Site icon Vistara News

IPL 2024: ಚೆಪಾಕ್​ನಲ್ಲಿ ಧೋನಿ ಅಭಿಮಾನಿಗಳಿಗೆ ಚಮಕ್​​ ಕೊಟ್ಟ ಜಡೇಜಾ; ವಿಡಿಯೊ ವೈರಲ್​

IPL 2024

ಚೆನ್ನೈ: ಈ ಬಾರಿಯ ಐಪಿಎಲ್(IPL 2024)​ ಟೂರ್ನಿ ಬಳಿಕ ಚೆನ್ನೈ ತಂಡದ ಆಟಗಾರ, ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು​ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ. ಹೀಗಾಗಿ ನೆಚ್ಚಿನ ಆಟಗಾರನ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆಯೂ ಚಾತಕ ಪಕ್ಷಿಯಂತೆ ಕಾದು ಕುಳಿತಿರುತ್ತಾರೆ. ಕೆಕೆಆರ್(CSK vs KKR)​ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್​ ನೋಡಲು ಕಾತರದಿಂದ ಕಾಯುತ್ತಿದ್ದ ಪ್ರೇಕ್ಷಕರಿಗೆ ರವೀಂದ್ರ ಜಡೇಜಾ(Ravindra Jadeja) ಅವರು ಚಮಕ್​ ಕೊಟ್ಟ ಘಟನೆ ಸಂಭವಿಸಿದೆ. ಇದರ ವಿಡಿಯೊ ವೈರಲ್​ ಆಗಿದೆ.

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡದ ಗೆಲುವಿಗೆ ಮೂರು ರನ್​ಗಳ ಅಗತ್ಯವಿತ್ತು. ಈ ವೇಳೆ ಬ್ಯಾಟಿಂಗ್​ ನಡೆಸುತ್ತಿದ್ದ ಶಿವಂ ದುಬೆ ವಿಕೆಟ್​ ಪತನಗೊಂಡಿತು. ದುಬೆ ವಿಕೆಟ್​ ಬೀದ್ದ ತಕ್ಷಣ ಸ್ಟೇಡಿಯಂನಲ್ಲಿ ನೆರೆದಿದ್ದ ಧೋನಿ ಅಭಿಮಾನಿಗಳು ಜೋರಾಗಿ ಧೋನಿ ಹೆಸರು ಕೂಗುವ ಮೂಲಕ ಬ್ಯಾಟಿಂಗ್​ಗೆ ಬರುವಂತೆ ಆಗ್ರಹಿಸಿದರು. ಇದೇ ವೇಳೆ ರವೀಂದ್ರ ಜಡೇಜಾ ಅವರು ಬ್ಯಾಟ್​ ಹಿಡಿದು ಮೈದಾನಕ್ಕೆ ಬರುವಂತೆ ನಟನೆ ಮಾಡಿದರು. ಬಳಿಕ ಹಿಂದಿರುಗಿ ಡ್ರೆಸಿಂಗ್​ ರೂಮ್​ ಕಡೆ ಹೆಜ್ಜೆ ಹಾಕಿ ಅಭಿಮಾನಿಗಳಿಗೆ ಒಂದು ಕ್ಷಣ ಚಮಕ್​ ನೀಡಿದರು. ಬಳಿಕ ಧೋನಿ ಬ್ಯಾಟಿಂಗ್​ಗೆ ಇಳಿದು ಮೂರು ಎಸೆತಗಳಲ್ಲಿ 1 ರನ್​ ಮಾಡಿ ಅಜೇಯರಾಗಿ ಉಳಿದರು.

ಧೋನಿ ಅವರು ಈ ಬಾರಿಯ ಐಪಿಎಲ್​ನಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್​ ನಡೆಸಿದ್ದು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ. ಈ ಪಂದ್ಯದಲ್ಲಿ 16 ಎಸೆತಗಳಿಂದ 4 ಬೌಂಡರಿ ಮತ್ತು 3 ಸಿಕ್ಸರ್​ ಸಿಡಿಸಿ ಅಜೇಯ 37 ರನ್​ ಬಾರಿಸಿದ್ದರು. ಆದರೆ ಪಂದ್ಯದಲ್ಲಿ ತಂಡ ಸೋಲು ಕಂಡಿತ್ತು.

ಇದನ್ನೂ ಓದಿ IPL 2024: ಬದ್ಧ ವೈರಿ ಧೋನಿಯನ್ನು ತಬ್ಬಿಕೊಂಡ ಗಂಭೀರ್; ವಿಡಿಯೊ ವೈರಲ್​

ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. 

ಚೆನ್ನೈಗೆ 7 ವಿಕೆಟ್​ ಜಯ


ಸೋಮವಾರ ನಡೆದ ಈ​ ಪಂದ್ಯದಲ್ಲಿ ಚೆನ್ನೈ ತಂಡ ಕೆಕೆಆರ್​ ವಿರುದ್ಧ 7 ವಿಕೆಟ್​ ಅಂತರದ ಗೆಲುವು ಸಾಧಿಸಿ ಮತ್ತೆ ಗೆಲುವಿನ ಹಳಿಗೆ ಮರಳಿದೆ. ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಕೆಕೆಆರ್ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 137 ರನ್ ಬಾರಿಸಿತು. ಜವಾಬಿತ್ತ ಚೆನ್ನೈ 14 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ ನಷ್ಟಕ್ಕೆ 141 ರನ್ ಬಾರಿಸಿ ಗೆಲುವು ಸಾಧಿಸಿತು. ಋತುರಾಜ್ ಗಾಯಕ್ವಾಡ್​ (67 ರನ್​) ಸಮಯೋಚಿತ ಅರ್ಧ ಶತಕ ಹಾಗೂ ಬೌಲರ್​ಗಳ ಸಂಘಟಿತ ದಾಳಿ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

Exit mobile version