Site icon Vistara News

IPL 2024 Points Table: ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ತಂಡ ಯಾವುದು?

Azmatullah Omarzai jolted Mumbai Indians early with two strikes

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​ನಲ್ಲಿ(IPL 2024 Points Table) ಎಲ್ಲ 10 ತಂಡಗಳು ಕೂಡ ಒಂದು ಸುತ್ತಿನ ಪಂದ್ಯವನ್ನು ಆಡಿ ಮುಗಿಸಿದೆ. 5 ತಂಡಗಳು ಗೆಲುವು ಮತ್ತು 5 ತಂಡಗಳು ಸೋಲು ಕಂಡಿವೆ. ಸದ್ಯ ಅಂಕಪಟ್ಟಿಯಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ಎನ್ನುವ ಮಾಹಿತಿ ಇಂತಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​1102(+1.000)
ಚೆನ್ನೈ ಸೂಪರ್​ ಕಿಂಗ್ಸ್​1102 (+0.779)
ಪಂಜಾಬ್​ ಕಿಂಗ್ಸ್​1102 (+0.455)
ಗುಜರಾತ್​ ಟೈಟಾನ್ಸ್​1102 (+0.300)
ಕೋಲ್ಕತ್ತಾ ನೈಟ್​ ರೈಡರ್ಸ್​1102(+0.200)
ಸನ್​ರೈಸರ್ಸ್​ ಹೈದರಾಬಾದ್​1010 (-0.200)
ಮುಂಬೈ ಇಂಡಿಯನ್ಸ್​1010 (-0.300)
ಡೆಲ್ಲಿ ಕ್ಯಾಪಿಟಲ್ಸ್​1010 (-0.455)
ಆರ್​ಸಿಬಿ1010 (-0.779)
ಲಕ್ನೋ ಸೂಪರ್​ ಜೈಂಟ್ಸ್​1010 (-1.000)

ಗುಜರಾತ್​ಗೆ 6 ರನ್​ ಗೆಲುವು


ಭಾನುವಾರ ನಡೆದ ದ್ವಿತೀಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧ ಗುಜರಾತ್​ ಟೈಟಾನ್ಸ್(Gujarat Titans)​ 6 ರನ್​ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್, ಜಸ್​ಪ್ರೀತ್​ ಬುಮ್ರಾ ಘಾತಕದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾಗಿ 6 ವಿಕೆಟ್​ಗೆ 168 ರನ್​ಗಳ ಸಾಧಾರಣ ಮೊತ್ತ ಬಾರಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್(MI vs GT) ಭರ್ತಿ 20 ಓವರ್​ ಆಡಿ​ 9 ವಿಕೆಟ್​ ಕಳೆದುಕೊಂಡು 162 ರನ್​ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು. ಗುಜರಾತ್​ ಗೆಲುವಿನೊಂದಿಗೆ ಹಾಲಿ ಆವೃತ್ತಿಯಲ್ಲಿ ನಡೆದ ಎಲ್ಲ 5 ಪಂದ್ಯಗಳಲ್ಲಿಯೂ ತವರಿನ ತಂಡವೇ ಗೆಲುವು ಸಾಧಿಸಿದಂತಾಯಿತು.

ಇದನ್ನೂ ಓದಿ IPL 2024: ರಣಜಿ ಆಡಲು ಅಸಡ್ಡೆ ತೋರಿದ್ದ ಶ್ರೇಯಸ್​,ಇಶಾನ್​ ಐಪಿಎಲ್​ನಲ್ಲಿ ಡಕೌಟ್​; ಫುಲ್​ ಟ್ರೋಲ್​

ರಾಜಸ್ಥಾನ್​ಗೆ ಗೆಲುವು


ದಿನದ ಮೊದಲ ಐಪಿಎಲ್(IPL 2024)​ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​(RR vs LSG) ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ಸೂಪರ್ ​ಜೈಂಟ್ಸ್​ ವಿರುದ್ಧ 20 ರನ್​ಗಳ ಸೂಪರ್ ಗೆಲುವು ಸಾಧಿಸಿತು. ಇಲ್ಲಿನ ಸವಾಯ್ ಮಾನ್​ಸಿಂಗ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಭಾನುವಾರದ ಡಬಲ್​ ಹೆಡರ್​ನ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ರಾಜಸ್ಥಾನ್,​ ನಾಯಕ ಸಂಜು ಸ್ಯಾಮ್ಸನ್​ ಅವರ ಆಕರ್ಷಕ ಅರ್ಧಶತಕ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 193 ರನ್​ಗಳ ಭರ್ಜರಿ ಮೊತ್ತ ಪೇರಿಸಿತು. ಈ ಸವಾಲನ್ನು ಲಕ್ನೋ ದಿಟ್ಟ ರೀತಿಯಿಂದ ಬೆನ್ನಟ್ಟಿಕೊಂಡು ಹೋದರೂ ಕೂಡ ಅಂತಿಮವಾಗಿ 6 ವಿಕೆಟ್​ಗೆ 173 ರನ್​ ಮಾತ್ರ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

Exit mobile version