IPL 2024: ಐಪಿಎಲ್​ನಲ್ಲಿ ಧೋನಿ ತಂಡ ಸೇರಲಿದ್ದಾರೆ ರಚಿನ್​ ರವೀಂದ್ರ Vistara News

ಐಪಿಎಲ್ 2023

IPL 2024: ಐಪಿಎಲ್​ನಲ್ಲಿ ಧೋನಿ ತಂಡ ಸೇರಲಿದ್ದಾರೆ ರಚಿನ್​ ರವೀಂದ್ರ

ನ್ಯೂಜಿಲ್ಯಾಂಡ್​ ತಂಡದ ಆಟಗಾರ ರಚಿನ್​ ರವೀಂದ್ರ(Rachin Ravindra) ಅವರನ್ನು ಚೆನ್ನೈ ಸೂಪರ್​ ಕಿಂಗ್ಸ್​(Chennai Super Kings) ತಂಡ ಖರೀದಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

rachin Ravindra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ(ICC World Cup) ಶ್ರೇಷ್ಠ ಆಲ್​ರೌಂಡರ್​ ಪ್ರದರ್ಶನ ತೋರಿದ ಕರ್ನಾಟಕ ಮೂಲಕ ನ್ಯೂಜಿಲ್ಯಾಂಡ್​ ತಂಡದ ಆಟಗಾರ ರಚಿನ್​ ರವೀಂದ್ರ(Rachin Ravindra) ಮೇಲೆ ಹಲವು ಐಪಿಎಲ್​(IPL 2024)​ ಫ್ರಾಂಚೈಸಿಗಳು ಕಣ್ಣಿಟ್ಟಿದೆ. ಮೂಲಗಳ ಪ್ರಕಾರ ಅವರನ್ನು ಚೆನ್ನೈ ಸೂಪರ್​ ಕಿಂಗ್ಸ್​(Chennai Super Kings) ದೊಡ್ಡ ಮೊತ್ತ ನೀಡಿಯಾದರೂ ಖರೀದಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಡಿಸೆಂಬರ್ 19 ರಂದು ದುಬೈನಲ್ಲಿ ಮಿನಿ ಹರಾಜು ನಿಗದಿಯಾಗಿದ್ದು, ಎಲ್ಲ 10 ತಂಡಗಳಿಗೆ ತಾವು ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ನವೆಂಬರ್​ 26 ಅಂತಿಮ ಗಡುವಾಗಿದೆ. ಎಲ್ಲ ತಂಡಗಳು ಈಗಾಗಲೇ ಆಟಗಾರರ ಪಟ್ಟುಗಳನ್ನು ರೆಡಿ ಮಾಡಿ ಇಟ್ಟುಕೊಂಡಿದೆ. ಹಾಲಿ ಚಾಂಪಿಯನ್​ ಸಿಎಸ್‌ಕೆ ತಂಡದಿಂದ ಬೆನ್ ಸ್ಟೋಕ್ಸ್​ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಅಧಿಕಾವಾಗಿದೆ. ಅವರ ಬದಲು ರವೀನ್​ ಅವರನ್ನು ತಂಡಕ್ಕ ಸೆರಿಸಿಕೊಳ್ಳಲು ಫ್ರಾ.ಚೈಸಿ ಒಲವು ತೋರಿದೆ ಎನ್ನಲಾಗಿದೆ. ಇವರು ಮಾತ್ರವಲ್ಲದೆ ಅಫಘಾನಿಸ್ತಾನದ ಅಜ್ಮತುಲ್ಲ ಒಮರ್‌ಜಾಯ್‌ ಅವರನ್ನು ಕೂಡ ಖರೀದಿಸುವ ಸಾಧ್ಯತೆಗಳಿವೆ.

ಸ್ಟೋಕ್ಸ್​ಗೆ ಕೊಕ್​

ಮೊಣಕಾಲಿನ ಶಸ ಚಿಕಿತ್ಸೆಗೆ ಒಳಗಾಗಲಿರುವ ಬೆನ್ ಸ್ಟೋಕ್ಸ್​ 2024ರ ಐಪಿಎಲ್ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ಮಿನಿ ಹರಾಜಿನಲ್ಲಿ ಅವರನ್ನು 16.25 ಕೋಟಿ ರೂ.ಗೆ ಸಿಎಸ್‌ಕೆ ಖರೀದಿ ಮಾಡಿತ್ತು. ಆದರೆ ಅವರು ಕಾಲಿನ ಬೆರಳು ಗಾಯದಿಂದಾಗಿ ಕೇವಲ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಉಳಿದ ಎಲ್ಕಲ ಪಂದ್ಯಗಳಿಂದಲೂ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿಯೂ ಧೋನಿ ಸಾರಥ್ಯದ ಚೆನ್ನೈ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು.

