Site icon Vistara News

IPL 2024 : ಆರ್​ಸಿಬಿ- ಚೆನ್ನೈ ಪಂದ್ಯದ ವೇಳೆ ಮಳೆ ಬಂದು ರದ್ದಾದರೆ ಮುಂದೇನಾಗುವುದು?

IPL 2024

ಬೆಂಗಳೂರು: ಐಪಿಎಲ್ 2024 ರ (IPL 2024) ಮುಕ್ತಾಯಕ್ಕೆ ಹತ್ತಿರವಾಗುತ್ತಿದೆ. ಇದರ ನಡುವೆ ರೋಚಕ ಪಂದ್ಯವೊಂದು ಎದುರಾಗಿದೆ. ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಮ್ಮ ಕೊನೆಯ ಲೀಗ್ ಹಂತದ ಮುಖಾಮುಖಿಯಲ್ಲಿ ಬಾಕಿ ಇರುವ ಒಂದು ಪ್ಲೇಆಫ್ ಸ್ಥಾನಕ್ಕಾಗಿ ಹೋರಾಡಬೇಕಾಗಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳ ಉತ್ಸಾಹವು ಉತ್ತುಂಗದಲ್ಲಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ (KKR), ರಾಜಸ್ಥಾನ್ ರಾಯಲ್ಸ್ (RR) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ಈಗಾಗಲೇ ನಾಕೌಟ್ ಹಂತಗಳಿಗೆ ತಮ್ಮ ಸ್ಥಾನವನ್ನು ಕಾಯ್ದಿರಿಸಿವೆ. ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್​ಗಳಿಂದ ಸೋಲಿಸಿದ ನಂತರ ಆರ್​ಸಿಬಿ ಐದು ಪಂದ್ಯಗಳ ಗೆಲುವಿನ ಹಾದಿಯಲ್ಲಿದೆ.

ಪ್ರಶಸ್ತಿ ಗೆಲ್ಲುವ ಭರವಸೆಯನ್ನು ಹಾದಿಯೊಂದಿಗೆ ಸಾಗಲು ಆರ್​ಸಿಬಿ ಸಿಎಸ್​ಕೆ ವಿರುದ್ಧದ ಪಂದ್ಯವನ್ನು ಗೆಲ್ಲಬೇಕಾಗಿದೆ. ಇಲ್ಲಿ ಕೇವಲ ಗೆಲುವು ಮಾತ್ರ ಸಿಕ್ಕರೆ ಸಾಲುವುದಿಲ್ಲ. ಹಾಲಿ ಚಾಂಪಿಯನ್ ಗಳಿಗಿಂತ ಅವರ ನೆಟ್ ರನ್ ರೇಟ್ ಅನ್ನು ಉತ್ತಮಗೊಳಿಸಬೇಕು. ಅದಕ್ಕಾಗಿ ದೊಡ್ಡ ಅಂತರದಿಂದ ಗೆಲ್ಲಬೇಕಾಗಿದೆ.

ಮತ್ತೊಂದೆಡೆ, ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ 13 ಪಂದ್ಯಗಳಲ್ಲಿ 14 ಅಂಕಗಳನ್ನು ಹೊಂದಿದ್ದು, ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬೆಂಗಳೂರು ಮೂಲದ ತಂಡದ ವಿರುದ್ಧದ ಗೆದ್ದರೆ ಅವರಿಗೆ ಇನ್ಯಾವುದೇ ಮಂಡೆ ಬಿಸಿ ಇಲ್ಲ. ಅದೇ ರೀತಿ ಪಂದ್ಯ ಸೋತರೂ ನೆಟ್ ರನ್ ರೇಟ್ ಆಧಾರದ ಮೇಲೆಯೂ ಅರ್ಹತೆ ಪಡೆಯಬಹುದು. ಸಿಎಸ್​ಕೆ ತನ್ನ ನೆಟ್​​ರನ್​ರೇಟ್​​ ಅನ್ನು ಉಳಿಸಿಕೊಳ್ಳಲು ಸೋಲಿನ ಅಂತರವನ್ನು ಕಡಿಮೆ ಮಾಡಬೇಕಾಗಿದೆ.

ಇದನ್ನೂ ಓದಿ: Aiden Markarm : ವಿಂಡೀಸ್ ವಿರುದ್ಧದ ಸರಣಿಗೆ ದ. ಆಫ್ರಿಕಾ ತಂಡದಲ್ಲಿ ಮಾರ್ಕ್ರಮ್​​ಗೆ ಇಲ್ಲ ಚಾನ್ಸ್​

ಮಳೆ ಬಂದರೆ ಏನಾಗುವುದು?

