ಕೋಲ್ಕತ್ತಾ: ಇತ್ತೀಚೆಗೆ ಪಾಕಿಸ್ತಾನ್ ಸೂಪರ್ ಲೀಗ್ (PSL) ಫೈನಲ್(PSL Final) ಪಂದ್ಯದ ವೇಳೆ ಇಮಾದ್ ವಾಸಿಂ(Imad Wasim) ಅವರು ಡ್ರೆಸ್ಸಿಂಗ್ ರೂಮ್ ನಲ್ಲಿ ಸಿಗರೇಟ್ ಸೇದಿ ಬಾರಿ ಟೀಕೆಗೆ ಗುರಿಯಾಗಿದ್ದರು. ಇದೀಗ ಇಂತಹದ್ದೇ ಘಟನೆನೊಂದು ಪ್ರಸಕ್ತ ಸಾಗುತ್ತಿರುವ ಐಪಿಎಲ್ನಲ್ಲಿಯೂ ನಡೆದಿದೆ. ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ಸಹ-ಮಾಲೀಕ ಶಾರುಖ್ ಖಾನ್(Shah Rukh Khan) ಅವರು ಶನಿವಾರ ನಡೆದ ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ನಡುವಣ ಪಂದ್ಯದಲ್ಲಿ ಸಿಗರೇಟ್ ಸೇದಿ ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
#ShahRukhKhan is smoking in the stadium and Hakla is an inspiration (Irony) 🤮 pic.twitter.com/MqukSRF9AY
— Prince (@purohit_pr78001) March 23, 2024
ಶಾರುಖ್ ಖಾನ್ ಅವರು ಈ ರೀತಿಯ ದುರ್ವರ್ತನೆ ತೋರುತ್ತಿರುವುದು ಇದೇ ಮೊದಲೇನಲ್ಲ. 2012ರ ಐಪಿಎಲ್ನಲ್ಲಿ ಮುಂಬೈಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಕೆಕೆಆರ್ ಗೆದ್ದಿತ್ತು. ಈ ವೇಳೆ ಶಾರುಖ್ ಖಾನ್ ಅವರು ಕುಡಿತ ಮತ್ತಿನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಅಸಹ್ಯವಾಗಿ ಜಗಳವಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಐದು ವರ್ಷಗಳ ಕಾಲ ವಾಂಖೆಡೆ ಸ್ಟೇಡಿಯಂ ಪ್ರವೇಶಿಸದಂತೆ ನಿಷೇಧ ಹೇರಲಾಗಿತ್ತು. ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿಯೂ ಹಿಂದೊಮ್ಮೆ ಶಾರುಖ್ ಸಿಗರೇಟ್ ಸೇದಿ, ಈ ಸಂಬಂಧ ಅವರ ವಿರುದ್ಧ ಜೈಪುರದ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣವೂ ದಾಖಲಾಗಿತ್ತು. ಇದೀಗ ಮತ್ತೆ ಸಿಗರೇಟ್ ಸೇದಿ ಟೀಕೆಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ IPL 2024 : ಕೆಕೆಆರ್ ಬೌಲರ್ಗೆ ದಂಡ ವಿಧಿಸಿದ ಬಿಸಿಸಿಐ
Wow what a scene king khan smoking cigarette 🚬
— Shivam Tripathi¹ ✗ 💥 (@iamshivam222) March 23, 2024
He is the ideal of many people. 🙌#ShahRukhKhan #IPL2024 #KKRvsSRH pic.twitter.com/UlUr40fg9a
ಶಾರುಖ್ ಖಾನ್ ಅವರು ಸಿಗರೇಟ್ ಸೇದುತ್ತಿರುವ ಫೋಟೊ ಪಂದ್ಯದ ಕ್ಯಾಮೆರಾದಲ್ಲಿ ಕಂಡು ಬಂದಿದೆ. ಈ ಫೋಟೊ ಕಂಡ ಅನೇಕ ನೆಟ್ಟಿಗರು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಗೆ ಆಗ್ರಹಿಸಿದ್ದಾರೆ.