ಇದನ್ನೂ ಓದಿ Rachin Ravindra: ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ; ರಚಿನ್​ ರವೀಂದ್ರ

ಏಕದಿನ ಕ್ರಿಕೆಟ್​ಗೆ ನಿವೃತ್ತಿಯಾಗಿದ್ದ ಸ್ಟೋಕ್ಸ್​ ಅವರನ್ನು ಏಕದಿನ ವಿಶ್ವಕಪ್​ ಆಡುವ ಸಲುವಾಗಿ ನಿವೃತ್ತಿಯನ್ನು ವಾಪಸ್ ಪಡೆದು ಅವರನ್ನು ವಿಶ್ವಕಪ್​ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರ ಅವರು ಇಲ್ಲಿಯೂ ಗಾಯದಿಂದಲೇ ಕಳಪೆ ಪ್ರದರ್ಶನ ತೋರಿದ್ದರು. ಅಂತಿಮ ಹಂತದಲ್ಲಿ ಒಂದು ಶತಕ ಬಾರಿಸಿದ್ದರು. ಇದೊಂದೆ ಅವರ ಸಾಧನೆಯಾಗಿತ್ತು. ಸದ್ಯ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದು ಸಂಪೂರ್ಣವಾಗಿ ಗುಣಮುಖರಾಗಲು 2 ತಿಂಗಳ ಕಾಲಾವಕಾಶದ ಅಗತ್ಯವಿದೆ ಎನ್ನಲಾಗಿದೆ. ಅತಿಯಾದ ಕ್ರಿಕೆಟ್​ ಆಡಿ ಪದೇಪದೆ ಗಾಯಕ್ಕೆ ತುತ್ತಾಗುತ್ತಿರುವ ಅವರು ಐಪಿಎಲ್​ನಿಂದ ದೂರ ಉಳಿಯುವ ಸಾಧ್ಯತೆಯೂ ಇದೆ. ಹೀಗಾಗಿ ಅವರನ್ನು ಚೆನ್ನೈ ತಂಡ ಈ ಬಾರಿ ಕೈಬಿಟ್ಟು ಅವಕ ಸ್ಥಾನಕ್ಕೆ ರಚೀನ್​ ರವೀಂದ್ರ ಅವರನ್ನು ಖರೀದಿ ಮಾಡುವ ಸಾಧ್ಯತೆ ಅಧಿಕವಾಗಿದೆ.

ಆರ್​ಸಿಬಿ ಬಗ್ಗೆ ಒಲವು

ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕೂಡ ರಚಿನ್​ ಅವರನ್ನು ಖರಿದೀಸುವ ರೇಸ್​ನಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ ವಿಶ್ವಕಪ್​ ಆಡುವ ವೇಳೆ ಸ್ವತಃ ರಚಿನ್​ ಅವರು ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುವ ಆಸೆ ಇದೆ ಎಂದು ಹೇಳಿದ್ದರು. ರಚಿನ್​ ಅವರು ಯಾವ ತಂಡದ ಪಾಲಾಗಲಿದ್ದಾರೆ ಎನ್ನುವುದು ಡಿ.10ಕ್ಕೆ ನಿರ್ಧಾರವಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಐಪಿಎಲ್ 2023

IPL 2024: ಶಮಿಗೆ ಬಿಗ್ ಆಫರ್​ ನೀಡಿದ ಐಪಿಎಲ್​ ಫ್ರಾಂಚೈಸಿ; ಶಮಿ ನಿರ್ಧಾರವೇನು?

ಮೊಹಮ್ಮದ್ ಶಮಿ(Mohammed Shami) ಅವರನ್ನು ಟ್ರೇಡಿಂಗ್​ ಮೂಲಕ ಖರೀದಿ ಮಾಡಲು ಐಪಿಎಲ್(IPL 2024)​ ಫ್ರಾಂಚೈಸಿಯೊಂದು ಆಸಕ್ತಿ ತೋರಿದೆ ಎಂದು ಗುಜರಾತ್ ಟೈಟಾನ್ಸ್​ನ ಸಿಇಒ(Gujarat Titans CEO) ಮಾಹಿತಿ ನೀಡಿದ್ದಾರೆ.

VISTARANEWS.COM


on

mohammed shami ipl
Koo

ಅಹಮದಾಬಾದ್​: ಮೊನಚಾದ ಬೌಲಿಂಗ್‌ ಮೂಲಕ ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್‌ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿ ದೇಶದ ಶತಕೋಟಿ ಜನರ ಮನಗೆದ್ದ, ಟೀಮ್​ ಇಂಡಿಯಾ ವೇಗಿ ಮೊಹಮ್ಮದ್ ಶಮಿ(Mohammed Shami) ಅವರನ್ನು ಟ್ರೇಡಿಂಗ್​ ಮೂಲಕ ಖರೀದಿ ಮಾಡಲು ಐಪಿಎಲ್(IPL 2024)​ ಫ್ರಾಂಚೈಸಿಯೊಂದು ಆಸಕ್ತಿ ತೋರಿದೆ ಎಂದು ಗುಜರಾತ್ ಟೈಟಾನ್ಸ್​ನ ಸಿಇಒ(Gujarat Titans CEO) ಮಾಹಿತಿ ನೀಡಿದ್ದಾರೆ.

