Site icon Vistara News

IPL 2024 : ಕೆಕೆಆರ್​ ಗೆದ್ದ ಬಳಿಕ ವಿವಾದಿತ ಫ್ಲೈಯಿಂಗ್ ಕಿಸ್​ ಕೊಟ್ಟ ಶಾರುಖ್ ಖಾನ್​; ಇದಕ್ಕೂ ಒಂದು ಕಾರಣವಿದೆ

IPL 2024

ಚೆನ್ನೈ: ಐಪಿಎಲ್​ 17ನೇ ಆವೃತ್ತಿಯ (IPL 2024) ಫೈನಲ್ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ (SRH) ತಂಡವನ್ನು ಮಣಿಸಿದ ಕೆಕೆಆರ್ ತಂಡ (KKR) ಐಪಿಎಲ್​ನಲ್ಲಿ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದಿತು. ಇದರಿಂದ ಪುಳಕಿತರಾದ ಕೋಲ್ಕತಾ ನೈಟ್ ರೈಡರ್ಸ್ ಸಹ ಮಾಲೀಕ ಶಾರುಖ್ ಖಾನ್ (Sha Rukh Khan) ತಂಡದೊಂದಿಗೆ ಸಂಭ್ರಮಿಸಿದರು. ಮೈದಾನಕ್ಕೆ ಇಳಿದ ಅವರು ಆಟಗಾರರನ್ನು ಅಪ್ಪಿಕೊಂಡು ಸಂಭ್ರಮಿಸಿದರು. ಪ್ರತಿಯೊಬ್ಬ ಆಟಗಾರನ ಜತೆಯೂ ಅವರು ಮಾತುಕತೆ ನಡೆಸಿ ಸಂಭ್ರಮಿಸಿದರು. ಏತನ್ಮಧ್ಯೆ ಅವರು ವೇಗದ ಬೌಲರ್​ ಹರ್ಷಿತ್ ರಾಣಾ (Harshit Rana) ಅವರೊಂದಿಗೆ ವಿಭಿನ್ನ ರೀತಿಯಲ್ಲಿ ಸಂಭ್ರಮಿಸಿದರು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಕ್ಲಿಪ್​ನಲ್ಲಿ ರಾಣಾ ಅವರ ಫ್ಲೈಯಿಂಗ್ ಕಿಸ್ ಆಚರಣೆಯನ್ನು ಅನುಕರಿಸಿದರು. ಇದು ವಿವಾದಕ್ಕೆ ಒಳಗಾದ ಭಂಗಿಯಾಗಿದೆ.

ಕೆಕೆಆರ್​ ಮತ್ತು ಎಸ್​ಆರ್​ಎಚ್​ ತಂಡಗಳ ನಡುವಿನ ಲೀಗ್ ಹಂತದ ಮೊದಲ ಲೆಗ್​ನ ಪಂದ್ಯದ ವೇಳೆ ಇದು ವಿವಾದಕ್ಕೆ ಒಳಗಾಗಿತ್ತು. ಹರ್ಷಿತ್​ ರಾಣಾ ಎಸ್​ಆರ್​ಎಚ್ ಬ್ಯಾಟರ್ ಮಯಾಂಕ್ ಅಗರ್ವಾಲ್ ಅವರನ್ನು ಔಟ್​ ಮಾಡಿದ ಬಳಿಕ ಅವರ ಕಡೆ ಕೈ ತೋರಿಸಿ ಗಾಳಿಯಲ್ಲಿ ಕಿಸ್​ ಕೊಟ್ಟಿದ್ದರು. ಇದು ಎದುರಾಳಿ ತಂಡ ಆಟಗಾರನ ಅವಹೇಳ ಎಂದು ಭಾವಿಸಿದ ಮ್ಯಾಚ್ ರೆಫರಿ ದಂಡ ವಿಧಿಸಿದ್ದರು. ರಾಣಾ ನಂತರದ ಪಂದ್ಯದಲ್ಲಿಯೂ ಅದನ್ನು ಪುನರಾವರ್ತಿಸಿದ್ದರು. ಇದರಿಂದ ಕೆರಳಿದ ಬಿಸಿಸಿಐ ನೀತಿ ಸಂಹಿತೆಯ ಕಾವಲು ತಂಡ ರಾಣಾಗೆ ಒಂದು ಪಂದ್ಯದಿಂದ ನಿಷೇಧ ಹೇರಿತು. ಅಲ್ಲಿಂದ ಅವರು ಆ ರೀತಿ ಸಂಭ್ರಮಿಸಿರಲಿಲ್ಲ. ಬಾಯ್ಮುಚ್ಚು ಎಂಬಂತೆ ಸಂಭ್ರಮ ವ್ಯಕ್ರಪಡಿಸುತ್ತಿದ್ದರು.

