ಚೆನ್ನೈ: ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ ಹಾಗೂ ಕೆಕೆಆರ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ (Gautham Gambhir) ಅವರಿಗೆ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಹಾಗೂ ವಿರಾಟ್ ಕೊಹ್ಲಿಯ (Virat Kohli) ಬಗ್ಗೆ ಸಲ್ಲದ ಅಸಹನೆ. ಅವಕಾಶ ಸಿಕ್ಕಾಗೆಲ್ಲ ಅವರಿಬ್ಬರನ್ನು ಟೀಕಿಸುತ್ತಲೇ ಇರುತ್ತಾರೆ. ಇದೀಗ ಸೋಮವಾರದ ಐಪಿಎಲ್(IPL 2024) ಪಂದ್ಯದಲ್ಲಿ ಗಂಭೀರ್ ಅವರು ಧೋನಿ ಅವರನ್ನು ತಬ್ಬಿಕೊಂಡಿದ್ದಾರೆ. ಇದು ಉಭಯ ಆಟಗಾರರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಸೋಮವಾರದ ಐಪಿಎಲ್ನಲ್ಲಿ ಚೆನ್ನೈ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಿತ್ತು. ಪಂದ್ಯ ಮುಗಿದ ಬಳಿಕ ಗಂಭೀರ್ ಅವರು ಧೋನಿಯನ್ನು ತಬ್ಬಿಕೊಂಡು ಕೆಲ ಕಾಲ ಮಾತನಾಡಿದ್ದಾರೆ. ಈ ಘಟನೆಯ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಜತೆಗೆ ವಿಭಿನ್ನ ಕಮೆಂಟ್ಗಳು ಕೂಡ ಬಂದಿವೆ. ಇತ್ತೀಚೆಗೆ ಕೊಹ್ಲಿ ಜತೆಯೂ ಗಂಭೀರ್ ಬಹಳ ಸ್ನೇಹದಿಂದ ವರ್ತಿಸಿಕೊಂಡಿದ್ದರು. ಆರ್ಸಿಬಿ ಪಂದ್ಯದ ವೇಳೆ ಗಂಭೀರ್ ನೇರವಾಗಿ ಕೊಹ್ಲಿ ಬಳಿ ಬಂದು ಅವರನ್ನು ತಬ್ಬಿಕೊಂಡು ಮಾತನಾಡಿಸಿದ್ದರು. ಇದೀಗ ಧೋನಿಯನ್ನು ಕೂಡ ಇದೇ ರೀತಿಯಾಗಿ ಮಾತನಾಡಿದ್ದಾರೆ.
91 🫂 97 🥹#CSKvKKR #TATAIPL #IPLonJioCinema pic.twitter.com/F4DPU8axOi
— JioCinema (@JioCinema) April 8, 2024
ಈ ಹಿಂದೆ ಧೋನಿಯನ್ನು ಅವಕಾಶ ಸಿಕ್ಕಾಗೆಲ್ಲ ಗಂಭೀರ್ ಟೀಕಿಸಿದ್ದರು. ವಿಶೇಷವಾಗಿ 2011 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ನಲ್ಲಿ ಎಲ್ಲರಿಗೂ ಸಿಗಬೇಕಾದ ಪ್ರಶಂಸೆಯನ್ನು ಧೋನಿ ತಾವೊಬ್ಬರೇ ತೆಗೆದುಕೊಂಡಿದ್ದಾರೆ ಎಂದು ತೆಗಳುತ್ತಿದ್ದರು. ಆ ಪಂದ್ಯದಲ್ಲಿ ಧೋನಿ ಅಜೇಯ 91 ರನ್ ಬಾರಿಸುವ ಜತೆಗೆ ವಿನ್ನಿಂಗ್ ಸಿಕ್ಸರ್ ಸಿಡಿಸಿದ್ದರು. ಜನಮಾನಸದಲ್ಲಿ ಅದು ಅಚ್ಚಳಿಯದೇ ಉಳಿದ ಕಾರಣ ಗೆಲುವಿನ ಪ್ರಶಂಸೆ ಧೋನಿಗೆ ಹೆಚ್ಚಾಗಿ ಸಿಕ್ಕಿತ್ತು. ಅದೇ ಪಂದ್ಯದಲ್ಲಿ 97 ರನ್ ಬಾರಿಸಿದ ತಮಗೆ ಆ ಕ್ರೆಡಿಟ್ ಸಿಗಲಿಲ್ಲ ಎಂಬ ಕೊರಗು ಗಂಭೀರ್ ಅವರದ್ದು. ಅದಕ್ಕಾಗಿ ಅವರು ಧೋನಿ ವಿರುದ್ಧ ಆಗಾಗ ತಿರುಗಿ ಬೀಳುತ್ತಿದ್ದರು.
