ಬೆಂಗಳೂರು: ಐಪಿಎಲ್ ಪಂದ್ಯ ನಡೆಯುವ ಕ್ರಿಕೆಟ್ ಮೈದಾನಗಳು ಗುಣಮಟ್ಟದ ಬ್ಯಾಟಿಂಗ್ ಮತ್ತು ಅದ್ಭುತ ಬೌಲಿಂಗ್ಗಾಗಿ ಬೆರಗುಗೊಳಿಸುತ್ತವೆ. ಆದರೆ ಕೆಲವೊಮ್ಮೆ, ಬೇರೆ ಖುಷಿಯೂ ಸಿಗುತ್ತಿರುತ್ತವೆ. ಎಲ್ಲಿಂದಲೂ ಉಂಟಾಗುವ ಸಮಸ್ಯೆಗಳು ನೋಡುಗರ ಪಾಲಿಗೆ ಖುಷಿಯ ವಿಷಯವಾಗುತ್ತದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶನಿವಾರ ಮಧ್ಯಾಹ್ನ ನಡೆದ ಐಪಿಎಲ್ 2024 ರ (IPL 2024) 43ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇದೇ ರೀತಿಯ ಘಟನೆ ನಡೆಯಿತು. ಗಾಳಿಪವೊಂದು ತೂರಿಕೊಂಡು ಬಂದು ಮೈದಾನಕ್ಕೆ ಬಿದ್ದ ಬಳಿಕ ನಡೆದ ಈ ಪ್ರಸಂಗ ನೆಟ್ಟಿಗರ ಗಮನ ಸೆಳೆಯಿತು.
— Cricket Videos (@cricketvid123) April 27, 2024
ರಿಷಭ್ ಪಂತ್ ಮತ್ತು ಅವರ ತಂಡದ ವಿರುದ್ಧ 258 ರನ್ಗಳ ಬೃಹತ್ ಗುರಿ ಬೆನ್ನಟ್ಟಲು ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಆರಂಭಿಕರಾಗಿ ಮುಂಬಯಿ ಪರ ಆಡಲು ಬಂದಾಗ ಈ ಘಟನೆ ಸಂಭವಿಸಿದೆ. ಮೊದಲ ಓವರ್ನಲ್ಲಿ ಲಿಜಾದ್ ವಿಲಿಯಮ್ಸ್ ಬೌಲಿಂಗ್ ಮಾಡುತ್ತಿದ್ದಾಗ, ಎಲ್ಲಿಂದಲೋ ಗಾಳಿಪಟ ಹಾರಿ ಬಂತು. ರೋಹಿತ್ ಅದನ್ನು ಎತ್ತಿಕೊಂಡು ರಿಷಭ್ ಪಂತ್ಗೆ ನೀಡಿದರು, ಅವರು ಅದನ್ನು ಲೆಗ್ ಅಂಪೈರ್ ನೀಡುವ ಮೂಲಕ ಅದನ್ನು ಹೊರಕ್ಕ ಕಳುಹಿಸಿದರು. ಇದು ಅವರಿಬ್ಬರೂ ಗಾಳಿಪಟ ಆಡುತ್ತಿದ್ದಾರೆ ಎಂಬಂತ ಸಂದರ್ಭವನ್ನು ಸೃಷ್ಟಿಸಿತು.
ಇದಕ್ಕೂ ಮುನ್ನ ಡೆಲ್ಲಿ 4 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿದ್ದು, ಜೇಕ್ ಫ್ರೇಸರ್-ಮೆಕ್ಗುರ್ಕ್ 27 ಎಸೆತಗಳಲ್ಲಿ 84 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಟ್ರಿಸ್ಟಾನ್ ಸ್ಟಬ್ಸ್, ಶಾಯ್ ಹೋಪ್ ಮತ್ತು ಪಂತ್ ಉತ್ತಮ ಕೊಡುಗೆ ನೀಡಿ ತಂಡವನ್ನು 250 ರನ್ಗಳ ಗಡಿ ದಾಟಿಸಿದರು.
