ಮುಂಬಯಿ: ಚುಟುಕು ಕ್ರಿಕೆಟ್ ಕದನ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) 17ನೇ ಆವೃತ್ತಿ ಇದೇ ಶುಕ್ರವಾರ(ಮಾಚ್ 22) ಆರಂಭಗೊಳ್ಳಲಿದೆ. ಈ ಮೆಗಾ ಕ್ರಿಕೆಟ್ ಟೂರ್ನಿಯನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಲು ಬಿಸಿಸಿಐ ದೇಶದ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್(TATA IPL Fan Park 2024) ಆಯೋಜನೆ ಮಾಡಲು ತೀರ್ಮಾನಿಸಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕ್ರಿಕೆಟ್ ಆಟವನ್ನು ಜಗತ್ತಿನಾದ್ಯಂತ ಮತ್ತು ದೇಶದ ಅಭಿಮಾನಿಗಳಿಗೆ ಹತ್ತಿರದಿಂದ ನೋಡುವಂತಾಗಲು 2015 ರಲ್ಲಿ ಫ್ಯಾನ್(IPL Fan Park) ಪಾರ್ಕ್ ಪರಿಕಲ್ಪನೆಯನ್ನು ಜಾರಿಗೆ ತಂದಿತು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಮೂರು ವರ್ಷಗಳ ಕಾಲ ಫ್ಯಾನ್ ಪಾರ್ಕ್ ಆಯೋಜನೆ ಮಾಡಿರಲಿಲ್ಲ. ಕಳೆದ ಮತ್ತೆ ಫ್ಯಾನ್ ಪಾರ್ಕ್ಗೆ ಚಾಲನೆ ನೀಡಲಾಗಿತ್ತು. ಈ ಬಾರಿ 50 ಪ್ರಮುಖ ನಗರಗಳಲ್ಲಿ ಫ್ಯಾನ್ ಪಾರ್ಕ್ ಇರಲಿದೆ.
🚨 NEWS 🚨#TATAIPL Fan Park 2024 set to bring joy across 50 Indian cities.
— IndianPremierLeague (@IPL) March 20, 2024
Read More 🔽 https://t.co/TLhjda0GUk pic.twitter.com/9RDA4EyI36
ಮಾರ್ಚ್ 22 ರಂದು ಟೂರ್ನಿಯ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(CSK vs RCB) ಮತ್ತು ಆರ್ಸಿಬಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ. ಈ ಪಂದ್ಯದ ಫ್ಯಾನ್ ಪಾರ್ಕ್ ಪ್ರಸಾರ ಮಧುರೈನಲ್ಲಿ ನಡೆಯಲಿದೆ. ದೇಶದ 11 ರಾಜ್ಯಗಳಾದ ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತಮಿಳುನಾಡು, ಉತ್ತರಾಖಂಡ, ಗುಜರಾತ್, ಕರ್ನಾಟಕ, ಜಾರ್ಖಂಡ್, ಪಂಜಾಬ್ ಮತ್ತು ತೆಲಂಗಾಣದ ಪ್ರಮುಖ ನಗರಗಳಲ್ಲಿ ಬಹುನಿರೀಕ್ಷಿತ ಐಪಿಎಲ್ ಫ್ಯಾನ್ ಪಾರ್ಕ್‌ಗಳನ್ನು ಆಯೋಜನೆ ಮಾಡಲಾಗಿದೆ. ಇಲ್ಲಿ ಮೊದಲ ಹಂತದ ಪಂದ್ಯಗಳು ಮಾತ್ರ ಪ್ರಸಾರಗೊಳ್ಳಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ IPL 2024: ಶೀಘ್ರದಲ್ಲೇ ಐಪಿಎಲ್ ದ್ವಿತೀಯಾರ್ಧದ ಪಂದ್ಯದ ವೇಳಾಪಟ್ಟಿ ಪ್ರಕಟ; ಎಲ್ಲಿ ನಡೆಯಲಿದೆ ಟೂರ್ನಿ?
ಅದ್ಧೂರಿ ಉದ್ಘಾಟನ ಸಮಾರಂಭ
ಟೂರ್ನಿಯ ಉದ್ಘಾಟನ ಸಮಾರಂಭದಲ್ಲಿ(IPL 2024 opening ceremony) ಎ.ಆರ್ ರೆಹಮಾನ್(AR Rahman), ಸೋನು ನಿಗಮ್(Sonu Nigam), ಟೈಗರ್ ಶ್ರಾಫ್(Tiger Shroff), ಅಕ್ಷಯ್ ಕುಮಾರ್(Akshay Kumar) ಪ್ರದರ್ಶನ ನೀಡಲಿದ್ದಾರೆ. ಈ ವಿಚಾರವನ್ನು ಐಪಿಎಲ್ ಆಡಳಿತ ಮಂಡಳಿ ಬುಧವಾರ ಟ್ವೀಟರ್ ಎಕ್ಸ್ ಖಾತೆಯಲ್ಲಿ ಅಧಿಕೃತ ಪ್ರಕಟನೆಯ ಮೂಲಕ ತಿಳಿಸಿದೆ. ಈ ಕಾರ್ಯಕ್ರಮ ಚೆನ್ನೈಯಲ್ಲಿ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಅಂದರೆ ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಗೊಂಡಿದೆ. ಉಳಿದ ಪಂದ್ಯಗಳು ಯಾವಾಗಿನಿಂದ ಹಾಗೂ ಎಲ್ಲಿ ನಡೆಯುತ್ತದೆ ಎನ್ನುವ ಮಾಹಿತಿ ಇದುವರೆಗೆ ರಿವೀಲ್ ಆಗಿಲ್ಲ.
