Site icon Vistara News

IPL 2024 : ಐಪಿಎಲ್​ಗೆ ಅರ್ಧದಲ್ಲೇ ವಿದಾಯ ಹೇಳಿದ ಮುಸ್ತಾಫಿಜುರ್​ಗೆ ಸಹಿ ಹಾಕಿದ ಜೆರ್ಸಿ ನೀಡಿದ ಧೋನಿ

IPL 2024

ಚೆನ್ನೈ: ರಾಷ್ಟ್ರೀಯ ಬದ್ಧತೆಯ ಕಾರಣಕ್ಕೆ ಬಾಂಗ್ಲಾದೇಶದ ಬೌಲರ್​ ಮುಸ್ತಾಫಿಜುರ್ ರೆಹಮಾನ್ ಐಪಿಎಲ್ ತೊರೆದಿದ್ದಾರೆ. ಅವರು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಶಿಬಿರ ಬಿಟ್ಟಿದ್ದಾರೆ. ಹೀಗೆ ಐಪಿಎಲ್ 2024 ಗೆ (IPL 2024 ) ವಿದಾಯ ಹೇಳುವ ಮೊದಲು ಮುಸ್ತಾಫಿಜುರ್ ರೆಹಮಾನ್ (Mustafizur Rahman) ಲೆಜೆಂಡ್​ ಕ್ರಿಕೆಟಿಗ ಎಂಎಸ್ ಧೋನಿಯಿಂದ ಸಹಿ ಮಾಡಿದ ಜೆರ್ಸಿ ಸ್ವೀಕರಿಸಿದರು. ಬಾಂಗ್ಲಾದೇಶ (Bangladesh Cricket Team) ಮತ್ತು ಜಿಂಬಾಬ್ವೆ ನಡುವಿನ 5 ಪಂದ್ಯಗಳ ಟಿ 20 ಐ ಸರಣಿಯಲ್ಲಿ ಕಾಣಿಸಿಕೊಳ್ಳಬೇಕಾಗಿರುವ ಕಾರಣ ವೇಗಿ ಮೇ 1, 2024 ರ ನಂತರ ಸಿಎಸ್ಕೆಗೆ ಲಭ್ಯವಿರುವುದಿಲ್ಲ ಎಂದು ಈ ಹಿಂದೆ ತಿಳಿಸಲಾಗಿತ್ತು.

ಮುಸ್ತಾಫಿಜುರ್ ತಮ್ಮ ಸಹಿ ಮಾಡಿದ ಜೆರ್ಸಿಯನ್ನು ಹಿಡಿದುಕೊಂಡಿರುವ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಒಂದೇ ಡ್ರೆಸ್ಸಿಂಗ್ ಕೊಠಡಿಯನ್ನು ಹಂಚಿಕೊಂಡಿದ್ದಕ್ಕಾಗಿ ಮತ್ತು ಎಲ್ಲಾ ಕಲಿಕೆಗಾಗಿ ಬಾಂಗ್ಲಾದೇಶದ ವೇಗಿ ಧೋನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಧೋನಿಯನ್ನು ಭೇಟಿಯಾಗಿ ಅವರೊಂದಿಗೆ ಮತ್ತೆ ಆಡುವ ಬಯಕೆ ಅವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Rohit Sharma : ರೋಹಿತ್ ಶರ್ಮಾ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಿದ ವಾಸಿಮ್​ ಜಾಫರ್​

“ಎಲ್ಲದಕ್ಕೂ ಧನ್ಯವಾದಗಳು ಮಹಿ ಭಾಯ್. ನಿಮ್ಮಂತಹ ದಂತಕಥೆಯೊಂದಿಗೆ ಡ್ರೆಸ್ಸಿಂಗ್ ಕೋಣೆ ಹಂಚಿಕೊಳ್ಳುವುದು ವಿಶೇಷ ಭಾವನೆ. ಪ್ರತಿ ಬಾರಿಯೂ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅಮೂಲ್ಯ ಸಲಹೆಗಳನ್ನು ಸ್ಮರಿಸುತ್ತೇನೆ. ನಾನು ಹೇಳಿದ ವಿಷಯಗಳನ್ನು ನೆನಪಿಸಿಕೊಳ್ಳುತ್ತೇನೆ. ಶೀಘ್ರದಲ್ಲೇ ನಿಮ್ಮನ್ನು ಮತ್ತೆ ಭೇಟಿಯಾಗಲು ಮತ್ತು ಆಡಲು ಎದುರು ನೋಡುತ್ತಿದ್ದೇನೆ, “ಎಂದು ಮುಸ್ತಾಫಿಜುರ್ ಬರೆದುಕೊಂಡಿದ್ದಾರೆ.

