Site icon Vistara News

IPL 2024 : ಗೆಲುವಿನ ಅಭಿಯಾನ ಮುಂದುವರಿಸುವುದೇ ಧವನ್ ನೇತೃತ್ವದ ಪಂಜಾಬ್​

IPL 2024

ಮೊಹಾಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024)ರಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡ ತನ್ನ ಎರಡನೇ ತವರು ಪಂದ್ಯವನ್ನು ಮಂಗಳವಾರ ಮೊಹಾಲಿಯ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸನ್​ರೈಸರ್ಸ್​​ ಹೈದರಾಬಾದ್ (SRH) ವಿರುದ್ಧ ಆಡಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಋತುವಿನ ತನ್ನ ಆರಂಭಿಕ ಪಂದ್ಯದ ನಂತರ ಕಿಂಗ್ಸ್ ಮತ್ತೆ ಹೊಸ ತವರು ಮೈದಾನಕ್ಕೆ ಮರಳಲಿದೆ. ಆ ಪಂದ್ಯದಲ್ಲಿ, ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನ ಮತ್ತು ಸ್ಯಾಮ್ ಕರ್ರನ್ ಅವರ ಅಮೋಘ ಅರ್ಧಶತಕದ ಹಿನ್ನೆಲೆಯಲ್ಲಿ ಪಂಜಾಬ್ ನಾಲ್ಕು ವಿಕೆಟ್​ಗಳಿಂದ ಗೆದ್ದಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಎರಡು ಪಂದ್ಯಗಳನ್ನು ಸೋತಿದ್ದ ಶಿಖರ್ ಧವನ್ ಮತ್ತು ತಂಡ, ಗುಜರಾತ್ ಟೈಟಾನ್ಸ್ ವಿರುದ್ಧದ ಕೊನೆಯ ಪಂದ್ಯವನ್ನು ಗೆದ್ದಿತ್ತು. ಸದ್ಯ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

ಅಹ್ಮದಾಬಾದ್​ನಲ್ಲಿ ನಡೆದ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 200 ರನ್​ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡವು ಮೂರು ವಿಕೆಟ್ ಮತ್ತು ಒಂದು ಎಸೆತ ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು. ಈ ಋತುವಿನಲ್ಲಿ ಅದ್ಭುತ ಪ್ರದರ್ಶನ ತೋರಿದ ಶಶಾಂಕ್ ಸಿಂಗ್ 29 ಎಸೆತಗಳಲ್ಲಿ ಅಜೇಯ 61 ರನ್ ಗಳಿಸಿದ್ದರು. ಬಹುತೇಕ ಏಕಾಂಗಿಯಾಗಿ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು

ಪಿಬಿಕೆಎಸ್ ಅಸಾಧಾರಣ ಬೌಲಿಂಗ್ ದಾಳಿಯನ್ನು ಹೊಂದಿದೆ. ಹರ್ಪ್ರೀತ್ ಬ್ರಾರ್ 5.69ರ ಎಕಾನಮಿ ರೇಟ್​ನಲ್ಲಿ ರನ್​ಗಲನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ವೇಗಿಗಳು ಪ್ರಭಾವ ಬೀರಲು ವಿಫಲರಾಗಿದ್ದಾರೆ. ಕಿಂಗ್ಸ್ ಪರ ಕಗಿಸೊ ರಬಾಡ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು ನಾಲ್ಕು ಪಂದ್ಯಗಳಿಂದ ಆರು ವಿಕೆಟ್ ಪಡೆದಿದ್ದಾರೆ. ಆದಾಗ್ಯೂ, ಅವರ ಎಕಾನಮಿ 8.81 ರಷ್ಟಿದೆ. ಅರ್ಶ್​ದೀಪ್​ ಸಿಂಗ್ ಕೂಡ 9.14 ಎಕಾನಮಿಯಲ್ಲಿ ಸೋರಿಕೆ ಮಾಡಿ ತುಂಬಾ ದುಬಾರಿಯಾಗಿದ್ದಾರೆ. 2024ರ ಐಪಿಎಲ್ ಹರಾಜಿನಲ್ಲಿ ಹರ್ಷಲ್ ಪಟೇಲ್ ಅವರನ್ನು 11.75 ಕೋಟಿ ರೂ.ಗೆ ಖರೀದಿಸಲಾಗಿತ್ತು. ಆದಾಗ್ಯೂ, ಬಲಗೈ ವೇಗಿ ಕಿಂಗ್ಸ್ ಪರ ಅತ್ಯಂತ ದುಬಾರಿ ಬೌಲರ್ ಆಗಿದ್ದು, 11.31 ಎಕಾನಮಿ ರೇಟ್ ಹೊಂದಿದ್ದಾರೆ.