ಈಗಾಗಲೇ ಎಲ್ಲ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಉಳಿಸಿಕೊಂಡಿರುವ ಮತ್ತು ಹರಾಜಿಗೆ ಬಿಟ್ಟಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಮಧ್ಯೆ ಕೆಲ ಫ್ರಾಂಚೈಸಿಗಳು ಡಿ.19ರಂದು ನಡೆಯುವ ಆಟಗಾರರ ಹರಾಜಿಗೂ ಮುನ್ನ ಟ್ರೆಡಿಂಗ್​ ಆಯ್ಕೆ ಮೂಲಕ ಕೆಲ ತಂಡದ ಸ್ಟಾರ್​ ಆಟಗಾರರನ್ನು ಖರೀದಿ ಮಾಡುತ್ತಿದೆ. ಈ ಮಧ್ಯೆ ಮೊಹಮ್ಮದ್​ ಶಮಿ ಅವರನ್ನು ಟ್ರೇಡ್​ ಮಾಡಲು ಫ್ರಾಂಚೈಸಿಯೊಂದು ಆಸಕ್ತಿ ತೋರಿದೆ ಎಂದು ಗುಜರಾತ್ ಟೈಟಾನ್ಸ್ ತಂಡದ ಸಿಇಒ ಕರ್ನಲ್ ಅರವಿಂದರ್ ಸಿಂಗ್ ಖಚಿತಪಡಿಸಿದ್ದಾರೆ. ಹೀಗಾಗಿ ಶಮಿ ಗುಜರಾತ್ ಬಿಟ್ಟು ಬೇರೆ ತಂಡ ಸೇರಿದರೂ ಅಚ್ಚರಿ ಪಡಬೇಕಿಲ್ಲ. 2 ಆವೃತ್ತಿಗಳ್ಲಲಿ ತಂಡದ ನಾಯಕನಾಗಿದ್ದ ಹಾರ್ದಿಕ್​ ಪಾಂಡ್ಯ ಅವರು ಮುಂಬೈ ಸೇರಿರುವಾಗ ಶಮಿ ಬೇರೆ ತಂಡ ಸೇರುವಲ್ಲಿ ಯಾವುದೇ ಅಚ್ಚರಿ ಇಲ್ಲ.

“ಮೊಹಮ್ಮದ್ ಶಮಿ ಅವರನ್ನು ಐಪಿಎಲ್ ಫ್ರಾಂಚೈಸಿಯೊಂದು ಸಂಪರ್ಕಿಸಿರುವುದು ನಿಜ. ಆದರೆ ಯಾವ ಫ್ರಾಂಚೈಸಿ ಎಂದು ಹೇಳಲು ಸಾಧ್ಯವಿಲ್ಲ” ಎಂದು ಕರ್ನಲ್ ಅರವಿಂದರ್ ಸಿಂಗ್ ಹೇಳಿದ್ದಾರೆ. ಶಮಿ ಅವರು 16ನೇ ಆವೃತ್ತಿಯ ಐಪಿಎಲ್​ನಲ್ಲಿ 17 ಪಂದ್ಯಗಳನ್ನು ಆಡಿ 28 ವಿಕೆಟ್ ಕಬಳಿಸಿದ್ದರು. ಜತೆಗೆ ತಂಡವನ್ನು ಫೈನಲ್​ ತಲುಪಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು.

ಇತ್ತೀಚೆಗೆ ಮುಕ್ತಾಯ ಕಂಡ ಏಕದಿನ ವಿಶ್ವಕಪ್​ನಲ್ಲಿ ಶಮಿ ಘಾತಕ ಬೌಲಿಂಗ್​ ಮೂಲಕ ಗಮನಸೆಳೆದಿದ್ದರು. 7 ಪಂದ್ಯಗಳನ್ನು ಆಡಿ ಒಟ್ಟು 24 ವಿಕೆಟ್ ಕಬಳಿಸಿ ಟೂರ್ನಿಯ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. ಅದರಲ್ಲೂ ನ್ಯೂಜಿಲ್ಯಾಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ 7 ವಿಕೆಟ್​ ಕಿತ್ತು ಮಿಂಚಿದ್ದರು. ಅವರ ಈ ಪ್ರದರ್ಶನ ಕಂಡ ಅನೇಕ ಫ್ರಾಂಚೈಸಿ ಅವರುನ್ನು ಟ್ರೇಡ್ ಮಾಡಲು ಆಸಕ್ತಿ ತೋರಿದಂತಿದೆ.

ಇದನ್ನೂ ಓದಿ Mohammed Shami: ಪಾದದ ನೋವನ್ನು ಮರೆಮಾಚಿ ದೇಶಕ್ಕಾಗಿ ವಿಶ್ವಕಪ್​ ಆಡಿದ ಶಮಿ

ಪಾದದ ನೋವನ್ನು ಮರೆತು ವಿಶ್ವಕಪ್​ ಆಡಿದ ಶಮಿ?

