರಿಸಿ ಪಂಜಾಬ್ ಕಿಂಗ್ಸ್ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಅವರು ಕೊಹ್ಲಿ ಅವರೊಂದಿಗೆ 76 ರನ್ ಸೇರಿಸಿ ತಂಡವನ್ನು ಆರಂಭಿಕ ಎರಡು ವಿಕೆಟ್ ಕಳೆದುಕೊಂಡಾಗ ಎದುರಿಸಿದ್ದ ತೊಂದರೆಯಿಂದ ಪಾರು ಮಾಡಿದರು. ಅದರ ನಂತರ ಕ್ಯಾಮೆರಾನ್ ಗ್ರೀನ್ ಕೊಹ್ಲಿಯೊಂದಿಗೆ ಸೇರಿಕೊಂಡರು ಮತ್ತು ಇವರಿಬ್ಬರು ಮತ್ತಷ್ಟು ಬೌಲರ್​ಗಳನ್ನು ಚೆಂಡಾಡಿದರು.

ಪಂದ್ಯದಲ್ಲಿ ವಿರಾಟ್ ಕೊಹ್ಲಿ 92 ರನ್ ಗಳಿಸಿದರೆ, ಗ್ರೀನ್ 46 ರನ್ ಗಳಿಸಿದರು ಇದರು 241 ರನ್​ಗಳ ಬೃಹತ್​ ಮೊತ್ತ ಪೇರಿಸಲು ತಂಡಕ್ಕೆ ನೆರವಾಯಿತು. ಬ್ಯಾಟಿಂಗ್ ಆರಂಭಿಸಿದ ಪಂಜಾಬ್​ ಪರ ಪ್ರಭ್​ ಸಿಮ್ರಾನ್​ ಸಿಂಗ್ ಅವರನ್ನು ಬೇಗನೆ ಕಳೆದುಕೊಂಡರೂ ನಂತರದಲ್ಲಿ ಚೇತರಿಸಿಕೊಂಡಿತು. ಜಾನಿ ಬೈರ್ಸ್ಟೋವ್ (27) ಮತ್ತು ರಿಲೀ ರೊಸ್ಸೌ (61) ತಂಡವನ್ನು ಮುನ್ನಡೆಸಿದರು. ಇದಾದ ಬಳಿಕ ಶಶಾಂಕ್ ಸಿಂಗ್ (37) ಪ್ರಮುಖ ಇನ್ನಿಂಗ್ಸ್ ಆಡಿದರೂ ಉಳಿದವರಿಂದ ಬೆಂಬಲ ಸಿಗಲಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು 181 ರನ್​ಗಳಿಗೆ ಆಲೌಟ್ ಮಾಡಿ 60 ರನ್​ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ, ಅವರು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ತಮ್ಮ ಅಭಿಯಾನವನ್ನು ಜೀವಂತವಾಗಿರಿಸಿಕೊಂಡರು.

ಐದನೇ ಗೆಲುವು, ಪ್ಲೇಆಫ್​ ಅವಕಾಶ ಹೇಗೆ?

ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವು ಆರ್​ಸಿಬಿಯ ಒಟ್ಟು 5 ನೇ ಗೆಲುವಾಗಿದೆ. ಈ ಗೆಲುವಿನೊಂದಿಗೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿಯೇ ಉಳಿತು. ಅವರು ತಮ್ಮ ನೆಟ್​ರನ್​ರೇಟ್​ ಅನ್ನು +0.217 ಕ್ಕೆ ಹೆಚ್ಚಿಸಿದ್ದಾರೆ. ಇದು ಮುಂದಿನ ಹಾದಿಯಲ್ಲಿ ಅವರಿಗೆ ಉಪಯುಕ್ತವಾಗಬಹುದು.

ಇದನ್ನೂ ಓದಿ: IPL 2024 : ರಾಹುಲ್ ದ್ರಾವಿಡ್ ಸೃಷ್ಟಿಸಿದ್ದ 14 ವರ್ಷಗಳ ಹಿಂದಿನ ದಾಖಲೆ ಮುರಿದ ದಿನೇಶ್ ಕಾರ್ತಿಕ್

ಪ್ಲೇ ಆಫ್ ಹಂತಕ್ಕೇರಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2024ರ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಅವರು ಹಾಗೆ ಮಾಡಲು ಯಶಸ್ವಿಯಾದರೆ ಅವರು 14 ಅಂಕಗಳನ್ನು ಪಡೆಯುತ್ತಾರೆ.

ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುವುದರ ಹೊರತಾಗಿ, ಅವರಿಗೆ ಇತರ ಕೆಲವು ಫಲಿತಾಂಶಗಳು ಅನುಕೂಲಕರವಾಗಿರಬೇಕು. 12 ಅಂಕ ಗಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಅರ್ಹತೆ ಪಡೆಯಲು ತುದಿಗಾಲಲ್ಲಿ ನಿಂತಿವೆ.

ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಉಳಿದ ಒಂದು ಪಂದ್ಯವನ್ನು ಸೋತರೆ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎರಡು ಪಂದ್ಯಗಳನ್ನು ಸೋತರೆ, 4 ತಂಡಗಳು 14 ಅಂಕಗಳೊಂದಿಗೆ ಸಮಬಲ ಸಾಧಿಸುತ್ತವೆ. ಆರ್​ಸಿಬಿ ಇನ್ನುಳಿದ ಗೆಲುವಿನೊಂದಿಗೆ ಸಕಾರಾತ್ಮಕ ನೆಟ್​ರನ್​ರೇಟ್ ಹೊಂದಿದರೆ, ಇತರ ತಂಡಗಳನ್ನು ಹಿಮ್ಮೆಟ್ಟಿಸಿ ಪ್ಲೇಆಫ್​ ಗೆ ಏರಲು ಅವಕಾಶ ಮಾಡಿಕೊಡುತ್ತದೆ.

Exit mobile version