Site icon Vistara News

IPL 2024 : ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್​​ಗಳು

Virat kohli

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನ ಹದಿನಾರನೇ ಆವೃತ್ತಿಯು ಮಾರ್ಚ್ 31 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (GT) ಮತ್ತು ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ಮೊದಲ ಹಣಾಹಣಿ ನಡೆಯಲಿದೆ. ಈ ಲೀಗ್ ವಿಶ್ವ ಕ್ರಿಕೆಟ್​​ಬ ಅತ್ಯಂತ ಜನಪ್ರಿಯ ಕ್ರಿಕೆಟ್​ ಟೂರ್ನಿಗಳಲ್ಲಿ ಒಂದಾಗಿದೆ. ಐಪಿಎಲ್ ಇತಿಹಾಸದಲ್ಲಿ, ಕೆಲವು ಬ್ಯಾಟರ್​ಗಳು ಹಲವಾರು ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅವರ ಉಳಿದವರಿಗಿಂತ ಬೆಸ್ಟ್​ ಎಂಬುದನ್ನು ಸಾಬೀತು ಮಾಡಿದ್ದಾರೆ. ಅಂಥ ಐದು ಬ್ಯಾಟರ್​ಗಳ ವಿವರ ಇಲ್ಲಿದೆ

ವಿರಾಟ್​ ಕೊಹ್ಲಿ

2013 ರಿಂದ 2021 ರವರೆಗೆ ಬೆಂಗಳೂರು ಫ್ರಾಂಚೈಸಿಯನ್ನು ಮುನ್ನಡೆಸಿದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಲೀ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ 229 ಇನ್ನಿಂಗ್ಸ್​ಗಳಲ್ಲಿ 37.24 ಸರಾಸರಿ ಮತ್ತು 130.02 ಸ್ಟ್ರೈಕ್ ರೇಟ್​ನೊಂದಿಗೆ 7263 ರನ್ ಗಳಿಸಿದ್ದಾರೆ. ಅವರು ಲೀಗ್​ನಲ್ಲಿ ಈವರೆಗೆ 7 ಶತಕ ಮತ್ತು 50 ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಪೈಕಿ 2016ರ ಆವೃತ್ತಿಯಲ್ಲಿ 973 ರನ್ ಬಾರಿಸಿದ್ದರು. ಐಪಿಎಲ್ 2023 ರ 70 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಶತಕ ಗಳಿಸುವ ಮೂಲಕ, ಅವರು ಕ್ರಿಸ್ ಗೇಲ್ ಅವರ ಆರು ಶತಕಗಳ ಸಂಖ್ಯೆಯನ್ನು ಮೀರಿಸಿದ್ದಾರೆ. ಕೊಹ್ಲಿ ಈಗ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು (7) ಗಳಿಸಿದ್ದಾರೆ.

ಶಿಖರ್ ಧವನ್​

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬ್ಯಾಟರ್​ಗಳ ಪಟ್ಟಿಯಲ್ಲಿ ಭಾರತದ ಆರಂಭಿಕ ಬ್ಯಾಟ್ಸ್​ಮನ್​ ಶಿಖರ್ ಧವನ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 35.38 ಸರಾಸರಿ ಮತ್ತು 127.17 ಸ್ಟ್ರೈಕ್ ರೇಟ್​ನೊಂದಿಗೆ 6617 ರನ್ ಗಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಕಳೆದ ಎರಡು-ಮೂರು ಋತುಗಳಲ್ಲಿ ಅವರು ನಿರ್ಣಾಯಕರಾಗಿದ್ದರು. ಇದಕ್ಕೂ ಮುನ್ನ ಡೇವಿಡ್ ವಾರ್ನರ್ ಅವರೊಂದಿಗೆ ಸನ್​ರೈಸರ್ಸ್​​ ಹೈದರಾಬಾದ್ ಪರ ಆರಂಭಿಕರಾಗಿ ಆಡಿದ್ದರು.