ರಾಣಾ ಅವರಿಗೆ ನಿಷೇಧ ಹೇರಿದ್ದು ನಿಯಮ ಪ್ರಕಾರ ಸರಿಯಾದ ನಿರ್ಧಾರ ಆಗಿರುವ ಹೊರತಾಗಿಯೂ, ಫ್ರಾಂಚೈಸಿ ಆ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು. ತಮ್ಮ ಶೈಲಿಯ ಸಂಭ್ರಮಕ್ಕೆ ಈ ರೀತಿಯ ದಂಡನೆ ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದೀಗ ಫೈನಲ್​ ಪಂದ್ಯದ ಬಳಿಕ ಶಾರುಖ್ ಖಾನ್ ಅದೇ ರೀತಿ ಸಂಭ್ರಮಿಸಿದ್ದಾರೆ.

ಕೆಕೆಆರ್​ಗೆ ಇದು ಅದ್ಭುತ ರಾತ್ರಿ: ಮಿಚೆಲ್ ಸ್ಟಾರ್ಕ್

ಫೈನಲ್ ಪಂದ್ಯದ ಬಗ್ಗೆ ಹೇಳುವುದಾದರೆ, ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಕ್ಕೆ ಇದು ಅದ್ಭುತ ರಾತ್ರಿಯಾಗಿತ್ತು. ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಕೇವಲ 113 ರನ್​​ಗಳಿಗೆ ಸೀಮಿತಗೊಳಿಸಿದ ಸಂದರ್ಭ ತಂಡದ ಬೌಲಿಂಗ್ ಘಟಕಕ್ಕೆ ನೆನಪಿನಲ್ಲಿ ಉಳಿಯುವ ದಿನವಾಗಿತ್ತು. ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: Mitchell Starc : ಇನ್ನು ಮುಂದೆ ಫುಲ್​ ಟೈಮ್ ಐಪಿಎಲ್​; ಏಕ ದಿನ ಕ್ರಿಕೆಟ್​ಗೆ ವಿದಾಯ ಹೇಳುವ ಸುಳಿವು ಕೊಟ್ಟ ಮಿಚೆಲ್ ಸ್ಟಾರ್ಕ್​

ವೇಗಿ ಮೂರು ಓವರ್​ಗಳನ್ನು ಎಸೆದರು. ಈ ವೇಳೆ ಅವರು 14 ರನ್​ ನೀಡಿದರು. ಎರಡು ಅದ್ಭುತ ವಿಕೆಟ್​ ಪಡೆದರು. ಪಂದ್ಯದ ನಂತರ, ಸ್ಟಾರ್ಕ್ ತಮ್ಮ ಋತುವಿನ ಬಗ್ಗೆ ಮತ್ತು ಈಗ ಮೂರು ಬಾರಿ ಐಪಿಎಲ್ ಚಾಂಪಿಯನ್​ಗಳಿಗೆ ರಾತ್ರಿ ಹೇಗೆ ಅದ್ಭುತವಾಗಿತ್ತು ಎಂಬುದರ ಬಗ್ಗೆ ಮಾತನಾಡಲು ಮುಂದೆ ಬಂದರು.

“ಕೆಕೆಆರ್ಗೆ ಇದು ಉತ್ತಮ ರಾತ್ರಿಯಾಗಿತ್ತು. ಬಹುಶಃ ಫೈನಲ್ ನಲ್ಲಿ ಎರಡು ಅತ್ಯಂತ ರೋಮಾಂಚಕಾರಿ ತಂಡಗಳು ಮುಖಾಮುಖಿಯಾಗಿದ್ದುವ. ಅದೊಂದು ವಿಭಿನ್ನ ಪ್ರಯಾಣವಾಗಿತ್ತು. ನಾವು ಅದ್ಭುತ ತಂಡವನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ. ಎಲ್ಲರ ಕೊಡುಗೆಗಳೊಂದಿಗೆ ನಾವು ಸ್ಥಿರವಾದ ತಂಡವಾಗಿ ಉಳಿದಿದ್ದೇವೆ. ಅದು ನಮ್ಮ ಯಶಸ್ಸಿನ ದೊಡ್ಡ ಭಾಗವಾಗಿತ್ತು. ನಾವು ಟಾಸ್ ಸೋತೆವು ಮತ್ತು ಮೊದಲು ಬೌಲಿಂಗ್ ಮಾಡಬೇಕಾಯಿತು. ಎರಡು ರಾತ್ರಿಗಳ ಹಿಂದೆ ಇಲ್ಲಿನ ಪಂದ್ಯವನ್ನು ವೀಕ್ಷಿಸಿದ ನಂತರ, (ಚೇಸ್ ಮಾಡಿದ ತಂಡ ಸೋತಿತ್ತು) ಏನನ್ನು ಮಾಡಬೇಕೆಂಬುದು ನಮಗೆ ತಿಳಿದಿರಲಿಲ್ಲ. ಆದರೆ ಬೌಲಿಂಗ್ ಘಟಕವು ತಮ್ಮಲ್ಲಿರುವ ಎಲ್ಲಾ ಕೌಶಲಗಳನ್ನು ತೋರಿಸಿತು”ಎಂದು ಮಿಚೆಲ್ ಸ್ಟಾರ್ಕ್ ಪಂದ್ಯದ ನಂತರದ ಸಮಾರಂಭದಲ್ಲಿ ಹೇಳಿದ್ದಾರೆ.

Exit mobile version