Site icon Vistara News

IPL 2024 : ಕೊಹ್ಲಿಯನ್ನು ಹೊಗಳಿ ಆರ್​​ಸಿಬಿಗೆ ವಿದಾಯ ಹೇಳಿದ ವಿಜಯ್​ ಮಲ್ಯ

Virat kohli

ಅಹಮದಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Banglore) ಫ್ರಾಂಚೈಸಿಯ ಮಾಜಿ ಮಾಲೀಕ ವಿಜಯ್ ಮಲ್ಯ ಐಪಿಎಲ್​ 2024ರ (IPL 2024) ಎಲಿಮಿನೇಟರ್ ಪಂದ್ಯವಾಡಲು ಸಜ್ಜಾಗಿರುವ ಆರ್​ಸಿಬಿಗೆ ಶುಭಾಶಯ ತಿಳಿಸಿದ್ದಾರೆ. ಈ ವೇಳೆ ಅವರು ತಂಡದ ಸ್ಟಾರ್​ ಬ್ಯಾಟರ್ ವಿರಾಟ್​ ಕೊಹ್ಲಿಯನ್ನು ಹೊಗಳುವುದಕ್ಕೆ ಮರೆಯಲಿಲ್ಲ. ಮೇ 22 ರಂದು ಅಹಮದಾಬಾದ್​ನಲ್ಲಿ ನಡೆಯಲಿರುವ ಐಪಿಎಲ್ 2024 ರ ಎಲಿಮಿನೇಟರ್​ನಲ್ಲಿ ಆರ್​ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಅದಕ್ಕಿಂತ ಮೊದಲು ಮಲ್ಯ ಕಡೆಯಿಂದ ಶುಭಾಶಯಗಳು ಬಂದಿವೆ.

ಆರ್​ಸಿಬಿ ಈ ವರ್ಷ ಸಾಕಷ್ಟು ವಿಭಿನ್ನ ಹಾದಿಯನ್ನು ಹೊಂದಿತ್ತು. ಏಕೆಂದರೆ ಅವರು ಮೊದಲ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ ಹೀನಾಯ ಸ್ಥಿತಿಗೆ ತಲುಪಿತ್ತು. ನಂತರ ಪ್ಲೇಆಫ್​ಗೆ ಅರ್ಹತೆ ಪಡೆಯಲು ತಮ್ಮ ಕೊನೆಯ 6 ಪಂದ್ಯಗಳನ್ನು ಗೆದ್ದಿದ್ದಾರೆ. ವಿರಾಟ್ ಕೊಹ್ಲಿ ಆರ್​ಸಿಬಿ ಪರ 14 ಪಂದ್ಯಗಳಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಒಂದು ಶತಕ ಮತ್ತು 155 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ

ಆರ್​ಸಿಬಿ ಈ ವರ್ಷ ಸಾಕಷ್ಟು ವಿಭಿನ್ನ ಹಾದಿಯನ್ನು ಹೊಂದಿತ್ತು. ಏಕೆಂದರೆ ಅವರು ಮೊದಲ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ ಹೀನಾಯ ಸ್ಥಿತಿಗೆ ತಲುಪಿತ್ತು. ನಂತರ ಪ್ಲೇಆಫ್​ಗೆ ಅರ್ಹತೆ ಪಡೆಯಲು ತಮ್ಮ ಕೊನೆಯ 6 ಪಂದ್ಯಗಳನ್ನು ಗೆದ್ದಿದ್ದಾರೆ. ವಿರಾಟ್ ಕೊಹ್ಲಿ ಆರ್​ಸಿಬಿ ಪರ 14 ಪಂದ್ಯಗಳಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಒಂದು ಶತಕ ಮತ್ತು 155 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ

