Site icon Vistara News

IPL 2024 : ಐಪಿಎಲ್​ನಲ್ಲಿ ಹೊಸ ಇತಿಹಾಸ; ಸಚಿನ್​ ದಾಖಲೆ ಮುರಿದ ಸಾಯಿ ಸುದರ್ಶನ್​

IPL 2024

ಅಹಮದಾಬಾದ್​ : ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿ ವೇಗದಲ್ಲಿ 1000 ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಸಾಯಿ ಸುದರ್ಶನ್ ಶುಕ್ರವಾರ (ಮೇ 10) ಪಾತ್ರರಾಗಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್​ 2024 (IPL 2024) ಪಂದ್ಯದ ವೇಳೆ ಎಡಗೈ ಬ್ಯಾಟ್ಸ್ಮನ್ ಈ ಸಾಧನೆ ಮಾಡಿದ್ದಾರೆ. 11 ನೇ ಓವರ್​ನಲ್ಲಿ ಸಿಎಸ್​ಕೆ ವೇಗಿ ಸಿಮರ್ಜೀತ್ ಸಿಂಗ್ ಅವರಿಗೆ ಸತತ ಸಿಕ್ಸರ್ ಬಾರಿಸಿದಅಗ ಅವರು ಐಪಿಎಲ್​ನಲ್ಲಿ 1000 ರನ್​ಗಳ ಗಡಿ ದಾಟಿದರು. ಈ ವೇಳೆ 38 ಎಸೆತಗಳಲ್ಲಿ 71 ರನ್​ ಗಳಿಸಿದ್ದರು. ಪಂದ್ಯದಲ್ಲಿ ಅವರು 51 ಎಸೆತಕ್ಕೆ 104 (ಶತಕ) ಬಾರಿಸಿದ್ದಾರೆ.

ಸಾಯಿ ಸುದರ್ಶನ್ ಕೇವಲ 25 ಇನ್ನಿಂಗ್ಸ್​ಗಳಲ್ಲಿ 1000 ರನ್ ಪೂರೈಸಿದರು. ಈ ವೇಳೆ ಅವರು ಕ್ರಿಕೆಟ್​​ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಋತುರಾಜ್ ಗಾಯಕ್ವಾಡ್ ಅವರ ದಾಖಲೆ ಮುರಿದರು. ಸಚಿನ್ ತೆಂಡೂಲ್ಕರ್ ಮತ್ತು ಗಾಯಕ್ವಾಡ್ ಇಬ್ಬರೂ 31 ಇನ್ನಿಂಗ್ಸ್​ಗಳಲ್ಲಿ 1000 ರನ್ ಪೂರೈಸಿದ್ದರು. ಸಚಿನ್ ತೆಂಡೂಲ್ಕರ್ 2022ರಲ್ಲಿ ಐಪಿಎಲ್​​ನಲ್ಲಿ 1000 ರನ್ ಪೂರೈಸಿದ್ದರೆ, ಗಾಯಕ್ವಾಡ್ 2022ರಲ್ಲಿ ಈ ಸಾಧನೆ ಮಾಡಿದ್ದರು.

ಇದನ್ನೂ ಓದಿ: IPL 2024 : “ಶಾರುಖ್​ ಎಂದೂ ನಮ್ಮನ್ನು ಪ್ರಶ್ನಿಸಿಲ್ಲ”, ಎಲ್​ಎಸ್​​ಜಿ ಮಾಲೀಕನಿಗೆ ತಿರುಗೇಟು ಕೊಟ್ಟ ಗಂಭೀರ್​