ಬ್ಯಾಟಿಂಗ್​ನಲ್ಲಿ ಜಾನಿ ಬೈರ್​ಸ್ಟೋವ್ ನಾಲ್ಕು ಪಂದ್ಯಗಳಿಂದ ಕೇವಲ 81 ರನ್ ಗಳಿಸಿದ್ದಾರೆ. ನಾಯಕ ಧವನ್ ನಾಲ್ಕು ಪಂದ್ಯಗಳಿಂದ 34.50 ಸರಾಸರಿಯಲ್ಲಿ 138 ರನ್ ಗಳಿಸಿದ್ದಾರೆ. 131.43 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಆದಾಗ್ಯೂ, ಲಕ್ನೋ ವಿರುದ್ಧ 50 ಎಸೆತಗಳಲ್ಲಿ 70 ರನ್ ಗಳಿಸಿದ್ದನ್ನು ಹೊರತುಪಡಿಸಿದ್ದರೆ ಉತ್ತಮ ಪ್ರದರ್ಶನ ನೀಡಿಲ್ಲ. ಕರ್ರನ್ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದಾಗಿನಿಂದ ಬ್ಯಾಟ್​ನಲ್ಲಿ ಮೌನವಾಗಿದ್ದಾರೆ. ಶಶಾಂಕ್, ಕಳೆದ ಪಂದ್ಯದಲ್ಲಿ ವೀರೋಚಿತ ಪ್ರದರ್ಶನ ನೀಡಿದ ನಂತರ, ಬ್ಯಾಟಿಂಗ್ ಬಡ್ತಿ ಪಡೆಯಬಹುದು.

ಉತ್ತಮ ರನ್​ರೇಟ್ ಹೊಂದಿರುವ ಎಸ್​ಆರ್​ಎಚ್

ಸನ್​ರೈಸರ್ಸ್​ ಹೈದರಾಬಾದ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪಂಜಾಬ್ನಷ್ಟೇ ಅಂಕಗಳನ್ನು ಹೊಂದಿದೆ. ಆದರೆ ಉತ್ತಮ ನೆಟ್ ರನ್ ರೇಟ್ ಹೊಂದಿದೆ. ಈಡನ್ ಗಾರ್ಡನ್ಸ್​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪ್ರಾರಂಭಿಸಿದ ಹೈದರಾಬಾದ್ ತಂಡ ತವರಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 31 ರನ್​ಗಳ ಜಯದೊಂದಿಗೆ ಪುಟಿದೆದ್ದಿತ್ತು. ಆದರೆ ಗುಜರಾತ್ ವಿರುದ್ಧದ ಮುಂದಿನ ಪಂದ್ಯವನ್ನು ಏಳು ವಿಕೆಟ್ ಗಳಿಂದ ಕಳೆದುಕೊಂಡರು.

ಪ್ಯಾಟ್ ಕಮಿನ್ಸ್ ಮತ್ತು ತಂಡವು ತನ್ನ ಹಿಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ದಾಖಲಿಸಿತು. ಹೈದರಾಬಾದ್ನಲ್ಲಿ ನಡೆದ ಈ ಪಂದ್ಯದಲ್ಲಿ ಸೂಪರ್ ಕಿಂಗ್ಸ್ ತಂಡವನ್ನು 5 ವಿಕೆಟ್ ನಷ್ಟಕ್ಕೆ 165 ರನ್​​ಗಳಿಗೆ ಸೀಮಿತಗೊಳಿಸಿದ ಎಸ್​ಆರ್​​ಎಚ್​​ 11 ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್ ಜಯ ಸಾಧಿಸಿತು.

ಇದನ್ನೂ ಓದಿ IPL 2024 : ಬ್ರೂಕ್​ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಲಿಜಾದ್​ ಯಾರು?

ಆರೆಂಜ್ ಆರ್ಮಿಯ ಬ್ಯಾಟಿಂಗ್ ವಿಭಾಗವು ಸಮೃದ್ಧ ಫಾರ್ಮ್ ನಲ್ಲಿದೆ. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ಆಟಗಾರರು ನಿರ್ಭೀತ ಕ್ರಿಕೆಟ್ ಆಡಿ ಎದುರಾಳಿ ಬೌಲಿಂಗ್ ದಾಳಿಗೆ ಸೆಡ್ಡು ಹೊಡೆಯುತ್ತಿದೆ. ಈ ಋತುವಿನಲ್ಲಿ ಹೆಡ್ 213.16 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಮತ್ತೊಂದೆಡೆ, ಶರ್ಮಾ 217.57 ರ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಹಿಂದಿನ ಹಣಾಹಣಿಯಲ್ಲಿ ಅವರು ಕೇವಲ 12 ಎಸೆತಗಳಲ್ಲಿ 37 ರನ್ ಗಳಿಸಿ ಉತ್ತಮ ಆರಂಭ ತಂದುಕೊಟ್ಟಿದ್ದರು.

