Site icon Vistara News

IPL 2024 : ಮುಂದಿನ ವರ್ಷವೂ ಧೋನಿ ಐಪಿಎಲ್​ ಆಡ್ತಾರೆ; ಸಿಎಸ್​ಕೆ ಸಿಇಒ ಸ್ಪಷ್ಟನೆ

IPL 2024

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಬ್ಯಾಟರ್ ಎಂಎಸ್ ಧೋನಿ ಹಲವು ವರ್ಷಗಳಿಂದ ಫ್ರಾಂಚೈಸಿಗೆ ಬಲಿಷ್ಠ ಆಸ್ತಿಯಾಗಿದ್ದಾರೆ. ಐದು ಐಪಿಎಲ್ ಪ್ರಶಸ್ತಿಗಳಿಗೆ ತಂಡವನ್ನು ಮುನ್ನಡೆಸಿದ ಧೋನಿ ಕ್ರಿಕೆಟ್​ ಕ್ಷೇತ್ರದ ದಂತಕತೆ ಎನಿಸಿಕೊಂಡಿದ್ದಾರೆ. ಅವರು ಸಿಎಸ್‌ಕೆ ಅಭಿಮಾನಿಗಳಿಗೆ ದೇವರಂತಹ ವ್ಯಕ್ತಿ. 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಧೋನಿ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡುವುದನ್ನು ಮುಂದುವರಿಸಿದ್ದಾರೆ. 2024ರ ಐಪಿಎಲ್​ನಲ್ಲಿಯೂ (IPL 2024) ಅವರು ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ ಗಳಿಸಿದ್ದಾರೆ.

ತಂಡವು 2023ರಲ್ಲಿ ಐಪಿಎಲ್ ಗೆದ್ದ ನಂತರ, ಎಂಎಸ್ ಧೋನಿ ಆ ಋತುವಿನಲ್ಲಿ ಅಭಿಮಾನಿಗಳು ತೋರಿದ ಪ್ರೀತಿಗೆ ಪ್ರತಿಯಾಗಿ ಮತ್ತೊಂದು ಋತುವಿನಲ್ಲಿ ಆಡುವ ಭರವಸೆ ನೀಡಿದ್ದರು. ಹೀಗಾಗಿ ಐಪಿಎಲ್​ 2024 ರ ಆವೃತ್ತಿಯಲ್ಲಿ ಆಡಿದ್ದರು. ಆದಾಗ್ಯೂ ಧೋನಿಯ ಕ್ರಿಕೆಟ್​ ಅಧ್ಯಾಯದ ಕೊನೆ ಎಲ್ಲಿ ಎಂದು ಯಾರಿಗೂ ಗೊತ್ತಿಲ್ಲ. ಈ ಬಾರಿಯೂ ಅವರು ವಿದಾಯ ಘೋಷಿಸಿಲ್ಲ.

ಐದು ಬಾರಿಯ ಚಾಂಪಿಯನ್‌ ತಂಡ 2024ರ ಆವೃತ್ತಿಯ ಗುಂಪು ಹಂತದಿಂದ ಹೊರಕ್ಕೆ ಹೋಗಿತ್ತು. ಹೀಗಾಗಿ ಧೋನಿ ಮುಂದಿನ ಋತುವಿಗೆ ಮರಳುತ್ತಾರೆಯೇ ಎಂಬುದರ ಕುರಿತು ಯಾವುದೇ ಸ್ಪಷ್ಟನೆ ಇಲ್ಲ. ಆದಾಗ್ಯೂ, ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಅವರು ಮುಂದೆ ಬಂದು ಧೋನಿ ಮರಳುವ ಭರವಸೆಯಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