ಐಪಿಎಲ್​​ನಲ್ಲಿ 30 ಇನ್ನಿಂಗ್ಸ್​ಗಿಂತ ಕಡಿಮೆ ಅವಧಿಯಲ್ಲಿ 1000 ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಜಿಟಿ ಬ್ಯಾಟ್ಸ್ಮನ್ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾ ಮತ್ತು ಪಂಜಾಬ್ ಕಿಂಗ್ಸ್​​ನ ಮಾಜಿ ಬ್ಯಾಟರ್​ ಶಾನ್ ಮಾರ್ಷ್ 21 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದರೆ, ವೆಸ್ಟ್ ಇಂಡೀಸ್​್ನ ಮಾಜಿ ಬ್ಯಾಟರ್​ ಲೆಂಡ್ಲ್ ಸಿಮನ್ಸ್ 23 ಇನ್ನಿಂಗ್ಸ್​​ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸಾಯಿ ಸುದರ್ಶನ್ ಮತ್ತು ಮ್ಯಾಥ್ಯೂ ಹೇಡನ್ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ.

ಅತಿ ವೇಗದ 1000 ರನ್​ಗಳ ಸರದಾರರು ಇವರು

ಸಾಯಿ ಸುದರ್ಶನ್ ಅವರ ಐಪಿಎಲ್ ವೃತ್ತಿಜೀವನ ಹೀಗಿದೆ

ಸಾಯಿ ಸುದರ್ಶನ್ 2022 ರಲ್ಲಿ ಐಪಿಎಲ್​ಗೆ ಪಾದಾರ್ಪಣೆ ಮಾಡಿದ್ದರು. ಆ ವರ್ಷ ಐಪಿಎಲ್​​ಗೆ ಹೊಸ ತಂಡವಾಗಿ ಪ್ರವೇಶ ಮಾಡುತ್ತಿದ್ದ ಗುಜರಾತ್ ಟೈಟಾನ್ಸ್​​ ಪರ ಸಹಿ ಹಾಕಿದ್ದರು. ತಮ್ಮ ಮೊದಲ ಐಪಿಎಲ್ ಋತುವಿನಲ್ಲಿ, ತಮಿಳುನಾಡು ಸ್ಟಾರ್ ಬ್ಯಾಟರ್​ ಕೇವಲ 5 ಪಂದ್ಯಗಳನ್ನು ಆಡಿದ್ದರು. ಒಂದು ಅರ್ಧಶತಕದ ಸಹಾಯದಿಂದ 145 ರನ್ ಗಳಿಸಿದ್ದರು.

ಎರಡನೇ ಋತುವಿನಲ್ಲಿ, ಅವರು 8 ಪಂದ್ಯಗಳನ್ನು ಆಡಿದ್ದರಿಂದ ತಂಡದ ಪ್ರಮುಖ ಸದಸ್ಯರಾದರು. ಆ ಎಂಟು ಪಂದ್ಯಗಳಲ್ಲಿ, ಅವರು ಫೈನಲ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 96 ರನ್ ಸೇರಿದಂತೆ 362 ರನ್ ಗಳಿಸಿದರು. ದುರದೃಷ್ಟವಶಾತ್, ಸಿಎಸ್​ಕೆ ಪಂದ್ಯವನ್ನು ಗೆದ್ದಿದ್ದರಿಂದ ಅವರ ಪ್ರಯತ್ನ ವ್ಯರ್ಥವಾಯಿತು.

2024 ರ ಋತುವಿನಲ್ಲಿ, ಸಾಯಿ ಸುದರ್ಶನ್ ಜಿಟಿ ತಂಡದ ಅನಿವಾರ್ಯ ಭಾಗವಾಗಿದ್ದಾರೆ. ಸಿಎಸ್ಕೆ ವಿರುದ್ಧ ನಡೆಯುತ್ತಿರುವ ಪಂದ್ಯದ ಐಪಿಎಲ್ ಶತಕವನ್ನು ಗಳಿಸಿದರು. ಅವರು 51 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಏಳು ಸಿಕ್ಸರ್ ಗಳ ಸಹಾಯದಿಂದ 103 ರನ್ ಗಳಿಸಿದ್ದಾರೆ.

Exit mobile version