ಬೆಂಗಳೂರು: ಸತತವಾಗಿ ಸೋಲಿನಿಂದ ಕಂಗೆಟ್ಟು, ಈ ಬಾರಿ(IPL 2024) ಮುಗಿದು ಹೋದ ಅಧ್ಯಾಯ ಎನ್ನುವ ಹಂತಕ್ಕೆ ಬಂದು ನಿಂತಿದ್ದ ಆರ್ಬಿಸಿ(RCB) ಈಗ ಗೆಲುವಿನ ಹಳಿಗೆ ಮರಳಿದೆ. ಸತತವಾಗಿ 2 ಪಂದ್ಯಗಳನ್ನು, ಒಟ್ಟಾರೆಯಾಗಿ ಮೂರು ಪಂದ್ಯ ಗೆದ್ದು ಮತ್ತೆ ಅಭಿಮಾನಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವಂತೆ ಮಾಡಿದೆ. ಸದ್ಯ ಅಂಕಪಟ್ಟಿಯಲ್ಲಿ(IPL 2024 Points Table) ಕೊನೆಯ ಸ್ಥಾನಿಯಾಗಿದ್ದರೂ ಕೂಡ ಆರ್ಸಿಬಿಯ(Royal Challengers Bengaluru) ಪ್ಲೇ ಆಫ್ ಬಾಗಿಲು ಇನ್ನೂ ಮುಚ್ಚಿಲ್ಲ. ಇನ್ನೂ ಕೂಡ ಆರ್ಸಿಬಿಯ ಪ್ಲೇ ಆಫ್ ಆಸೆ ಜೀವಂತವಾಗಿಯೇ ಇದೆ. ತಂಡದ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ ಎಂಬ ಮಾಹಿತಿ ಇಂತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ಮತ್ತು ಪವಾಡವೊಂದು ನಡೆದರೆ ಆರ್ಸಿಬಿಗೆ ಪ್ಲೇ ಆಫ್ ಟಿಕೆಟ್ ಸಿಗಲಿದೆ. ಈಗಾಗಲೇ 10 ಪಂದ್ಯ ಆಡಿದ್ದು, 3 ಪಂದ್ಯ ಗೆದ್ದು, 7 ಪಂದ್ಯದಲ್ಲಿ ಸೋಲು ಕಂಡಿದೆ. 6 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಲೀಗ್ ಹಂತದಲ್ಲಿ ಇನ್ನೂ 4 ಪಂದ್ಯಗಳ ಬಾಕಿ ಇದೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಜತೆಗೆ ತನಗಿಂತ ಮೇಲಿರುವ ತಂಡಗಳು ಸತತ ಸೋಲು ಕಂಡರೆ ಕನಿಷ್ಠ 4ನೇ ಸ್ಥಾನಿಯಾಗಿ ಪ್ಲೇ ಆಫ್ ಗೇರುವ ಸಣ್ಣ ಅವಕಾಶವೊಂದಿದೆ. ಉಳಿದ 4 ಪಂದ್ಯಗಳ ಪೈಕಿ 2 ಪಂದ್ಯಗಳನ್ನು ಆರ್‌ಸಿಬಿ ತವರಿನಲ್ಲಿ ಆಡಲಿದೆ. ಒಂದು ಪಂದ್ಯ ಹಾಲಿ ಚಾಂಪಿಯನ್ ಚೆನ್ನೈ ವಿರುದ್ಧ. ಇದು ಆರ್ಸಿಬಿಗೆ ಕೊನೆಯ ಲೀಗ್ ಪಂದ್ಯವಾಗಿರಲಿದೆ. ಮೇ 18ರಂದು ಈ ಪಂದ್ಯ ನಡೆಯಲಿದೆ.
