Site icon Vistara News

IPL 2024: ‘ಕ್ಯಾಚ್ ಆಫ್ ದಿ ಐಪಿಎಲ್ 2024’; ಜಡೇಜಾ ಫ್ಲೈಯಿಂಗ್ ಕ್ಯಾಚ್​ಗೆ ಶಬ್ಬಾಶ್ ಎಂದ ರವಿಶಾಸ್ತ್ರಿ

IPL 2024

ಲಕ್ನೋ: ರವೀಂದ್ರ ಜಡೇಜಾ(Ravindra Jadeja) ಎಂದರೆ ನೆನಪಾಗುವುದೇ ಚುರುಕಿನ ಫೀಲ್ಡಿಂಗ್. ಮೈದಾನದಲ್ಲಿ ಪಾದರಸದಂತೆ ಓಡಾಡಿ ಅಸಾಧ್ಯವಾದದನ್ನು ಸಾಧ್ಯವಾಗಿಸುವ ತಾಕತ್ತು ಅವರಿಗಿದೆ. ಸೋಮವಾರ ನಡೆದ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧದ(IPL 2024) ಪಂದ್ಯದಲ್ಲಿಯೂ ಜಡೇಜಾ ಒನ್ ಹ್ಯಾಂಡೆಡ್​ ಕ್ಯಾಚ್(Jadeja’s One-Handed Catch)​ ಹಿಡಿದು ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಈ ಪಂದ್ಯದಲ್ಲಿ ಅತ್ಯತ್ತಮ ಬ್ಯಾಟಿಂಗ್​ ನಡೆಸುತ್ತಿದ್ದ ಲಕ್ನೋ ತಂಡದ ನಾಯಕ ಕೆ.ಎಲ್​ ರಾಹುಲ್​ ಅವರು ಆಫ್​ ಸೈಡ್​ನಲ್ಲಿ ಬೌಂಡರಿ ಬಾರಿಸುವ ಪ್ರಯತ್ನದಲ್ಲಿ ಜಡೇಜಾಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಜಡೇಜಾ ಅವರು ಹಿಡಿದ ಈ ಕ್ಯಾಚ್​ ಕಂಡು ಒಂದು ಕ್ಷಣ ಸಹ ಆಟಗಾರರೇ ನಿಬ್ಬೆರಗಾದರು. ಅತ್ತ ಕಾಮೆಂಟ್ರಿ ಮಾಡುತ್ತಿದ್ದ ರವಿಶಾಸ್ತ್ರಿ ‘ಕ್ಯಾಚ್​ ಆಫ್​ ದಿ ದಿಸ್​ ಸೀಸನ್​’. ಬುಲೆಟ್​ ವೇಗದಲ್ಲಿ ಸಾಗಿದ ಚೆಂಡನ್ನು ಲೀಲಾಜಾಲವಾಗಿ ಹಿಡಿಯುವಲ್ಲಿ ಯಶಸ್ಸಿಯಾದರು. ನಿಜಕ್ಕೂ ಇದು ಅದ್ಭುತ” ಎಂದು ವರ್ಣಿಸಿದರು.

ರವೀಂದ್ರ ಜಡೇಜಾ ಅವರು ಈ ಪಂದ್ಯದಲ್ಲಿ 40 ಎಸೆತ ಎದುರಿಸಿ ಅಜೇಯ 57 ರನ್​ ಬಾರಿಸಿದರು. ಈ ಇನಿಂಗ್ಸ್​ನಲ್ಲಿ 1 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಸಿದರು. ಬೌಲಿಂಗ್​ನಲ್ಲಿ 3 ಓವರ್​ ಎಸೆದು 32 ರನ್​ ಬಿಟ್ಟುಕೊಟ್ಟರು. ರಾಹುಲ್​ 53 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 82 ರನ್​ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. 176 ರನ್​ಗಳ ಗುರಿ ಬೆನ್ನತ್ತಿದ ಕೆ. ಎಲ್​ ರಾಹುಲ್ (KL Rahul) 53 ಎಸೆತಗಳಲ್ಲಿ 82 ರನ್ ಸಿಡಿಸಿ ಔಟಾದರು. ಈ ಮೂಲಕ ಐಪಿಎಲ್​ನಲ್ಲಿ ಹೊಸ ದಾಖಲೆ ಮಾಡಿದರು. ಅವರು ಅತಿ ಹೆಚ್ಚು 50+ ರನ್ ಗಳಿಸಿದ ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿಯ (MS Dhoni) ದಾಖಲೆಯನ್ನು ಮುರಿದಿದ್ದಾರೆ.

ಇದನ್ನೂ ಓದಿ IPL 2024 : ಡಿಆರ್​ಎಸ್ ಅಕ್ರಮ; ಟಿಮ್ ಡೇವಿಡ್, ಕೀರನ್ ಪೊಲಾರ್ಡ್​ಗೆ ದಂಡ

ಧೋನಿ ಹಿಂದಿಕ್ಕಿದ ರಾಹುಲ್​

ಕೆಎಲ್ ರಾಹುಲ್ ಐಪಿಎಲ್​​ನಲ್ಲಿ ಹೆಚ್ಚು 50+ ಸ್ಕೋರ್​ಗಳನ್ನು ಗಳಿಸಿದ ವಿಕೆಟ್ ಕೀಪರ್ ಆಗಿ ಸಿಎಸ್​ಕೆ ಮಾಜಿ ನಾಯಕನನ್ನು ಹಿಂದಿಕ್ಕಿದರು. ಇದು ಕೆ.ಎಲ್.ರಾಹುಲ್ ಅವರ 25ನೇ ಅರ್ಧಶತಕ. ಧೋನಿ ಈವರೆಗೆ 24 ಅರ್ಧಶತಕಗಳನ್ನು ಬಾರಿಸಿದ್ದಾರೆ. ಕೆಎಲ್ ರಾಹುಲ್ ಅವರ ಆರಂಭಿಕ ಪಾಲುದಾರ ಕ್ವಿಂಟನ್ ಡಿ ಕಾಕ್ 23 50+ ಸ್ಕೋರ್​​ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

Exit mobile version