Site icon Vistara News

IPL 2024: ಆರ್​ಸಿಬಿ-ಮುಂಬೈ ಪಂದ್ಯದ ಟಾಸ್​ ಫಿಕ್ಸಿಂಗ್​ ಆಗಿಲ್ಲ; ಅಸಲಿ ವಿಡಿಯೊ ವೈರಲ್​

IPL 2024

ಮುಂಬೈ: ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್(IPL 2024)​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು(MI vs RCB) ಹಾಗೂ ಮುಂಬೈ ಇಂಡಿಯನ್ಸ್​(Mumbai Indians) ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಪಡೆ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಆದರೆ, ಪಂದ್ಯದ ಬಳಿಕ ಮುಂಬೈ ಗೆಲುವಿಗೆ ಕಾರಣ ಟಾಸ್​ ಫಿಕ್ಸಿಂಗ್​ ಎಂಬ ಕೂಗು ಜೋರಾಗಿ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಪಟ್ಟ ಕೆಲ ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗ ಈ ಘಟನೆಯ ನೈಜ ವಿಡಿಯೊ ಸಿಕ್ಕಿದ್ದು. ಯಾವುದೇ ಫಿಕ್ಸಿಂಗ್​​ ನಡೆದಿಲ್ಲ ಎನ್ನುವುದು ಸ್ಪಷ್ಟಗೊಂಡಿದೆ.

ತವರಿನ ಪಂದ್ಯವಾದ ಕಾರಣ ವಾಡಿಕೆಯಂತೆ ಹಾರ್ದಿಕ್​ ಪಾಂಡ್ಯ ಅವರು ಟಾಸ್​ ಹಾರಿಸಿದರು. ಮ್ಯಾಚ್​ ರೆಫ್ರಿಯಾಗಿದ್ದ ಜಾವಗಲ್​ ಶ್ರೀನಾಥ್(Javagal Srinath)​ ಅವರು ಕಾಯಿನ್​ ಹೆಕ್ಕಿ ಪಾಂಡ್ಯ ಬಳಿ ಏನೋ ಕೇಳಿದರು. ಪಂದ್ಯದ ಬಳಿಕ ಜಾವಗಲ್​ ಶ್ರೀನಾಥ್ ಅವರು ಕಾಯಿನ್​ ತಿರುಗಿಸಿ ಹೆಕ್ಕುವಂತಹ ವಿಡಿಯೊ ಹರಿದಾಟಿತ್ತು. ಇದಾದ ಬಳಿಕ ಬೌಂಡರಿ ಲೈನ್​ನಲ್ಲಿ ಫೀಲ್ಡರ್​ ಒಬ್ಬರ ದೇಹ ಲೈನ್​ಗೆ ತಾಗಿ ಚೆಂಡು ಹಿಡಿದರೂ ಬೌಂಡರಿ ನೀಡಿಲ್ಲ. ಮತ್ತು ನೋಬಾಲ್​ ಕೂಡ ಅಂಪೈರ್​ ಪರಿಗಣನೆಗೆ ತೆಗೆದುಕೊಂಡಿರಲ್ಲಿ.

ನಕಲಿ ವಿಡಿಯೊ


ಚೇಸಿಂಗ್​ಗೆ ಯೋಗ್ಯವಾದ ವಾಂಖೆಡೆ ಸ್ಟೇಡಿಯಂನಲ್ಲಿ ಅಂಪೈರ್​ ಟಾಸ್​ ಕಾಯಿನ್​ ಬದಲಿಸಿ ಮುಂಬೈ ತಂಡಕ್ಕೆ ಸಹಕರಿಸಿದ್ದಾರೆ. ಇಲ್ಲವಾದರೆ ಆರ್​ಸಿಬಿ ಗೆಲ್ಲುತ್ತಿತ್ತು ಎಂದು ಅನೇಕ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಂಬಾನಿ ಮತ್ತು ಐಪಿಎಲ್​ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆದರೆ ಈ ವಿಡಿಯೊ ಅಸಲಿಯಲ್ಲ ಎನ್ನುವುದು ಫ್ಯಾಕ್ಟ್ ಚೆಕ್ ಮೂಲಕ ತಿಳಿದುಬಂದಿದೆ. ಜಾವಗಲ್​ ಶ್ರೀನಾಥ್ ಕಾಯಿನ್​ ಹೇಗೆ ಬಿದ್ದಿದೆಯೋ ಹಾಗೆ ಹೆಕ್ಕಿರುವ ವಿಡಿಯೊ ಈಗ ವೈರಲ್​ ಆಗುತ್ತಿದೆ.

ಇದನ್ನೂ ಓದಿ IPL 2024 : ಮುಂದಿನ ಆವೃತ್ತಿಯಿಂದ ರೋಹಿತ್ ಶರ್ಮಾ ಚೆನ್ನೈ ತಂಡ ನಾಯಕ; ಮಾಜಿ ನಾಯಕನ ಭವಿಷ್ಯ

ಅಸಲಿ ವಿಡಿಯೊ

ಪಂದ್ಯ ಗೆದ್ದ ಮುಂಬೈ


ಬೃಹತ್​ ಮೊತ್ತದ ಈ ಮೇಲಾಟದಲ್ಲಿ ಮುಂಬೈ ತಂಡ 7 ವಿಕೆಟ್​ಗಳ ಗೆಲುವು ಸಾಧಿಸಿತ್ತು. ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ತಂಡ, ದಿನೇಶ್​ ಕಾರ್ತಿಕ್​(53*), ರಜತ್​ ಪಾಟಿದಾರ್​(50) ಮತ್ತು ನಾಯಕ ಫಾಫ್​ ಡುಪ್ಲೆಸಿಸ್(61)​ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 196 ರನ್​ ಬಾರಿಸಿತು. ದೊಡ್ಡ ಮೊತ್ತವನ್ನು ಬಹಳ ಜೋಶ್​ನಿಂದಲೇ ಬೆನ್ನತ್ತಿದ ಮುಂಬೈ ಇಶಾನ್​ ಕಿಶನ್​ ಮತ್ತು ಸೂರ್ಯಕುಮಾರ್​ ಅವರ ಪ್ರಚಂಡ ಬ್ಯಾಟಿಂಗ್​ ನೆರವಿನಿಂದ 15.3 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 199 ರನ್​ ಬಾರಿಸಿ ಗೆಲುವಿನ ನಗೆ ಬೀರಿತ್ತು.

Exit mobile version