Site icon Vistara News

IPL 2024: ಪಂದ್ಯ ಗೆದ್ದ ಸಂತಸದಲ್ಲಿ ಕುಣಿದು ಕುಪ್ಪಳಿಸಿದ ಹೈದರಾಬಾದ್​ ತಂಡದ ಮಾಲಕಿ; ವಿಡಿಯೊ ವೈರಲ್​

IPL 2024

ಹೈದರಾಬಾದ್​: ಐಪಿಎಲ್(IPL 2024)​ ಟೂರ್ನಿ ಬಂತೆಂದರೆ ಸಾಕು ಕ್ರಿಕೆಟ್​ ಪ್ರಿಯರ ಮತ್ತು ನೆಟ್ಟಿಗರ ಗಮನ ಸೆಳೆಯುವುದು ಸನ್​ರೈಸರ್ಸ್ ಹೈದರಾಬಾದ್​ ತಂಡದ ಮಾಲಕಿ ಕಾವ್ಯಾ ಮಾರನ್(Kavya Maran). ತನ್ನ ತಂಡ ಗೆದ್ದಾಗ ಅವರ ಹರ್ಷೋದ್ಗಾರ ಮತ್ತು ಸಂಭ್ರಮಾಚರಣೆಯ ಕ್ಯೂಟ್​ ವಿಡಿಯೊ ಎಲ್ಲಡೆ ಹರಿದಾಟುತ್ತದೆ. ಸೋಲು ಕಂಡರೂ ಕೂಡ ಅವರ ಸಪ್ಪೆ ಮೋರೆಯ ಫೋಟೊ ವೈರಲ್(viral video)​ ಆಗುತ್ತದೆ. ಇದೀಗ ಕಳೆದ ಚೆನ್ನೈ ವಿರುದ್ಧದ ಪಂದ್ಯದಲ್ಲಿ ತನ್ನ ತಂಡ ಗೆದ್ದಾಗ ಗ್ಯಾಲರಿಯಲ್ಲಿದ್ದ ಅವರು ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಕಾವ್ಯ ಚೆನ್ನೈ ಮೂಲದ ಮಾಧ್ಯಮ ಮತ್ತು ಟಿವಿ ಸಮೂಹ ಸನ್ ಟಿವಿ ನೆಟ್‌ವರ್ಕ್‌ನ ಮಾಲಕ ಕಲಾನಿತಿ ಮಾರನ್ ಅವರ ಪುತ್ರಿ. 31 ಹರೆಯದ ಕಾವ್ಯಾ ತನ್ನ ಅದ್ಭುತ ನೋಟ ಮತ್ತು ಆಟದ ಮೇಲಿನ ಅಪಾರ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಕಾವ್ಯಾ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪದವೀಧರರಾಗಿದ್ದಾರೆ. ಐಪಿಎಲ್​ ಹರಾಜಿನ ವೇಳೆಯೂ ಅವರು ಪ್ರಧಾನ ಆಕರ್ಷಣೆಯಾಗಿರುತ್ತಾರೆ.

ಇದೇ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ 2ನೇ ಆವೃತ್ತಿಯ ಎಸ್ಎ20 ಕ್ರಿಕೆಟ್​ಲೀಗ್​ನಲ್ಲಿ ಅಭಿಮಾನಿಯೊಬ್ಬ ಕಾವ್ಯಾ ಮಾರನ್ ಅವರಿಗೆ ಮದುವೆಯ ಪ್ರಪೋಸಲ್ ಇಟ್ಟಿದ್ದ. ಕಾವ್ಯಾ ಅವರು ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಒಡತಿಯೂ ಆಗಿದ್ದಾರೆ. 2 ಆವೃತ್ತಿಯಲ್ಲಿಯೂ ಅವರ ತಂಡವೇ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಈ ಬಾರಿ ಐಪಿಎಲ್​ನಲ್ಲಿಯೂ ಕಪ್​ ಗೆಲ್ಲುವ ವಿಶ್ವಾಸವಿದೆ.

ಇದನ್ನೂ ಓದಿ IPL 2024: ಆರ್​ಸಿಬಿ ಪಂದ್ಯಕ್ಕೆ ಭೂಕಂಪದ ಭೀತಿ; ತಡರಾತ್ರಿ ರಾಜಸ್ಥಾನದಲ್ಲಿ ಕಂಪಿಸಿದ ಭೂಮಿ

ಖ್ಯಾತ ಸೂಪರ್​ ಸ್ಟಾರ್​ ನಟ ರಜನಿಕಾಂತ್ ಅವರು ಐಪಿಎಲ್​ ಆರಂಭಕ್ಕೂ ಮುನ್ನ ನಡೆದಿದ್ದ ಸಿನೆಮಾ ಕಾರ್ಯಕ್ರಮದ ಸಮಾರಂಭದ ವೇದಿಕೆಯಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡಕ್ಕೆ ಒಳ್ಳೆ ಆಟಗಾರರನ್ನು ಆಯ್ಕೆ ಮಾಡಿ ಏಕೆಂದರೆ ಈ ಪಂದ್ಯ ಸೋತಾಗ ಕಾವ್ಯಾ ಅವರು ನೋಡಲು ಸಾಧ್ಯವಾಗುದಿಲ್ಲ ಎಂದು ಹೇಳಿದ್ದರು.

6 ವಿಕೆಟ್​ ಗೆಲುವು


ಶುಕ್ರವಾರ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಸನ್​​ ರೈಸರ್ಸ್​ ಹೈದರಾಬಾದ್​ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಋತುರಾಜ್ ಗಾಯಕ್ವಾಡ್​ ನೇತೃತ್ವದ ಬಳಗ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 165 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಹೈದರಾಬಾದ್ ತಂಡ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್​ ನಷ್ಟ ಮಾಡಿಕೊಂಡು 166 ರನ್ ಬಾರಿಸಿ ಗೆಲುವು ಸಾಧಿಸಿತು. ಐಡೆನ್​ ಮಾರ್ಕ್ರಮ್​ (36 ಎಸೆತಕ್ಕೆ 50 ರನ್​) ಅವರ ಅರ್ಧಶತಕ ಹಾಗೂ ಅಭಿಷೇಕ್ ಶರ್ಮಾ (12 ಎಸೆತಕ್ಕೆ 37 ರನ್​) ಅವರ ಸ್ಫೋಟಕ ಬ್ಯಾಟಿಂಗ್ ಸನ್​ ರೈಸರ್ಸ್​ ಹೈದರಾಬಾದ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

Exit mobile version