Site icon Vistara News

IPL 2024: ಹಾರ್ದಿಕ್​ ಪಾಂಡ್ಯ ನಿಜವಾಗಿಯೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರಾ?; ವಿಚಿತ್ರ ವರ್ತನೆಯ ವಿಡಿಯೊ ವೈರಲ್​

hardik pandya

ಜೈಪುರ: ಮುಂಬೈ ಇಂಡಿಯನ್ಸ್(mumbai indians)​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ(Hardik Pandya) ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಮಾಜಿ ಆಟಗಾರ ರಾಬಿನ್​ ಉತ್ತಪ್ಪ(Robin Uthappa) ಕೆಲ ದಿನಗಳ ಹಿಂದೆ ಹೇಳಿದ್ದರು. ಹಾರ್ದಿಕ್​ ಅವರ ವರ್ತನೆಯನ್ನು ನೋಡುವಾಗ ಉತ್ತಪ್ಪ ಮಾತು ನಿಜ ಎಂಬಂತೆ ಭಾಸವಾಗುತ್ತಿದೆ. ಸೋಮವಾರ ನಡೆದಿದ್ದ ರಾಜಸ್ಥಾನ್​ ವಿರುದ್ಧದ(IPL 2024) ಪಂದ್ಯದಲ್ಲಿ ಪಾಂಡ್ಯ ವಿಚಿತ್ರ ವರ್ತನೆ ತೋರುತಿದ್ದರು. ಇದರ ವಿಡಿಯೊಗಳು ವೈರಲ್​ ಆಗುತ್ತಿದೆ.

ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಮಾಡುತಿದ್ದ ವೇಳೆ ಹಾರ್ದಿಕ್ ಪಾಂಡ್ಯ ಡಗೌಟ್‌ನಲ್ಲಿ ತಮ್ಮ ಬ್ಯಾಟಿಂಗ್‌ಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಅವರು ಬೌಂಡರಿ ಲೈನ್ ಪಕ್ಕದಲ್ಲಿ ಪುಶ್​ ಅಪ್​​ ಮಾಡುವ ಮೂಲಕ ತಯಾರಿ ಮಾಡಿಕೊಂಡಿದ್ದರು. ಅಲ್ಲದೆ ಪಂದ್ಯ ಸೋತಾಗಲೂ ತಮ್ಮ ಪಾಡಿಗೆ ನಗುತ್ತಿದ್ದರು. ಈ ಎಲ್ಲ ವಿಡಿಯೊಗಳು ವೈರಲ್​ ಆಗಿದ್ದು ನೆಟ್ಟಿಗರು ಪಾಂಡ್ಯಗೆ ಒಂದು ಸುತ್ತು ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಓವರ್​ ಬಿಲ್ಡಪ್​ ಮಾಡಿದ್ದು ಸಾಕು ಮೊದಲು ಬ್ಯಾಟಿಂಗ್​ ಸರಿಯಾಗಿ ಮಾಡಿ ಎಂದು ಹೇಳಿದ್ದಾರೆ. ಪಾಂಡ್ಯ ಈ ಪಂದ್ಯದಲ್ಲಿ ಕೇವಲ 10 ರನ್​ ಗಳಿಸಿ ಔಟ್​ ಆಗಿದ್ದರು.

ಈ ಹಿಂದಿನ ಪಂದ್ಯಗಳಲ್ಲಿಯೂ ಮುಂಬೈ ಬೌಲರ್​ಗಳ ಎಸೆತಗಳಿಗೆ ಸಿಕ್ಸರ್​ ಹೋದರೆ ಪಾಂಡ್ಯ ಚಪ್ಪಾಳೆ ತಟ್ಟುತ್ತಾ ಹುಚ್ಚರಂತೆ ವರ್ತಿಸುತ್ತಿದ್ದರು. ಬೌಲಿಂಗ್​ ಮಾಡಲು ಓಡಿ ಬಂದು ಇನ್ನೇನು ಬೌಲಿಂಗ್​ ನಡೆಸಬೇಕು ಎನ್ನುವಷ್ಟರಲ್ಲಿ ತಕ್ಷಣ ಬೌಲಿಂಗ್​ ನಿಲ್ಲಿಸಿ ಫೀಲ್ಡಿಂಗ್​ ಸೆಟ್​ ಮಾಡುವುದು ಕೂಡ ಕಂಡುಬಂದಿದೆ. ಒಟ್ಟಾರೆಯಾಗಿ ಪಾಂಡ್ಯ ತಲೆಕೆಟ್ಟವರಂತೆ ವರ್ತಿಸುತ್ತಿದ್ದಾರೆ. ಇದುವೇ ತಂಡದ ಹಿನ್ನಡೆಗೆ ಕಾರಣ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ IPL 2024: ಸನ್​ರೈಸರ್ಸ್​ ತಂಡದ ಆಟಗಾರರನ್ನು ಭೇಟಿ ಮಾಡಿದ ನಟ ಮಹೇಶ್‌ ಬಾಬು

ಮುಂಬೈ ತಂಡ 9 ವಿಕೆಟ್​ಗಳ ಅಂತರದ ಹೀನಾಯ ಸೋಲು ಕಂಡಿತು. ಇಲ್ಲಿನ ಸವಾಯ್​ ಮಾನ್​ಸಿಂಗ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ತಂಡ ಮೊದಲು ಬ್ಯಾಟ್​ ಮಾಡಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 179 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನ್ನೂ 8 ಎಸೆತಗಳು ಉಳಿದಿರುವಂತೆಯೇ 1 ವಿಕೆಟ್ ನಷ್ಟಕ್ಕೆ 183 ರನ್ ಬಾರಿಸಿ ಗೆಲುವು ಕಂಡಿತು.

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆರ್​ಆರ್​ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ನೆರವಾದರು. ಬಟ್ಲರ್​ 25 ಎಸೆತಕ್ಕೆ 35 ರನ್ ಬಾರಿಸ ಔಟಾದರೆ ಜೈಸ್ವಾಲ್ ಅಮೋಘ ಪ್ರದರ್ಶನ ನೀಡಿ 60 ಎಸೆತಕ್ಕೆ ಅಜೇಯ 104 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ನಾಯಕ ಸಂಜು ಸ್ಯಾಮ್ಸನ್​ 28 ಎಸೆತಕ್ಕೆ 38 ರನ್​ ಬಾರಿಸಿ ಕೊನೇ ತನಕ ಉಳಿದರು. ಬೌಲಿಂಗ್​ನಲ್ಲಿ 4 ಓವರ್​​ ದಾಳಿ ನಡೆಸಿದ ಸಂದೀಪ್​ 18 ರನ್​ಗೆ 5 ವಿಕೆಟ್​ ಕೆಡವಿದರು. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

Exit mobile version