ಶುಕ್ರವಾರ ಮತ್ತು ಶನಿವಾರ (ಪಂದ್ಯದ ದಿನ) ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿರುವುದರಿಂದ ಪ್ರವಾಹ ಉಂಟಾಗುವ ಸಾಧ್ಯತೆಯಿದೆ. ವಾಶ್ ಔಟ್ ಅಥವಾ ಪಂದ್ಯ ರದ್ದಾದರೆ, ಆ ಸನ್ನಿವೇಶಗಳು ಆರ್ ಸಿಬಿಗಿಂತ ಆತಿಥೇಯರಿಗೆ ಹೆಚ್ಚು ಅನುಕೂಲಕರವಾಗಿರುತ್ತವೆ. ಫಲಿತಾಂಶವಿಲ್ಲದಿದ್ದರೆ ಎರಡೂ ತಂಡಗಳು ತಲಾ ಒಂದು ಪಾಯಿಂಟ್ ಪಡೆಯುತ್ತವೆ, ಆದರೆ ಓವರ್​ಗಳನ್ನು ಕಡಿಮೆ ಮಾಡಿದರೆ, ಗೆಲುವಿನ ನಂತರವೂ ಆರ್​ಸಿಬಿಗೆ ತನ್ನ ನೆಟ್​ರನ್​ರೇಟ್​ ಹೆಚ್ಚಿಸಲು ಕಷ್ಟವಾಗುತ್ತದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ತಂಡ ಬೆಂಗಳೂರು ತಂಡವನ್ನು ಎದುರಿಸಲಿದೆ. ಇದು ಹಾಲಿ ಆವೃತ್ತಿಯ ವರ್ಚುಯಲ್ ನಾಕೌಟ್ ಪಂದ್ಯ ಎಂದೇ ಹೇಳಲಾಗುತ್ತಿದೆ.

ಆರ್​ಸಿಬಿ ಆಟಗಾರರಿಗೆ ಬ್ಯಾಟಿಂಗ್ ಅಭ್ಯಾಸ ನಡೆಸಲು ನೆರವಾದ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಮೇ 18 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವು ಐಪಿಎಲ್​ನ (IPL 2024) ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಲಭ್ಯವಿರುವ ಕೊನೆಯ ಪ್ಲೇಆಫ್ ಸ್ಥಾನದ ಮೇಲೆ ಕಣ್ಣಿಟ್ಟಿರುವುದರಿಂದ ಈ ಪಂದ್ಯವು ನಿರ್ಣಾಯಕವಾಗಿದೆ. ಇದನ್ನು ಸದರ್ನ್​ ಡರ್ಬಿ ಎಂದು ಕರೆಯಲಾಗಿದ್ದು ಪಂದ್ಯ ಅತ್ಯಂತ ರೋಚಕವಾಗಿರುವುದು ಖಚಿತ. ಅದರಲ್ಲೂ ಆರ್​ಸಿಬಿ ತಂಡಕ್ಕೆ ದೊಡ್ಡ ಸವಾಲಾಗಿದೆ. ಅದೇ ರೀತಿ ವಿರಾಟ್ ಕೊಹ್ಲಿಯ (Virat kohli) ಮೇಲೆ ಜವಾಬ್ದಾರಿ ಹೆಚ್ಚಿದೆ.

ಈ ದಕ್ಷಿಣ ಡರ್ಬಿ ಪಂದ್ಯಕ್ಕೆ ಮುಂಚಿತವಾಗಿ, ಆರ್​ಸಿಬಿ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ಅಭ್ಯಾಸದ ಸಮಯದಲ್ಲಿ ಬೌಲಿಂಗ್​ ಮಾಡುವ ಮತ್ತು ಥ್ರೋಡೌನ್​ ಮಾಡುವ ಮೂಲಕ ಬ್ಯಾಟರ್​ಗಳಿಗೆ ನೆರವಾದರು. ಪಂದ್ಯದ ಮುನ್ನಾದಿನದಂದು ಫ್ರಾಂಚೈಸಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಕೊಹ್ಲಿ ಸಹ ಆಟಗಾರ ಮಹಿಪಾಲ್ ಲೊಮ್ರೊರ್ ಅವರ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವುದನ್ನು ತೋರಿಸಲಾಗಿದೆ. ಕೊಹ್ಲಿ ಕೇವಲ ಥ್ರೋಡೌನ್​​ಗಳನ್ನು ನೀಡುತ್ತಿರಲಿಲ್ಲ; ಅವರು ಸಕ್ರಿಯವಾಗಿ ಲೊಮ್ರೊರ್​ಗೆ ತರಬೇತಿ ನೀಡುತ್ತಿದ್ದರು, ಸಲಹೆ ನೀಡುತ್ತಿದ್ದರು ಮತ್ತು ದೊಡ್ಡ ಶಾಟ್​ಗಳನ್ನು ಆಡಲು ಪ್ರೋತ್ಸಾಹಿಸುತ್ತಿದ್ದರು.

ಸ್ಫೋಟಕ ಇಂಗ್ಲಿಷ್ ಆಲ್ರೌಂಡರ್ ವಿಲ್ ಜಾಕ್ಸ್ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಈ ಪಂದ್ಯದ ನಡುವೆ ಅಭಿಮಾನಿಗಳ ಊಹಾಪೋಹಗಳನ್ನು ಹುಟ್ಟುಹಾಕಿದೆ. ರಾಷ್ಟ್ರೀಯ ಕರ್ತವ್ಯಗಳಿಂದಾಗಿ ಜಾಕ್ಸ್ ಈಗಾಗಲೇ ತಂಡದ ಶಿಬಿರವನ್ನು ತೊರೆದಿರುವುದರಿಂದ ಆರ್​ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಕನಿಷ್ಠ ಒಂದು ಬದಲಾವಣೆಯನ್ನು ಮಾಡಬೇಕಾಗುತ್ತದೆ.

Exit mobile version