Site icon Vistara News

IPL 2024 : ರಮೇಶ್​ ಪವಾರ್​​ ಸೃಷ್ಟಿಸಿದ್ದ 16 ವರ್ಷಗಳ ಹಿಂದಿ ದಾಖಲೆ ಮುರಿದ ಎಸ್​ಆರ್​​ಎಚ್​​ ನಾಯಕ

IPL 2024

ಅಹಮದದಾಬಾದ್: ಸನ್​ರೈಸರ್ಸ್​ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಭಾರತದ ಮಾಜಿ ಆಫ್ ಸ್ಪಿನ್ನರ್ ರಮೇಶ್ ಪವಾರ್ (Ramesh Pawar) ಅವರ ದೀರ್ಘಕಾಲದ ಐಪಿಎಲ್ ದಾಖಲೆಯೊಂದನ್ನು ಭೇದಿಸಿದ್ದಾರೆ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ 2024ರ (IPL 2024 ) ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ 16 ವರ್ಷಗಳ ಹಿಂದೆ ಸೃಷ್ಟಿಯಾಗಿದ್ದ ದಾಖಲೆಯನ್ನು ಮುರಿದಿದ್ದಾರೆ. ಐಪಿಎಲ್ 2024 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಈ ಹಣಾಹಣಿಯಲ್ಲಿ ಸೋಲಿಸಿದೆ.

ರಾತ್ರಿ ನಡೆದ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಪ್ಯಾಟ್ ಕಮಿನ್ಸ್ ರಮೇಶ್ ಪವಾರ್ ಅವರ 16 ವರ್ಷಗಳ ಹಳೆಯ ಇಂಡಿಯನ್ ಪ್ರೀಮಿಯರ್ ಲೀಗ್ ದಾಖಲೆಯನ್ನು ಮುರಿದರು. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಕೊಚ್ಚಿ ಟಸ್ಕರ್ಸ್ ಕೇರಳವನ್ನು ಪ್ರತಿನಿಧಿಸಿದ್ದ ಮಾಜಿ ಬಲಗೈ ಆಫ್-ಸ್ಪಿನ್ನರ್, ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದರು. ಅದನ್ನು ಕಮಿನ್ಸ್​ ಮುರಿದಿದ್ದಾರೆ.

ಐಪಿಎಲ್​ ನಾಕೌಟ್ ಸುತ್ತುಗಳಲ್ಲಿ ರಮೇಶ್ ಪವಾರ್ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ್ದರು. ಉದ್ಘಾಟನಾ ಐಪಿಎಲ್ 2008 ಆವೃತ್ತಿಯ 2 ನೇ ಸೆಮಿಫೈನಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಪರ ಆಡುವಾಗ, ಪವಾರ್ 9 ನೇ ಕ್ರಮಾಂಕದಲ್ಲಿ 28* ರನ್ ಗಳಿಸಿದ್ದರು.

ಆ ಕ್ರಮಾಂಕದಲ್ಲಿ ಭಾರತದ ಮಾಜಿ ಆಟಗಾರ ಗಳಿಸಿದ ರನ್​ ಕಳೆದ ರಾತ್ರಿಯವರೆಗೆ ಯಾವುದೇ ಆಟಗಾರನ ಅತ್ಯಧಿಕ ರನ್ ಆಗಿದೆ. ಎಸ್ಆರ್​ ಎಚ್ ಬ್ಯಾಟರ್​​ಗಳ ಕಳಪೆ ಆರಂಭದ ನಂತರ ಕೊನೇ ಕ್ರಮಾಂಕದಲ್ಲಿ ಪ್ಯಾಟ್ ಕಮಿನ್ಸ್ ಕೆಕೆಆರ್ ವಿರುದ್ಧ 30 ಪ್ರಮುಖ ರನ್ ಗಳಿಸಿದರು.

ಪ್ಯಾಟ್​ ಹೊರಾಟ ವ್ಯರ್ಥ

ಪ್ಯಾಟ್ ಕಮಿನ್ಸ್ ಅವರ ಬ್ಯಾಟ್​ನಿಂದ ಮೂಡಿ ಬಂದ ಆ 30 ರನ್​ಗಳು ಅವರ ತಂಡಕ್ಕೆ ಪ್ರಯೋಜನಕಾರಿಯಾಗಲಿಲ್ಲ. ಇದು ಐಪಿಎಲ್ ದಾಖಲೆಯನ್ನು ಮುರಿಯಲು ಸಹಾಯ ಮಾಡಿತು. ಇಂಪ್ಯಾಕ್ಟ್ ಆಟಗಾರ ಸನ್ವೀರ್ ಸಿಂಗ್ ಗೋಲ್ಡನ್ ಡಕ್​ ಆಗಿ ನಿರ್ಗಮಿಸಿದ ನಂತರ ಕ್ರೀಸ್​ಗೆ ಆಗಮಿಸಿದ ಪ್ಯಾಟ್ ಕಮಿನ್ಸ್ 24 ಎಸೆತಗಳಲ್ಲಿ 125 ಸ್ಟ್ರೈಕ್​ರೇಟ್​ನಲ್ಲಿ 30 ರನ್ ಗಳಿಸಿದರು. ಇದು ಎಸ್ಆರ್​ಎಚ್​ ತಂಡಕ್ಕೆ ಇನ್ನಿಂಗ್ಸ್ ಅನ್ನು 159 ರನ್​​ ಗೆ ಮುಕ್ತಾಯಗೊಳಿಸಲು ನೆರವು ನೀಡಿತು.

14ನೇ ಓವರ್​​ನಲ್ಲಿಯೇ ಗುರಿ ಬೆನ್ನಟ್ಟಿದ ಕೋಲ್ಕತಾ ನೈಟ್ ರೈಡರ್ಸ್​ 8 ವಿಕೆಟ್​ ವಿಜಯ ಸಾಧಿಸಿತು. ಸುನಿಲ್ ನರೈನ್ ಮತ್ತು ರಹಮಾನುಲ್ಲಾ ಗುರ್ಬಾಜ್ ಕೆಕೆಆರ್​ಗೆ ಉತ್ತಮ ಆರಂಭ ನೀಡಿದರು ಮತ್ತು ಅದನ್ನು ವೆಂಕಟೇಶ್ ಅಯ್ಯರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಮುನ್ನಡೆಸಿದರು.

ಇದನ್ನೂ ಓದಿ: Virat kohli : ವಿಶ್ವ ಕಪ್​ನಲ್ಲಿಯೂ ಕೊಹ್ಲಿಯೇ ಸ್ಟಾರ್​​; ಭವಿಷ್ಯ ನುಡಿದ ರಿಕಿ ಪಾಂಟಿಂಗ್​

ಶ್ರೇಯಸ್ ಬಂದಾಗ ಕೆಕೆಆರ್ 2 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತ್ತು ಮತ್ತು ಮುಂದಿನ 7 ಓವರ್​ಗಳಲ್ಲಿ ವೆಂಕಟೇಶ್ ಅವರೊಂದಿಗೆ 97 ರನ್​​ಗಳ ಜೊತೆಯಾಟ ನೀಡಿದರು. ಪ್ಯಾಟ್ ಕಮಿನ್ಸ್ ನೇತೃತ್ವದ ಬಳಗ ಈಗ 2 ನೇ ಕ್ವಾಲಿಫೈಯರ್ ಪಂದ್ಯಕ್ಕಾಗಿ ಚೆನ್ನೈಗೆ ತೆರಳಲಿದೆ.

9ನೇ ಕ್ರಮಾಂಕ ಅಥವಾ ಕೆಳಗಿನ ಸ್ಥಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು

Exit mobile version