ಮೊಹಮ್ಮದ್​ ಶಮಿ(Mohammed Shami) ಅವರು ತಮ್ಮ ಪಾದದ ನೋವನ್ನು ಸಹಿಸಿಕೊಂಡು ದೇಶಕ್ಕಾಗಿ ಆಡಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಶಮಿ ಆಡುವುದು ಅನುಮಾನ ಎಂಬ ಸುದ್ದಿ ಕೇಳಿಬಂದ ವೇಳೆ ಈ ವಿಚಾರ ತಿಳಿದುಬಂದಿದೆ. ಆದರೆ ಶಮಿ ಅವರು ಯಾವುದೇ ಅಧಿಕೃತ ಮಾಗಿತಿ ನೀಡಿಲ್ಲ.

ಕೆಳ ದಿನಗಳ ಹಿಂದೆ ಅಪಘಾತದ ಬಳಿಕ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬರ ಪ್ರಾಣವನ್ನು ಉಳಿಸುವ ಮೂಲಕ ಮೊಹಮ್ಮದ್‌ ಶಮಿ ಅವರು ಮಾನವೀಯತೆ ಮೆರೆದಿದ್ದರು. ಈ ಕುರಿತು ಮೊಹಮ್ಮದ್‌ ಶಮಿ ಅವರೇ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಅಪ್‌ಲೋಡ್‌ ಮಾಡುವ ಮೂಲಕ ಮಾಹಿತಿ ನೀಡಿದ್ದರು. “ಒಂದು ಜೀವ ಉಳಿಸಿದ ಖುಷಿ ನನ್ನದಾಯಿತು. ಈ ವ್ಯಕ್ತಿ ತುಂಬ ಅದೃಷ್ಟವಂತ. ಉತ್ತರಾಖಂಡದ ನೈನಿತಾಲ್‌ ಬಳಿ ಈಗಷ್ಟೇ ಕಾರೊಂದು ಬೆಟ್ಟದಿಂದ ಕೆಳಗೆ ಬಿತ್ತು. ಕಾರಿನಲ್ಲಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಇದರಿಂದ ಕಾರಿನಲ್ಲಿದ್ದ ವ್ಯಕ್ತಿಗೆ ಮರು ಜನ್ಮ ಸಿಕ್ಕಂತಾಗಿದೆ” ಎಂದು ಪೋಸ್ಟ್‌ ಮಾಡಿದ್ದರು. ಇದಕ್ಕೆ ಜನರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Continue Reading

ಐಪಿಎಲ್ 2023

MS Dhoni: ಓ ಕ್ಯಾಪ್ಟನ್‌, ಮೈ ಕ್ಯಾಪ್ಟನ್!‌ ಧೋನಿಗೆ ಹೀಗೆ ಅಂದಿದ್ದೇಕೆ ಚೆನ್ನೈ ಸೂಪರ್‌ ಕಿಂಗ್ಸ್?

ಟ್ವಿಟರ್‌ ಖಾತೆಯಲ್ಲಿ ಈ ಸಲದ ಐಪಿಎಲ್ 2023ರ ಚಾಂಪಿಯನ್‌ ತಂಡ ಈ ವಿಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಈ ಸಲದ ಧೋನಿ ಅವರ ಆಟದ ಕ್ಷಣಗಳಿದ್ದು, “ಓ ಕ್ಯಾಪ್ಟನ್, ನನ್ನ ಕ್ಯಾಪ್ಟನ್” ಎಂಬ ಕ್ಯಾಪ್ಷನ್‌ ಅನ್ನು ಇದಕ್ಕೆ ನೀಡಲಾಗಿದೆ. ಇದು ಖ್ಯಾತ ಕವಿ ವಾಲ್ಟ್‌ ವ್ಹಿಟ್‌ಮನ್‌ನ ಕವನದ ಶೀರ್ಷಿಕೆಯಾಗಿದೆ.

VISTARANEWS.COM


on

CSK team tribute to MS Dhoni
Koo

ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರಲ್ಲಿ ಎಂ.ಎಸ್.‌ ಧೋನಿ (MS Dhoni) ಪಾಲ್ಗೊಂಡಿರುವ ಹಲವು ಪ್ರಮುಖ ಕ್ಷಣಗಳನ್ನು ಸೇರಿಸಿದ ಒಂದು ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (Chennai super kings- CSK) ತಂಡ ತನ್ನ ನಾಯಕನಿಗೆ ಭಾವನಾತ್ಮಕ ವಂದನೆ ಸಲ್ಲಿಸಿದೆ.