ಡೇವಿಡ್​ ವಾರ್ನರ್​

ಸನ್​ರೈಸರ್ಸ್​​​ ಹೈದರಾಬಾದ್​​ನ ಮಾಜಿ ನಾಯಕ ಡೇವಿಡ್ ವಾರ್ನರ್ ಐಪಿಎಲ್​​ನ ವಿದೇಶಿ ಆಟಗಾರರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ತು ಒಟ್ಟಾರೆ ದಾಖಲೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು ಹಿಂದಿನ 2022 ರ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಅವರ 5879 ರನ್​​ಗಳ ದಾಖಲೆಯನ್ನು ಹಿಂದಿಕ್ಕಿದರು. ಅವರು 176 ಇನ್ನಿಂಗ್ಸ್​ಗಳಲ್ಲಿ 41.53 ಸರಾಸರಿಯಲ್ಲಿ 6397 ರನ್ ಗಳಿಸಿದ್ದಾರೆ ಮತ್ತು ಸ್ಟ್ರೈಕ್ ರೇಟ್ 139.91 ಆಗಿದೆ. ಲೀಗ್​ನಲ್ಲಿ ಅವರು ಈವರೆಗೆ 4 ಶತಕಗಳು ಮತ್ತು 61 ಅರ್ಧಶತಕಗಳನ್ನು ಬಾರಿಸಿದ್ದಾರೆ. ಐಪಿಎಲ್​​ನ 2022ರ ಮೊದಲಾರ್ಧದಲ್ಲಿ ವಾರ್ನರ್ ಉತ್ತಮ ಅಭಿಯಾನ ಮಾಡಲಿಲ್ಲ. ಬಳಿಕ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಮೆಗಾ ಹರಾಜಿನಲ್ಲಿ 6.25 ಕೋಟಿ ರೂ.ಗೆ ಖರೀದಿಸಿತು. ವಾರ್ನರ್ 2015, 2017 ಮತ್ತು 2019 ರ ಮೂರು ವಿಭಿನ್ನ ಋತುಗಳಲ್ಲಿ ಐಪಿಎಲ್ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ.

ರೋಹಿತ್​ ಶರ್ಮಾ

ನಾಯಕನಾಗಿ 5 ಐಪಿಎಲ್ ಟ್ರೋಫಿಗಳನ್ನು ಗೆದ್ದಿರುವ ರೋಹಿತ್ ಶರ್ಮಾ ಬ್ಯಾಟರ್​​ ಆಗಿಯೂ ಉತ್ತಮ ಗಳಿಕೆ ಹೊಂದಿದ್ದಾರೆ. ಐಪಿಎಲ್​​ನಲ್ಲಿ ಆಡಿದ 238 ಇನ್ನಿಂಗ್ಸ್​​ಗಳಲ್ಲಿ 29.57 ಸರಾಸರಿ ಮತ್ತು 130.04 ಸ್ಟ್ರೈಕ್ ರೇಟ್​ನಲ್ಲಿ 6211 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 42 ಅರ್ಧಶತಕಗಳು ಸೇರಿವೆ. ಅವರ ಗರಿಷ್ಠ ಸ್ಕೋರ್ 109* ಆಗಿದೆ. ಅವರು 2019 ರಿಂದ ಮುಂಬೈ ಇಂಡಿಯನ್ಸ್ ಪರ ಓಪನಿಂಗ್ ಮಾಡುತ್ತಿದ್ದಾರೆ .

ಇದನ್ನೂ ಓದಿ : IPL 2024 : ಅಂತಾರಾಷ್ಟ್ರೀಯ ಕ್ರಿಕೆಟ್​ ನಿವೃತ್ತಿ ಬಳಿಕ ಐಪಿಎಲ್​ನಲ್ಲಿ ಮಿಂಚಿದ ಆಟಗಾರರು ಇವರು

ಸುರೇಶ್​ ರೈನಾ

ಮಿಸ್ಟರ್ ಐಪಿಎಲ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಸುರೇಶ್ ರೈನಾ ಪಂದ್ಯಾವಳಿಯ ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಹೆಸರಿಗೆ ನ್ಯಾಯ ಒದಗಿಸಿದ್ದಾರೆ. ಅವರು 200 ಇನ್ನಿಂಗ್ಸ್​​ಗಳಲ್ಲಿ 32.51 ಸರಾಸರಿ ಮತ್ತು 136.73 ಸ್ಟ್ರೈಕ್ ರೇಟ್​ನೊಂದಿಗೆ 5528 ರನ್​ಗಳೊಂದಿಗೆ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. ಐಪಿಎಲ್​ನಲ್ಲಿ ಅವರ ಉತ್ತಮ ದಾಖಲೆಯ ಹೊರತಾಗಿಯೂ, ಅವರು ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿದರು.

Exit mobile version