Site icon Vistara News

IPL 2024: ಕನಿಷ್ಠ 15 ಕೋಟಿ ರೂ. ಮೊತ್ತಕ್ಕೆ ಸೇಲ್ ಆಗಬಲ್ಲ 5 ಪ್ರಮುಖ ಆಟಗಾರರು ಇವರು…

IPL 2024 top

ಬೆಂಗಳೂರು:  17ನೇ ಆವೃತ್ತಿಯ ಐಪಿಎಲ್(IPL 2024 Auction)​ ಟೂರ್ನಿಯ ಆಗಾರರ ಮಿನಿ ಹರಾಜು ಪ್ರಕ್ರಿಯೆಗೆ ಐಪಿಎಲ್ ಮಂಡಳಿಯು ಆಟಗಾರರ ಅಂತಿಮ ಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ. ಒಟ್ಟು 333 ಮಂದಿ ಆಟಗಾರರು ಹರಾಜಿನ ಭಾಗವಾಗಲಿದ್ದಾರೆ. ಇದರಲ್ಲಿ 214 ಭಾರತೀಯರು ಮತ್ತು 119 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಅಸೋಸಿಯೇಟ್ ದೇಶಗಳ ಇಬ್ಬರು ಆಟಗಾರರು ಕಣದಕ್ಕಿದ್ದಾರೆ. ಇದರಲ್ಲಿ ಕನಿಷ್ಠ​ 5 ಆಟಗಾರರು 10 ಕೋಟಿಗಿಂತ ಅಧಿಕ ಮೊತ್ತಕ್ಕೆ ಸೇಲ್​ ಆಗುವ ನಿರೀಕ್ಷೆ ಇದೆ. ಈ ಆಟಗಾರರ ಪಟ್ಟಿ ಇಂತಿದೆ.

ಟ್ರಾವಿಸ್​ ಹೆಡ್​

ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಭಾರತದ ವಿಶ್ವಕಪ್​ ಟ್ರೋಫಿ ಕನಸನ್ನು ಭಗ್ನ ಗೊಳಿಸಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರಿಗೆ ಈ ಬಾರಿಯ ಹರಾಜಿನಲ್ಲಿ ಭಾರಿ ಮೊತ್ತ ಸಿಗುವ ನಿರೀಕ್ಷೆ ಇದೆ. ಈಗಾಗಕೇ ಅವರನ್ನು ಆಕ್ಷನ್​ನಲ್ಲಿ 20 ಕೋಟಿ ರೂ. ನೀಡಿಯಾದರೂ ಖರೀದಿಸಲು ಕೆಲವು ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಾಗಿದೆ. ಒಟ್ಟಾರೆ ಹೆಡ್​ ಅವರು ಈ ಬಾರಿ ಅತ್ಯಧಿಕ ಮೊತ್ತಕ್ಕೆ ಸೇಲ್​ ಆಗುವುದರಲ್ಲಿ ಯಾವುದೇ ಅನುಮಾನ ಬೇಡ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆಡಿದ ಅನುಭವ ಹೊಂದಿದ್ದಾರೆ.

Gerald Coetzee


ರಚಿನ್​ಗೂ​ ಜಾಕ್ ​ಪಾಟ್ ಸಾಧ್ಯತೆ

ಈ ಬಾರಿಯ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಚೊಚ್ಚಲ ಬಾರಿ ಕಣಕ್ಕಿಳಿದರೂ, ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಟೂರ್ನಿಯಲ್ಲಿ ಅತ್ಯಧಿಕ ರನ್​ ಸಾಧಕರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದ ನ್ಯೂಜಿಲ್ಯಾಂಡ್​ನ ಯುವ ಆಟಗಾರ ರಚಿನ್​ ರವೀಂದ್ರ ಅವರಿಗೂ ಭಾರಿ ಮೊತ್ತ ಸಿಗುವ ಸಾಧ್ಯತೆ ಇದೆ. ವಿಶ್ವಕಪ್​ನಲ್ಲಿ ಅವರು 578 ರನ್​ ಬಾರಿಸಿದ್ದರು. ಹಾಲಿ ಚಾಂಪಿಯನ್​ ಸಿಎಸ್‌ಕೆ ತಂಡದಿಂದ ಬೆನ್ ಸ್ಟೋಕ್ಸ್​ ಅವರನ್ನು ಬಿಡುಗಡೆ ಮಾಡಿದ ಹಿನ್ನಲೆ ಅವರ ಸ್ಥಾನಕ್ಕೆ ರಚಿನ್​ ಅವರನ್ನು ತಂಡಕ್ಕೆ ಸೆರಿಸಿಕೊಳ್ಳಲು ದುಬಾರಿ ಮೊತ್ತದ ಬಿಡ್​ ಮಾಡುವ ಸಾಧ್ಯತೆ ಇದೆ.