ಇದನ್ನೂ ಓದಿ IPL 2024: ಮೊದಲ ಕ್ರಶ್ ಬಗ್ಗೆ ಮನಬಿಚ್ಚಿ ಮಾತನಾಡಿದ ಕೆಕೆಆರ್ ನಾಯಕ ಅಯ್ಯರ್
ಕೆಲವು ಭಾರಿ ಗಂಭೀರ್ ಅವರು ಧೋನಿ ಪರವಾಗಿಯೂ ಬ್ಯಾಟ್ ಬೀಸಿದ್ದರು. ಜತೆಗೆ ಧೋನಿಯ ಕೆಲ ಸಾಧನೆಯನ್ನು ಕೊಂಡಾಡಿದ್ದರು. ಸಾಂಪ್ರದಾಯಿಕ ಕ್ರಿಕಟಿಗರನ್ನು ಮೀರುವ ಅವರ ವಿಶಿಷ್ಟ ಸಾಮರ್ಥ್ಯವನ್ನು ಧೋನಿಗೆ ಇತ್ತು. ಮಾಜಿ ನಾಯಕ ಭಾರತೀಯ ಕ್ರಿಕೆಟ್ನಲ್ಲಿ ಪರಿವರ್ತಕ ವ್ಯಕ್ತಿ ಎಂದು ಗಂಭೀರ್ ಹೇಳಿದರು. ವಿಕೆಟ್ ಕೀಪರ್ಗಳು ಐತಿಹಾಸಿಕವಾಗಿ ಸ್ಪಂಪ್ಗಳ ಹಿಂದಿನ ಪರಾಕ್ರಮ ಮತ್ತು ನಂತರ ಅವರ ಬ್ಯಾಟಿಂಗ್ ಕೌಶಲ್ಯಕ್ಕೆ ಹೆಸರುವಾಸಿಯಾಗಿರುತ್ತಾರೆ. ಆದರೆ ಧೋನಿ ಮೊದಲು ಬ್ಯಾಟರ್ ಮತ್ತು ಎರಡನೆಯದಾಗಿ ವಿಕೆಟ್ ಕೀಪರ್ ಆಗಿ ಎಂದು ಗಂಭೀರ್ ಹೇಳಿದ್ದರು.
ಹೆಚ್ಚಿನ ವಿಕೆಟ್ಕೀಪರ್ಗಳು ಮೊದಲು ಕೀಪರ್ ಮತ್ತು ನಂತರ ಬ್ಯಾಟರ್ ಆಗಿರುತ್ತಾರೆ. ಎಂಎಸ್ ಧೋನಿ ಮೊದಲು ಬ್ಯಾಟರ್ ಆಗಿದ್ದರು ನಂತರ ವಿಕೆಟ್ ಕೀಪರ್ ಆಗಿದ್ದರು. ಎಂಎಸ್ ಧೋನಿಯಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದರು. ಆ ಕ್ರಮಾಂಕದಲ್ಲಿ ಪಂದ್ಯಗಳನ್ನು ಗೆಲ್ಲಿಸಬಲ್ಲ ವಿಕೆಟ್ ಕೀಪರ್- ಸಿಕ್ಕಿದ್ದು ಭಾರತೀಯ ಕ್ರಿಕೆಟ್ಗೆ ಒಂದು ಆಶೀರ್ವಾದ ಎಂದು ಗಂಭೀರ್ ಹೇಳಿದ್ದರು..