Site icon Vistara News

IPL 2024 : ಜಿಯೋಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್​

IPL 2024

ಮುಂಬೈ: ಟಾಟಾ ಐಪಿಎಲ್‌ನ ಅಧಿಕೃತ ಸ್ಟ್ರೀಮಿಂಗ್ ಆಗಿದ್ದ ಜಿಯೋಸಿನಿಮಾ, ಟಾಟಾ ಐಪಿಎಲ್‌-2024ರ (IPL 2024) ಋತುವಿನಲ್ಲಿ 2,600 ಕೋಟಿ ವೀಕ್ಷಣೆ ದಾಖಲೆ ಸೃಷ್ಟಿಸಿದೆ. ಇದು ಟಾಟಾ ಐಪಿಎಲ್‌-2023ಕ್ಕೆ ಹೋಲಿಸಿದರೆ ಶೇ. 53ರಷ್ಟು ಹೆಚ್ಚಳವಾಗಿದೆ. ಜಿಯೋಸಿನಿಮಾ ಐಪಿಎಲ್​​ನಲ್ಲಿ ತನ್ನ ಎರಡನೇ ಋತುವನ್ನು ಮುಕ್ತಾಯಗೊಳಿಸುತ್ತಿದ್ದಂತೆ, ಈ ಪ್ಲಾಟ್ಫಾರ್ಮ್ 35,000 ಕೋಟಿಗೂ ಅಧಿಕ ನಿಮಿಷಗಳ ವೀಕ್ಷಣೆ ಸಮಯವನ್ನು ದಾಖಲಿಸಿದೆ.

ಮೊದಲ ದಿನದ ಅದ್ಭುತ ಆರಂಭದ ನಂತರ ತನ್ನ ವೀಕ್ಷಣೆಯ ಪ್ರಮಾಣವನ್ನು ಹೆಚ್ಚಿಸಿದ ಜಿಯೋಸಿನಿಮಾ, ತನ್ನ ವ್ಯಾಪ್ತಿಯನ್ನು ಶೇ. 38ಕ್ಕಿಂತ ಅಧಿಕವಾಗಿ ಬೆಳೆಸಿದ್ದು, 62 ಕೋಟಿಗೂ ಅಧಿಕ ವಿಕ್ಷಣೆಯೊಂದಿಗೆ ಮುಕ್ತಾಯಗೊಳಿಸಿದೆ. 12 ಭಾಷೆಯ ಫೀಡ್‌ಗಳು, 4ಕೆ ವೀಕ್ಷಣೆ, ಮಲ್ಟಿ-ಕ್ಯಾಮ್ ದೃಶ್ಯಗಳು ಮತ್ತು ಎಆರ್/ವಿಆರ್ ಮೂಲಕ ವರ್ಚುಯಲ್​ ಅನುಭವ ಮತ್ತು 360-ಡಿಗ್ರಿ ವೀಕ್ಷಣೆಯ ಅವಕಾಶ ನೀಡಿದ್ದರಿಂದ ಟಿವಿ ವೀಕ್ಷಕರು ಗಣನೀಯವಾಗಿ ವಿಸ್ತರಿಸಿದರು. ಕಳೆದ ಆವೃತ್ತಿಯಲ್ಲಿ ವೀಕ್ಷಣೆಯ ಸರಾಸರಿಯು 60 ನಿಮಿಷಗಳಾಗಿತ್ತು.

ಜಿಯೋಸಿನಿಮಾ 2024ರ ಆವೃತ್ತಿಯನ್ನು 11.3 ಕೋಟಿ ವೀಕ್ಷಕರು ಮೊದಲ ದಿನದಂದೇ ಲಾಗ್ಇನ್ ಆಗುವುದರೊಂದಿಗೆ ಶುಭಾರಂಭ ಮಾಡಿತ್ತು. ಐಪಿಎಲ್-2023ರ ಮೊದಲ ದಿನಕ್ಕೆ ಹೋಲಿಸಿದರೆ ಇದು ಶೇ.51ರಷ್ಟು ಹೆಚ್ಚಳ. ಜಿಯೋಸಿನಿಮಾ ತನ್ನ ಎರಡನೇ ಆವೃತ್ತಿಯನ್ನು ಡಿಜಿಟಲ್‌ನಲ್ಲಿ ಪ್ರಾರಂಭಿಸುತ್ತಿದ್ದಂತೆ ಟಾಟಾ ಐಪಿಎಲ್-2024ರ ಆರಂಭಿಕ ದಿನವು 59 ಕೋಟಿಗೂ ಹೆಚ್ಚು ವೀಡಿಯೊ ವೀಕ್ಷಣೆಗಳನ್ನು ಪ್ಲಾಟ್​ಫಾರ್ಮ್​​ನಲ್ಲಿ ದಾಖಲಿಸಿಕೊಂಡಿತು. ಅಂತಿಮವಾಗಿ ಇದು 660 ಕೋಟಿ ನಿಮಿಷಗಳ ವೀಕ್ಷಣೆ ಸಮಯ ದಾಖಲಿಸಿತು.