Gerald Coetzee


ಮಿಚೆಲ್ ಸ್ಟಾರ್ಕ್

ಕೆಲ ಕಾಲ ಐಪಿಎಲ್​ ಆಡಿ ಆ ಬಳಿಕ ಗಾಯದ ಸಮಸ್ಯೆ ಮತ್ತು ಕೊರೊನಾ ಜೈವಿಕ ಸುರಕ್ಷತಾ ವಲಯದಲ್ಲಿ ಆಡಲು ನಿರಾಕರಿಸಿ ಐಪಿಎಲ್​ನಿಂದ ದೂರ ಉಳಿದಿದ್ದ ಆಸ್ಟ್ರೇಲಿಯಾದ ಸ್ಟಾರ್​ ವೇಗಿ ಮಿಚೆಲ್​ ಸ್ಟಾಕ್​ ಅವರು ಈ ಬಾರಿಯ ಆಟಗಾರರ ಹಾರಜಿಗೆ ಹೆಸರು ನೊಂದಾಯಿಸಿದ್ದಾರೆ. ಎಂಟು ವರ್ಷಗಳ ಬಳಿಕ ಮತ್ತೆ ಐಪಿಎಲ್‌ ಟೂರ್ನಿಗೆ ಮರಳುವ ಕಾತರದಲ್ಲಿದ್ದಾರೆ. 2015ರಲ್ಲಿ ಕೊನೆಯ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮಿಚೆಲ್‌ ಸ್ಟಾರ್ಕ್ ಆಡಿದ್ದರು. ಇವರಿಗೂ ಈ ಬಾರಿಯ ಹರಾಜಿನಲ್ಲಿ ದೊಡ್ಡ ಮೊತ್ತ ಸಿಗುವ ನಿರೀಕ್ಷೆ ಇದೆ. ಮುಂಬೈ ಇಂಡಿಯನ್ಸ್​ ತಂಡ ಇವರ ಮೇಲೆ ಕಣ್ಣಿಟ್ಟಿದೆ.

ಇದನ್ನೂ ಓದಿ IPL 2024 : ಐಪಿಎಲ್ ಹರಾಜಿನ ಅಂತಿಮ ಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಯ; ಉಳಿದವರು ಎಷ್ಟು?

Gerald Coetzee


ಡ್ಯಾರಿಲ್ ಮಿಚೆಲ್

ನ್ಯೂಜಿಲ್ಯಾಂಡ್​ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಮತ್ತು ಆಲ್​ರೌಂಡರ್​ ಆಗಿರುವ ಡ್ಯಾರಿಲ್​ ಮಿಚೆಲ್​ ಅವರಿಗೂ ದೊಡ್ಡ ಮೊತ್ತ ಸಿಗುವ ನಿರೀಕ್ಷೆ ಇದೆ. ಯಾವುದೇ ಹಂತದಲ್ಲಿಯೂ ತಂಡಕ್ಕೆ ಆಸರೆಯಾಗಿ ನಿಂತು ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಇವರಿಗಿದೆ. ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿಯೂ ಮಿಚೆಲ್​ ಗಮನಾರ್ಹ ಪ್ರದರ್ಶನ ತೋರಿದ್ದರು. 552 ರನ್​ ಬಾರಿಸಿ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ಗಳಿಸಿದ 5ನೇ ಆಟಗಾರನಾಗಿ ಹೊರಮೊಮ್ಮಿದ್ದರು.

Gerald Coetzee

ಜೆರಾಲ್ಡ್ ಕೋಟ್ಜಿ

ಈಗಾಗಲೇ 2 ಕೋಟಿ ರೂ. ಮೂಲಬೆಲೆ ಹೊಂದಿರುವ ದಕ್ಷಿಣ ಆಫ್ರಿಕಾ ತಂಡದ ಯುವ ವೇಗಿ ಮತ್ತು ಬ್ಯಾಟಿಂಗ್​ ಆಲ್​ರೌಂಡರ್​ ಆಗಿರುವ ಜೆರಾಲ್ಡ್ ಕೋಟ್ಜಿ ಅವರಿಗೆ ಈ ಬಾರಿ ಐಪಿಎಲ್​ನಲ್ಲಿ ಅದೃಷ್ಟ ಖಲಾಯಿಸುವ ಸಾಧ್ಯತೆ ಇದೆ. ವಿಶ್ವಕಪ್​ನಲ್ಲಿ ಜೆರಾಲ್ಡ್ ಕೋಟ್ಜಿ 20 ವಿಕೆಟ್​ ಕಿತ್ತು ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.

Gerald Coetzee
Exit mobile version