Site icon Vistara News

IPL 2024 : ರಾಜಸ್ಥಾನ್​ ಸೋಲಿನ ಬಳಿಕ ಮೊಹಮ್ಮದ್ ಕೈಫ್​ ಟ್ರೋಲ್ ಮಾಡಿದ ವಾಸಿಮ್ ಜಾಫರ್​!

IPL 2024

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ(IPL 2024) ಗುರುವಾರ (ಮೇ 3) ಸನ್​ರೈಸರ್ಸ್​ ಹೈದರಾಬಾದ್ (SRH) ವಿರುದ್ಧ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಸೋತ ನಂತರ ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ (Wasim Jafar) ಅವರು ಐಸಿಸಿ ವಿಶ್ವಕಪ್ 2023 ರ ಫೈನಲ್ ಕುರಿತ ಹೇಳಿಕೆಗಳನ್ನು ಮತ್ತೊಬ್ಬ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರನ್ನು ಟ್ರೋಲ್ ಮಾಡಿದ್ದಾರೆ. ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆದಿತ್ತು.

ಐಸಿಸಿ ವಿಶ್ವಕಪ್ 2023 ರ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ನಂತರ ಮೊಹಮ್ಮದ್ ಕೈಫ್ ಅವರ ಹೇಳಿಕೆಗಳು ಸಾಕಷ್ಟು ಟ್ರೋಲ್​​ಗೆ ಒಳಗಾಗಿದ್ದವು. ಪಂದ್ಯಾವಳಿಯಲ್ಲಿ ಸತತ 10 ಪಂದ್ಯಗಳನ್ನು ಗೆದ್ದರೂ ರೋಹಿತ್ ಶರ್ಮಾ ನೇತೃತ್ವದ ತಂಡವು ಫೈನಲ್ ಪಂದ್ಯದಲ್ಲಿ ಸೋತಿತ್ತು. ಆ ಸೋಲನ್ನು ಒಪ್ಪಿಕೊಳ್ಳವುದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಸಿದ್ಧರಿರಲಿಲ್ಲ. ಅತ್ಯುತ್ತಮ ತಂಡ ಭಾರತದ ಸೋಲನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಮೊಹಮ್ಮದ್ ಕೈಫ್ ಹೇಳಿಕೊಂಡಿದ್ದರು.

ಕಪ್​ ಗೆದ್ದಿರುವ ಆಸ್ಟ್ರೇಲಿಯಾಕ್ಕೆ ಅಭಿನಂದನೆಗಳು. ಆದರೆ ಅತ್ಯುತ್ತಮ ತಂಡವು ವಿಶ್ವಕಪ್ ಗೆದ್ದಿದೆ ಎಂದು ಒಪ್ಪಿಕೊಳ್ಳಲು ನಾನು ಸಿದ್ಧನಿಲ್ಲ. ಈ ಭಾರತೀಯ ತಂಡವು ಅತ್ಯುತ್ತಮ ತಂಡವಾಗಿತ್ತು. ಅವರು ಇಂದು ಸೋತರು. ಇದು ಆ ಕೆಟ್ಟ ದಿನಗಳಲ್ಲಿ ಒಂದಾಗಿದೆ ಎಂದು ವಿಶ್ವ ಕಪ್​ ಬಳಿಕ ಕೈಫ್​ ಹೇಳಿಕೆ ನೀಡಿದ್ದರು.

ಇದೀಗ ಕೆಲವು ತಿಂಗಳುಗಳ ನಂತರ, ಮೊಹಮ್ಮದ್ ಕೈಫ್ ಅವರನ್ನು ಟ್ರೋಲ್ ಮಾಡಲು ವಾಸಿಮ್ ಜಾಫರ್ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡರು. ಸನ್ರೈಸರ್ಸ್​​ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 1 ರನ್ ಸೋತ ನಂತರ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಚಿತ್ರ ಪೋಸ್ಟ್ ಮಾಡಿದ್ದಾರೆ. “ಕಾಗದದ ಮೇಲಿನ ಬಲಿಷ್ಠ ತಂಡವು ಪಂದ್ಯ ಕಳೆದುಕೊಂಡಾಗ ಮೊಹಮ್ಮದ್ ಕೈಫ್” ಎಂಬ ಉಲ್ಲೇಖ ನೀಡಿ ಚಿತ್ರ ಪೋಸ್ಟ್ ಮಾಡಿದ್ದಾರೆ.

