Site icon Vistara News

IPL 2024: ಬಾಸ್​ಗೆ ಸುಳ್ಳು ಹೇಳಿ ಪಂದ್ಯ ವೀಕ್ಷಿಸುವಾಗ ಟಿವಿಯಲ್ಲಿ ಸಿಕ್ಕಿಬಿದ್ದ ಆರ್​ಸಿಬಿ ಅಭಿಮಾನಿ!

IPL 2024

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​(IPL 2024) ಟೂರ್ನಿಯ ಪಂದ್ಯಾವಳಿಗಳು ದಿನದಿಂದ ದಿನಕ್ಕೆ ಕೆಚ್ಚು ಕಾವೆರುತ್ತಿದೆ. 10 ತಂಡಗಳು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸುತ್ತಿವೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ತಂಡಗಳ ಕಾದಾಟ ಕಣ್ತುಂಬಿಕೊಳ್ಳಲು ದುಬಾರಿ ಬೆಲೆಯ ಟಿಕೆಟ್​ ನೀಡಿ ಪಂದ್ಯಕ್ಕೆ ಹಾಜರ್​ ಆಗುತ್ತಿದ್ದಾರೆ. ಆದರೆ, ಆರ್​ಸಿಬಿಯ ಅಪ್ಪಟ ಅಭಿಮಾನಿಯೊಬ್ಬಳು(RCB fan) ಪಂದ್ಯ ನೋಡುವ ಸಲುವಾಗಿ ತನ್ನ ಬಾಸ್​ಗೆ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾಳೆ. ಈ ಘಟನೆಯ ವಿಡಿಯೊ ಮತ್ತು ಫೋಟೊ ವೈರಲ್​ ಆಗಿದೆ.

ಹೌದು, ಆರ್​ಸಿಬಿಯ ಪಂದ್ಯ ನೋಡಲೆಂದು ಮಹಿಳೆಯೊಬ್ಬಳು ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲು ತೆರಳಿದ್ದರು. ಆದರೆ, ಆಫೀಸ್​ನಿಂದ ಹೊರಡುವಾಗ, ತಮ್ಮ ಕುಟುಂಬದಲ್ಲಿ ಎಮರ್ಜೆನ್ಸಿ ಇದೆ ಎಂದು ಬಾಸ್​ಗೆ ಸುಳ್ಳು ಹೇಳಿ ಹೋಗಿದ್ದರು. ದುರಾದೃಷ್ಟವಶಾತ್ ಈ ಪಂದ್ಯವನ್ನು ಆಯಕೆ ಬಾಸ್​ ಕೂಡ ತಮ್ಮ ಮನೆಯಲ್ಲಿ ಟಿವಿಯಲ್ಲಿ ನೋಡಿದ್ದಾರೆ. ಈ ವೇಳೆ ಟಿವಿ ಪರದೆಯಲ್ಲಿ ಬಾಸ್​ ಕಣ್ಣಿಗೆ ಆಕೆ ಸಿಕ್ಕಿಬಿದ್ದಿದ್ದಾಳೆ.

ಇದನ್ನೂ ಓದಿ IPL 2024: ಚೆಪಾಕ್​ನಲ್ಲಿ ಧೋನಿ ಅಭಿಮಾನಿಗಳಿಗೆ ಚಮಕ್​​ ಕೊಟ್ಟ ಜಡೇಜಾ; ವಿಡಿಯೊ ವೈರಲ್​

ಆಯೆಯನ್ನು ಟಿವಿಯಲ್ಲಿ ಕಂಡ ಬಾಸ್​, ಇನ್​ಸ್ಟಾಗ್ರಾಂನಲ್ಲಿ ಆಕೆಗೆ​ ಸಂದೇಶವನ್ನು ಕಳಿಸಿದ್ದು ನಾನು ನಿನ್ನನ್ನು ಒಂದು ಸೆಕೆಂಡ್ ಮಾತ್ರ ನೋಡಿದೆ ಮತ್ತು ಗುರುತಿಸಿದೆ. ಹೋ ಇದು ನಿನ್ನೆಯ ಎಮರ್ಜೆನ್ಸಿ ಲಾಗ್‌ಔಟ್‌ಗೆ ಕಾರಣವೇ ಎಂದು ಕಿಚಾಯಿಸಿದ್ದಾರೆ. ಬಾಸ್​ ಕಳುಹಿಸಿದ ಮೆಸೇಜ್​ ಅನ್ನು ಈಗೆ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಫೋಸ್ಟ್​ ಮಾಡಿದ್ದಾಳೆ.

ಲಕ್ನೋ ಮತ್ತು ಆರ್​ಸಿಬಿ ನಡುವಣ ಪಂದ್ಯ ಇದಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ್ದ ಲಕ್ನೋ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 181 ರನ್ ಬಾರಿಸಿತು. ತವರಿನ ಸ್ಟೇಡಿಯಮ್​ನಲ್ಲಿ ಗೆಲ್ಲಬಹುದಾಗಿದ್ದ ಮೊತ್ತವನ್ನು ಬೆನ್ನಟ್ಟಿದ ಆರ್​ಸಿಬಿ 19.4 ಓವರ್​ಗಳಲ್ಲಿ 153 ರನ್​ಗೆ ಆಲ್​ಔಟ್ ಆಗಿ 28 ರನ್​ಗಳ ಹೀನಾಯ ಸೋಲು ಕಂಡಿತ್ತು.

ಲಕ್ನೊ ತಂಡದ ಪರ ಬ್ಯಾಟಿಂಗ್​ನಲ್ಲಿ ಅಮೋಘ ಪ್ರದರ್ಶನ ನೀಡಿದ ಕ್ವಿಂಟನ್​ ಡಿ ಕಾಕ್​ 80 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ನಿಕೋಲಸ್ ಪೂರನ್​ 21 ಎಸೆತಕ್ಕೆ 40 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಬೌಲಿಂಗ್​ನಲ್ಲಿ ಮತ್ತೊಮ್ಮೆ ಅಮೋಘ ಪ್ರದರ್ಶನ ನೀಡಿದ ಎಕ್ಸ್​ಪ್ರೆಸ್ ವೇಗಿ ಮಯಾಂಕ್​ ಯಾದವ್​ ತನ್ನ 4 ಓವರ್​ಗಳ ಸ್ಪೆಲ್​ನಲ್ಲಿ ಕೇವಲ 4 ರನ್​ ನೀಡಿ 3 ವಿಕೆಟ್ ಪಡೆದು ಮಿಂಚಿದ್ದರು.

Exit mobile version