ಐಡೆನ್ ಮಾರ್ಕ್ರಮ್ ಕಳೆದ ಪಂದ್ಯದಲ್ಲಿ ಋತುವಿನ ಮೊದಲ ಅರ್ಧಶತಕವನ್ನು ಗಳಿಸಿದರು. ಆದಾಗ್ಯೂ, ಹೆನ್ರಿಚ್​​ ಕ್ಲಾಸೆನ್ ಹೈದರಾಬಾದ್ ತಂಡದ ಅತ್ಯಂತ ಪ್ರಭಾವಶಾಲಿ ಬ್ಯಾಟರ್​ ಆಗಿದ್ದಾರೆ. ಅವರು ನಾಲ್ಕು ಪಂದ್ಯಗಳಲ್ಲಿ 88.50 ಸರಾಸರಿ ಮತ್ತು 203.45 ಸ್ಟ್ರೈಕ್ ರೇಟ್​ನಲ್ಲಿ 177 ರನ್ ಗಳಿಸಿದ್ದಾರೆ.

ಎಸ್​ಆರ್​​ಎಚ್​​ ಬೌಲಿಂಗ್ ಘಟಕವು ಅಷ್ಟು ಅಪಾಯಕಾರಿಯಾಗಿಲ್ಲ. ಚೆನ್ನೈ ವಿರುದ್ಧದ ಕೊನೆಯ ಪಂದ್ಯದಲ್ಲಿ ಅವರು ಉತ್ತಮ ಪ್ರಯತ್ನವನ್ನು ಮಾಡಿದ್ದರು. ಲೆಗ್ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಅವರ ಕಳಪೆ ಫಾರ್ಮ್ ಹೈದರಾಬಾದ್​ಗೆ ಚಿಂತೆಯ ಅಂಶವಾಗಿದೆ. 26ರ ಹರೆಯದ ವೇಗಿ ನಾಲ್ಕು ಪಂದ್ಯಗಳಿಂದ 48.33ರ ಸರಾಸರಿಯಲ್ಲಿ ಕೇವಲ ಮೂರು ವಿಕೆಟ್​ಗಳನ್ನು ಪಡೆದಿದ್ದಾರೆ ಮತ್ತು 11.15ರ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ದಾರೆ.

ಪಿಚ್​ ವರದಿ

ಇದು ಈ ಮೈದಾನದಲ್ಲಿ ಆಡಲಾಗುವ ಎರಡನೇ ಐಪಿಎಲ್ ಪಂದ್ಯ. ಮಧ್ಯಾಹ್ನದ ಪಂದ್ಯವಾಗಿದ್ದ ಮೊದಲ ಪಂದ್ಯದಲ್ಲಿ, ದೀಪಗಳ ಅಡಿಯಲ್ಲಿ ಬ್ಯಾಟಿಂಗ್ ಮಾಡಲು ಪಿಚ್ ನೆರವು ನೀಡಿತ್ತು. ಆದರೆ ಕಳೆದ ಋತುವಿನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಂಡಗಳಿಗೆ ಮೊತ್ತವನ್ನು ಬೆನ್ನಟ್ಟುವುದು ಕಷ್ಟಕರವಾಗಿತ್ತು. ಚೇಸಿಂಗ್ ತಂಡಗಳು ಕೇವಲ ಎರಡು ಪಂದ್ಯಗಳನ್ನು ಗೆದ್ದರೆ, ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಆರು ಪಂದ್ಯಗಳನ್ನು ಗೆದ್ದಿದ್ದವು. ಮೊದಲ ಇನ್ನಿಂಗ್ಸ್ ನಲ್ಲಿ ಸರಾಸರಿ ಸ್ಕೋರ್ 174 ಆಗಿತ್ತು.

ಸಂಭಾವ್ಯ ಆಡುವ ಬಳಗ

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್): ಶಿಖರ್ ಧವನ್ (ನಾಯಕ), ಜಾನಿ ಬೈರ್​ಸ್ಟೋವ್​, ಪ್ರಭ್​​ಸಿಮ್ರನ್ ಸಿಂಗ್, ಸ್ಯಾಮ್ ಕರ್ರನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಿಕಂದರ್ ರಾಜಾ, ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ, ಹರ್ಪ್ರೀತ್ ಬ್ರಾರ್, ಕಗಿಸೊ ರಬಾಡ, ಹರ್ಷಲ್ ಪಟೇಲ್.

ಸನ್​ರೈಸರ್ಸ್​ ಹೈದರಾಬಾದ್ (ಎಸ್ಆರ್​ಎಚ್​​ ): ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಮ್, ಶಹಬಾಜ್ ಅಹ್ಮದ್, ಹೆನ್ರಿಕ್ ಕ್ಲಾಸೆನ್ (ವಿಕೆಟ್​ ಕೀಪರ್​), ಅಬ್ದುಲ್ ಸಮದ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಟಿ ನಟರಾಜನ್, ಮಯಾಂಕ್ ಮಾರ್ಕಂಡೆ.

Exit mobile version