ರೋಚಕ ಗೆಲುವು ಕಂಡ ಕೆಕೆಆರ್
ಅತ್ಯಂತ ರೋಚಕವಾಗಿ, ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಶನಿವಾರದ ದ್ವಿತೀಯ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 4 ರನ್ ಅಂತರದಿಂದ ಗೆದ್ದು ಬೀಗಿತು. ಐತಿಹಾಸಿಕ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಬೃಹತ್ ಮೊತ್ತದ ಪಂದ್ಯಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್(Kolkata Knight Riders) 7 ವಿಕೆಟ್ಗೆ 208 ರನ್ ಬಾರಿಸಿತು. ಬೃಹತ್ ಮೊತ್ತವನ್ನು ದಿಟ್ಟವಾಗಿ ಬೆನ್ನಟ್ಟಿಕೊಂಡು ಹೋದ ಹೈದರಾಬಾದ್(Sunrisers Hyderabad) ತನ್ನ ಪಾಲಿನ ಆಟದಲ್ಲಿ 7 ವಿಕೆಟ್ ಕಳೆದುಕೊಂಡು 204 ರನ್ ಗಳಿಸಿ ಕೇವಲ 4 ರನ್ ಅಂತರದಿಂದ ಸೋಲು ಕಂಡಿತು.
Harshit Rana's remarkable last over seals the deal for #KKR who start their #TATAIPL campaign with narrow victory 🙌
— IndianPremierLeague (@IPL) March 23, 2024
Scorecard ▶️ https://t.co/xjNjyPa8V4 #KKRvSRH pic.twitter.com/WKKVha9adx
ದೊಡ್ಡ ಮೊತ್ತವನ್ನು ಬೆನ್ನಟ್ಟಿಕೊಂಡು ಹೋದ ಹೈದರಾಬಾದ್ ಅಂತಿಮ ಮೂರು ಓವರ್ನಲ್ಲಿ ಗೆಲುವಿಗೆ 60 ರನ್ ಬೇಕಿದ್ದಾಗ ಶಕ್ತಿ ಮೀರಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಹೆನ್ರಿಕ್ ಕ್ಲಾಸೆನ್ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದರು. ಅಂತಿಮ ಓವರ್ನಲ್ಲಿ ಗೆಲುವಿಗೆ 13 ರನ್ ಇದ್ದಾಗ ಸಿಕ್ಸರ್ ಬಾರಿಸಿದ ಕ್ಲಾಸೆನ್ ಮುಂದಿನ ಎಸೆತದಲ್ಲಿ ಒಂದು ರನ್ ತೆಗೆದರು. ಆದರೆ ಮುಂದಿನ ಎಸೆತದಲ್ಲಿ ಶಹಬಾಜ್ ಅಹ್ಮದ್ ವಿಕೆಟ್ ಕೈಚೆಲ್ಲಿದರು. ಬಳಿಕ ಬಂದ ಜಾನ್ಸೆನ್ ಒಂದು ರನ್ ತೆಗೆದು ಮತ್ತೆ ಕ್ಲಾಸೆನ್ಗೆ ಕ್ರೀಸ್ ನೀಡಿದರು. 2 ಎಸೆತಗಳ ಮುಂದೆ 5 ರನ್ ತೆಗೆಯುವ ಸವಾಲನ್ನು ಕ್ಲಾಸೆನ್ ಮೆಟ್ಟಿನಿಂತು ಹೈದರಾಬಾದ್ಗೆ ಸ್ಮರಣೀಯ ಗೆಲುವು ತಂದು ಕೊಡುತ್ತಾರೆ ಎಂದು ನಿರೀಕ್ಷೆ ಮಾಡಿದಾಗಲೇ ಅವರ ವಿಕೆಟ್ ಕೂಡ ಬಿತ್ತು. ಆದರೂ ಪಂದ್ಯ ಹೈದರಾಬಾದ್ ಕಡೆಯೇ ಇತ್ತು. ಏಕೆಂದರೆ ಬ್ಯಾಟಿಂಗ್ಗೆ ಬಂದದ್ದು ಪ್ಯಾಟ್ ಕಮಿನ್ಸ್. ಆದರೆ ಅಂತಿಮ ಎಸೆತವನ್ನು ಡಾಟ್ ಎಸೆದ ಹರ್ಷಿತ್ ರಾಣ ಕೆಕೆಆರ್ಗೆ ಸ್ಮರಣೀಯ ಗೆಲುವು ತಂದುಕೊಟ್ಟರು.