Site icon Vistara News

IPL 2024: ಆರ್​ಸಿಬಿ ದಾಖಲೆ ಮುರಿದು ಐಪಿಎಲ್​ನ 2ನೇ ಗರಿಷ್ಠ ರನ್​ ರೆಕಾರ್ಡ್ ಮಾಡಿದ ಕೆಕೆಆರ್​

IPL 2024

ಹೈದರಾಬಾದ್​: ಬುಧವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್​ ಮೂಲಕ ಸದ್ದು ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡ 272 ರನ್​ ಬಾರಿಸಿ ​ಐಪಿಎಲ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ಎರಡನೇ ತಂಡ ಎಂಬ ದಾಖಲೆ ಬರೆದಿದೆ. 2ನೇ ಸ್ಥಾನದಲ್ಲಿದ್ದ ಆರ್​ಸಿಬಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವಾರವಷ್ಟೇ ಸನ್​ರೈಸರ್ಸ್​ ಹೈದರಾಬಾದ್​ ತಂಡ ಮುಂಬೈ ವಿರುದ್ಧ 277 ರನ್​ ಬಾರಿಸಿ ಐಪಿಎಲ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ದಾಖಲೆ ನಿರ್ಮಿಸಿತ್ತು. ಇದೀಗ ಒಂದೇ ವಾರದ ಅಂತರದಲ್ಲಿ ಈ ಟೂರ್ನಿಯಲ್ಲಿ ಮತ್ತೊಂದು ದ್ವಿತೀಯ ಗರಿಷ್ಠ ಮೊತ್ತ ದಾಖಲಾಯಿತು.

ಐಪಿಎಲ್​ನಲ್ಲಿ ಅತಿ ಹೆಚ್ಚು ರನ್​ ಬಾರಿಸಿದ ತಂಡಗಳು


ಸನ್​ರೈಸರ್ಸ್​ ಹೈದರಾಬಾದ್​-3 ವಿಕೆಟ್​ಗೆ 277(ಮುಂಬೈ ಇಂಡಿಯನ್ಸ್​ ವಿರುದ್ಧ)

ಕೋಲ್ಕತ್ತಾ ನೈಟ್​ ರೈಡರ್ಸ್​-7 ವಿಕೆಟ್​ಗೆ 272 ( ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ)

ರಾಯಲ್​ ಚಾಲೆಂಜರ್ಸ್​ ಬೆಂಗಳೂರು 5 ವಿಕೆಟ್​ಗೆ 263( ಪುಣೆ ವಾರಿಯರ್ಸ್​ ವಿರುದ್ಧ)

ಲಕ್ನೋ ಸೂಪರ್​ ಜೈಂಟ್ಸ್​-5 ವಿಕೆಟ್​ಗೆ 257(ಪಂಜಾಬ್​ ಕಿಂಗ್ಸ್​ ವಿರುದ್ಧ)

ರಾಯಲ್​ ಚಾಲೆಂಜರ್ಸ್​ ಬೆಂಗಳೂರು- 3 ವಿಕೆಟ್​ಗೆ 248( ಗುಜರಾತ್​ ಲಯನ್ಸ್​ ವಿರುದ್ಧ

ಕೋಲ್ಕತ್ತಾ ನೈಟ್​ ರೈಡರ್ಸ್​-6 ವಿಕೆಟ್​ಗೆ 246(ರಾಜಸ್ಥಾನ್​ ರಾಯಲ್ಸ್​ ವಿರುದ್ಧ)

ಚೆನ್ನೈ ಸೂಪರ್​ ಕಿಂಗ್ಸ್​-5 ವಿಕೆಟ್​ಗೆ 240(ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧ)

ಚೆನ್ನೈ ಸೂಪರ್​ ಕಿಂಗ್ಸ್​-2 ವಿಕೆಟ್​ಗೆ 235(ಕೆಕೆಆರ್​ ವಿರುದ್ಧ)

ಕೆಕೆಆರ್​ ತಂಡದ ಇದುವರೆಗಿನ ಗರಿಷ್ಠ ಐಪಿಎಲ್​ ಮೊತ್ತ 6 ವಿಕೆಟ್​ಗೆ 246 ರನ್​ ಆಗಿತ್ತು. ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಈ ಮೊತ್ತವನ್ನು ಪೇರಿಸಿತ್ತು. ಇದೀಗ 272 ರನ್​ ಬಾರಿಸಿ ಐಪಿಎಲ್ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ 2ನೇ ತಂಡವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ IPL 2024: ಚೆನ್ನೈಗೆ ಆಘಾತ; ತಂಡ ತೊರೆದು ತವರಿಗೆ ಪ್ರಯಾಣಿಸಿದ ಸ್ಟಾರ್​ ವೇಗಿ

ವಿಶಾಖಪಟ್ಟಣಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಕೆಕೆಆರ್​ ತನ್ನ ಆಯ್ಕೆಗೆ ತಕ್ಕ ಪ್ರದರ್ಶನ ತೋರಿತು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ಕೊಟ್ಟು ಜಿದ್ದಿಗೆ ಜಿದ್ದವರಂತೆ ಬ್ಯಾಟಿಂಗ್​ ನಡೆಸಿದ ಸುನೀಲ್​ ನರೈನ್​ ಮತ್ತು ಆಂಗ್‌ಕ್ರಿಶ್ ರಘುವಂಶಿ ಅರ್ಧಶತಕ ಬಾರಿಸಿ ಮಿಂಚಿದರೆ. ಆ ಬಳಿಕ ಬಂದ ಆ್ಯಂಡ್ರೆ ರಸೆಲ್​, ರಿಂಕು ಸಿಂಗ್​ ಕಡಿಮೆ ಎಸೆತದಲ್ಲಿ ದೊಡ್ಡ ಮೊತ್ತ ಪೇರಿಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾದರು. ನಿಗದಿ 20 ಓವರ್​ ಬ್ಯಾಟಿಂಗ್​ ನಡೆಸಿದ ಕೆಕೆಆರ್​ 7 ವಿಕೆಟ್​ಗೆ 272 ರನ್​ ಬಾರಿಸಿತು. 6 ರನ್​ ಬಾರಿಸುತ್ತಿದ್ದರೆ ಸನ್​ರೈಸರ್ಸ್​ ಹೈದರಾಬಾದ್​ ತಂಡದ ದಾಖಲೆ ಪತನಗೊಳ್ಳುತ್ತಿತ್ತು.

Exit mobile version