ಟ್ವಿಟರ್‌ ಖಾತೆಯಲ್ಲಿ ಈ ಸಲದ ಐಪಿಎಲ್ 2023ರ ಚಾಂಪಿಯನ್‌ ತಂಡ ಈ ವಿಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಈ ಸಲದ ಧೋನಿ ಅವರ ಆಟದ ಕ್ಷಣಗಳಿದ್ದು, “ಓ ಕ್ಯಾಪ್ಟನ್, ನನ್ನ ಕ್ಯಾಪ್ಟನ್” ಎಂಬ ಕ್ಯಾಪ್ಷನ್‌ ಅನ್ನು ಇದಕ್ಕೆ ನೀಡಲಾಗಿದೆ. ಇದು ಖ್ಯಾತ ಕವಿ ವಾಲ್ಟ್‌ ವ್ಹಿಟ್‌ಮನ್‌ನ ಕವನದ ಶೀರ್ಷಿಕೆಯಾಗಿದೆ.

ಧೋನಿ ಸದ್ಯ ಎಡ ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಮುಂಬೈನಲ್ಲಿ ಮೊಣಕಾಲಿನ ಸರ್ಜರಿಗೆ ಒಳಗಾಗಿದ್ದಾರೆ. ಹೆಸರಾಂತ ಕ್ರೀಡಾ ಮೂಳೆ ಶಸ್ತ್ರಚಿಕಿತ್ಸಕ ಡಾ. ದಿನ್ಶಾ ಪರ್ದಿವಾಲಾ ಅವರಿಂದ ಧೋನಿ ಚಿಕಿತ್ಸೆ ಪಡೆದಿದ್ದಾರೆ. ದಿನ್ಶಾ ಅವರು ಬಿಸಿಸಿಐ ವೈದ್ಯಕೀಯ ಸಮಿತಿಯಲ್ಲಿದ್ದು, ರಿಷಭ್ ಪಂತ್ ಸೇರಿದಂತೆ ಹಲವಾರು ಭಾರತೀಯ ಕ್ರಿಕೆಟಿಗರಿಗೆ ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ.

ಮಹೇಂದ್ರ ಸಿಂಗ್‌ ಧೋನಿ ಈ ಬಾರಿ ಐಪಿಎಲ್‌ ಸ್ಪರ್ಧೆಯಲ್ಲಿ ತಮ್ಮ ತಂಡವನ್ನು ದಾಖಲೆ ಐದನೇ ಬಾರಿಗೆ ಪ್ರಶಸ್ತಿಯತ್ತ ಮುನ್ನಡೆಸಿದ್ದರು. ಮುಂದಿನ ವರ್ಷದ ಐಪಿಎಲ್‌ನಲ್ಲಿ ಧೋನಿ ಭಾಗವಹಿಸಲಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ದೊರೆತಿಲ್ಲ. ವೀಡಿಯೊ ನೋಡಿದ ಅಭಿಮಾನಿಗಳು ಕೂಡ ಕಾಮೆಂಟ್‌ ಸೆಕ್ಷನ್‌ನಲ್ಲಿ ಇದೇ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ.

ಗುರುವಾರ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಧೋನಿಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಿಎಸ್‌ಕೆ ತಂಡದ ಸಿಇಒ ಕಾಸಿ ವಿಶ್ವನಾಥನ್ ತಿಳಿಸಿದ್ದಾರೆ. ಅವರು ಒಂದು ಅಥವಾ ಎರಡು ದಿನದಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ. ಅವರ ಫಿಟ್‌ನೆಸ್‌ ಪ್ರಾಕ್ಟೀಸ್‌ ಆರಂಭವಾಗುವ ಮೊದಲು ಕೆಲವು ದಿನ ವಿಶ್ರಾಂತಿ ಪಡೆಯಲಿದ್ದಾರೆ. ಮುಂದಿನ ಐಪಿಎಲ್‌ನಲ್ಲಿ ಆಡಲು ಫಿಟ್ ಆಗಲು ಸಾಕಷ್ಟು ಸಮಯವಿದೆ ಎಂದು ತಂಡದ ಇನ್ನೊಂದು ಮೂಲ ತಿಳಿಸಿದೆ.

ಇದನ್ನೂ ಓದಿ: MS Dhoni : ಐಪಿಎಸ್​ ಅಧಿಕಾರಿ ವಿರುದ್ಧದ ಕೋರ್ಟ್​ ಕೇಸಲ್ಲಿ ಧೋನಿಗೆ ಮೊದಲ ಜಯ

Continue Reading

ಐಪಿಎಲ್ 2023

KL Rahul: ತೊಡೆ ಶಸ್ತ್ರಚಿಕಿತ್ಸೆ ಬಳಿಕ ಮರಳಿದ ಕೆ.ಎಲ್ ರಾಹುಲ್‌, ಫಿಟ್‌ನೆಸ್‌ ಗಳಿಸಲು ಎನ್‌ಸಿಎ ಸೇರ್ಪಡೆ

ಮಂಗಳವಾರ ಮರಳಿ ಬಂದಿರುವ ಅವರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ NCA ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ʼಹೋಮ್‌ʼ ಎಂದು ಬರೆದುಕೊಂಡಿದ್ದಾರೆ. ‌