“ಧೋನಿಯ ಬಗ್ಗೆ ನನಗೆ ಗೊತ್ತಿಲ್ಲ. ಇದು ಅವರು ಮಾತ್ರ ಉತ್ತರಿಸಬಹುದಾದ ಪ್ರಶ್ನೆ, ನಮ್ಮ ಬದ್ಧತೆ ಏನೆಂದರೆ ಅವರು ತೆಗೆದುಕೊಂಡ ನಿರ್ಧಾರಗಳನ್ನು ನಾವು ಯಾವಾಗಲೂ ಗೌರವಿಸುವುದು. ಅದನ್ನು ನಾವು ಅವರಿಗೆ ಬಿಟ್ಟಿದ್ದೇವೆ. ನಿಮಗೆಲ್ಲ ತಿಳಿದಿರುವಂತೆ, ಅವರು ಯಾವಾಗಲೂ ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ನಿರ್ಧರಿಸಿದಂತೆ ನಾವು ನಮ್ಮ ಕೆಲಸ ಮಾಡುತ್ತೇವೆ. ಆದಾಗ್ಯೂ ಮುಂದಿನ ವರ್ಷ ಅವರು ಸಿಎಸ್‌ಕೆಗೆ ಲಭ್ಯವಾಗುತ್ತಾರೆ ಎಂದೇ ನಾವು ಭಾವಿಸುತ್ತೇವೆ ” ಎಂದು ಕಾಶಿ ವಿಶ್ವನಾಥನ್ ಸಿಎಸ್​ಕೆ ಯ ಯೂಟ್ಯೂಬ್ ಚಾನೆಲ್‌ ಮೂಲಕ ಹೇಳಿದ್ದಾರೆ.

ಸ್ಟೀಫನ್ ಫ್ಲೆಮಿಂಗ್ ಬಗ್ಗೆ ಹೆಚ್ಚು ಚರ್ಚಿಸಿಲ್ಲ.

ಭಾರತೀಯ ಪುರುಷರ ಹಿರಿಯ ತಂಡದ ಮುಖ್ಯ ತರಬೇತುದಾರರಾಗಿ ಸಿಎಸ್​ಕೆ ಕೋಚ್​ ಸ್ಟೀಫನ್ ಫ್ಲೆಮಿಂಗ್ ಹೋಗುತ್ತಾರೆ ಎಂಬುದರ ಬಗ್ಗೆಯೂ ಕಾಶಿ ವಿಶ್ವನಾಥನ್ ಅವರು ಮಾತನಾಡಿದರು. ಸಿಎಸ್ಕೆ ತಂಡದ ಮುಖ್ಯ ಕೋಚ್ ಹುದ್ದೆಗೆ ಸ್ಟೀಫನ್ ಫ್ಲೆಮಿಂಗ್ ಬದ್ಧರಾಗಿದ್ದಾರೆ. ಭಾರತದ ಮುಖ್ಯ ತರಬೇತುದಾರನ ಹುದ್ದೆಯನ್ನು ವಹಿಸಿಕೊಳ್ಳುವುದು ಫ್ಲೆಮಿಂಗ್​ ಅವರಿಗೆ ಇಷ್ಟವಾಗುವುದಿಲ್ಲ ಎಂದು ವಿಶ್ವನಾಥನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Virat Kohli : ಕೊಹ್ಲಿಯ ಗೌರವ ಸಲ್ಲಿಸಲೇಬೇಕು ಎಂದು ಹೇಳಿದ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್​​
“ನಾನು ತಮಾಷೆಯಾಗಿ ಸ್ಟೀಫನ್ ಅವರನ್ನು ಕೇಳಿದ್ದೆ. ‘ನೀವು ಭಾರತೀಯ ಕೋಚಿಂಗ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೀರಾ? ಸ್ಟೀಫನ್ ಸುಮ್ಮನೆ ನಕ್ಕರು ಮತ್ತು ಹೇಳಿದ್ದರು. ‘ನೀವು ನನ್ನನ್ನು ಬಯಸುತ್ತೀರಾ? ಎಂದು. ಅವರಿಗೆ ಆ ಹುದ್ದೆ ಆಗುವುದಿಲ್ಲ ಎಂದು ನನಗೆ ತಿಳಿದಿದೆ ಏಕೆಂದರೆ ಅವರು ವರ್ಷದಲ್ಲಿ ಒಂಬತ್ತು-ಹತ್ತು ತಿಂಗಳು [ತರಬೇತಿಯಲ್ಲಿ] ತೊಡಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅದು ನನ್ನ ಭಾವನೆ. ನಾನು ಅವರ ಬಗ್ಗೆ ಹೆಚ್ಚು ಚರ್ಚಿಸಿಲ್ಲ “ಎಂದು ವಿಶ್ವನಾಥನ್ ಹೇಳಿದರು.

Exit mobile version