ಇಶಾನ್ ಕಿಶನ್ ಕಳಪೆ ಆಟ ಮುಂದುವರಿಕೆ
ಇಶಾನ್ ಕಿಶನ್ ಭಾರತೀಯ ಕ್ರಿಕೆಟ್ನ ಅತ್ಯಂತ ಪ್ರತಿಭಾವಂತ ವಿಕೆಟ್ ಕೀಪರ್ ಬ್ಯಾಟರ್ಗಳಲ್ಲಿ ಒಬ್ಬರು. ಆದರೆ ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ ಫಾರ್ಮ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಡಿರುವ 9 ಪಂದ್ಯಗಳಲ್ಲಿ 23.56ರ ಸರಾಸರಿಯಲ್ಲಿ ಕೇವಲ 212 ರನ್ ಗಳಿಸಿದ್ದಾರೆ. ಡಿಸಿ ಮತ್ತು ಎಂಐ ನಡುವಿನ ಋತುವಿನ 43 ನೇ ಪಂದ್ಯದಲ್ಲಿ, ಅವರು ಮತ್ತೊಮ್ಮೆ ಪ್ರದರ್ಶನ ನೀಡಲು ವಿಫಲರಾದರು ಮತ್ತು ಕೇವಲ 14 ಎಸೆತಗಳಲ್ಲಿ 20 ರನ್ ಗಳಿಸಿ ನಿರ್ಗಮಿಸಿದರು.
ಇದನ್ನೂ ಓದಿ: IPL 2024 : ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವುದೇ ಸಿಎಸ್ಕೆ?
ಐದನೇ ಓವರ್ನ ಮೊದಲ ಎಸೆತದಲ್ಲಿ ಅವರು ಔಟಅದರು. ಅದು ಮುಖೇಶ್ ಕುಮಾರ್ ಅವರ ಬ್ಯಾಕ್ ಆಫ್ ಲೆಂಗ್ತ್ ಎಸೆತವಾಗಿತ್ತು. ಇಶಾನ್ ಕಿಶನ್ ಸ್ವಲ್ಪ ಸ್ಥಳಾವಕಾಶ ಕಲ್ಪಿಸಿ ಪಿಚ್ನಿಂದ ಹೊರಕ್ಕೆ ಹೋಗಿ ಅದನ್ನು ಹೊಡೆಯಲು ಮುಂದಾದರು, ಚೆಂಡು ಗಾಳಿಯಲ್ಲಿ ಹಾರಿತು. ಅಲ್ಲಿ ಅಕ್ಷರ್ ಪಟೇಲ್ ಸುಲಭ ಕ್ಯಾಚ್ ಪಡೆದರು. ಇಶಾನ್ ಕಿಶನ್ ಮತ್ತೊಂದು ಆರಂಭವನ್ನು ಎಸೆದ ನಂತರ ನಿರಾಶೆಯಿಂದ ಹಿಂತಿರುಗಿದರು.
ಟಿ 20 ವಿಶ್ವಕಪ್ 2024 ರ ತಂಡದ ಆಯ್ಕೆಯು ಹತ್ತಿರದಲ್ಲಿದೆ. ಕಡಿಮೆ ಸ್ಕೋರ್ಗಳು ಇಶಾನ್ ಕಿಶನ್ ಅವರ ಉದ್ದೇಶಕ್ಕೆ ಸಹಾಯ ಮಾಡುತ್ತಿಲ್ಲ. ಪ್ರಸ್ತುತ ರೇಸ್ನಲ್ಲಿ ಮುಂದಿರುವ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಅವರಗೆಇ ಸ್ಪರ್ಧೆಯೊಡ್ಡುತ್ತಿದ್ದಾರೆ. ಗಿದೆ