ಕೋಲ್ಕತ್ತಾ: ಅಗ್ರಸ್ಥಾನಕ್ಕೇರುವ ಇರಾದೆಯೊಂದಿಗೆ ರಾಜಸ್ಥಾನ್ ರಾಯಲ್ಸ್(RR) ವಿರುದ್ಧ ಆಡಲಿಳಿದಿದ್ದ ಕೆಕೆಆರ್(KKR) ತಂಡ ಜಾಸ್ ಬಟ್ಲರ್ ಅವರ ಅಜೇಯ ಶತಕದ(IPL 2024) ಆಟದಿಂದ ಸೋಲು ಕಂಡಿತ್ತು. ತವರಿನಲ್ಲೇ ಸೋಲು ಕಂಡ ಬೇಸರದಲ್ಲಿ ತಂಡದ ಸಹ ಮಾಲೀಕ, ಬಾಲಿವುಡ್ ನಟ ಶಾರೂಖ್ ಖಾನ್(Shah Rukh Khan) ಅವರು ಕಣ್ಣೀರು ಸುರಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಶಾರೂಖ್ ಖಾನ್ ತನ್ನ ತಂಡ ಸೋಲು ಕಂಡಾಗ ಭಾವುಕರಾದರು. ಆದರೂ ಕೂಡ ಪಂದ್ಯ ಮುಗಿದ ಬಳಿಕ ಮೈದಾನಕ್ಕೆ ಹತಾಶರಾಗಿ ಕುಳಿತಿದ್ದ ತನ್ನ ತಂಡದ ಆಟಗಾರರನ್ನು ಸಮಾಧಾನ ಪಡೆಸಿದರು. ಅಲ್ಲದೆ ಡ್ರೆಸ್ಸಿಂಗ್ ರೂಮ್ಗೂ ತೆರಳಿ ಆಟಗಾರರಿಗೆ ಮುಂದಿನ ಪಂದ್ಯದಲ್ಲಿ ಉತ್ತಮವಾಗಿ ಆಡುವಂತೆ ಧೈರ್ಯ ತುಂಬಿದರು. ಜತೆಗೆ ಗೆಲುವು ಸಾಧಿಸಿದ ಎದುರಾಳಿ ತಂಡದ ಆಟಗಾರರನ್ನು ಕೂಡ ತಬ್ಬಿಕೊಂಡು ಅಭಿನಂದಿಸಿದರು.
@iamsrk success does not last,failure does not kill ,what matters is the courage to continue ,i dont like to see you like that sir #ShahRukhKhan @KKRUniverse @KKRiders pic.twitter.com/1Bimjs4Q4C
— #SRK FOR EVER ❤🇩🇿 (@crayzeofshah24y) April 16, 2024
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ಸುನೀಲ್ ನಾರಾಯಣ್ ಅವರ ಸ್ಫೋಟಕ ಶತಕದಿಂದಾಗಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟಿಗೆ 223 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿಕೊಂಡು ಹೋದ ರಾಜಸ್ಥಾನ್ ನಾಟಕೀಯ ಕುಸಿತ ಕಂಡರೂ ಜಾಸ್ ಬಟ್ಲರ್ ಅವರ ಏಕಾಂಗಿ ಶತಕದ ಆಟದಿಂದ ಗರೋಚಕ 2 ವಿಕೆಟ್ ಗೆಲುವು ಸಾಧಿಸಿತು. ಗೆಲುವಿನ ರನ್ ಕೂಡ ಬಟ್ಲರ್ ಅವರೇ ಬಾರಿಸಿ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟರು. 60 ಎಸೆತ ಎದುರಿಸಿದ್ದು 9 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ 107 ರನ್ ಗಳಿಸಿ ಅಜೇಯರಾಗಿ ಉಳಿದರು. ಬಟ್ಲರ್ ಅವರ ಈ ಶತಕ ವೈಭವದಿಂದಾಗಿ ಸುನೀಲ್ ನಾರಾಯಣ್ ಅವರ ಸಾಧನೆ ವ್ಯರ್ಥವಾಯಿತು.
ಇದನ್ನೂ ಓದಿ IPL 2024: ಆರ್ಸಿಬಿ ತಂಡದ ಹೀನಾಯ ಪ್ರದರ್ಶನಕ್ಕೆ ಕಾರಣ ತಿಳಿಸಿದ ಮಾಜಿ ಆಟಗಾರ
Shah Rukh Khan is very sad because his team lost today but he is encouraging every player. Owner should be like #ShahRukhKhan#KKRvsRRpic.twitter.com/s4ryjcLQYE
— 😎Sourav Srkian Das😎 (@SrkianDas04) April 16, 2024
ಅಯ್ಯರ್ಗೆ 12 ಲಕ್ಷ ದಂಡ
ಇದೇ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣ ಕೆಕೆಆರ್(KKR) ತಂಡದ ನಾಯಕ ಶ್ರೇಯಸ್ ಅಯ್ಯರ್(Shreyas Iyer) ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಸೋಲಿನ ಹತಾಶೆಯಲ್ಲಿದ್ದ ಅವರಿಗೆ ದಂಡದ ಬಿಸಿ ಕೂಡ ಮುಟ್ಟಿದಂತಾಗಿದೆ.
‘ಇದು ಐಪಿಎಲ್‌ನ ನೀತಿ ಸಂಹಿತೆಯಡಿಯಲ್ಲಿ ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಈ ಆವೃತ್ತಿಯಲ್ಲಿ ಕೆಕೆಆರ್ ತಂಡದ ಮೊದಲ ಅಪರಾಧವಾಗಿರುವುದರಿಂದ, ಶ್ರೇಯಸ್ ಐಯ್ಯರ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ’ ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಐಪಿಎಲ್‌ನ ಕೋಡ್ ಆಫ್ ಕಂಡಕ್ಟ್ ಅಪರಾಧವನ್ನು ಅಯ್ಯರ್ ಒಪ್ಪಿಕೊಂಡಿದ್ದಾರೆ.