VISTARANEWS.COM


on

KL Rahul joins National cricket academy
Koo

ಬೆಂಗಳೂರು: ಭಾರತದ ಹಿರಿಯ ಬ್ಯಾಟರ್, ಕರ್ನಾಟಕದ ಆಟಗಾರ ಕೆ.ಎಲ್ ರಾಹುಲ್ (KL Rahul) ಅವರು ಆರೋಗ್ಯ ಪುನಶ್ಚೇತನ, ಫಿಟ್‌ನೆಸ್ ಹಾಗೂ ಪ್ರಾಕ್ಟೀಸ್‌ಗಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (national cricket academy- NCA) ಸೇರಿಕೊಂಡಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾ ಕಪ್‌ ಏಕದಿನ ಸರಣಿಗೆ ಹಾಗೂ ನಂತರದ ವಿಶ್ವಕಪ್‌ ಪಂದ್ಯಾಟಕ್ಕೆ ಮುಂಚಿತವಾಗಿ ಅವರು ಫಿಟ್‌ನೆಸ್‌ ಮರಳಿ ಗಳಿಸುವ ಉದ್ದೇಶ ಹೊಂದಿದ್ದಾರೆ. ಅವರಿಗೆ ತೊಡೆಯ ಶಸ್ತ್ರಚಿಕಿತ್ಸೆಯಾಗಿತ್ತು. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ರಾಹುಲ್, ಐಪಿಎಲ್ ಪಂದ್ಯಾಟದ ಸಮಯದಲ್ಲಿ ಗಾಯಗೊಂಡಿದ್ದರು. ಆಗ ಅವರಿಗೆ ತೊಡೆಯ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಲಾಗಿತ್ತು. ಬಳಿಕ ಪಂದ್ಯಾವಳಿಯಿಂದ ಹೊರಗುಳಿದಿದ್ದ ಅವರು ಬ್ರಿಟನ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಇದರಿಂದಾಗಿ ಅವರು ಐಪಿಎಲ್‌ ಹಾಗೂ ನಂತರದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದಲೂ ಹೊರಗುಳಿಯಬೇಕಾಯಿತು.

ಮಂಗಳವಾರ ಮರಳಿ ಬಂದಿರುವ ಅವರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ NCA ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ʼಮನೆʼ ಎಂದು ಕನ್ನಡದಲ್ಲಿ ಬರೆದುಕೊಂಡಿದ್ದಾರೆ. ‌

ಈ ನಡುವೆ ಅವರು ಬಾಗಲಕೋಟೆ ಜಿಲ್ಲೆಯ ಬಡ ವಿದ್ಯಾರ್ಥಿಗೆ ಧನಸಹಾಯ ಮಾಡಿ ಸುದ್ದಿಯಾಗಿದ್ದರು. ತಾಯಿ ಇಲ್ಲದ ಅನಾಥ ವಿದ್ಯಾರ್ಥಿ ಅಮೃತ್ ಮಾವಿನಕಟ್ಟಿ ಓದುವ ಕನಸಿಗೆ ನೀರೆರೆದು ಪೋಷಿಸಲು ಧನಸಹಾಯ ಮಾಡಿದ್ದರು.

ODI ಕ್ರಿಕೆಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ, ಏಕದಿನ ಪಂದ್ಯಾಟದಲ್ಲಿ ಭಾರತ ಕ್ರಿಕೆಟ್‌ ತಂಡದ ಅನಿವಾರ್ಯ ಆಟಗಾರನಾಗಿದ್ದಾರೆ. ಕಾರು ಅಪಘಾತದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್‌ ಪಂತ್ ಅನುಪಸ್ಥಿತಿಯಲ್ಲಿ ODI ಸೆಟ್‌ಅಪ್‌ನ ಪ್ರಮುಖ ಸದಸ್ಯರಾಗಿದ್ದಾರೆ. 31ರ ಹರೆಯದ ಅವರು 47 ಟೆಸ್ಟ್‌ಗಳಲ್ಲಿ 2,642 ರನ್‌, 54 ODIಗಳಲ್ಲಿ 1,986 ರನ್‌ ಮತ್ತು 72 T20Iಗಳಲ್ಲಿ 2,265 ರನ್‌, 14 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ: KL Rahul: ಅನಾಥ ವಿದ್ಯಾರ್ಥಿಗೆ ಕೆ.ಎಲ್‌. ರಾಹುಲ್‌ ನೆರವು; ಸಿಎ ಆಗುವ ಕನಸಿಗೆ ನೀರೆರೆದ ಕ್ರಿಕೆಟಿಗ

Continue Reading

ಐಪಿಎಲ್ 2023

IPL 2023: ಜಯದ ಖುಷಿಯಲ್ಲೂ ತಿಲಕ್‌ ವರ್ಮಾ ಬಾಯಿಗೆ ‘ಹುಳಿ’ ಹಿಂಡಿದ ಸೂರ್ಯಕುಮಾರ್; ವಿಡಿಯೊ ನೋಡಿ

IPL 2023: ಎಲ್‌ಎಸ್‌ಜಿ ವಿರುದ್ಧ ಗೆಲುವು ಸಾಧಿಸಿರುವ ಮುಂಬೈ ಇಂಡಿಯನ್ಸ್‌ ತಂಡವು ಕ್ವಾಲಿಫೈಯರ್‌ 2ರಲ್ಲಿ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌ ವಿರುದ್ಧ ಸೆಣಸಲಿದೆ.

