ಮುಂಬಯಿ: ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧ ಈ ಬಾರಿಯ ಐಪಿಎಲ್ನಲ್ಲಿ(IPL 2024) ಹಲವು ಆರೋಪಗಳು ಕೇಳಿ ಬರುತ್ತಲೇ ಇದೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಟಾಸ್ ಚೀಟಿಂಗ್, ನೋಬಾಲ್ ನೀಡದ ಆರೋಪ ಕೇಳಿಬಂದಿತ್ತು. ಇದೀಗ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಡಿಆರ್ಎಸ್ ಚೀಟಿಂಗ್ನ(‘DRS Cheating) ಆರೋಪ ಕೇಳಿ ಬಂದಿದೆ. ಅಲ್ಲದೆ ಈ ಘಟನೆಯ ದೃಶ್ಯ ವೈರಲ್ ಆಗಿದ್ದು ಫ್ರಾಂಚೈಸಿ ವಿರುದ್ಧ ಹಲವರು ಛೀಮಾರಿ ಹಾಕಿದ್ದಾರೆ.
ಪಂದ್ಯದ 15ನೇ ಓವರ್ನಲ್ಲಿ ಈ ಘಟನೆ ನಡೆದಿದೆ. ಅರ್ಶ್ದೀಪ್ ಸಿಂಗ್ ಎಸೆತ ಈ ಓವರ್ನ 5ನೇ ಎಸೆತ ವೈಡ್ ಲೈನ್ನಲ್ಲಿ ಸಾಗಿ ಕೀಪರ್ ಕೈ ಸೇರಿತು. ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ನಡೆಸುತ್ತಿದ್ದರು. ಈ ವೇಳೆ ಡಗೌಟ್ನಲ್ಲಿದ್ದ ಟಿಮ್ ಡೇವಿಡ್ ಮತ್ತು ಕೋಚ್ ಮಾರ್ಕ್ ಬೌಚರ್ ಡಿಆರ್ಎಸ್ ತೆಗೆದುಕೊಳ್ಳುವಂತೆ ಸನ್ನೆಯ ಮೂಲಕ ಸೂರ್ಯ ಅವರಿಗೆ ಮನವಿ ಮಾಡಿದ್ದಾರೆ. ಇದು ಪಂದ್ಯದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೌಚರ್ ಮತ್ತು ಡೇವಿಡ್ ಡಿಆರ್ಎಸ್ ಸನ್ನೆ ಮಾಡುತ್ತಿರುವುದನ್ನು ಕಂಡ ಪಂಜಾಬ್ ನಾಯಕ ಸ್ಯಾಮ್ ಕರನ್ ಓಡಿ ಬಂದು ಅಂಪೈರ್ ಗಮನಕ್ಕೆ ತಂದಿದ್ದಾರೆ. ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ.
another incident where umpires supported MI. Tim David singling for DRS after seeing the reply, Sam Curran pointed out but umpire ignored him and asked from third umpire. this is shameful pic.twitter.com/QOS27aLXsr
— Sunil the Cricketer (@1sInto2s) April 19, 2024
ಇದೇ ಪಂದ್ಯದಲ್ಲಿ ಪಂಜಾಬ್ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಹಾರ್ದಿಕ್ ಪಾಂಡ್ಯ ಎಸೆದ 19ನೇ ಓವರ್ನಲ್ಲಿ ಬ್ಯಾಟರ್ನ ಲೆಗ್ ಸೈಡ್ನಿಂದ ಚೆಂಡು ಸಾಗಿದರೂ ಕೂಡ ಅಂಪೈರ್ ಇದನ್ನು ವೈಡ್ ನೀಡಲಿಲ್ಲ. ಈ ವಿಚಾರವಾಗಿಯೂ ಮುಂಬೈ ಮತ್ತು ಅಂಪೈರ್ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ. ಮುಂಬೈ ಇಂಡಿಯನ್ಸ್ ಬದಲು ಮುಂಬೈ ಅಂಪೈರ್ಸ್ ಎಂದು ತಂಡಕ್ಕೆ ಹೆಸರಿಡುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಒಟ್ಟಾರೆಯಾಗಿ ಮುಂಬೈ ತಂಡ ಈ ಬಾರಿ ಕೇವಲ ವಿವಾದದಿಂದಲೇ ಸುದ್ದಿಯಾಗುತ್ತಿದೆ.
ಇದನ್ನೂ ಓದಿ IPL 2024: ಸಿಕ್ಸರ್ ಮೂಲಕ ದಾಖಲೆ ಬರೆದ ಹಿಟ್ಮ್ಯಾನ್ ರೋಹಿತ್
Mumbai Indians ❌ umpires Indians ✅
— Kevin (@imkevin149) April 19, 2024
If IPL matches were fair how many trophies do you think RCB would have won by now? pic.twitter.com/tUvB36o222
ಈ ಪಂದ್ಯದಲ್ಲಿ (IPL 2024) ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣಕ್ಕೆ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ಅವರಿಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ. “ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿರುವುದರಿಂದ, ಪಾಂಡ್ಯ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಾರಾಜಾ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 192 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್ 19.1 ಓವರ್ಗಳಲ್ಲಿ 183 ರನ್ಗೆ ಆಲ್ಔಟ್ ಆಗಿ ಕೇವಲ 9 ರನ್ ಅಂತರದಿಂದ ಸೋಲೊಪ್ಪಿಕೊಂಡಿತು. ಗೆಲುವು ಸಾಧಿಸಿದ ಮುಂಬೈ ಅಂಕಪಟ್ಟಿಯಲ್ಲಿ(IPL 2024 Points Table) ಪ್ರಗತಿ ಸಾಧಿಸಿದೆ. ಈ ಪಂದ್ಯಕ್ಕೂ ಮುನ್ನ 9ನೇ ಸ್ಥಾನದಲ್ಲಿದ್ದ ಮುಂಬೈ ಈ ಗೆಲುವಿನೊಂದಿಗೆ 7ನೇ ಸ್ಥಾನಕ್ಕೇರಿದೆ. ಸೋಲು ಕಂಡ ಪಂಜಾಬ್ 9ನೇ ಸ್ಥಾನಕ್ಕೆ ಕುಸಿದಿದೆ.