ಬೆಂಗಳೂರು: ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ(ICC World Cup) ಶ್ರೇಷ್ಠ ಆಲ್ರೌಂಡರ್ ಪ್ರದರ್ಶನ ತೋರಿದ ಕರ್ನಾಟಕ ಮೂಲಕ ನ್ಯೂಜಿಲ್ಯಾಂಡ್ ತಂಡದ ಆಟಗಾರ ರಚಿನ್ ರವೀಂದ್ರ(Rachin Ravindra) ಮೇಲೆ ಹಲವು ಐಪಿಎಲ್(IPL 2024) ಫ್ರಾಂಚೈಸಿಗಳು ಕಣ್ಣಿಟ್ಟಿದೆ. ಮೂಲಗಳ ಪ್ರಕಾರ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ದೊಡ್ಡ ಮೊತ್ತ ನೀಡಿಯಾದರೂ ಖರೀದಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಡಿಸೆಂಬರ್ 19 ರಂದು ದುಬೈನಲ್ಲಿ ಮಿನಿ ಹರಾಜು ನಿಗದಿಯಾಗಿದ್ದು, ಎಲ್ಲ 10 ತಂಡಗಳಿಗೆ ತಾವು ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ನವೆಂಬರ್ 26 ಅಂತಿಮ ಗಡುವಾಗಿದೆ. ಎಲ್ಲ ತಂಡಗಳು ಈಗಾಗಲೇ ಆಟಗಾರರ ಪಟ್ಟುಗಳನ್ನು ರೆಡಿ ಮಾಡಿ ಇಟ್ಟುಕೊಂಡಿದೆ. ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡದಿಂದ ಬೆನ್ ಸ್ಟೋಕ್ಸ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಅಧಿಕಾವಾಗಿದೆ. ಅವರ ಬದಲು ರವೀನ್ ಅವರನ್ನು ತಂಡಕ್ಕ ಸೆರಿಸಿಕೊಳ್ಳಲು ಫ್ರಾ.ಚೈಸಿ ಒಲವು ತೋರಿದೆ ಎನ್ನಲಾಗಿದೆ. ಇವರು ಮಾತ್ರವಲ್ಲದೆ ಅಫಘಾನಿಸ್ತಾನದ ಅಜ್ಮತುಲ್ಲ ಒಮರ್‌ಜಾಯ್ ಅವರನ್ನು ಕೂಡ ಖರೀದಿಸುವ ಸಾಧ್ಯತೆಗಳಿವೆ.
ಸ್ಟೋಕ್ಸ್ಗೆ ಕೊಕ್
ಮೊಣಕಾಲಿನ ಶಸ ಚಿಕಿತ್ಸೆಗೆ ಒಳಗಾಗಲಿರುವ ಬೆನ್ ಸ್ಟೋಕ್ಸ್ 2024ರ ಐಪಿಎಲ್ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ಮಿನಿ ಹರಾಜಿನಲ್ಲಿ ಅವರನ್ನು 16.25 ಕೋಟಿ ರೂ.ಗೆ ಸಿಎಸ್‌ಕೆ ಖರೀದಿ ಮಾಡಿತ್ತು. ಆದರೆ ಅವರು ಕಾಲಿನ ಬೆರಳು ಗಾಯದಿಂದಾಗಿ ಕೇವಲ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಉಳಿದ ಎಲ್ಕಲ ಪಂದ್ಯಗಳಿಂದಲೂ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿಯೂ ಧೋನಿ ಸಾರಥ್ಯದ ಚೆನ್ನೈ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಇದನ್ನೂ ಓದಿ Rachin Ravindra: ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ; ರಚಿನ್ ರವೀಂದ್ರ
ಏಕದಿನ ಕ್ರಿಕೆಟ್ಗೆ ನಿವೃತ್ತಿಯಾಗಿದ್ದ ಸ್ಟೋಕ್ಸ್ ಅವರನ್ನು ಏಕದಿನ ವಿಶ್ವಕಪ್ ಆಡುವ ಸಲುವಾಗಿ ನಿವೃತ್ತಿಯನ್ನು ವಾಪಸ್ ಪಡೆದು ಅವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರ ಅವರು ಇಲ್ಲಿಯೂ ಗಾಯದಿಂದಲೇ ಕಳಪೆ ಪ್ರದರ್ಶನ ತೋರಿದ್ದರು. ಅಂತಿಮ ಹಂತದಲ್ಲಿ ಒಂದು ಶತಕ ಬಾರಿಸಿದ್ದರು. ಇದೊಂದೆ ಅವರ ಸಾಧನೆಯಾಗಿತ್ತು. ಸದ್ಯ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದು ಸಂಪೂರ್ಣವಾಗಿ ಗುಣಮುಖರಾಗಲು 2 ತಿಂಗಳ ಕಾಲಾವಕಾಶದ ಅಗತ್ಯವಿದೆ ಎನ್ನಲಾಗಿದೆ. ಅತಿಯಾದ ಕ್ರಿಕೆಟ್ ಆಡಿ ಪದೇಪದೆ ಗಾಯಕ್ಕೆ ತುತ್ತಾಗುತ್ತಿರುವ ಅವರು ಐಪಿಎಲ್ನಿಂದ ದೂರ ಉಳಿಯುವ ಸಾಧ್ಯತೆಯೂ ಇದೆ. ಹೀಗಾಗಿ ಅವರನ್ನು ಚೆನ್ನೈ ತಂಡ ಈ ಬಾರಿ ಕೈಬಿಟ್ಟು ಅವಕ ಸ್ಥಾನಕ್ಕೆ ರಚೀನ್ ರವೀಂದ್ರ ಅವರನ್ನು ಖರೀದಿ ಮಾಡುವ ಸಾಧ್ಯತೆ ಅಧಿಕವಾಗಿದೆ.
ಆರ್ಸಿಬಿ ಬಗ್ಗೆ ಒಲವು
ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ರಚಿನ್ ಅವರನ್ನು ಖರಿದೀಸುವ ರೇಸ್ನಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ ವಿಶ್ವಕಪ್ ಆಡುವ ವೇಳೆ ಸ್ವತಃ ರಚಿನ್ ಅವರು ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುವ ಆಸೆ ಇದೆ ಎಂದು ಹೇಳಿದ್ದರು. ರಚಿನ್ ಅವರು ಯಾವ ತಂಡದ ಪಾಲಾಗಲಿದ್ದಾರೆ ಎನ್ನುವುದು ಡಿ.10ಕ್ಕೆ ನಿರ್ಧಾರವಾಗಲಿದೆ.