Site icon Vistara News

IPL 2024 Prize money: ಐಪಿಎಲ್​ ವಿನ್ನರ್​ಗೆ ಸಿಗುವ ಬಹುಮಾನ ಮೊತ್ತವೆಷ್ಟು? 4ನೇ ಸ್ಥಾನಿ ಆರ್​ಸಿಬಿಗೆ ಸಿಕ್ಕ ಹಣವೆಷ್ಟು?

IPL 2024 Prize money

IPL 2024 Prize money: All you need to know about how much money the winner and runner-up will receive

ಚೆನ್ನೈ: 17ನೇ ಆವೃತ್ತಿಯ ಐಪಿಎಲ್(IPL 2024)​ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಭಾನುವಾರ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ವಿಶ್ವದಲ್ಲೇ ಅತ್ಯಂತ ಶ್ರೀಮಂತ ಟಿ20 ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ವಿಜೇತರು(IPL 2024 Prize money) ಎಷ್ಟು ಹಣ ಪಡೆಯುತ್ತಾರೆ ಎನ್ನುವುದು ಕುತೂಲಕಾರಿ ವಿಚಾರ ಇಂತಿದೆ.

ಫೈನಲ್​ನಲ್ಲಿ ವಿಜೇತ ತಂಡ 20 ಕೋಟಿ ರೂಪಾಯಿ ಬಹುಮಾನವನ್ನು ಪಡೆಯಲಿದೆ. ರನ್ನರ್ ಅಪ್‌ ತಂಡಕ್ಕೆ 15 ಕೋಟಿ ರೂ. ಸಿಗಲಿದೆ. ಮೂರನೇ ಸ್ಥಾನಿಯಾದ ತಂಡಕ್ಕೆ 7 ಕೋಟಿ ಮತ್ತು 4ನೇ ಸ್ಥಾನಿಗೆ 6.5 ಕೋಟಿ ರೂ ಸಿಗಲಿದೆ. ಈಗಾಗಲೇ ರಾಜಸ್ಥಾನ್​ ಮತ್ತು ಆರ್​ಸಿಬಿ ಪ್ಲೇ ಆಫ್​ನಲ್ಲಿ ಸೋಲಿ ಕಂಡು ಕ್ರಮವಾಗಿ 3 ಮತ್ತು ನಾಲ್ಕನೇ ಸ್ಥಾನ ಪಡೆದಿವೆ. ಹೀಗಾಗಿ ರಾಜಸ್ಥಾನ್​ಗೆ(7 ಕೋಟಿ) ಮತ್ತು ಆರ್​ಸಿಬಿಗೆ(6.5 ಕೋಟಿ) ಮೊತ್ತ ಸಿಗಲಿದೆ. ಒಟ್ಟು ಬಹುಮಾನ ಮೊತ್ತ 46.5 ಕೋಟಿ ರೂ. ಆಗಿದೆ.

ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದ ಆಟಗಾರರಿಗೆ 15 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಸದ್ಯ ಆರ್​ಸಿಬಿ ತಂಡದ ವಿರಾಟ್​ ಕೊಹ್ಲಿ ಈ ಬಾರಿಯ ಟೂರ್ನಿಯಲ್ಲಿ 741 ರನ್​ ಬಾರಿಸಿ ಆರೆಂಜ್ ಕ್ಯಾಪ್ ಹೋಲ್ಡರ್​ ಆಗಿದ್ದಾರೆ. ಇವರ ರನ್​ ಹಿಂದಿಕ್ಕಲು ಇನ್ನು ಯಾರಿಗೂ ಅವಕಾಶ ಇಲ್ಲದ ಕಾರಣ ಈ ಪ್ರಶಸ್ತಿ ಇವರಿಗೇ ಸಿಗಲಿದೆ.

ಪರ್ಪಲ್​ ಕ್ಯಾಪ್​ ಸದ್ಯ 24 ವಿಕೆಟ್​ ಪಡೆದಿರುವ ಪಂಜಾಬ್ ಕಿಂಗ್ಸ್​​ ತಂಡದ ಹರ್ಷಲ್​ ಪಟೇಲ್​ ಬಳಿ ಇದೆ. ಆದರೆ ಈ ಕ್ಯಾಪ್​ ಪಡೆಯಲು ಕೆಕೆಆರ್​ ತಂಡದ ಸ್ಪಿನ್ನರ್​ ವರಣ್​ ಚರ್ಕವರ್ತಿಗೆ ಉತ್ತಮ ಅವಕಾಶವಿದೆ. ವರುಣ್​ ಸದ್ಯ 20 ವಿಕೆಟ್​ ಕಿತ್ತಿದ್ದಾರೆ. ಫೈನಲ್​ ಪಂದ್ಯದಲ್ಲಿ 5 ವಿಕೆಟ್​ ಕಿತ್ತರೆ ಈ ಕ್ಯಾಪ್​ ಇವರ ಪಾಲಾಗಲಿದೆ.

