Site icon Vistara News

IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆಯಲು ಸಜ್ಜಾದ ಆರ್​ಸಿಬಿ

IPL 2024

ಹೈದರಾಬಾದ್​: ಇಂದು(ಗುರುವಾರ) ನಡೆಯುವ ಐಪಿಎಲ್(IPL 2024)​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bangalore) ಮತ್ತು ಸನ್​ರೈಸರ್ಸ್​ ಹೈದರಾಬಾದ್​(Sunrisers Hyderabad ) ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯ ಆರ್​ಸಿಬಿಗೆ ಸ್ಮರಣೀಯವಾಗಿದೆ. ಇದು ಆರ್​ಸಿಗೆ(RCB) 250ನೇ ಐಪಿಎಲ್(RCB 250th IPL match)​ ಪಂದ್ಯವಾಗಿದೆ. ಈ ಸಾಧನೆ ಮಾಡಿದ ದ್ವಿತೀಯ ತಂಡ ಎಂಬ ಹೆಗ್ಗಳಿಕೆ ಆರ್​ಸಿಬಿ ಪಾತ್ರವಾಗಲಿದೆ.

“ಇಂದು ಆರ್​ಸಿಬಿಗೆ ಪ್ರಮುಖ ದಿನ. ನಮ್ಮ 250ನೇ ನೇ ಐಪಿಎಲ್​ ಪಂದ್ಯ! ಇದನ್ನು ಸ್ಮರಣೀಯವಾಗಿಸಲು ನಿಮ್ಮೆಲ್ಲರ ಹಾರೈಕೆಗಳು ಮತ್ತು ಬೆಂಬಲವನ್ನು ನಾವು ನಿರೀಕ್ಷಿಸುತ್ತಿದ್ದೇವೆ” ಎಂದು ಆರ್​ಸಿಬಿ ಫ್ರಾಂಚೈಸಿ ಇದುವರೆ ಆರ್​ಸಿಬಿ ತಂಡದ ಪರ ಆಡಿದ ಕೆಲ ಸ್ಟಾರ್​ ಆಟಗಾರರ ಫೋಟೊ ಕೊಲಾಜ್​ ಮಾಡಿ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್​ ಮಾತ್ರ 250 ಪಂದ್ಯಗಳನ್ನಾಡಿದ ಸಾಧನೆ ಮಾಡಿದೆ. ಅಲ್ಲದೆ ಅತ್ಯಧಿಕ ಐಪಿಎಲ್​ ಪಂದ್ಯವನ್ನಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಯನ್ನು ಕೂಡ ಹೊಂದಿದೆ. ಮುಂಬೈ ಇದುವರೆಗೆ 255* ಐಪಿಎಲ್​ ಪಂದ್ಯಗಳನ್ನಾಡಿದೆ. ಆರ್​ಸಿಬಿ 250 ಪಂದ್ಯಗಳನ್ನಾಡಿದ 2ನೇ ತಂಡ ಎನಿಸಿಕೊಳ್ಳಲಿದೆ. ದುರಾದೃಷ್ಟವೆಂದರೆ ಇಷ್ಟು ಪಂದ್ಯಗಳನ್ನಾಡಿದರೂ ಕೂಡ ತಂಡ ಒಮ್ಮೆಯೂ ಕಪ್​ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಪ್ರತಿ ಐಪಿಎಲ್‌(IPL 2024) ಆರಂಭದ ಸಂದರ್ಭದಲ್ಲಿಯೂ ಆರ್‌ಸಿಬಿ ಒಂದು ಕ್ರೇಜ್‌ ಹುಟ್ಟಿಸುತ್ತದೆ. ದುರಾದೃಷ್ಟವಶಾತ್‌ ಈ ಕ್ರೇಜ್‌ ಬಹುಕಾಲ ಉಳಿಯುವುದಿಲ್ಲ. ಈ ಬಾರಿಯೂ ಅದೇ ರಾಗ ಅದೇ ಹಾಡು. ಅದರಲ್ಲಿಯೂ ಈ ಬಾರಿ ಹೊಸ ಅಧ್ಯಾಯ ಎಂದು ಆರ್‌ಸಿಬಿ ಹವಾ ಸೃಷ್ಟಿಸಿತ್ತು. ಆದರೆ ಇದೀಗ ಕ್ಷಮಿಸಿ ನಮ್ಮದು ಮುದಿದು ಹೋದ ಅಧ್ಯಾಯ ಎನ್ನುವ ಹಂತಕ್ಕೆ ತಲುಪಿದೆ.

ಇದನ್ನೂ ಓದಿ IPL 2024: ದುಬಾರಿ ರನ್​ ನೀಡಿ ಐಪಿಎಲ್​ನಲ್ಲಿ ಅನಗತ್ಯ ದಾಖಲೆ ಬರೆದ ಮೋಹಿತ್​ ಶರ್ಮ

ಅತಿ ಹೆಚ್ಚು ಐಪಿಎಲ್​ ಪಂದ್ಯವನ್ನಾಡಿದ ಟಾಪ್​ 5 ತಂಡಗಳು


ಮುಂಬೈ ಇಂಡಿಯನ್ಸ್​-255* ಪಂದ್ಯ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು-249* ಪಂದ್ಯ

ಡೆಲ್ಲಿ ಕ್ಯಾಪಿಟಲ್ಸ್​-247*ಪಂದ್ಯ

ಕೋಲ್ಕತ್ತಾ ನೈಟ್​ ರೈಡರ್ಸ್​-244 ಪಂದ್ಯ

ಪಂಜಾಬ್​ ಕಿಂಗ್ಸ್​-240* ಪಂದ್ಯ

ಆರ್​ಸಿಬಿ(RCB) ಈ ಆವೃತ್ತಿಯಲ್ಲಿ ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 7 ಸೋಲು ಕಂಡು ಪ್ಲೇ ಆಫ್​ ರೇಸ್​ನಿಂದ ಬಹುತೇಕ ಹೊರಬಿದ್ದಿದೆ. ಹೀಗಾಗಿ ಆರ್​ಸಿಬಿ ಪಾಲಿಗೆ ಇಂದು ನಡೆಯವ ಪಂದ್ಯ ಕೇವಲ ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು. ಇನ್ನುಳಿದ ಎಲ್ಲ ಪಂದ್ಯಗಳನ್ನು ಗೆದ್ದರೂ ಕೂಡ ಪ್ಲೇ ಆಫ್​ಗೇರಲು ಸಾಧ್ಯವಿಲ್ಲ. ಪವಾಡ ಸಂಭಿಸಿದರೆ ಮಾತ್ರ ಸಾಧ್ಯ.

ಸಂಭಾವ್ಯ ತಂಡಗಳು


ಆರ್​ಸಿಬಿ:
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್,ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಲಾಕಿ ಫರ್ಗುಸನ್, ಯಶ್ ದಯಾಲ್, ಮೊಹಮ್ಮದ್ ಸಿರಾಜ್.

ಸನ್​ರೈಸರ್ಸ್​ ಹೈದರಾಬಾದ್​: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್​, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ , ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಟಿ ನಟರಾಜನ್.

Exit mobile version