ಭಾರತದಲ್ಲಿ ಕ್ರೀಡಾಕೂಟಗಳನ್ನು ನೋಡುವ ವಿಧಾನವನ್ನು ಮರು ವ್ಯಾಖ್ಯಾನಿಸುವುದನ್ನು ಮುಂದುವರಿಸುವ ಭರವಸೆಯೊಂದಿಗೆ ನಾವು ಐಪಿಎಲ್-2024 ಆವೃತ್ತಿಯನ್ನು ಮುಕ್ತಾಯಗೊಳಿಸುತ್ತೇವೆ. ನಾವು ವರ್ಷದಿಂದ ವರ್ಷಕ್ಕೆ ಕಾಣುತ್ತಿರುವ ಬೆಳವಣಿಗೆಯು ನಮ್ಮ ವೀಕ್ಷಕ ಕೇಂದ್ರಿತ ಪ್ರಸಾರದ ಮೂಲಕ ಮೆಚ್ಚುಗೆ ಪಡೆದುಕೊಂಡಿದೆ ಎಂಬ ಭರವಸೆ ನಮಗೆ ನೀಡುತ್ತಿದೆ. ನಮ್ಮ ಪಾಲುದಾರರು, ಪ್ರಾಯೋಜಕರಿಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ” ಎಂದು ವಯಾಕಾಮ್18ರ ವಕ್ತಾರರು ಹೇಳಿದ್ದಾರೆ.

28 ಪ್ರಾಯೋಜಕರು

ಜಿಯೊ ಸಿನಿಮಾಗೆ ಆರಂಭಲ್ಲಿ ಬ್ರಾಂಡ್‌ಗಳಾದ ಡ್ರೀಮ್11, ಥಮ್ಸ್ ಅಪ್, ಪಾರ್ಲೆ ಪ್ರಾಡಕ್ಟ್ಸ್, ಬ್ರಿಟಾನಿಯಾ, ದಾಲ್ಮಿಯಾ ಸಿಮೆಂಟ್ಸ್ ಮತ್ತು ಎಚ್ಡಿಎಫ್​ಸಿ ಬ್ಯಾಂಕ್‌ನ ಪ್ರಾಯೋಜಕತ್ವ ಇತ್ತು. ಋತುವಿನ ಅಂತ್ಯದ ವೇಳೆಗೆ ಜಿಯೋಸಿನಿಮಾ ದಾಖಲೆಯ 28 ಪ್ರಾಯೋಜಕರು ಮತ್ತು 1400ಕ್ಕೂ ಹೆಚ್ಚು ಜಾಹೀರಾತುದಾರರನ್ನು ಹೊಂದಿತ್ತು.

ಇದನ್ನೂ ಓದಿ: Singapore Open: ದ್ವಿತೀಯ ಸುತ್ತಿಗೆ ಆಟ ಮುಗಿಸಿದ ಭಾರತದ ಪಿ.ವಿ.ಸಿಂಧು

ಅತ್ಯುತ್ತಮ ದರ್ಜೆಯ ಕ್ರೀಡಾ ವಿಷಯವನ್ನು ನೀಡುವ ಜಿಯೋಸಿನಿಮಾದ ಬದ್ಧತೆಯು ಪ್ಯಾರಿಸ್ ಒಲಿಂಪಿಕ್ ಗೇಮ್ಸ್-2024ರೊಂದಿಗೆ ಮುಂದುವರಿಯುತ್ತದೆ. ವೀಕ್ಷಕರು ಸಾವಿರಾರು ಗಂಟೆಗಳ ಲೈವ್ ಮತ್ತು ಬೇಡಿಕೆಯ ಕ್ರೀಡೆಯೊಂದಿಗೆ ಒಲಿಂಪಿಕ್ಸ್‌ನ ವರ್ಧಿತ ವೀಕ್ಷಣೆಯ ಅನುಭವವನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ನಿರೀಕ್ಷಿಸಬಹುದು. ವಯಾಕಾಮ್18ರ ಪ್ಯಾರಿಸ್​ ಒಲಿಂಪಿಕ್ಸ್-2024ರ ಸಮಗ್ರ ಕವರೇಜ್, ಭಾರತದ ಅಭಿಮಾನಿಗಳು, ಒಲಿಂಪಿಕ್ಸ್‌ನಲ್ಲಿ ಭಾರತೀಯರು ನೋಡಲೇಬೇಕಾದ ಸ್ಪರ್ಧೆಗಳನ್ನು ವಿಕ್ಷಿಸಬಹುದು.

ವೀಕ್ಷಕರು ಜಿಯೋಸಿನಿಮಾ ಆ್ಯಪ್ (ಐಒಎಸ್ ಮತ್ತು ಆಂಡ್ರಾಯ್ಡ್) ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ. ತಾಜಾ ಸುದ್ದಿಗಳು, ಸ್ಕೋರ್, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ ಮತ್ತು ವ್ಯಾಟ್ಸ್ಆ್ಯಪ್ನಲ್ಲಿ ಜಿಯೋಸಿನಿಮಾ ಹಾಗೂ ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮತ್ತು ಯುಟ್ಯೂಬ್ನಲ್ಲಿ ಸ್ಪೋರ್ಟ್ಸ್18 ಅನ್ನು ಫಾಲೋ ಮಾಡಬಹುದು.

Exit mobile version