Site icon Vistara News

IPL 2024: ಐಪಿಎಲ್​ ಜಾತ್ರೆ ಶುರು; ಇನ್ನು ದೇಶದಲ್ಲಿ ಕ್ರಿಕೆಟ್​ ಪ್ರಿಯರದ್ದೇ ಹವಾ

ipl 2024 opening ceremony

ಚೆನ್ನೈ: ಹದಿನೇಳನೇ ಐಪಿಎಲ್‌(IPL 2024) ಟೂರ್ನಿಗೆ ಇಂದು(ಶುಕ್ರವಾರ) ಸಂಜೆ(IPL 2024 opening ceremony) ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ವರ್ಣರಂಜಿತ ಚಾಲನೆ(IPL 2024 Opening Ceremony Live) ಸಿಕ್ಕಿದೆ. ಬಾಲಿವುಡ್‌ ತಾರೆಯರಾದ ಅಕ್ಷಯ್‌ ಕುಮಾರ್‌(Akshay Kumar), ಟೈಗರ್‌ ಶ್ರಾಫ್(Tiger Shroff) ನೃತ್ಯದ ಮೂಲಕ ರಂಚಿಸಿದರೆ, ಆಸ್ಕರ್‌ ವಿಜೇತ ಎ.ಆರ್​ ರೆಹಮಾನ್​(AR Rahman), ಖ್ಯಾತ ಗಾಯಕ ಸೋನು ನಿಗಮ್‌(Sonu Nigam) ದೇಶಭಕ್ತಿ ಗೀತೆಗಳನ್ನು ಹಾಡಿ, ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಕುಣಿಯುಂತೆ ಮಾಡಿದರು. ಇದರ ಜತೆಗೆ ಸ್ವೀಡನ್‌ನ ಡಿಜೆ, ಆಕ್ಸ್‌ವೆಲ್‌ ಪಾಪ್‌ ಗಾಯನ ಕಣ್ಮನಸೆಳೆಯಿತು ಮುಂದಿನ ಮೂರು ತಿಂಗಳುಗಳ ಕಾಲ ದೇಶದಲ್ಲಿ ಕ್ರಿಕೆಟ್​ ಫೀವರ್​ ದೊಡ್ಡ ಮಟ್ಟದಲ್ಲಿರಲಿದೆ.

ಆರ್​ಸಿಬಿ-ಚೆನ್ನೈ ಮೊದಲ ಮುಖಾಮುಖಿ


ಇಂದಿನ ಉದ್ಘಾಟನ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಸೆಣಸಾಡಲಿದೆ. ಕೂಟ ಮೇ 26ಕ್ಕೆ ಮುಗಿಯುವ ಸಾಧ್ಯತೆಯಿದೆ. ಸದ್ಯ ಎಪ್ರಿಲ್​ 7ರವರೆಗಿನ ವೇಳಾಪಟ್ಟಿ ಮಾತ್ರ ಪ್ರಕಟವಾಗಿದೆ. ಒಟ್ಟು 74 ಪಂದ್ಯಗಳು ನಡೆಯಲಿವೆ.

ಹೊಸ ನಿಯಮಗಳು


ಈ ಬಾರಿಯ ಟೂರ್ನಿಯಲ್ಲಿIPL 2024) ಜಾರಿಯಾಗಿರುವ ಪ್ರಮುಖ ನಿಯಮವೆಂದರೆ ವೇಗದ ಬೌಲರ್‌ಗೆ ಒಂದೇ ಒವರ್‌ನಲ್ಲಿ 2 ಬೌನ್ಸರ್‌ ಎಸೆಯಲು ಅವಕಾಶವಿದೆ. ಬೌನ್ಸರ್‌ ಎಸೆತ ಬ್ಯಾಟರ್‌ನ ತಲೆ ಮೇಲಿನಿಂದ ಹೋದರೆ ವೈಡ್‌ ಎಂದು ನಿರ್ಧಾರ. 3ನೇ ಬೌನ್ಸರ್‌ ಎಸೆದರೆ ನೋ ಬಾಲ್‌ ಆಗಲಿದೆ. ಒಂದೇ ಪಂದ್ಯದಲ್ಲಿ ಬೌಲರ್‌ ಒಬ್ಬ 2ನೇ ಬಾರಿ, 3 ಬೌನ್ಸರ್‌ ಎಸೆದರೆ ಬೌಲರನ್ನು ಪಂದ್ಯದಿಂದ ಅನರ್ಹಗೊಳಿಸಬಹುದಾಗಿದೆ. ಈ ಬಾರಿಯೂ ಒಟ್ಟು 74 ಪಂದ್ಯಗಳು ನಡೆಯಲಿವೆ.