𝗩𝗶𝗿𝗮𝘁 𝗞𝗼𝗵𝗹𝗶 𝗶𝘀 𝗮𝗹𝘄𝗮𝘆𝘀 𝗼𝘂𝗿 𝗡𝘂𝗺𝗯𝗲𝗿 𝟭
— Royal Challengers Bengaluru (@RCBTweets) April 29, 2024
The crowd at Narendra Modi cricket stadium were thrilled to watch Virat Kohli carry his rich form into their city, last evening! 😇#PlayBold #ನಮ್ಮRCB #IPL2024 #GTvRCB pic.twitter.com/p9KflMLdvD
ಅದೃಷ್ಟ ಕೂಡ ಬೇಕು
ಆರ್‌ಸಿಬಿ ಮುಂದಿನ ಎಲ್ಲ 4 ಪಂದ್ಯಗಳನ್ನು ಗೆದ್ದರೆ 14 ಅಂಕ ಆಗಲಿದೆ. 14 ಅಂಕ ಗಳಿಸಿದರೂ ಪ್ಲೇ ಆಫ್ ಟಿಕೆಟ್ಖಚಿತಗೊಳ್ಳುವುದಿಲ್ಲ. 16 ಅಂಕ ಗಳಿಸಿರುವ ರಾಜಸ್ಥಾನ್ ತಂಡಕ್ಕೆ ಪ್ಲೇ ಆಫ್ ಸ್ಥಾನ ಬಹುತೇಕ ಖಚಿತಗೊಂಡಂತಿದೆ. ಅದಲ್ಲದೆ ರಾಜಸ್ಥಾನ್ಗೆ ಇನ್ನೂ ಕೂಡ 5 ಪಂದ್ಯಗಳು ಬಾಕಿ ಇದೆ. ಇದರಲ್ಲಿ 1 ಪಂದ್ಯ ಗೆದ್ದರೂ ಸಾಕು. ಉಳಿದಿರುವ ಮೂರು ಸ್ಥಾನಗಳಿಗೆ 5 ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಎಲ್ಲ 5 ತಂಡಗಳು ಕೂಡ 10 ಅಂಕ ಗಳಿಸಿವೆ. ರನ್ ರೇಟ್ ಆಧಾರದಲ್ಲಿ ಸದ್ಯ ಮೇಲೆ ಕೆಳಗಿನ ಸ್ಥಾನ ಪಡೆದುಕೊಂಡಿದೆ. ಈ 5 ತಂಡಗಳ ಪೈಕಿ ಕನಿಷ್ಠ ಮೂರು ತಂಡಗಳು ಉಳಿದ ಲೀಗ್ ಪಂದ್ಯಗಳಲ್ಲಿ ಸೋಲು ಕಂಡರೆ, 14 ಅಂಕದ ಗಡಿ ದಾಟಲು ವಿಫಲರಾದರೆ ಆಗ ಆರ್ಸಿಬಿಗೆ ಪ್ಲೇ ಆಫ್ ಅವಕಾಶ ಸಿಗಲಿದೆ. ಹೀಗಾಗಿ ಆರ್ಸಿಬಿಗೆ ಗೆಲುವಿನ ಜತೆ ಅದೃಷ್ಟ ಕೂಡ ಕೈ ಹಿಡಿಯಬೇಕಿದೆ.
Will Jacks is our Big Basket Player of the Match for scoring the second fastest century (41 balls) by an RCB cricketer! 😎
— Royal Challengers Bengaluru (@RCBTweets) April 29, 2024
This is @bigbasket_com presents Game Day! Download the Big Basket App and get groceries delivered in ten minutes. 📱#PlayBold #ನಮ್ಮRCB #IPL2024 #GTvRCB pic.twitter.com/Hy0PfNMoFy
ಇದನ್ನೂ ಓದಿ IPL 2024 Points Table: ಚೆನ್ನೈ ಗೆಲುವಿನಿಂದ ಅಂಕಪಟ್ಟಿಯಲ್ಲಿ 3 ತಂಡಗಳಿಗೆ ಭಾರೀ ಹೊಡೆತ
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ರಾಜಸ್ಥಾನ್ ರಾಯಲ್ಸ್ | 9 | 8 | 1 | 16 (+0.694) |
ಕೆಕೆಆರ್ | 8 | 5 | 3 | 10 (+0.972) |
ಚೆನ್ನೈ | 9 | 5 | 4 | 10 (+0.810) |
ಹೈದರಾಬಾದ್ | 9 | 5 | 4 | 10 (+0.075) |
ಲಕ್ನೋ | 9 | 5 | 4 | 10 (+0.059) |
ಡೆಲ್ಲಿ | 10 | 5 | 5 | 10 (-0.276) |
ಗುಜರಾತ್ | 10 | 4 | 6 | 8 (-1.113) |
ಪಂಜಾಬ್ | 9 | 3 | 6 | 8 (-0.187) |
ಮುಂಬೈ | 9 | 3 | 6 | 6 (-0.261) |
ಆರ್‌ಸಿಬಿ | 10 | 3 | 7 | 6 (-0.415) |