Site icon Vistara News

IPL 2024 : ಕೆಕೆಆರ್​ ಗೆದ್ದ ಸಂಭ್ರಮದಲ್ಲಿ ಕೋಚ್ ಗಂಭೀರ್​ ಹಣೆಗೆ ಮುತ್ತಿಟ್ಟ ಶಾರುಖ್​ ಖಾನ್​, ಇಲ್ಲಿದೆ ವಿಡಿಯೊ

IPL 2024

ಚೆನ್ನೈ: ಇಲ್ಲಿನ ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಭಾನುವಾರ ಕೋಲ್ಕೊತಾ ನೈಟ್ ರೈಡರ್ಸ್ (KKR) ತನ್ನ ಮೂರನೇ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024 ) ಕಿರೀಟ ಗೆದ್ದುಕೊಂಡಿದೆ. ಈ ಬಳಿಕ ಸಂಭ್ರಮದಲ್ಲಿದ್ದ ಮಾಲೀಕ ಶಾರುಖ್​ ಖಾನ್ (Sha Rukh Khan)​ ಮಗಳು ಸುಹಾನಾ ಮತ್ತು ಪುತ್ರರಾದ ಅಬ್ರಾಮ್ ಮತ್ತು ಆರ್ಯನ್ ಅವರೊಂದಿಗೆ ವಿಜಯೋತ್ಸವವನ್ನು ಆಚರಿಸಿದರು. ದೊಡ್ಡ ಫೈನಲ್​​ನಲ್ಲಿ ಸ್ಮರಣೀಯ ಗೆಲುವಿನ ನಂತರ ಗ್ಯಾಲರಿಯಿಂದ ಕೆಳಗಿಳಿದ ಅವರು ತಂಡದ ಜತೆ ಸಂಭ್ರಮವನ್ನು ಆಚರಿಸಿದರು. ಈ ವೇಳೆ ನೈಟ್ ರೈಡರ್ಸ್ ತಂಡದ ಮಾರ್ಗದರ್ಶಕರಾಗಿ ನೇಮಕಕೊಂಡ ತಮ್ಮ ಮೊದಲ ಋತುವಿನಲ್ಲೇ ಪ್ರಶ್ತಿಯ ಕೊಡುಗೆಯನ್ನು ನೀಡಿದ ಗಂಭೀರ್ ಅವರಿಗೆ ಹಣೆಗೆ ಮುತ್ತಿಟ್ಟರು. ವಿಶೇಷವೆಂದರೆ, ಶ್ರೇಯಸ್ ಅಯ್ಯರ್ ಗಂಭೀರ್ ನಂತರ ಐಪಿಎಲ್ ಟ್ರೋಫಿಯನ್ನು ಗೆದ್ದ ಎರಡನೇ ಕೆಕೆಆರ್ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಏತನ್ಮಧ್ಯೆ ಗೌತಮ್ ಗಂಭೀರ್ ಮತ್ತು ಸುನಿಲ್ ನರೈನ್ ಪರಸ್ಪರ ಎತ್ತಿಕೊಂಡು ಸಂಭ್ರಮಿಸಿದಾಗ ಕೆಕೆಆರ್ ಶಿಬಿರವು ಸಂತೋಷದಿಂದ ಕುಣಿಯಿತು. ಇಬ್ಬರು ಚಾಂಪಿಯನ್ ಕ್ರಿಕೆಟಿಗರು ಟಿವಿ ಕ್ಯಾಮೆರಾಗಳಿಗೆ ಅಪರೂಪದ ನಗು ತೋರಿದರು. 2012 ಮತ್ತು 2014 ರಲ್ಲಿ ನರೈನ್ ಅವರನ್ನು ಮುನ್ನಡೆಸಿದ ಗಂಭೀರ್ ಅವರ ಪ್ರಭಾವವು 2024 ರ ಋತುವಿನಲ್ಲಿ ಸ್ಪಷ್ಟವಾಯಿತು, ವೆಸ್ಟ್ ಇಂಡೀಸ್​ನ ಮಾಜಿ ಕ್ರಿಕೆಟಿಗ ಹಾಲಿ ಋತುವಿನ ಅತ್ಯಂತ ಮೌಲ್ಯಯುತ ಆಟಗಾರ (15 ಪಂದ್ಯಗಳಲ್ಲಿ 488 ರನ್ ಮತ್ತು 17 ವಿಕೆಟ್​ಗಳು) ಪ್ರಶಸ್ತಿ ಪಡೆದರು.