VISTARANEWS.COM


on

Suryakumar Yadav And Tilak Varma On Flight
Koo

ಅಹ್ಮದಾಬಾದ್:‌ ಲಖನೌ ಸೂಪರ್‌ ಜಯಂಟ್ಸ್‌ (LSG) ವಿರುದ್ಧ ಭರ್ಜರಿ ಜಯದೊಂದಿಗೆ ಪ್ರಶಸ್ತಿ ಸನಿಹಕ್ಕೆ ತೆರಳಿರುವ ಮುಂಬೈ ಇಂಡಿಯನ್ಸ್‌ ತಂಡದ (IPL 2023) ಆಟಗಾರರು ಖುಷಿಯಲ್ಲಿದ್ದಾರೆ. ಎಲಿಮಿನೇಟರ್‌ ಪಂದ್ಯದಲ್ಲಿ ಎಲ್‌ಎಸ್‌ಜಿ ವಿರುದ್ಧ 81 ರನ್‌ ಅಂತರದಲ್ಲಿ ಗೆಲುವು ಸಾಧಿಸಿರುವ ಮುಂಬೈ, ಎಲಿಮಿನೇಟರ್‌ 2ರಲ್ಲಿ ಗುಜರಾತ್‌ ವಿರುದ್ಧ ಸೆಣಸಾಡಲಿದೆ. ಇದಕ್ಕಾಗಿ ತಂಡವು ಚೆನ್ನೈನಿಂದ ಅಹ್ಮದಾಬಾದ್‌ಗೆ ತೆರಳಿದೆ. ಹೀಗೆ, ವಿಮಾನದಲ್ಲಿ ತೆರಳುವಾಗ ಸೂರ್ಯಕುಮಾರ್‌ ಯಾದವ್‌ ಅವರು ತಿಲಕ್‌ ವರ್ಮಾ ಬಾಯಿಯಲ್ಲಿ ನಿಂಬೆ ಹಣ್ಣಿನ ಹುಳಿ ಹಿಂಡುವ ಮೂಲಕ ತಮಾಷೆ ಮಾಡಿದ್ದಾರೆ.

ಚೆನ್ನೈನಿಂದ ಅಹ್ಮದಾಬಾದ್‌ಗೆ ಸ್ಪೈಸ್‌ ಜೆಟ್‌ ವಿಮಾನದಲ್ಲಿ ತೆರಳುವಾಗ ಮುಂಬೈ ಇಂಡಿಯನ್ಸ್‌ ತಂಡದ ತಿಲಕ್‌ ವರ್ಮಾ ಅವರು ಗಡದ್ದಾಗಿ ನಿದ್ದೆ ಮಾಡುತ್ತಿದ್ದರು. ಇದನ್ನು ಕಂಡ ಸೂರ್ಯಕುಮಾರ್‌ ಯಾದವ್‌ ಅವರಿಗೆ ಚೇಷ್ಟೆ ಮಾಡುವ ಮನಸ್ಸಾಗಿದೆ. ಆಗ, ಸೂರ್ಯಕುಮಾರ್‌ ಯಾದವ್‌ ಅವರು ಗಗನಸಖಿ ಬಳಿ ನಿಂಬೆ ಹಣ್ಣನ್ನು ಪಡೆದು, ನಿದ್ದೆಯಲ್ಲೇ ಮಗ್ನರಾಗಿದ್ದ ತಿಲಕ್‌ ವರ್ಮಾ ಬಾಯಲ್ಲಿ ಹಿಂಡಿದ್ದಾರೆ. ಇದರಿಂದ ಎಚ್ಚರಗೊಂಡ ತಿಲಕ್‌ ವರ್ಮಾ ಗಾಬರಿಗೊಂಡಿದ್ದಾರೆ. ನಿಂಬೆ ಹಣ್ಣಿನ ರುಚಿ ಗೊತ್ತಾದ ಬಳಿಕ ಮುಖ ಸಿಂಡರಿಸಿದ್ದಾರೆ.

ಇಲ್ಲಿದೆ ವಿಡಿಯೊ

ಸೂರ್ಯಕುಮಾರ್‌ ಅವರು ತಮಾಷೆ ಮಾಡುತ್ತಿದ್ದನ್ನು ನೋಡಿದ ಸಹ ಪ್ರಯಾಣಿಕರು ಹಾಗೂ ಗಗನಸಖಿಯರು ಕೂಡ ನಕ್ಕಿದ್ದಾರೆ. ಸೂರ್ಯಕುಮಾರ್‌ ಸೇರಿ ತಂಡದ ಆಟಗಾರರು ಕೂಡ ತಿಲಕ್‌ ವರ್ಮಾ ಅವರ ಸ್ಥಿತಿ ಕಂಡು ಇನ್ನೂ ಜೋರಾಗಿ ನಕ್ಕಿದ್ದಾರೆ. ಹೀಗೆ, ವಿಮಾನದಲ್ಲಿ ಸೂರ್ಯಕುಮಾರ್‌ ಯಾದವ್‌ ಅವರ ಚೇಷ್ಟೆಯಿಂದ ತಿಲಕ್‌ ವರ್ಮಾ ಪೆಚ್ಚಾಗಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

