ಲಖನೌ: ಕೆ. ಎಲ್. ರಾಹುಲ್ (82 ರನ್, 53 ಎಸೆತ, 9 ಫೋರ್, 3 ಸಿಕ್ಸರ್) ಹಾಗೂ ಕ್ವಿಂಟನ್ ಡಿ ಕಾಕ್ (54 ರನ್, 43 ಎಸೆತ, 5 ಫೋರ್, 1 ಸಿಕ್ಸರ್) ಜೋಡಿಯ ಅರ್ಧ ಶತಕಗಳ ನೆರವು ಪಡೆದ ಲಕ್ನೊ ಸೂಪರ್ ಜೈಂಟ್ಸ್ ತಂಡ ಐಪಿಎಲ್ನ 2024ನೇ (IPL 2024) ಆವೃತ್ತಿಯ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಸತತ ಎರಡು ಸೋಲುಗಳ ಬಳಿಕ ಗೆಲವಿನ ಟ್ರ್ಯಾಕ್ಗೆ ಮರಳಿದೆ. ಲಕ್ನೊ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕನೇ ಗೆಲುವಾಗಿದೆ. ಅತ್ತ ಚೆನ್ನೈ ತಂಡ ಆಡಿರುವ ಏಳರಲ್ಲಿ ಮೂರನೇ ಸೋಲಿಗೆ ಒಳಗಾಯಿತು.
Nicky P into the attack early! 🔥🔥@LucknowIPL need 31 off 24 now 👌
— IndianPremierLeague (@IPL) April 19, 2024
Watch the match LIVE on @StarSportsIndia and @JioCinema 💻📱#TATAIPL | #LSGvCSK | @nicholas_47 pic.twitter.com/rHbQ04MMgL
ಇಲ್ಲಿನ ಭಾರತ ರತ್ನ ಶ್ರೀ ಅಟಲ್ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಮಾಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಆರಂಭಿಕ ವಿಕೆಟ್ಗಳ ನಷ್ಟದ ಹೊರತಾಗಿಯೂ ಕೊನೇ ಹಂತದಲ್ಲಿ ಉತ್ತಮವಾಗಿ ಆಡಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಲಕ್ನೊ ತಂಡ 19 ಓವರ್ಗಳಲ್ಲಿ 2ವಿಕೆಟ್ ನಷ್ಟಕ್ಕೆ 180 ರನ್ ಬಾರಿಸಿ ಗೆಲುವು ಸಾಧಿಸಿತು.
ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಲಕ್ನೊ ತಂಡದ ಪರ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಹಾಗೂ ಕೆ. ಎಲ್ ರಾಹುಲ್ ಉತ್ತಮವಾಗಿ ಆಡಿದರು. ಈ ಜೋಡಿ ಮೊದಲ ವಿಕೆಟ್ಗೆ 134 ರನ್ ಬಾರಿಸಿತು. ಅಷ್ಟರಲ್ಲಿ ಅವರಿಬ್ಬರೂ ಅರ್ಧ ಶತಕಗಳನ್ನು ದಾಖಲಿಸಿದ್ದರು. ನಿಧಾನಗತಿಯ ಪಿಚ್ನಲ್ಲಿ ಲಕ್ನೊ ಆಟಗಾರರು ಇನಿಂಗ್ಸ್ ಕಟ್ಟಿದರು. ಸ್ಟ್ರೈಕ್ ರೇಟ್ ಕಡಿಮೆ ಇದ್ದ ಹೊರತಾಗಿಯೂ ಗೆಲುವಿನಗೆ ಪೂರಕವಾದ ರನ್ಗಳನ್ನು ಬಾರಿಸಿದರು. ಕ್ವಿಂಟನ್ ಚೆನ್ನೈ ಬೌಲರ್ ಮುಸ್ತಾಫಿಜುರ್ ಎಸೆತಕ್ಕೆ ಔಟಾದರೆ, ರಾಹುಲ್ ಪತಿರಾಣಾಗೆ ವಿಕೆಟ್ ಒಪ್ಪಿಸಿದರು. ನಿಕೋಲಸ್ ಪೂರನ್ 23 ರನ್ ಸೇರಿಸಿದರು.
𝙎𝙞𝙢𝙥𝙡𝙮 𝙞𝙣𝙘𝙧𝙚𝙙𝙞𝙗𝙡𝙚!
— IndianPremierLeague (@IPL) April 19, 2024
MS Dhoni smacks a 1⃣0⃣1⃣ metre SIX into the stands 💥
Lucknow is treated with an entertaining MSD finish 💛
Watch the match LIVE on @JioCinema and @StarSportsIndia 💻📱#TATAIPL | #LSGvCSK | @msdhoni | @ChennaiIPL pic.twitter.com/XIT3O43l99
ಬ್ಯಾಟಿಂಗ್ ವೈಫಲ್ಯ
ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಚೆನ್ನೈ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಅಜಿಂಕ್ಯ ರಹಾನೆ 36 ರನ್ ಬಾರಿಸಿದ ಹೊರತಾಗಿಯೂ ರಚಿನ್ ರವಿಂದ್ರ ಶೂನ್ಯಕ್ಕೆ ನಿರ್ಗಮಿಸಿದರು. ನಾಯಕ ಋತುರಾಜ್ 17 ರನ್ಗೆ ಸೀಮಿತಗೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ರವಿಂದ್ರ ಜಡೇಜಾ ನಿಧಾನವಾಗಿ ಇನಿಂಗ್ಸ್ ಕಟ್ಟಿದರು. ಅವರು 40 ಎಸೆತ ಬಳಸಿಕೊಂಡು 57 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಚೆನ್ನೈತಂಡದ ಆಪತ್ಬಾಂಧವ ಶಿವಂ ದುಬೆ 3 ರನ್ಗೆ ಸೀಮಿತಗೊಂಡರೆ ರಿಜ್ವಿ ಕೇವಲ 1 ರನ್ಗೆ ಔಟಾದರು. 90 ರನ್ಗೆ 5 ವಿಕೆಟ್ ಕಳೆದುಕೊಂಡ ಚೆನ್ನೈಗೆ ಕೊನೆಯಲ್ಲಿ ಮೊಯಿನ್ ಅಲಿ 30 ರನ್ ಹಾಗೂ ಮಹೇಂದ್ರ ಸಿಂಗ್ ಧೋನಿ 28 ರನ್ ಬಾರಿಸಿದರು.
ಇದನ್ನೂ ಓದಿ: IPL 2024 : ಪಾಂಡ್ಯ ಅಂದ್ರೆ ಡೋಂಟ್ ಕೇರ್, ರೋಹಿತ್ಗೆ ಫುಲ್ ರೆಸ್ಪೆಕ್ಟ್; ಯುವ ಬೌಲರ್ನ ನಡೆ ಫುಲ್ ವೈರಲ್
ಲಕ್ನೊ ತಂಡದ ಪರ ಕೃಣಾಲ್ ಪಾಂಡ್ಯ 2 ವಿಕೆಟ್ ಉರುಳಿಸಿದರೆ ಮೊಹ್ಸಿನ್ ಖಾನ್, ಯಶ್ ಠಾಕೂರ್, ರವಿ ಬಿಷ್ಣೋಯಿ ಹಾಗೂ ಮಾರ್ಕ್ ಸ್ಟೊಯ್ನಿಸ್ ತಲಾ ಒಂದು ವಿಕೆಟ್ ಉರುಳಿಸಿದರು.