ಇದನ್ನೂ ಓದಿ: IPL 2024 : ‘ಪ್ಲೇಯರ್​​ ಆಫ್​ ದಿ ಟೂರ್ನಮೆಂಟ್​’ ಸೇರಿ ನಾನಾ ಪ್ರಶಸ್ತಿ ವಿಜೇತ ಪಟ್ಟಿ ಇಲ್ಲಿದೆ

ಐಪಿಎಲ್ ಹರಾಜಿನ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರೊಂದಿಗೆ ಶಾರುಖ್ ಖಾನ್ ಆತ್ಮೀಯ ಅಪ್ಪುಗೆಯನ್ನು ಹಂಚಿಕೊಂಡರು. ಸ್ಟಾರ್ಕ್ ಮಾಲೀಕ ಶಾರುಖ್ ಅವರೊಂದಿಗೆ ಸುದೀರ್ಘ ಮಾತುಕಗೆ ಮಾಡುತ್ತಿರುವುದು ಕಂಡುಬಂತು. ಅವರು ಋತುವಿನಲ್ಲಿ, ಪ್ಲೇಆಫ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರ ಕೊಡುಗೆಯನ್ನು ಶಾರುಖ್ ಖಾನ್ ಇದೇ ವೇಳೆ ಶ್ಲಾಘಿಸಿದರು.

ಎಂ.ಎ.ಚಿದಂಬರಂ ಸ್ಟೇಡಿಯಂನ ಸುತ್ತಲೂ ವಿಜಯೋತ್ಸವ ಆಚರಿಸಿದ ಶಾರುಖ್ ಖಾನ್, ತಮ್ಮ ಟ್ರೇಡ್​ಮಾರ್ಕ್​ ಪೋಸ್ ನೀಡಿದರು ಮತ್ತು ಸ್ಟ್ಯಾಂಡ್​ಗಳಲ್ಲಿರುವ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್​ ನೀಡಿದರು. ಅಹಮದಾಬಾದ್ದ್ನ​ನಲ್ಲಿ ಉಂಟಾದ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡ ಕೆಲವು ದಿನಗಳ ನಂತರ ಶಾರುಖ್ ಅಭಿಮಾನಿಗಳಿಗೆ ಕಾಣಿಸಿಕೊಂಡರು.

ಕೆಕೆಆರ್​ ಉತ್ತಮ ಪ್ರದರ್ಶನ

ಲೀಗ್ ಹಂತದ ಬಳಿಕ ಕೋಲ್ಕತಾ ನೈಟ್ ರೈಡರ್ಸ್ (KKR) ಆಡಿರುವ 14 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು . ಸನ್ರೈಸರ್ಸ್ ಹೈದರಾಬಾದ್ 8 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ರಾಜಸ್ಥಾನ್ ರಾಯಲ್ಸ್ (ಆರ್ಆರ್) ಅದೇ ಸಂಖ್ಯೆಯ ಗೆಲುವುಗಳನ್ನು ಹೊಂದಿತ್ತು. ನೆಟ್​ರನ್​ರೇಟ್​ ಅವರನ್ನು 3 ನೇ ಸ್ಥಾನಕ್ಕೆ ತಳ್ಳಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ ) ಸತತ 6 ಗೆಲುವುಗಳೊಂದಿಗೆ 4 ನೇ ಸ್ಥಾನದಲ್ಲಿತ್ತು.

ಕ್ವಾಲಿಫೈಯರ್ 1 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿ ಫೈನಲ್​ಗೆ ಪ್ರವೇಶಿಸಿತ್ತು. ಎಲಿಮಿನೇಟರ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್​ಗಳ ನಿರಾಶಾದಾಯಕ ಸೋಲು ಅನುಭವಿಸಿತು. ಕ್ವಾಲಿಫೈಯರ್ 2 ರಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ವಿರುದ್ಧ 36 ರನ್​ಗಳಿಂದ ಆರ್​ಆರ್​ ಸೋತಿತು.

Exit mobile version