ಟೂರ್ನಿಯ ಮಾದರಿ


ಕಳೆದ ಬಾರಿಯಂತೆ ಈ ಬಾರಿಯೂ ಕೂಟದಲ್ಲಿ ಭಾಗವಹಿಸುವ ಒಟ್ಟು 10 ತಂಡಗಳನ್ನು ತಲಾ 5 ತಂಡಗಳಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಗುಂಪಿನಲ್ಲಿರುವ ಪ್ರತಿ ತಂಡವೂ, ಮತ್ತೂಂದು ಗುಂಪಿನಲ್ಲಿರುವ ತಂಡಗಳ ಜತೆ ತಲಾ ಎರಡು ಪಂದ್ಯಗಳನ್ನು ಆಡಲಿದೆ. ಈ ಪೈಕಿ ಒಂದು ಪಂದ್ಯವನ್ನು ತವರಿನಲ್ಲಿ , ಮತ್ತೂಂದು ಪಂದ್ಯವನ್ನು ಎದುರಾಳಿ ತಂಡದ ತವರಿನಲ್ಲಿ ಆಡಲಿದೆ. ಇದು ಮಾತ್ರವಲ್ಲಿದೆ ಪ್ರತಿ ತಂಡವು ತಮ್ಮ ಗುಂಪಿನಲ್ಲಿರುವ ಇತರ 4 ತಂಡಗಳ ಜತೆ ತಲಾ 1 ಪಂದ್ಯ ಆಡಲಿದೆ.

ಇದನ್ನೂ ಓದಿ IPL 2024 : ಭರ್ಜರಿ ಅಭಿಯಾನಕ್ಕೆ ಎದುರು ನೋಡುತ್ತಿವೆ ಕೆಕೆಆರ್​, ಎಸ್​ಆರ್​ಎಚ್​

ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇ ಆಫ್​ ಟಿಕೆಟ್​ ಪಡೆಯಲಿದೆ. ಮೊದಲ 2 ಸ್ಥಾನದಲ್ಲಿರುವ ತಂಡಗಳು ಮೊದಲ ಕ್ವಾಲಿಫೈಯರ್‌ ಆಡಿ ಇಲ್ಲಿ ಗೆದ್ದ ತಂಡ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. 3 ಮತ್ತು 4ನೇ ಸ್ಥಾನಗಳಲ್ಲಿರುವ ತಂಡಗಳು ಎಲಿಮಿನೇಟರ್‌ನಲ್ಲಿ ಆಡಲಿದೆ. ಇಲ್ಲಿ ಗೆದ್ದ ತಂಡ, ಮೊದಲ ಪ್ಲೇ ಆಫ್​ನಲ್ಲಿ ಸೋತ ತಂಡದೊಂದಿಗೆ 2ನೇ ಕ್ವಾಲಿಫೈಯರ್‌ ಪಂದ್ಯ ಆಡಲಿದೆ. 2ನೇ ಪ್ಲೇ ಆಫ್​ನಲ್ಲಿ ಗೆದ್ದ ತಂಡ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. ಲೀಗ್​ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಕ್ಕೆ ಹೆಚ್ಚಿನ ಲಾಭ ಸಿಗಲಿದೆ.

Exit mobile version