2008ರ ಅಂಡರ್-19 ವಿಶ್ವಕಪ್​ನಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ ನಂತರ ಆರ್​​ಸಿಬಿ 2008 ರ ಐಪಿಎಲ್​ಗಾಗಿ ವಿರಾಟ್ ಕೊಹ್ಲಿಯನ್ನು 30,000 ಡಾಲರ್ಗೆ ಖರೀದಿಸಿತ್ತು. ಐಪಿಎಲ್ 2008 ರಲ್ಲಿ ಫ್ರಾಂಚೈಸಿಯು ಹರಾಜಿಗೆ ಮುಂಚಿತವಾಗಿ ಅಂಡರ್ 19 ಆಟಗಾರರನ್ನು ಖರೀದಿಸುವ ಆಯ್ಕೆಯನ್ನು ಹೊಂದಿತ್ತು. ಡೆಲ್ಲಿ ಡೇರ್ ಡೆವಿಲ್ಸ್ (ಈಗ ಕ್ಯಾಪಿಟಲ್ಸ್) ಕೊಹ್ಲಿಯನ್ನು ತೆಕ್ಕೆಗೆ ತೆಗೆದುಕೊಳ್ಳುವ ಅವಕಾಶವನ್ನು ಹೊಂದಿತ್ತು. ಡೆಲ್ಲಿ ತನ್ನ ಬೌಲಿಂಗ್ ಘಟಕವನ್ನು ವೃದ್ಧಿಸಲು ಎಡಗೈ ವೇಗಿ ಪ್ರದೀಪ್ ಸಾಂಗ್ವಾನ್ ಅವರನ್ನು ಆಯ್ಕೆ ಮಾಡಿತು. ಆರ್​ಸಿಬಿ ಕೊಹ್ಲಿಯನ್ನು ಖರೀದಿಸಿತು.

ಇದನ್ನೂ ಓದಿ: IPL 2024 : ವಿನೂತನ ದಾಖಲೆಯ ಹೊಸ್ತಿಲಲ್ಲಿ ವಿರಾಟ್​ ಕೊಹ್ಲಿ; ಇಲ್ಲಿದೆ ಅದರ ವಿವರ

2009, 2011 ಮತ್ತು 2016ರಲ್ಲಿ ಆರ್​​ಸಿಬಿ ತಂಡ ತಂಡ ಫೈನಲ್ ತಲುಪಿತ್ತು. ಆದಾಗ್ಯೂ, ಏರಿಳಿತಗಳ ಹೊರತಾಗಿಯೂ, ವಿರಾಟ್ ಕೊಹ್ಲಿ ಆರ್​ಸಿಬಿ ಫ್ರಾಂಚೈಸಿಗೆ ನಿಷ್ಠರಾಗಿ ಉಳಿದಿದ್ದಾರೆ. 2008 ರಲ್ಲಿ, ಆರ್ಸಿಬಿ ವಿಜಯ್ ಮಲ್ಯ ಅವರ ಸಹ ಮಾಲೀಕತ್ವ ಹೊಂದಿತ್ತು. ಗಮನಾರ್ಹ ತಿರುವಿನ ನಂತರ ತಂಡವು ಪ್ಲೇಆಫ್ ತಲುಪುವ ಮೊದಲು, ಮಲ್ಯ ತಂಡಕ್ಕೆ ಮತ್ತು ವಿರಾಟ್​ಗೆ ಶುಭಾಶಯಗಳನ್ನು ಕಳುಹಿಸಿದರು.

ನಾನು ಆರ್​ಸಿಬಿ ಫ್ರಾಂಚೈಸಿಗೆ ಬಿಡ್ ಮಾಡಿದಾಗ ನನ್ನ ಆಂತರಿಕ ಮನಸು ಉತ್ತಮ ಆಯ್ಕೆಗಳನ್ನು ಮಾಡಿದ್ದೇನೆ ಎಂದು ಹೇಳಿತ್ತು. ಐಪಿಎಲ್ ಟ್ರೋಫಿಗೆ ಗೆಲ್ಲಲು ಆರ್​ಸಿಬಿಗೆ ಉತ್ತಮ ಅವಕಾಶವಿದೆ ಎಂದು ನನ್ನ ಆಂತರಿಕ ಮನಸ್ಸು ಹೇಳುತ್ತದೆ. ಮುಂದೆಯೂ ಶುಭವಾಗಲಿ ಎಂದು ಅವರು ಹೇಳಿದ್ದಾರೆ.

Exit mobile version