ಪಂದ್ಯಾವಳಿಯ ಉದಯೋನ್ಮುಖ ಆಟಗಾರನಿಗೆ 20 ಲಕ್ಷ ರೂಪಾಯಿ ನಗದು ಬಹುಮಾನವನ್ನು ಸಿಗಲಿದೆ. ಋತುವಿನ ಅತ್ಯಂತ ಮೌಲ್ಯಯುತ ಆಟಗಾರ 12 ಲಕ್ಷ ರೂಪಾಯಿ, ಇತರ ಪ್ರಶಸ್ತಿಗಳಾದ-ಪವರ್ ಪ್ಲೇಯರ್ ಆಫ್ ದಿ ಸೀಸನ್, ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಮತ್ತು ಗೇಮ್ ಚೇಂಜರ್ ಆಫ್ ದಿ ಸೀಸನ್ ಪಡೆದ ಆಟಗಾರ ಕ್ರಮವಾಗಿ ರೂ 15 ಲಕ್ಷ ಮತ್ತು ರೂ 12 ಲಕ್ಷ ನಗದು ಬಹುಮಾನ ಪಡೆಯಲಿದ್ದಾರೆ.

ಇದನ್ನೂ ಓದಿ IPL 2024 : ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ

ಐಪಿಎಲ್​ ಟ್ರೋಫಿಯಲ್ಲಿರುವ ಸಂಸ್ಕೃತ ಶ್ಲೋಕದ ಅರ್ಥವೇನು?


ಈ ಬಾರಿ ಚಾಂಪಿಯನ್​ ಯಾರಾಗಬಹುದು ಎನ್ನುವ ಕುತೂಹಲದ ಮಧ್ಯೆ ಟ್ರೋಫಿಯಲ್ಲಿ(IPL Trophy) ಬರೆದಿರುವ ಸಂಸ್ಕೃತ ಶ್ಲೋಕದ(IPL Trophy Shlok) ಅರ್ಥವೇನು? 1983ರ ವಿಶ್ವಕಪ್(1983 Cricket World Cup) ಟ್ರೋಫಿಗೂ ಇರುವ ನಂಟೇನು?​ ಎಂಬ ಮತ್ತೊಂದು ಕುತೂಹಲ ಅಭಿಮಾನಿಗಳದ್ದು. ಇದಕ್ಕೆ ಉತ್ತರ ಇಲ್ಲಿದೆ.

ಹೌದು, ಭಾರತ ತಂಡ 1983ರಲ್ಲಿ ಗೆದ್ದ ಏಕದಿನ ವಿಶ್ವಕಪ್ ಟ್ರೋಫಿ ಮೇಲೆ “ಯತ್ರಾ ಅವಸರ ಪ್ರಾಪ್ನೋತಿಹಿ”(Yatra Pratibha Avsara Prapnotihi) ಎಂದು ಸಂಸ್ಕೃತ ಶ್ಲೋಕವೊಂದನ್ನು ಬರೆಯಲಾಗಿದೆ. ಇದೇ ಶ್ಲೋಕವನ್ನು ಐಪಿಎಲ್​ ಟ್ರೋಫಿಯಲ್ಲಿಯೂ ಬರೆಯಲಾಗಿದೆ. ಇದರ ಅರ್ಥ ಎಲ್ಲಿ ಪ್ರತಿಭೆಗಳು ಇರುತ್ತಾರೋ ಅಲ್ಲಿ ಅವಕಾಶವೂ ಇರುತ್ತದೆ ಎಂದು. ಇದನ್ನೇ ಸ್ಫೂರ್ತಿಯನ್ನಾಗಿಟ್ಟುಕೊಂಡು ಐಪಿಎಲ್​ ಟ್ರೋಫಿಯ ಮೇಲೂ ಈ ಶ್ಲೋಕವನ್ನು ಕೆತ್ತಲಾಗಿದೆ.

Exit mobile version