ಇದನ್ನೂ ಓದಿ: IPL 2023: ಗುಜರಾತ್​-ಮುಂಬೈ ನಡುವೆ ಕ್ವಾಲಿಫೈಯರ್ ಪಂದ್ಯ; ಯಾರಿಗೆ ಒಲಿಯಲಿದೆ ಫೈನಲ್​ ಲಕ್​

ಎಲಿಮಿನೇಟರ್‌ ಪಂದ್ಯದಲ್ಲಿ ಗ್ರೀನ್‌ ಹಾಗೂ ಸೂರ್ಯಕುಮಾರ್‌ ಅವರ ಸಮಯೋಚಿತ ಬ್ಯಾಟಿಂಗ್‌ ಹಾಗೂ ಆಕಾಶ್‌ ಮಧ್ವಾಲ್‌ ಆಕ್ರಮಣಕಾರಿ ಬೌಲಿಂಗ್‌ ನೆರವಿನಿಂದ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್‌ ತಂಡವು ಕ್ವಾಲಿಫೈಯರ್‌ 2ರಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ ಶುಕ್ರವಾರ ಸೆಣಸಾಡಲಿದೆ. ಗುಜರಾತ್‌ ಹಾಗೂ ಮುಂಬೈ ತಂಡದಲ್ಲಿ ಯಾವ ತಂಡ ಗೆದ್ದರೂ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಡಲಿದೆ. ಹಾಗಾಗಿ, ಎಲ್ಲರ ಗಮನ ಎಲಿಮಿನೇಟರ್‌ 2 ಪಂದ್ಯದ ಮೇಲಿದೆ.

Continue Reading
Advertisement
Attendance Araga Jnanendra UT Khader Araga jnanendra
ಕರ್ನಾಟಕ17 mins ago

Belagavi Winter Session : ನಾವೂ ಟೈಮಿಗೆ ಸರಿಯಾಗಿ ಬಂದಿದ್ದೀವಿ; ಸ್ಪೀಕರ್‌ ಜತೆ ಶಾಸಕರ ಜಗಳ!

Madhu Bangarappa in Belagavi Winter Session
ಕರ್ನಾಟಕ33 mins ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Pressmeet for Demand for construction of bypass road in Yallapur
ಉತ್ತರ ಕನ್ನಡ38 mins ago

Uttara Kannada News: ಯಲ್ಲಾಪುರ ಪಟ್ಟಣದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಒತ್ತಾಯ

Israel
ಪ್ರಮುಖ ಸುದ್ದಿ40 mins ago

Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

bengaluru bulls kiccha sudeep
ಕ್ರೀಡೆ40 mins ago

ಬೆಂಗಳೂರು ಬುಲ್ಸ್​ಗೆ ಫುಲ್ ಚಾರ್ಜ್​ ಮಾಡಲು ಬರಲಿದ್ದಾರೆ ಕಿಚ್ಚ ಸುದೀಪ್

self harming by wadi Acc cement Depute Director
ಕರ್ನಾಟಕ57 mins ago

Self Harming : ಅದಾನಿ ಗ್ರೂಪ್‌ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ಸೂಸೈಡ್‌!

A girl shoots her classmate and herself with shotgun
ವಿದೇಶ58 mins ago

viral video: ಸಹಪಾಠಿಗೆ ಗುಂಡು ಹೊಡೆದು ತಾನೂ ಸತ್ತ 14 ವರ್ಷದ ವಿದ್ಯಾರ್ಥಿನಿ!

Flax Seeds Benefits For Hair
ಆರೋಗ್ಯ1 hour ago

Flax Seeds Benefits For Hair: ಚಳಿಗಾಲದಲ್ಲಿ ಕೂದಲ ಆರೋಗ್ಯಕ್ಕೆ ಅಗಸೆಬೀಜ ಸೂಪರ್‌!

Wedding Fashion
ಫ್ಯಾಷನ್1 hour ago

Wedding Fashion: ಮದುಮಗನ ಆರತಕ್ಷತೆಯ ಗ್ರ್ಯಾಂಡ್‌ ಔಟ್‌ಫಿಟ್‌ ಆಯ್ಕೆಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

U-19 Asia Cup IND vs PAK
ಕ್ರಿಕೆಟ್1 hour ago

ನಾಳೆಯಿಂದ ಅಂಡರ್​-19 ಏಷ್ಯಾಕಪ್; ಭಾರತ-ಪಾಕ್​ ಮುಖಾಮುಖಿ ಯಾವಾಗ?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ33 mins ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ1 hour ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ7 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ14 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ22 hours ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ1 day ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ1 day ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ1 day ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 day ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 day ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