ಮೊದಲ ಹಂತದ ವೇಳಾಪಟ್ಟಿ
ಮಾ.22: ರಾತ್ರಿ 7:30: ಆರ್ಸಿಬಿ vsಚೆನ್ನೈ ಸೂಪರ್ ಕಿಂಗ್ಸ್ -ಚೆನ್ನೈ
ಮಾ.23: ಮಧ್ಯಾಹ್ನ 3:30: ಪಂಜಾಬ್ vsಡೆಲ್ಲಿ – ಮೊಹಾಲಿ
ಮಾ.23: ರಾತ್ರಿ 7:30 : ಕೆಕೆಆರ್ vs ಸನ್ರೈಸರ್ಸ್, – ಕೋಲ್ಕತ್ತಾ
ಮಾ. 24 ಮಧ್ಯಾಹ್ನ 3:30: ರಾಜಸ್ಥಾನ್ vs ಲಕ್ನೋ, ಜೈಪುರ್
ಮಾ. 24 ರಾತ್ರಿ 7:30: ಗುಜರಾತ್ vs ಮುಂಬೈ ಇಂಡಿಯನ್ಸ್, ಅಹಮದಾಬಾದ್
ಮಾ.25 ರಾತ್ರಿ 7:30:ಆರ್ಸಿಬಿ vs ಪಂಜಾಬ್, ಬೆಂಗಳೂರು
ಮಾ.26: ರಾತ್ರಿ 7:30: ಸಿಎಸ್ ಕೆ vs ಗುಜರಾತ್ ,ಚೆನ್ನೈ
ಮಾ.27: ರಾತ್ರಿ 7:30: ಸನ್ರೈಸರ್ಸ್vs ಮುಂಬೈ , ಹೈದರಾಬಾದ್
ಮಾ.28: ರಾತ್ರಿ 7:30: ರಾಜಸ್ಥಾನ್ vs ಡೆಲ್ಲಿ, ಜೈಪುರ್
ಮಾ.29: ರಾತ್ರಿ 7:30 ಆರ್ಸಿಬಿ vs ಕೆಕೆಆರ್ ,ಬೆಂಗಳೂರು
ಮಾ.30: ರಾತ್ರಿ 7:30 ಲಕ್ನೋ vs ಪಂಜಾಬ್ ,ಲಕ್ನೋ
ಮಾ.31 ಮಧ್ಯಾಹ್ನ 3:30: ಗುಜರಾತ್ vs ಸನ್ರೈಸರ್ಸ್ ,ಅಹಮದಬಾದ್
ಮಾ.31 ರಾತ್ರಿ: 7:30 : ಡೆಲ್ಲಿ vs ಚೆನ್ನೈ -ವಿಶಾಖಪಟ್ಟಣಂ
ಎಪ್ರಿಲ್ 1 ಮುಂಬೈ vs ರಾಜಸ್ಥಾನ್ ಸಂಜೆ 7:30 ಮುಂಬೈ
ಎಪ್ರಿಲ್ 2 ಆರ್ಸಿಬಿ vs ಲಕ್ನೋ ಸಂಜೆ 7:30 ಬೆಂಗಳೂರು
ಎಪ್ರಿಲ್ 3 ಡೆಲ್ಲಿ vs ಕೆಕೆಆರ್ ಸಂಜೆ 7:30 ವೈಜಾಗ್
ಎಪ್ರಿಲ್ 4 ಗುಜರಾತ್ vs ಪಂಜಾಬ್ ಸಂಜೆ 7:30 ಅಹಮದಾಬಾದ್
ಎಪ್ರಿಲ್ 5 ಹೈದರಾಬಾದ್ vs ಚೆನ್ನೈ ಸಂಜೆ 7:30 ಹೈದರಾಬಾದ್
ಎಪ್ರಿಲ್ 6 ರಾಜಸ್ಥಾನ್ vs ಆರ್ಸಿಬಿ ಸಂಜೆ 7:30 ಜೈಪುರ
ಎಪ್ರಿಲ್ 7 ಮುಂಬೈ vs ಡೆಲ್ಲಿ ಮಧ್ಯಾಹ್ನ 3:30 ಮುಂಬೈ
ಎಪ್ರಿಲ್ 7 ಲಕ್ನೋ vs ಗುಜರಾತ್ ಸಂಜೆ 7:30 ಲಕ್ನೋ