ಐಪಿಎಲ್ 2024 ರಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ನಿರಾಶಾದಾಯಕ ಸೋಲು ಅನುಭವಿಸಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕೊನೆಯ ಎಸೆತದಲ್ಲಿ ಫಲಿತಾಂಶವನ್ನು ನಿರ್ಧಾರಗೊಂಡಿತು. ಇದು ಪಂದ್ಯಾವಳಿಯ ಅತ್ಯಂತ ರೋಮಾಂಚಕಾರಿ ಆಟಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: IPL 2024 : ನನ್ನ ನಿದ್ದೆಗೆಡಿಸಿದ್ದ ರೋಹಿತ್​ ಶರ್ಮಾ; ಗಂಭೀರ್​ ಹೀಗೆ ಹೇಳಲು ಕಾರಣವೇನು?

202 ರನ್ಗಳ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಆರಂಭಿಕ ವಿಕೆಟ್​​ಗಳನ್ನು ಬೇ ಕಳೆದುಕೊಂಡಿತು. ಆದರೆ ಯಶಸ್ವಿ ಜೈಸ್ವಾಲ್ ಮತ್ತು ರಿಯಾನ್ ಪರಾಗ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಕೊನೆಯಲ್ಲಿ, ರೋವ್ಮನ್ ಪೊವೆಲ್ ಆಟವನ್ನು ಕೌತುಕಕ್ಕೆ ಕೊಂಡೊಯ್ದರು. ತ್ತು ಕೊನೆಯ ಎಸೆತದಲ್ಲಿ 2 ರನ್​ಗಳ ಅಗತ್ಯವಿದ್ದಾಗ ಅವರು ಔಟಾಗಿದ್ದರಿಂದ ಸನ್​ರೈಸರ್ಸ್​ ಹೈದರಾಬಾದ್ ಪಂದ್ಯವನ್ನು 1 ರನ್​ಗಳಿಂದ ಗೆದ್ದುಕೊಂಡಿತು.

ರೋಹಿತ್ ಶರ್ಮಾಗೆ ದೊಡ್ಡ ಅವಕಾಶ

ಮೊಹಮ್ಮದ್ ಕೈಫ್ ಇತ್ತೀಚೆಗೆ 2024 ರ ಟಿ 20 ವಿಶ್ವಕಪ್​​ ನಲ್ಲಿ ಭಾರತದ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ಪಂದ್ಯಾವಳಿಯು ನಾಯಕನಾಗಿ ರೋಹಿತ್ ಶರ್ಮಾಗೆ ಉತ್ತಮ ಅವಕಾಶವಾಗಿದೆ ಎಂದು ಅವರು ನುಡಿದಿದ್ದಾರೆ. ಐಸಿಸಿ ವಿಶ್ವಕಪ್ 2023 ರಲ್ಲಿ ಭಾರತವು ಅನುಭವಿಸಿದಂತಹ ಬೇಸರವನ್ನು ಎದುರಿಸುವುದಿಲ್ಲ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

“ರೋಹಿತ್ ಶರ್ಮಾ ಅವರು ಮುಂದಿನ 2 ರಿಂದ 3 ವರ್ಷಗಳವರೆಗೆ ಹೆಚ್ಚು ಕಾಲ ಆಡುವುದಿಲ್ಲ ಎಂದು ತಿಳಿದಿದೆ. ವಿರಾಟ್ ಕೊಹ್ಲಿ ಕೂಡ ಅದೇ ಹಾದಿಯಲ್ಲಿದ್ದಾರೆ. ನಾಯಕನಾಗಿ ರೋಹಿತ್​ಗೆ ಇದು ದೊಡ್ಡ ಅವಕಾಶ. ಪಂದ್ಯವು ಭಾರತದ ಕೈಯಲ್ಲಿದ್ದ ನಂತರ ಅವರು ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಸೋತಿದ್ದಾರೆ. 10 ಪಂದ್ಯಗಳನ್ನು ಗೆದ್ದರೂ 1 ಪಂದ್ಯವನ್ನು ಸೋತಿತು.. ಟಿ 20 ವಿಶ್ವಕಪ್​​ನಲ್ಲಿ ಪರಿಸ್ಥಿತಿ ಒಂದೇ ರೀತಿ ಇರುವುದಿಲ್ಲ ಎಂದು ನಾನು ಭಾವಿಸುತ್ತೇನೆ, “ಎಂದು ಅವರು ಹೇಳಿದರು.

Exit mobile version