ಟಿ 20 ಐ ಸರಣಿಗಾಗಿ ಮುಸ್ತಾಫಿಜುರ್ ತಮ್ಮ ದೇಶಕ್ಕೆ ಮರಳಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಏಪ್ರಿಲ್ 30 ರ ಗಡುವು ನಿಗದಿಪಡಿಸಿತ್ತು. ಆದರೆ, ಮೇ 1 ರಂದು ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಪಿಬಿಕೆಎಸ್ ವಿರುದ್ಧ ಸಿಎಸ್ಕೆ ಪಂದ್ಯದ ಕಾರಣ ಗಡುವನ್ನು ವಿಸ್ತರಿಸಲಾಯಿತು. ಚೆನ್ನೈ ತಂಡ ಮತ್ತು ಬಿಸಿಸಿಐನಿಂದ ವಿನಂತಿಯನ್ನು ಸ್ವೀಕರಿಸಿದ ನಂತರ ಮಂಡಳಿಯು ಗಡುವನ್ನು ವಿಸ್ತರಿಸಿತು.

“ನಾವು ಮುಸ್ತಾಫಿಜುರ್​ಗೆ ಏಪ್ರಿಲ್ 30 ರವರೆಗೆ ಐಪಿಎಲ್​ನಲ್ಲಿ ಆಡಲು ರಜೆ ನೀಡಿದ್ದೆವು, ಆದರೆ ಮೇ 1 ರಂದು ಚೆನ್ನೈನಲ್ಲಿ ಪಂದ್ಯ ಇರುವುದರಿಂದ, ಚೆನ್ನೈ ಮತ್ತು ಬಿಸಿಸಿಐನಿಂದ ವಿನಂತಿಯನ್ನು ಸ್ವೀಕರಿಸಿದ ನಂತರ ನಾವು ಅವರ ರಜೆಯನ್ನು ಒಂದು ದಿನ ವಿಸ್ತರಿಸಿದ್ದೇವೆ” ಎಂದು ಬಾಂಗ್ಲಾದೇಶ ಕ್ರಿಕೆಟ್​ ಸಂಸ್ಥೇಯ ಕ್ರಿಕೆಟ್ ಕಾರ್ಯಾಚರಣೆಗಳ ಉಪ ವ್ಯವಸ್ಥಾಪಕ ಶಹರಿಯಾರ್ ನಫೀಸ್ ಇಎಸ್ಪಿಎನ್ ಕ್ರಿಕ್ಇನ್ಫೋಗೆ ತಿಳಿಸಿದ್ದಾರೆ.

ಪರ್ಪಲ್ ಕ್ಯಾಪ್ ಗೆಲ್ಲುವ ಸ್ಪರ್ಧೆಯಲ್ಲಿದ್ದ ಮುಸ್ತಾಫಿಜುರ್ ಐಪಿಎಲ್ 2024 ರಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದರು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅವರು ಮೂರನೇ ಸ್ಥಾನ ಪಡೆದರು. 9 ಪಂದ್ಯಗಳನ್ನಾಡಿರುವ ವೇಗಿ 9.26ರ ಸರಾಸರಿಯಲ್ಲಿ 14 ವಿಕೆಟ್ ಕಬಳಿಸಿದ್ದಾರೆ.

ಪಿಬಿಕೆಎಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಸೋತಿದ್ದ ಸಿಎಸ್ಕೆಗೆ ರೆಹಮಾನ್ ಅಲಭ್ಯತೆ ಕಾಡಲಿದೆ. ಯಾಕೆಂದರೆ ಸ್ಟ್ರೈಕ್ ಬೌಲರ್​ , ದೀಪಕ್ ಚಹರ್ ಗಾಯಗೊಂಡ ನಂತರ ಮೈದಾನ ತೊರೆದಿದ್ದರು.

Exit mobile version