Site icon Vistara News

IPL 2024: ಹಾರ್ದಿಕ್​ಗೆ ಗೇಲಿ ಮಾಡದಂತೆ ಅಭಿಮಾನಿಗಳಿಗೆ ವಾರ್ನಿಂಗ್​ ನೀಡಿದ ರೋಹಿತ್

IPL 2024

ಮುಂಬಯಿ: ರೋಹಿತ್​(Rohit Sharma) ಮತ್ತು ಹಾರ್ದಿಕ್​ ಪಾಂಡ್ಯ(Hardik Pandya) ಅಭಿಮಾನಿಗಳ ನಡುವಿನ ಕಿತ್ತಾಟ ಮತ್ತು ಕಿರುಚಾಟ ಸದ್ಯಕ್ಕೆ ನಿಲ್ಲುವಂತೆ ತೋರುತ್ತಿಲ್ಲ. ಹಾರ್ದಿಕ್​ ಅವರನ್ನು ಮುಂಬೈ ತಂಡಕ್ಕೆ ನಾಯಕರನ್ನಾಗಿ ಮಾಡಿದ ದಿನದಿಂದಲೇ ರೋಹಿತ್​ ಅಭಿಮಾನಿಗಳು ಹಾರ್ದಿಕ್​ಗೆ ಕೀಟಲೆ ಮಾಡಲಾರಂಭಿಸಿದ್ದರು. ಸೋಮವಾರ ವಾಖೆಂಡೆಯಲ್ಲಿ ನಡೆದ ರಾಜಸ್ಥಾನ್​ ವಿರುದ್ಧದ(IPL 2024) ಪಂದ್ಯದಲ್ಲಿಯೂ ಪ್ರೇಕ್ಷಕರು ಹಾರ್ದಿಕ್​ ಅವರನ್ನು ಗೇಲಿ ಮಾಡಿದ್ದಾರೆ. ಈ ವೇಳೆ ರೋಹಿತ್​ ಈ ರೀತಿ ಮಾಡದಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರೋಹಿತ್​ ಅವರು ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್​ ಮಾಡುತ್ತಿದ್ದರು. ಈ ವೇಳೆ ಅವರ ಅಭಿಮಾನಿಗಳು ಜೋರಾಗಿ ಕೂಗುವ ಮೂಲಕ ಪಾಂಡ್ಯ ಅವರನ್ನು ಗೇಲಿ ಮಾಡುತ್ತಿದ್ದರು. ಆಗ ರೋಹಿತ್ ಬೊಬ್ಬೆ ಹೊಡೆಯವುದನ್ನು ನಿಲ್ಲಿಸುವಂತೆ ಅಭಿಮಾನಿಗಳ ಬಳಿ ಹೇಳಿದ್ದಾರೆ. ರೋಹಿತ್​ ಮನವಿಯ ಬಳಿಕ ಅಭಿಮಾನಿಗಳು ಕೂಡ ಶಾಂತರಾಗಿ ಪಂದ್ಯ ವೀಕ್ಷಿಸಿದ್ದಾರೆ.

ಪಂದ್ಯಕ್ಕೂ ಮುನ್ನ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಪರ ಪೋಸ್ಟರ್​ ಹಿಡಿದುಕೊಂಡು ಬಂದ ಅಭಿಮಾನಿಗಳಿಗೆ ಸ್ಟೇಡಿಯಮ್​ ಹೊರಗೆಯೇ ತಡೆಯೊಡ್ಡಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅವರನ್ನು ನಿಂದನೆ ಮಾಡುವುದು ಕಂಡುಬಂದರೆ ಅವರನ್ನು ಸ್ಥಳದಿಂದ ಹೊರಗೆ ಕರೆದೊಯ್ಯಲಾಗುವುದು ಎಂಬ ವರದಿಗಳು ಬಂದ ನಂತರ ಈ ಬೆಳವಣಿಗೆ ಬೆಳಕಿಗೆ ಬಂದಿದೆ. ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಾಗಿನಿಂದ, ಅಹಮದಾಬಾದ್ ಮತ್ತು ಹೈದರಾಬಾದ್​​ನ ಕ್ರೀಡಾಂಗಣಗಳಲ್ಲಿ ಅವರಿಗೆ ಅಭಿಮಾನಿಗಳು ಕಿಚಾಯಿಸಿದ್ದರು.

ಇದನ್ನೂ ಓದಿ IPL 2024 Points Table: ಹ್ಯಾಟ್ರಿಕ್​ ಗೆಲುವಿನೊಂದಿಗೆ ಅಗ್ರಸ್ಥಾನ ಪಡೆದ ರಾಜಸ್ಥಾನ್​; ಉಳಿದ ತಂಡದ ಸ್ಥಿತಿ ಹೇಗಿದೆ?

‘ಶೂನ್ಯ’ದಲ್ಲಿ ಸಾಧನೆ ಮಾಡಿದ ರೋಹಿತ್ ಶರ್ಮಾ!


ರೋಹಿತ್ ಶರ್ಮಾ (Rohit Sharma) ಅವರು ಈ ಪಂದ್ಯದಲ್ಲಿ ಶೂನ್ಯ ಸುತ್ತಿ ಅನಗತ್ಯ ಸಾಧನೆ ಮಾಡಿರು. ಐಪಿಎಲ್​ ಟೂರ್ನಿಯಲ್ಲಿ ಅತ್ಯಧಿಕ ಶೂನ್ಯ ಸಂಪಾದಿಸಿದ ಆಟಗಾರರ ಪಟ್ಟಿಯಲ್ಲಿ ದಿನೇಶ್​ ಕಾರ್ತಿಕ್​ ಅವರೊಂದಿಗೆ ಜಂಟಿಯಾಗಿ ಅಗ್ರಸ್ಥಾನ ಪಡೆದರು. ಉಭಯ ಆಟಗಾರರು 17 ಬಾರಿ ಐಪಿಎಲ್​ನಲ್ಲಿ ಡಕೌಟ್​ ಆಗಿದ್ದಾರೆ.

ಮುಂಬೈಗೆ ಹ್ಯಾಟ್ರಿಕ್​ ಸೋಲು


ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬಯಿ ಇಂಡಿಯನ್ಸ್ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 15.3 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 127 ರನ್ ಬಾರಿಸಿ ಭರ್ಜರಿ ವಿಜಯ ಸಾಧಿಸಿತು. 39 ಎಸೆತಗಳಲ್ಲಿ 54 ರನ್ ಬಾರಿಸಿದ ರಿಯಾನ್ ಪರಾಗ್​ ಬ್ಯಾಟಿಂಗ್​ನಲ್ಲಿ ತಂಡಕ್ಕೆ ನೆರವು ಕೊಟ್ಟರೆ, ಬೌಲಿಂಗ್​ನಲ್ಲಿ ಟ್ರೆಂಟ್ ಬೌಲ್ಟ್​ ಹಾಗೂ ಯಜ್ವೇಂದ್ರ ಚಹಲ್​ ತಲಾ 3 ವಿಕೆಟ್​ ಪಡೆದುಕೊಂಡು ಮಿಂಚಿದರು. ಇದು ಮುಂಬೈಗೆ ಎದುರಾದ​ ಹ್ಯಾಟ್ರಿಕ್​ ಸೋಲಾಗಿದೆ.

Exit mobile version